Home ಸ್ಥಳೀಯ ಸಮಾಚಾರ ಕೆ.ಎಸ್. ಎಂ.ಸಿ ಎ ನೇತೃತ್ವದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಚರ್ಚ್ ಗಳಲ್ಲಿ ಕಾರ್ಗಿಲ್ ವಿಜಯ ದಿನ ಆಚರಣೆ

ಕೆ.ಎಸ್. ಎಂ.ಸಿ ಎ ನೇತೃತ್ವದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಚರ್ಚ್ ಗಳಲ್ಲಿ ಕಾರ್ಗಿಲ್ ವಿಜಯ ದಿನ ಆಚರಣೆ

0

ಬೆಳ್ತಂಗಡಿ; ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ( ಕೆ.ಎಸ್.ಎಂ.ಸಿ.ಎ) ನೇತೃತ್ವದಲ್ಲಿ
ಕಾರ್ಗಿಲ್ ವಿಜಯ್ ದಿವಸ್ 25 ನೇ ವರ್ಷದ ಆಚರಣೆಯನ್ನು ಜೂಲೈ 28ನೇ ಭಾನುವಾರ ಬೆಳ್ತಂಗಡಿ ಧರ್ಮಪ್ರಾಂತ್ಯದ ಚರ್ಚ್ ಗಳಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು . ಬೆಳ್ತಂಗಡಿ ಧರ್ಮಧ್ಯಕ್ಷರಾದ
ಬಿಷಪ್ ಲೋರೆನ್ಸ್ ಎಂ. ಟಿ ಅವರ ಆಶೀರ್ವಾದದೊಂದಿಗೆ ನಿರ್ದೇಶಕರಾದ ವಂದನೀಯ ಆದರ್ಶ್ ಜೋಸೆಫ್ ಪುತಿಯೇಡತ್ ರವರ ನಿರ್ದೇಶನಗಳೊoದಿಗೆ ಅಧ್ಯಕ್ಷರಾದ ಬೆಟ್ಟಿ ನೆಡುನಿಲಂ ಹಾಗೂ ಪದಾಧಿಕಾರಿಗಳ‌ ಮಾರ್ಗದರ್ಶನದಲ್ಲಿ ಆಯಾ ಧರ್ಮ ಕೇಂದ್ರಗಳ ಧರ್ಮಗುರುಗಳ ಸಹಕಾರದಿಂದ, ಸ್ಥಳೀಯ ಸಮಿತಿಗಳ ನೇತೃತ್ವದಲ್ಲಿ ಕೆಎಸ್ಎಂಸಿಎ ವಲಯ ಮಟ್ಟದ ಅಧ್ಯಕ್ಷರು ಹಾಗೂ ಪಧಾಧಿಕಾರಿಗಳು, ಪ್ರೈಮರಿ ಯೂನಿಟ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಎಲ್ಲಾ ಸದಸ್ಯರ ಸಹಯೋಗದಲ್ಲಿ ಮಾಜಿ ಸೈನಿಕರಿಗೆ ಆಯಾ ಚರ್ಚ್ ಗಳಲ್ಲಿ ಗೌರವಾರ್ಪಣೆ ಮಾಡುವುದರ ಮೂಲಕ ಕಾರ್ಗಿಲ್ ವಿಜಯ ದಿವಸವನ್ನು ಆಚರಣೆ ಮಾಡಲಾಯಿತ್ತು .

NO COMMENTS

LEAVE A REPLY

Please enter your comment!
Please enter your name here

Exit mobile version