Home ರಾಜಕೀಯ ಸಮಾಚಾರ ಕಾಂತಾರ ಸಿನಿಮಾದ ಅಭಿನಯಕ್ಕೆ ರಿಷಬ್ ಶೆಟ್ಟಿಗೆ ಒಲಿದ ರಾಷ್ಟ್ರ ಪ್ರಶಸ್ತಿ

ಕಾಂತಾರ ಸಿನಿಮಾದ ಅಭಿನಯಕ್ಕೆ ರಿಷಬ್ ಶೆಟ್ಟಿಗೆ ಒಲಿದ ರಾಷ್ಟ್ರ ಪ್ರಶಸ್ತಿ

164
0


ಬೆಂಗಳೂರು;ಕಾಂತಾರ ಸಿನಿಮಾದ ಅತ್ಯುತ್ತಮ‌ ಅಭಿನಯಕ್ಕಾಗಿ ಕನ್ನಡದ ಹೆಮ್ಮೆಯ ನಟ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟನೆಗಾಗಿನ ರಾಷ್ಟ್ರಪ್ರಶಸ್ತಿ ಪ್ರಾಪ್ತಿಯಾಗಿದೆ.
ಕನ್ನಡ ಚಿತ್ರರಂಗದ ದಶಕಗಳ ರಾಷ್ಟ್ರಪ್ರಶಸ್ತಿ ಬರವನ್ನು ನಟ ರಿಷಬ್ ಶೆಟ್ಟಿ ಇದೀಗ ನೀಗಿಸಿದ್ದಾರೆ. ‘ಕಾಂತಾರ’ ಸಿನಿಮಾದ ಅತ್ಯುತ್ತಮ ನಟನೆಯನ್ನು ಪರಿಗಣಿಸಿ ಅವರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ
ಕನ್ನಡ ಸಿನಿಮಾ ನಟರೊಬ್ಬರಿಗೆ ರಾಷ್ಟ್ರಪ್ರಶಸ್ತಿ ದೊರೆತು ದಶಕಗಳೇ ಆಗಿಬಿಟ್ಟಿದ್ದವು. ಆ ಬರವನ್ನು ಈಗ ನೀಗಿದ್ದು, ನಟ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರೆತಿದೆ. ‘ಕಾಂತಾರ’ ಸಿನಿಮಾದ ಅತ್ಯುತ್ತಮ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ದೊರೆತಿದೆ. ಈ ವರ್ಷ ಅತ್ಯುತ್ತಮ ನಟ ಪ್ರಾಶಸ್ತಿಗಾಗಿ ರಿಷಬ್ ಶೆಟ್ಟಿಗೆ ಮಲಯಾಳಂ ನಟ ಮಮ್ಮುಟಿ, ಹಿಂದಿಯ ವಿಕ್ರಾಂತ್ ಮೆಸ್ಸಿ ಸೇರಿದಂತೆ ಇನ್ನೂ ಹಲವು ನಟರಿಂದ ತೀವ್ರ ಸ್ಪರ್ಧೆ ಇತ್ತು. ಆದರೆ ರಿಷಬ್ ಶೆಟ್ಟಿಗೆ ಅಂತಿಮವಾಗಿ ರಾಷ್ಟ್ರಪ್ರಶಸ್ತಿ ಒಲಿದಿದೆ. ಕನ್ನಡ ಸಿನಿಮಾಕ್ಕೆ, ಕರ್ನಾಟಕದ್ದೇ ನಟನಿಗೆ ಒಲಿಯುತ್ತಿರುವ ಮಹತ್ವದ ಪ್ರಶಸ್ತಿ ಇದಾಗಿದೆ. ಕಾಂತಾರ ಸಿನಿಮಾಕ್ಕೆ ಜನಪ್ರಿಯ ಚಲನಚಿತ್ರ ಪ್ರಶಸ್ತಿಯೂ ಲಭಿಸಿದೆ.

LEAVE A REPLY

Please enter your comment!
Please enter your name here