Home ಕ್ರೀಡಾ ಸಮಾಚಾರ ಭಾರತದ ಪುರುಷ ಮಹಿಳಾ ತಂಡಗಳಿಗೆ ಅಂತಾರಾಷ್ಟ್ರೀಯ ತ್ರೋಬಾಲ್ ಪ್ರಶಸ್ತಿ; ತಂಡದಲ್ಲಿ ಮಡಂತ್ಯಾರು ಕಾಲೇಜಿನ ಆರು ಆಟಗಾರರು

ಭಾರತದ ಪುರುಷ ಮಹಿಳಾ ತಂಡಗಳಿಗೆ ಅಂತಾರಾಷ್ಟ್ರೀಯ ತ್ರೋಬಾಲ್ ಪ್ರಶಸ್ತಿ; ತಂಡದಲ್ಲಿ ಮಡಂತ್ಯಾರು ಕಾಲೇಜಿನ ಆರು ಆಟಗಾರರು

0

ಮಡಂತ್ಯಾರು: ಆಗಸ್ಟ್ 31 ರಿಂದ ಸಪ್ಟೆಂಬರ್ 02 ರ ವರೆಗೆ ನೇಪಾಳದ ಪೋಖಾರದಲ್ಲಿ ನಡೆದ ಅಂತರಾಷ್ಟೀಯ ತ್ರೋಬಾಲ್ ಪಂದ್ಯಾಟದಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಮುಡಿ ಗೇರಿಸಿಕೊಂಡಿದೆ. ಸೆಕ್ರೇಡ್ ಹಾರ್ಟ್ ಕಾಲೇಜು ಮಡಂತ್ಯಾರಿನ ವಿದ್ಯಾರ್ಥಿಗಳಾದ ಯುನಿತ್.ಕೆ, ಶಾನ್ ಲಿಂಟನ್ ವೇಗಸ್ ಮತ್ತು ಅವಿನಾಶ್ ಹಾಗೂ ವಿದ್ಯಾರ್ಥಿನಿಂಯರಾದ ಡ್ಯಾಫ್ನಿ ವೆರೊನಿಕ ಮಿಸ್ಕಿತ್, ಸುಪ್ರಿಯಾ ಎಸ್.ಪಿ., ಮತ್ತು ಭೂಮಿಕಾ ಇವರು ಕ್ರಮವಾಗಿ ಭಾರತದ ಪುರುಷರ ಮತ್ತು ಮಹಿಳೆಯರ ವಿಜೇತ ತಂಡವನ್ನು ಪ್ರತಿನಿಧಿಸಿದ ಕೀರ್ತಿಗೆ ಪಾತ್ರರಾದರು.


ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆದ ಈ ಪ್ರತಿಷ್ಠಿತ ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ 8 ದೇಶಗಳು ಭಾಗವಹಿಸಿದ್ದರೆ, ಮಹಿಳಾ ವಿಭಾಗದಲ್ಲಿ ಒಟ್ಟು 9 ದೇಶಗಳು ಭಾಗವಹಿಸಿದ್ದವು.
ಪುರುಷರ ತಂಡವು ಸೆಮಿಫೈನಲ್‌ನಲ್ಲಿ ಶ್ರೀಲಂಕಾವನ್ನು 26-24 ,22-25 ,15-12ಸ್ಕೋರ್‌ಗಳಿಂದ ಮೂರನೇ ಸೆಟ್‌ನಲ್ಲಿ ಸೋಲಿಸಿ ಫೈನಲ್‌ಗೇರಿದ್ದರು. ಫೈನಲ್ ಕಾದಾಟದಲ್ಲಿ ಆತೀಥೇಯ ನೇಪಾಳ ತಂಡವನ್ನು ಸೆಟ್‌ನಲ್ಲಿ 22-25,25-21,17-15 ಸ್ಕೋರ್‌ಗಳೊಂದಿಗೆ ಸೋಲಿಸಿ ಚಾಂಪಿಯನ್‌ಶಿಪ್ ಪಟ್ಟವನ್ನು ತನ್ನದಾಗಿಸಿತು.

ಪಂದ್ಯಾಟದ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಭಾರತತಂಡದ ನಾಯಕ ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರಿನ ಯುನಿತ್.ಕೆ ಟೂರ್ನಮೆಂಟ್‌ನ ಉತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾದರು.
9 ತಂಡಗಳು ಭಾಗವಹಿಸಿದ್ದ ಮಹಿಳಾ ಪಂದ್ಯಾಟದಲ್ಲಿ ಭಾರತವು ಸೆಮಿಫೈನಲ್‌ನಲ್ಲಿ ಬಾಂಗ್ಲಾದೆದುರು 25-20, 25-21 ರ ಸುಲಭ ಜಯ ಪಡೆದು, ಫೈನಲ್‌ನಲ್ಲಿ ಭಾರತವು ನೇಪಾಳವನ್ನು 27-25,20-25 ಹಾಗೂ 25-22 ರ ಗೆಲುವು ಪಡೆದು ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿತು.


ಪಂದ್ಯಾಟದ ಉದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದ ಭಾರತ ತಂಡದ ಆಟಗಾರ್ತಿ ಡ್ಯಾಫ್ನಿ ವೆರೊನಿಕಾ ಮಿಸ್ಕಿತ್ ಟೂರ್ನಮೆಂಟ್‌ನ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರೆ,ಫೈನಲ್ ಪಂದ್ಯಾಟದಲ್ಲಿ ಶ್ರೇಷ್ಠ ಮಟ್ಟದ ಪ್ರದರ್ಶನ ನೀಡಿದ ಭಾರತ ತಂಡದ ನಾಯಕಿ ಸುಪ್ರಿಯಾ ಎಸ್.ಪಿ ಇವರು ಫೈನಲ್‌ನ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರು ಇವರೀರ್ವರೂ ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರಿನ ವಿದ್ಯಾರ್ಥಿನಿಯರಾಗಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version