ಬೆಳ್ತಂಗಡಿ; ವಕೀಲರ ಸಂಘ (ರಿ) ಬೆಳ್ತಂಗಡಿ ಇದರ ವತಿಯಿಂದ ವಕೀಲರ ಭವನದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ ಮಾನ್ಯ ಪ್ರಧಾನ ಹಿರಿಯ ನ್ಯಾಯಾಧಿಶರಾದ ಶಶಿಧರ ಎಂ ಗೌಡ ರವರಿಗೆ ಸ್ವಾಗತ ಸಮಾರಂಭ ನಡೆಯಿತು.
ಶಶಿಧರ ಎಂ ಗೌಡ ಅವರು ಸವದತ್ತಿ ನ್ಯಾಯಾಲಯದಿಂದ ವರ್ಗಾವಣೆಗೊಂಡು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ಅಧಿಕಾರಸ್ವೀಕರಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು
ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ ಮುಖ್ಯ ಅಥಿತಿಗಳಾಗಿ ಸಂದೇಶ್ ಕೆ ಜೆ ( ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ ಬೆಳ್ತಂಗಡಿ.ಹಿರಿಯ ವಕೀಲರ ಸಮಿತಿ ಅಧ್ಯಕ್ಷರು ಅಲೋಶಿಯಸ್ ಎಸ್ ಲೋಬೊ, ವಕೀಲರ ಸಂಘದ ರಿ ಬೆಳ್ತಂಗಡಿ ಇದರ ಪ್ರಧಾನ ಕಾರ್ಯದರ್ಶಿ
ನವೀನ್ ಬಿ ಕೆ,
ನವೀನ್ ಬಿ ಕೆ ಸ್ವಾಗತಿಸಿ, ಸಂದೀಪ್ ಡಿಸೋಜ ವಂದಿಸಿದರು.
ಕಾರ್ಯಕ್ರಮದಲ್ಲಿ ಎ ಜಿ ಪಿ, ಮನೋಹರ್ ಕುಮಾರ್ ಎಂ ಮತ್ತು ಎ ಪಿ ಪಿ ಯವರಾದ ದಿವ್ಯಾರಾಜ್ ಹೆಗ್ಡೆ ಮತ್ತು ಆಶೀತಾ ರವರು ಮತ್ತು ವಕೀಲರ ಸಂಘ ರಿ ಇದರ ಪದಾಧಿಕಾರಿಗಳು, ವಕೀಲರುಗಳು,
ನ್ಯಾಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

