ಬೆಳ್ತಂಗಡಿ : ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮೇ.27 ರಂದು ಬೆಳಗ್ಗೆ ಮಂಜುನಾಥನ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದರು.
ಹೆಚ್.ಡಿ.ರೇವಣ್ಣ ಮೇ.26 ರಂದು ರಾತ್ರಿ ಹಾಸನದಿಂದ ಕಾರಿನ ಮೂಲಕ ಧರ್ಮಸ್ಥಳ ಸನ್ನಿಧಿ ವಸತಿ ಗೃಹದಲ್ಲಿ ವಾಸ್ತವ್ಯ ಮಾಡಿ ಬೆಳಗ್ಗೆ ದೇವರ ದರ್ಶನ ಮಾಡಿದರು.
