ಬೆಳ್ತಂಗಡಿ; 2024-25ನೇ ಸಾಲಿನ ಕರ್ನಾಟಕ ರಾಜ್ಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 613 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಬೆಳ್ತಂಗಡಿ ಸಂಜಯ ನಗರ ನಿವಾಸಿ ಅಡ್ವೋಕೇಟ್ ಶೌಕತ್ ಆಲಿ ಹಾಗೂ ಸಫೀಯಾ ದಂಪತಿಗಳ ಮಗಳಾದ “ಸಿಮ್ರಾ ಪರ್ವೀನ್” ಅವರಿಗೆ ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಬೆಳ್ತಂಗಡಿ ಸಮಿತಿ ವತಿಯಿಂದ ಮನೆಗೆ ತೆರಳಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ಸಮಿತಿ ಅಧ್ಯಕ್ಷರಾದ ಶಮಾ ಆಲಿ ಉಜಿರೆ, ಕಾರ್ಯದರ್ಶಿ ನಸೀಮಾ ಬೆಳ್ತಂಗಡಿ, ಕೋಶಾಧಿಕಾರಿ ಹಸೀನಾ ಅಕ್ಬರ್, ಸಮಿತಿ ಸದಸ್ಯರಾದ ಅಡ್ವೋಕೇಟ್ ಅಸ್ಮಾ ಬೆಳ್ತಂಗಡಿ, ಝೈನಬಾ ಉಪಸ್ಥಿತರಿದ್ದರು. ತಾಯಿ ಸಫಿಯಾ ಹಾಜರಿದ್ದು ಮಗಳ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತನಾಡಿದರು.