Home ಅಪರಾಧ ಲೋಕ ಧರ್ಮಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವು, ಪ್ರಕರಣ‌ ದಾಖಲು

ಧರ್ಮಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವು, ಪ್ರಕರಣ‌ ದಾಖಲು

0

ಬೆಳ್ತಂಗಡಿ; ಧರ್ಮಸ್ಥಳದಲ್ಲಿ ಬೈಕ್ ನಿಲ್ಲಿಸಿ ದೇವರ ದರ್ಶನ ಪಡೆದು ಹಿಂತಿರುಗುವ ವೇಳೆಗೆ ಕಳ್ಳರು ಬೈಕ್ ಅನ್ನು ಕಳ್ಳತನ ಮಾಡಿದ ಘಟನೆ‌ಸಂಭವಿಸಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ. ಬೈಂದೂರು ನಿವಾಸಿ ಮುತ್ತಯ್ಯ ಆಚಾರಿ ಎಂಬವರು ಈಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇವರು ಮೇ 24ರಂದು ತನ್ನ ಮೋಟಾರ್ ಸೈಕಲ್ k.A 20EJ 3502 ರಲ್ಲಿ ಮಗ ದಿನೇಶ ನೊಂದಿಗೆ ಧರ್ಮಸ್ಥಳಕ್ಕೆ ಬಂದಿದ್ದಾರೆ. ಇವರೊಂದಿಗೆ ಇನ್ನೂ ಹಲವರು ಬೈಕ್ ಗಳಲ್ಲಿಯೇ ಬಂದಿದ್ದು
ಎಲ್ಲರೂ ಬೈಕ್ ಗಳನ್ನು ನಿಲ್ಲಿಸಿ ದೇವರ ದರ್ಶನಕ್ಕೆ ತೆರಳಿದ್ದು ಹಂತಿರುಗಿ ಬಂದಾಗ ಇತರರ‌ಬೈಕ್ ಗಳು ಅಲ್ಲಿದ್ದು ಮತ್ತಯ್ಯ ಆಚಾರಿ ಅವರ ಬೈಕ್‌ಮಾತ್ರ ಕಾಣಿಸಲಿಲ್ಲ‌. ಸ್ಥಳದಲ್ಲಿ ಹುಡುಕಾಟ ನಡೆಸಿದರೂ ಮಾಹಿತಿ ಸಿಗದ ಹಿನ್ನಲೆಯಲ್ಲಿ ಬೈಕ್ ಕಳ್ಳತನವಾಗಿರುವ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version