ಬೆಳ್ತಂಗಡಿ; ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಕಾಲೇಜು ಉಜಿರೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಉಜಿರೆ ಇವರ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಬಾಲಕ – ಬಾಲಕಿಯರ ಕಬಡ್ಡಿ ಪಂದ್ಯಾಟವು ಇಂದ್ರಪ್ರಸ್ತ ಸಭಾಂಗಣದಲ್ಲಿ ಸಪ್ಟೆಂಬರ್ 27 ಶುಕ್ರವಾರದಂದು ನಡೆಯಿತು.
ಕಬಡ್ಡಿ ಪಂದ್ಯಾಟದ ಉದ್ಘಾಟನೆಯನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾI ಎಸ್ ಸತೀಶ್ಚಂದ್ರ ದೀಪ ಬರಳಗಿಸಿ ಉದ್ಘಾಟಿಸಿದರು.
ಈ ಪಂದ್ಯಾಟದ ಮುಖ್ಯ ಅಭ್ಯಾಗತರಾಗಿ ಮುರಳಿಧರ್
ನಾಯ್ಕ ಬೆಳ್ತಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕರು ಕಾನೂನು ಮತ್ತು ಸುವ್ಯವಸ್ಥೆ ಇವರು ಆಗಮಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಪ್ರಮೋದ್ ಕುಮಾರ್ ಇವರು ವಹಿಸಿದ್ದರು.
ಈ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷರು ಸುಧಾಕರ್ ಶೆಟ್ಟಿ ದೈಹಿಕ ಶಿಕ್ಷಣ ಉಪನ್ಯಾಸಕರು ಶಾರದಾ ಪದವಿ ಪೂರ್ವ ಕಾಲೇಜು, ಮಂಗಳೂರು ಹಾಗೂ ಜಿಲ್ಲೆಯ ಕ್ರೀಡಾ ಸಂಯೋಜಕರು ಶಶಿಧರ ಮಾಣಿ ಹಾಗೂ ಕ್ರೀಡಾ ಸಂಘದ ಕಾರ್ಯದರ್ಶಿಗಳು ರಮೇಶ್ ಎಚ್ ಉಪಸ್ಥಿತರಿದ್ದರು.
ನಿರೂಪಣೆಯನ್ನು ಮಹಾವೀರ್ ಜೈನ್ ಕನ್ನಡ ಉಪನ್ಯಾಸಕರು ಕಾರ್ಯಕ್ರಮ ನಿರೂಪಿಸಿದರು.
ಉಪ ಪ್ರಾಂಶುಪಾಲ ರಾಜೇಶ್ ಕೆ ಸ್ವಾಗತಿಸಿದರು ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸಂದೇಶ ಬಿ ಪೂಂಜ ವಂದಿಸಿದರು