ಬೆಳ್ತಂಗಡಿ; ಉಜಿರೆ ಹಳೆಪೇಟೆ ಡೆಲ್ಮಾ ಸೇನಿಟರಿ ಮಳಿಗೆಯ ಎದುರು ಬುಧವಾರ ಅಕೇಶಿಯಾ ಮರವೊಂದು ರಾಷ್ಟ್ರೀಯ ಹೆದ್ದಾರಿ ಮೇಲೆ ಉರುಳಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಆದರೆ ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.
ಘಟನೆ ನಡೆದ ತಕ್ಷಣ ಬೆಳ್ತಂಗಡಿ ಸಂಚಾರಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅರ್ಜುನ್ ಅವರು ಸಿಬ್ಬಂದಿಗಳ ಸಮೇತ ಆಗಮಿಸಿ ರಸ್ತೆಯನ್ನು ಸಂಚಾರಕ್ಕೆ ತೆರವು ಗೊಳಿಸಲು ಕಾರ್ಯಾಚರಣೆ ನಡೆಸಿದರು.
ಎಸ್‌ಡಿಟಿಯು ಅಟೋ ಯುನಿಯನ್ ನ ಪದಾಧಿಕಾರಿಗಳು ತಕ್ಷಣ ಮರವು ತೆರವುಗೊಳಿಸಿ ಕ್ರಮ ಕೈಗೊಂಡರು. ಹೈವೇ ಕಾಮಗಾರಿಯಲ್ಲಿ ತೊಎಗಿದ್ದ ಕಾರ್ಮಿಕರು ಸಹಕರಿಸಿದರು. ಪ್ರತಿನಿತ್ಯ ಮರಗಳು ಮುರಿದು ಬೀಳುತ್ತಿರುವುದು ಹೆದ್ದಾರಿಯಲ್ಲಿ ಪ್ರಯಾಣಿಸುವವರಲ್ಲಿ ಭಯ ಮೂಡಲು ಕಾರಣವಾಗಿದೆ.