ಬೆಳ್ತಂಗಡಿ; ಭಾರೀ ಗಾಳಿ ಮಳೆಗೆ ತಾಲೂಕಿನ ಕುವೆಟ್ಟು ಗ್ರಾಮದ ಬದ್ಯಾರು ನಿವಾಸಿ ಮುಹಮ್ಮದ್ ಅಲಿ ಎಂಬವರ ವಾಸದ ಮನೆಯ ಮೇಲೆ ದೊಡ್ಡ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು ಮನೆಗೆ ಹಾನಿ ಸಂಭವಿಸಿದೆ. ಮನೆಯ ಮೇಲ್ಛಾವಣಿ ಬಹುತೇಕ ಕುಸಿದು ಬಿದ್ದಿದೆ
ಮನೆಯೊಂದಿಗೆ ಇರುವ ಶೌಚಾಲಯದ ಛಾವಣಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


