ಬೆಳ್ತಂಗಡಿ; ಮಾಲಾಡಿ ಗ್ರಮಾಪಂಚಾಯತು ವ್ಯಾಪ್ತಿಯಲ್ಲಿ ಬಿರುಗಾಳಿ ಮಳೆಯಿಂದಾಗಿ ವ್ಯಾಪಕ ಹಾಮಿ ಸಂಭವಿಸಿದ್ದು ಹಾನಿಗೀಡಾದ ಪ್ರದೇಶಗಳಿಗೆ ಮಾಲಾಡಿ ಗ್ರಾಪಂ ಅಧ್ಯಕ್ಷರ ನೇತೃತ್ವದ ತಂಡ ಭೇಟಿ ನೀಡಿ ಸಂಕಷ್ಟಕ್ಕೆ ಈಡಾದ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು.
ಗ್ರಾಮಪಂಚಾಯತು ವತಿಯಿಂದ ಹಾಗೂ ಸರಕಾರದಿಂದ ಸಾಧ್ಯವರಿವ ಎಲ್ಲ ರೀತಿಯ ಸಹಕಾರವನ್ನೂ ಒದಗಿಸುವುದಾಗಿ ಸಂತ್ರಸ್ಥರಿಗೆ ಭರವಸೆ ನೀಡಿದರು.
ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್ ಕುಮಾರ್, ಸದಸ್ಯರಾದ ಬೇಬಿ ಸುವರ್ಣ, ಉಮೇಶ್, ಬೆನಡಿಕ್ಟಾ ಮಿರಾಂದ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ವಿನ್ಸೆಂಟ್ ಡಿಸೋಜಾ, ಪ್ರಮುಖರಾದ ಮಹಮ್ಮದ್ ಆಲಿ, ಅಲ್ತಾಫ್, ಹೈದರ್ ಆಲಿ ಮುಂತಾದವರು ಇದ್ದರು