ಬೆಳ್ತಂಗಡಿ:ಲಾಯಿಲ ಗ್ರಾಮಸಭೆಯಲ್ಲಿ ಗ್ರಾ.ಪಂ ಮತ್ತು ಅಧಿಕಾರಿಗಳ ನಿದ್ರಾವಸ್ಥೆಯನ್ನು ಖಂಡಿಸಿ ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಅವರು ಪಂಚಾಯತ್ ಸಭಾಭವನದಲ್ಲಿ ನಡೆದ ಗ್ರಾಮಸಭೆಯಲ್ಲಿ ವೇದಿಕೆಯ ಎದುರು ಮಲಗಿ ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ಗ್ರಾಮ ಸಭೆಯಲ್ಲಿ ನಡೆಯಿತು.
ಲಾಯಿಲ ಗ್ರಾಮಪಂಚಾಯತ್ ನ 2024-25ನೇ ಸಾಲಿನ ಮೊದಲ ಹಂತದ ಗ್ರಾಮಸಭೆಯು ಪಂಚಾಯತ್ ನ ಭಾರತ್ ಮಾತಾ ಸಭಾಭವನದಲ್ಲಿ ನಡೆಯಿತು.
ನೇತಾಜಿನಗರ ಪಡ್ಲಾಡಿ 1ನೇ ವಾರ್ಡ್ ನಲ್ಲಿ ಕಾನೂನು ಬಾಹಿರ ನಿವೇಶನ ಹಂಚಿಕೆಯಾಗಿದೆ. ಒಂದು ಸೆಂಟ್ಸ್ ನಿವೇಶನ ಇಲ್ಲದ ಗ್ರಾಮಸ್ಥರಿಗೆ ನಿವೇಶನ ನೀಡದೆ,ಜಮೀನು,ಜಾಗ,ತೋಟವಿದ್ದ ಶ್ರೀಮಂತರಿಗೆ ಹಾಗೂ ಪಂಚಾಯತ್ ಸದಸ್ಯರಿಗೆ ನಿವೇಶನ ನೀಡಲಾಗಿದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಗ್ರಾಮಸಭೆಯಲ್ಲಿಯೂ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗಿದೆ ಆದರೆ ಗ್ರಾಮ ಪಂಚಾಯತ್ ಆಡಾಳಿತ ಮತ್ತು ಅಧಿಕಾರಿಗಳು ನಿದ್ರೆ ಮಾಡುತ್ತಿದ್ದರೆ. ಇದೊಂದು ದೊಡ್ಡ ಹಗರಣವಾಗಿದ್ದು ಎಲ್ಲ ಸೈಟ್ ಗಳನ್ನೂ ವಶಪಡಿಸಿ ಅರ್ಹರಿಗೆ ಹಂಚಿಕೆಯಾಗಬೇಕು ಎಂದು ಶೇಖರ್ ಲಾಯಿಲ ಒತ್ತಾಯಿಸಿದರು.
ಒಬ್ಬ ಪಂಚಾಯತ್ ಸದಸ್ಯನಾದರೆ ಅವನಿಗೆ,ಅವನ ಕುಟುಂಬಿಕರಿಗೆ ಬೇಕಾದಷ್ಟು ಜಾಗ ಮಾಡುತ್ತಾರೆ, ಅದನ್ನು ಇನ್ನೊಬ್ಬರಿಗೆ ಸೇಲ್ ಮಾಡುತ್ತಾರೆ ಸುಮಾರು 500 ಅರ್ಜಿಗಳು ಬಾಕಿಯಿವೆ ಎಲ್ಲವೂ ತನಿಖೆಯಾಗಬೇಕು
ಗ್ರಾಮ ಪಂಚಾಯತ್ ನಲ್ಲಿ ನಿರ್ಣಯವಾದ ಬೇಡಿಕೆಗಳು ಸಮರ್ಪಕವಾಗಿ ಜಾರಿಯಾಗುವುದಿಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಬಂದು ಉತ್ತರ ನೀಡಬೇಕು.ಇಲ್ಲದಿದ್ದರೆ ನಾನು ಒಂದು ವಾರವಾದರೂ ಏಳುವುದಿಲ್ಲ ಎಂದು ಶೇಖರ್ ಲಾಯಿಲ ಧರಣಿ ಮುಂದುವರಿಸಿದರು.

ಸುಮಾರು 21ನಿರ್ಣಯಗಳಲ್ಲಿ ಸುಮಾರು 13 ನಿರ್ಣಯಗಳು ಜಾರಿಯಾಗಿದೆ. ಉಳಿದವು ಹಂತ ಹಂತವಾಗಿ ಜಾರಿಯಾಗುತ್ತಿದೆ ಎಂದು ಗ್ರಾಮಸಭೆಯಲ್ಲಿ ಪಿಡಿಓ,ನೋಡೇಲ್ ಅಧಿಕಾರಿ ತಿಳಿಸಿದರು.
ಕಾನೂನು ಬಾಹಿರವಾಗಿರುವ ನಿವೇಶನವನ್ನು ಸರ್ವೆ ನಡೆಸಿ, ಪಟ್ಟಿ ಮಾಡಿ ತೆರವುಗೊಳಿಸುವಂತೆ ಸಂಭಂದಪಟ್ಟ ಅಧಿಕಾರಿಗಳು ಪೋಲೀಸ್ ರಕ್ಷಣೆಯೊಂದಿಗೆ ತೆರವುಗೊಳಿಸಲು ಸೂಚಿಸಿದ್ದಾರೆ ಎಂದು ಪಂಚಾಯತ್ ಅಧಿಕಾರಿ ಹೇಳಿದರು.ಆದರೆ ತಾಲೂಕು ಪಂಚಾಯತಿನ ಅಧಿಕಾರಿಗಳು ಬಂದು ಸಮರ್ಪಕವಾದ ಉತ್ತರ ನೀಡುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದರು.

ಕೊನೆಗೂ ತಾಲೂಕು ಪಂಚಾಯತು ಕಚೇರಿಯ ಅಧಿಕಾರಿಿ ಪ್ರಶಾಂತ್ ಅವರು ಸ್ಥಳಕ್ಕೆ ಆಗಮಿಸಿ ಅಗ್ಯತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಶೇಖರ ಲಾಯಿಲ ಅವರು ಪ್ರತಿಭಟನೆಯನ್ನು ಹಿಂಪಡೆದರು.
ಗ್ರಾಮಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಗ್ರಾಮದ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಸಭೆಯ ಗಮನ ಸೆಳೆದರು
ಮಾರ್ಗದರ್ಶಿ ಅಧಿಕಾರಿಯಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೀಯಾ ಆಗ್ನೆಸ್ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಡಿ.ಪಿ,ಪಂಚಾಯತ್ ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್ ಸದಸ್ಯರು ಉಪಸ್ಥಿತರಿದ್ದರು
ಕಾರ್ಯದರ್ಶಿ ತಾರನಾಥ ಸ್ವಾಗತಿಸಿ ಅನುಪಲನಾ ವರದಿ ವಾಚಿಸಿದರು..
