Home ರಾಜಕೀಯ ಸಮಾಚಾರ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಚುನಾವಣೆ ಎಲ್ಲ ಸ್ಥಾನಗಳಲ್ಲಿಯೂ ಸಹಕಾರ ಭಾರತಿಗೆ ಗೆಲುವು

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಚುನಾವಣೆ ಎಲ್ಲ ಸ್ಥಾನಗಳಲ್ಲಿಯೂ ಸಹಕಾರ ಭಾರತಿಗೆ ಗೆಲುವು

0

ಬಂಗಾಡಿ : ಇಂದಬೆಟ್ಟು, ನಾವೂರು, ಕನ್ಯಾಡಿ, ಮಲವಂತಿಗೆ, ಮಿತ್ತಬಾಗಿಲು ಮತ್ತು ಕಡಿರುದ್ಯಾವರ ಗ್ರಾಮಗಳ ವ್ಯಾಪ್ತಿಗೆ ಒಳಪಟ್ಟ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಇದರ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿ ಡಿ. 8 ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಮತಗಳ ಅಂತರದಲ್ಲಿ ವಿಜಯಶಾಲಿಯಾಗಿದ್ದಾರೆ. ಸಾಲಗಾರ ಸಾಮಾನ್ಯ ಕ್ಷೇತ್ರದಲ್ಲಿ ಆನಂದ ಗೌಡ, ವಸಂತ ಗೌಡ, ಹರೀಶ್ ಸಾಲಿಯಾನ್, ವಿನಯಚಂದ್ರ, ಹರೀಶ್ ಪೂಜಾರಿ, ಪ್ರಮೋದ್ ಕುಮಾರ್, ಸಾಲಗಾರ ಹಿಂದುಳಿದ ವರ್ಗ ಎ ಕ್ಷೇತ್ರದಿಂದ ರಮೇಶ್ ಕೆಂಗಾಜೆ, ಸಾಲಗಾರ ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಶೀನಪ್ಪ ಗೌಡ, ಸಾಲಗಾರ ಮಹಿಳಾ ಕ್ಷೇತ್ರದಿಂದ ಪುಷ್ಪಲತಾ.ಕೆ, ವೇದಾವತಿ, ಸಾಲಗಾರ ಪ. ಜಾತಿ ಕ್ಷೇತ್ರದಿಂದ ರಘುನಾಥ, ಸಾಲಾಗಾರ ಪ. ಪಂಗಡ ಕ್ಷೇತ್ರದಿಂದ ಸತೀಶ್ ನಾಯ್ಕ ಇವರುಗಳು ಬಹುಮತಗಳ ಅಂತರದಿಂದ ವಿಜಯಿಶಾಲಿಯಾಗಿದ್ದಾರೆ

NO COMMENTS

LEAVE A REPLY

Please enter your comment!
Please enter your name here

Exit mobile version