Home ಸ್ಥಳೀಯ ಸಮಾಚಾರ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಗೆ ಮುಖ್ಯಮಂತ್ರಿಗಳ ಸೇವಾ ಪ್ರಶಸ್ತಿ – ಎಸ್ರ ಫೌಂಡೇಶನ್ ವತಿಯಿಂದ ಸನ್ಮಾನ

ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಗೆ ಮುಖ್ಯಮಂತ್ರಿಗಳ ಸೇವಾ ಪ್ರಶಸ್ತಿ – ಎಸ್ರ ಫೌಂಡೇಶನ್ ವತಿಯಿಂದ ಸನ್ಮಾನ

0

ಬೆಳ್ತಂಗಡಿ: ಸ್ಥಳೀಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಿ ಜನ ಮೆಚ್ಚುಗೆಯ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಮೂಡಬಿದಿರೆ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಸಂದೇಶ್ ಪಿ.ಜಿ. ಅವರಿಗೆ ತಮ್ಮ ಸೇವೆಗಾಗಿ ಮುಖ್ಯಮಂತ್ರಿಗಳ ಸೇವಾ ಪ್ರಶಸ್ತಿಬಂದಿದ್ದು ಈ ಹಿನ್ನಲೆಯಲ್ಲಿ ಎಸ್ರ ಫೌಂಡೇಶನ್ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ತಮ್ಮ ಅಧಿಕಾರ ಅವಧಿಯಲ್ಲಿ ಕಾನೂನು ಹಾಗೂ ನ್ಯಾಯವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಹತ್ತಿರದಿಂದ ಕೆಲಸ ಮಾಡಿದ್ದು, ಜನರಿಗೆ ನ್ಯಾಯ ಸಿಗುವಂತೆ ಜಾಗ್ರತೆ ವಹಿಸಿದ್ದು
ಈ ಕಾರಣಕ್ಕಾಗಿ ಮುಖ್ಯಮಂತ್ರಿಗಳ ವಿಶೇಷ ಸೇವಾ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ


ಪ್ರಶಸ್ತಿ ಪಡೆದ ಸಂದೇಶ್ ಪಿ.ಜಿ. ಅವರನ್ನು ಮೂಡಬಿದರೆಯಲ್ಲಿ ಎಸ್ರ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಹನಶ್ರೀ ಸೌಹಾರ್ದ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಭಾರತೀಯ ರೈಲ್ವೆ ಕುಂದುಕೊರತೆ ಸಮಿತಿ ಸದಸ್ಯ ರಾಜೇಶ್ ಪುದುಶೇರಿ, ಕೆ.ಎಸ್.ಎಂ.ಸಿ.ಎ. ಕೇಂದ್ರ ಸಮಿತಿಯ ಸೇಬಾಸ್ಟಿಯನ್ ಪಿ.ಸಿ., ಎಸ್ರ ಫೌಂಡೇಶನ್ ಮುಖ್ಯಸ್ಥ ಶಿಜು ಸಿ.ವಿ., ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನ ಧರ್ಮಗುರುಗಳಾದ ಫಾ. ಶಾಜಿ ಮಾತ್ಯು ಮತ್ತು ಮೂಡಬಿದರೆಯ ಹೊಮ್ಸಕಾರ್ಟ್ ಸಂಸ್ಥೆಯ ಸ್ರಜನ್ ದಾಸ್ ಇದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version