
ಬೆಳ್ತಂಗಡಿ : ಸವಣಾಲು ಗ್ರಾಮದಲ್ಲಿ ಬೆಳ್ತಂಗಡಿ ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ (ನಿ) ಲ್ಯಾಂಪ್ಸ್ ಬೆಳ್ತಂಗಡಿ ಇದರ ಸವಣಾಲು ಶಾಖೆಯ ಗೋದಾಮು ಕಟ್ಟಡ ಮತ್ತು ಮಾರಾಟ ಮಳಿಗೆ ಕಟ್ಟಡದ ಕಾಮಗಾರಿಗೆ ಶಾಸಕ ಹರೀಶ್ ಪೂಂಜರವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಸವಿತಾ, ಉಪಾಧ್ಯಕ್ಷರಾದ ಲೋಕನಾಥ ಶೆಟ್ಟಿ, ಪಂಚಾಯತ್ ಸದಸ್ಯರು, ಲ್ಯಾoಪ್ಸ್ ಸೊಸೈಟಿಯ ಅಧ್ಯಕ್ಷರಾದ ಲಿಂಗಪ್ಪ ನಾಯ್ಕ, ಕಾರ್ಯನಿರ್ವಾಹಣಾಧಿಕಾರಿ ಜಯಂತಿ, ನಿರ್ದೇಶಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
