Home ಸ್ಥಳೀಯ ಸಮಾಚಾರ ಬೆಳ್ತಂಗಡಿ ಕೆಲವೆಡೆ ಉತ್ತಮಮಳೆ; ಮರ ಉರುಳಿ ಬಿದ್ದು ವಿದ್ಯುತ್ ಲೈನ್ ಗೆ ಹಾನಿ

ಬೆಳ್ತಂಗಡಿ ಕೆಲವೆಡೆ ಉತ್ತಮಮಳೆ; ಮರ ಉರುಳಿ ಬಿದ್ದು ವಿದ್ಯುತ್ ಲೈನ್ ಗೆ ಹಾನಿ

0


ಬೆಳ್ತಂಗಡಿ: ತಾಲೂಕಿನ ಹಲವೆಡೆ ಶನಿವಾರ ಸಂಜೆ ಮಳೆ ಸುರಿದಿದೆ.
ಶಿಶಿಲ,ಕೊಕ್ಕಡ, ಧರ್ಮಸ್ಥಳ
ಅರಸಿನಮಕ್ಕಿ,ಉಜಿರೆ,ನಿಡಿಗಲ್ ಮೊದಲಾದ ಕಡೆ ಗುಡುಗು,ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ.ಉಳಿದ ಕೆಲವು ಕಡೆ ತುಂತುರು ಹಾಗೂ ಸಾಮಾನ್ಯ ಮಳೆಯಾಗಿದೆ.
ತಾಲೂಕಿನಲ್ಲಿ ಫೆ.21ರಂದು ಕೆಲವೆಡೆ ಪ್ರಥಮ ಮಳೆಯಾಗಿತ್ತು. 24ರಂದು ಮತ್ತೆ ಹಲವೆಡೆ ಮಳೆಯಾಗಿತ್ತು.
ಇದೀಗ ಶನಿವಾರ ಮೂರನೇ ಬಾರಿ ಮಳೆ ಸುರಿದಿದೆ.
ನಿಡ್ಲೆಯ ಕಳೆಂಜ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಖಾಸಗಿ ವಿದ್ಯುತ್ ಲೈನ್ ಟವರ್ ಮೇಲೆ ಬಿದ್ದು ವಿದ್ಯುತ್ ಲೈನ್ ಗೆ ಹಾನಿ ಉಂಟಾಗಿದ್ದು ಸಂಚಾರಕ್ಕೆ ಅಡಚಣೆಯಾಯಿತು.
ಸ್ಥಳೀಯರೊಂದಿಗೆ
ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಮರ ತೆರವಿಗೆ ಸಹಕರಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದ್ದರು.
ಕಳೆದ ವರ್ಷ ಮಾ.12ರಂದು ತಾಲೂಕಿನಲ್ಲಿ ಆಲಿಕಲ್ಲು,ಭಾರಿ ಗಾಳಿ ಸಹಿತ ಪ್ರಥಮ ಮಳೆಯಾಗಿತ್ತು. ಆ ಬಳಿಕ ಮಳೆಗಾಲ ಆರಂಭದವರೆಗೂ
ಆಗಾಗ ಮಳೆ ಸುರಿದಿತ್ತು.

NO COMMENTS

LEAVE A REPLY

Please enter your comment!
Please enter your name here

Exit mobile version