Home ಸ್ಥಳೀಯ ಸಮಾಚಾರ ಉಜಿರೆ;ರಜತ ಮಹೋತ್ಸವದ ಸಂಭ್ರಮದಲ್ಲಿ ಬೆನಕ ಆಸ್ಪತ್ರೆ; ಜ18 ನೂತನ ಕಟ್ಟಡದ ಉದ್ಘಾಟನೆ; ಡಾ. ಗೋಪಾಲಕೃಷ್ಣ ಮಾಹಿತಿ

ಉಜಿರೆ;ರಜತ ಮಹೋತ್ಸವದ ಸಂಭ್ರಮದಲ್ಲಿ ಬೆನಕ ಆಸ್ಪತ್ರೆ; ಜ18 ನೂತನ ಕಟ್ಟಡದ ಉದ್ಘಾಟನೆ; ಡಾ. ಗೋಪಾಲಕೃಷ್ಣ ಮಾಹಿತಿ

42
0

ಬೆಳ್ತಂಗಡಿ; ಕಳೆದ 25ವರ್ಷಗಳಿಂದ ಗ್ರಾಮೀಣ ಪ್ರದೇಶವಾಗಿರುವ ಉಜಿರೆಯಲ್ಲಿ ಕಾರ್ಯನುರ್ವಹಿಸುತ್ತಿರುವ ಬೆನಕ ಆಸ್ಪತ್ರೆ ಅತ್ಯತ್ತಮ
ದರ್ಜಿಯ ಆರೋಗ್ಯ ಶುಶೂಷೆಯನ್ನು ಎಲ್ಲರಿಗೂ ಕೈಗೆಟುಕುವ ದರದಲ್ಲಿ ಹಾಗೂ ಸಮುದಾಯದ ಆಶಯಗಳಿಗೆ ಅನುಗುಣವಾಗಿ ಒದಗಿಸುವ ಕಾರ್ಯ ವನ್ನು ಮಾಡುತ್ತಾ ಬಂದಿದೆ. ಈ ಸಂಸ್ಥೆ ಜನರ ಆಶಯಗಳಿಗೆ ಅನುಗುಣವಾಗಿರುವ ಆಸ್ಪತ್ರೆಯಾಗಿ
ಬೆಳೆಯಬೇಕು ಎಂಬುದು ನಮ್ಮ ಸಂಕಲ್ಪ” ಎಂದು ಬೆನಕ ಆಸ್ಪತ್ರೆಯ ಡಾ ಗೋಪಾಲಕೃಷ್ಣ ಕೆ ಹೇಳಿದರು.

ಬೆನಕ ಆಸ್ಪತ್ರೆಯ ರಜತ ಮಹೋತ್ಸವದ ಸಂಭ್ರಮದಲ್ಲಿದೆ ವಿಸ್ತ್ರತ ನೂತನ ಕಟ್ಟಡ ಕಾಮಗಾರಿ ಕೂಡ ಮುಗಿದಿದ್ದು, ಕಟ್ಟದ ಉದ್ಘಾಟನೆ ಜ. 18 ರಂದು ನಡೆಯಲಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ. ಗೋಪಾಲಕೃಷ್ಣ ಕೆ. ಅವರು “ಕೇವಲ 7 ಹಾಸಿಗೆಗಳ 2 ವೈದ್ಯರು ಹಾಗೂ 2 ದಾದಿಯರಿಂದ 2000 ರಲ್ಲಿ ಆರಂಭವಾದ ಬೆನಕ ಆಸ್ಪತ್ರೆ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ತನ್ನ ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸುತ್ತಾ ಬಂದಿದೆ. ಸ್ಥಳೀಯ ಅಗತ್ಯಗಳನ್ನು ಮನಗಂಡು ಸಣ್ಣಮಟ್ಟದಲ್ಲಿ ಆರಂಭವಾದ ಆಸ್ಪತ್ರೆ ಇದೀಗ 130 ಹಾಸಿಗೆಗಳ ಮಲ್ಟಿ – ಸ್ಪೆಷಾಲಿಟಿಆಸ್ಪತ್ರೆಯಲ್ಲಿಳನ್ನೊಳಗೊಂಡ ಖ್ಯಾತ ಆಸ್ಪತ್ರೆಯಾಗಿ ಬೆಳೆದು ನಿಂತಿದೆ. ಗುಣಮಟ್ಟದ ಸಮಕಾಲೀನ ಆರೋಗ್ಯ ಸೇವೆಯನ್ನು ನೀಡುವ ಹಾಗೂ ಜನರ ಆಯ್ಕೆಯ ಆಸ್ಪತ್ರೆಯಾಗಿ ಹಂತ ಹಂತವಾಗಿ ಬೆಳೆಯುತ್ತಾ ಬಂದಿದ್ದೇವೆ. ಪ್ರತಿ ವರ್ಷ ಕೂಡ ಯಾವುದಾದರೊಂದು ಹೊಸ ಸೇವೆಯನ್ನು ಆರಂಭಿಸುತ್ತಾ ಬಂದಿದ್ದೇವೆ” ಎಂದು ವಿವರಿಸಿದರು. ಇದೀಗ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಆಧುನಿಕ ಚಿಕಿತ್ಸಾ ಸೌಲಭ್ಯಗಳು ಲಭ್ಯವಿದ್ದು 40ಮಂದಿ ವೈದ್ಯರ ಸೇವೆಯೂ ಲಭ್ಯವಿದೆ ಎಂದು ವಿವರಿಸಿದರು.
ಬೆನಕ ಆಸ್ಪತ್ರೆಯ ರಜತ ಸಂಭ್ರಮ ಕಾರ್ಯಕ್ರಮವನ್ನು ವಿಧಾನ ಸಭೆಯ ಸಭಾ ಪತಿ ಯು. ಟಿ. ಖಾದರ್ ಉದ್ಘಾಟಿಸಲಿದ್ದು, ನೂತನ. ಕಟ್ಟಡದ ಉದ್ಘಾಟನೆಯನ್ನು ರಾಜ್ಯ ಸರಕಾರದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ನೆರವೇರಿಸಲಿದ್ದಾರೆ. ಇದೇ ರೀತಿ ಬೇರೆ ಬೇರೆ. ವಿಭಾಗಗಳು ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜಾ, ಡಾ. ಯು. ಟಿ ಇಫಿಕರ್ ಅಲಿ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಗ್ರಾ.ಪಂ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಉಪಾಧ್ಯಕ್ಷ ರವಿಕುಮಾರ್ ಬರಮೇಲು ಹಾಗೂ ಇತರ ಗಣ್ಯರು ಭಾಗಿಗಳಾಗಲಿದ್ದಾರೆ. ಎಂದು ಅವರು ತಿಳಿಸಿದರು
ಈ ಪತ್ರಿಕಾ ಗೋಷ್ಠಿಯಲ್ಲಿ ಡಾ. ಭಾರತಿ ಜಿ. ಕೆ., ಡಾ. ಆದಿತ್ಯ ರಾವ್, ಡಾ. ಅಂಕಿತ ಜಿ ಭಟ್, ಡಾ. ರೋಹಿತ್ ಜಿ. ಭಟ್ , ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್‌ಜಿ ಭಟ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here