Home ಅಪರಾಧ ಲೋಕ ಉಜಿರೆ ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿಯ‌ ಬ್ಯಾಂಕ್ ಖಾತೆಯಿಂದ 3.14ಲಕ್ಷ ನಗದು ಅಪಹರಣ

ಉಜಿರೆ ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿಯ‌ ಬ್ಯಾಂಕ್ ಖಾತೆಯಿಂದ 3.14ಲಕ್ಷ ನಗದು ಅಪಹರಣ

0

ಬೆಳ್ತಂಗಡಿ; ಉಜಿರೆಯ ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ಯಿಂದ ಅಪರಿಚಿತರು 3.14 ಲಕ್ಷ ನಗದನ್ನು ಅಪಹರಿಸಿದ ಘಟನೆ ನಡೆದಿದ್ದು ಘಟನೆಯ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉಜಿರೆ ಬಿ.ಎನ್.ವೈ ಎಸ್ ಕಾಲೇಜಿನಲ್ಲಿ ಮೂರನೇ ವರ್ಷದ ವಿದ್ಯಾರ್ಥಿ ಯಾಗಿರುವ
ಪ್ರದೀಪ್ ಸುರೇಶ್ ರೂಗಿ ಎಂಬವರೇ ಹಣ ಕಳೆದು ಕೊಂಡವರಾಗಿದ್ದಾರೆ.
ಇವರ ಊರಾದ ಗುಲ್ಬರ್ಗ ಜಿಲ್ಲೆಯ ಅಫ್ಜಲ್ ಪುರದ ಯೂನಿಯನ್ ಬ್ಯಾಂಕಿನ‌ಖಾತೆಯಿಂದ ಹಣ ಅಪಹರಿಸಲಾಗಿದೆ.
ಮೇ 23 ರ ವರೆಗೆ ಇವರ ಖಾತೆಯಲ್ಲಿ ಹಣವಿತ್ತು. ರಾತ್ರಿ 8.30 ರಬಳಿಕ ಇವರ ಮೊಬೈಲ್ ಗೆ ಎಸ್. ಎಂ.ಎಸ್.ಗಳು ಬಂದಿದ್ದು, ಒಟಿಪಿ ಬಂದಿದೆ. ಇದಕ್ಕೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಆದರೆ ಬೆಳಿಗ್ಗೆ ಪರಿಶೀಲಿಸಲಿದಾಗ ಅವರ ಖಾತೆಯಲ್ಲಿದ್ದ ರೂ 3,14,000 ವನ್ನು ಯಾವುದೋ ಅನಾಮಧೇಯ ವ್ಯಕ್ತಿಯ ಖಾತೆಗೆ ವರ್ಗಾವಣೆ ಗೊಂಡಿರುವುದು ಕಂಡುಬರುತ್ತಿದೆ. ಎಂದು ಅವರು ಬೆಳ್ತಂಗಡಿ ಪೋಲಿಸರಿಗೆ ದೂರು ನೀಡಲಾಗಿದ್ದಾರೆ. ಪೊಲೀಸರು ಪ್ರಕರಣ‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

NO COMMENTS

LEAVE A REPLY

Please enter your comment!
Please enter your name here

Exit mobile version