Home ಸ್ಥಳೀಯ ಸಮಾಚಾರ ಬೆಳ್ತಂಗಡಿ: ತಾಲೂಕು ವಕೀಲರ ಸಂಘದ ಮಹಾ ಸಭೆ

ಬೆಳ್ತಂಗಡಿ: ತಾಲೂಕು ವಕೀಲರ ಸಂಘದ ಮಹಾ ಸಭೆ

0

ಬೆಳ್ತಂಗಡಿ; ನಗರದ ಶ್ರೀ ಮಂಜುನಾಥ ಸ್ವಾಮಿ ಕಲಾಭವನದ ಸಭಾಭವನದಲ್ಲಿ ವಕೀಲರ ಸಂಘದ ವಾರ್ಷಿಕ ಮಹಾಸಭೆ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಈ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷರಾದ ಅಶೋಕ್ ಕರಿಯನೆಲ ಎಲ್ಲರನ್ನು ಸ್ವಾಗತಿಸಿದರು ಸಭೆಯಲ್ಲಿ ವಾರ್ಷಿಕ ವರದಿಯನ್ನು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾದ ನವೀನ್ ಬಿ.ಕೆ ವಾಚಿಸಿದರು. ಲೆಕ್ಕಪತ್ರವನ್ನು ವಕೀಲರ ಸಂಘದ ಕೋಶಾಧಿಕಾರಿಯಾದ ಪ್ರಶಾಂತ್ ಎಂ ಮಂಡಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ವಿವಿಧ ಕಾರ್ಯಕ್ರಮಗಳಲ್ಲಿ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಿದ್ದ ಸಂಘದ ಸದಸ್ಯರಾದ ಶಶಿಕಿರಣ್ ಜೈನ್, ಶ್ರೀನಿವಾಸ ಗೌಡ ಬೆಳಾಲು* ಮತ್ತು ಗಣೇಶ್ ಗೌಡ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿಯಾದ ನವೀನ್ ಬಿ.ಕೆ ಧನ್ಯವಾದ ಸಮರ್ಪಿಸಿದರು.


ವೇದಿಕೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ ವಕೀಲರ ಸಮಿತಿಯ ಅಧ್ಯಕ್ಷರಾದ ಟಅಲೋಸಿಯಸ್ ಎಸ್ ಲೋಬೊ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ವಕೀಲರಾದ ಉದಯ ಕುಮಾರ್ ಬಿ.ಕೆ ಕಾರ್ಯಕ್ರಮ ನಿರೂಪಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version