ಬೆಳ್ತಂಗಡಿ : ಕೊಯ್ಯರು ಸಮೀಪದ ಕಾಂತಾಜೆ ಎಂಬಲ್ಲಿ ತಿರುವಿನ ಸೇತುವೆ ತಡೆ ಗೋಡೆಗೆ ಸರಕಾರಿ ಬಸ್ ಡಿಕ್ಕಿಯಾದ ಘಟನೆ ಮೇ.26 ಬೆಳಿಗ್ಗೆ ನಡೆಯಿತು. ಪ್ರಯಾಣಿಕರು ಅದೃಷ್ಟ ವಶಾತ್ ಅಪಾಯದಿಂದ ಪಾರಾಗಿದ್ದಾರೆ
ಬಂದಾರುನಿಂದ ಹೊರಟು ಕೊಯ್ಯರು ಮಾರ್ಗವಾಗಿ ಬೆಳ್ತಂಗಡಿಗೆ ಹೋಗುವ ಸರಕಾರಿ ಬಸ್ಸು ನಲ್ಲಿ ಸುಮಾರು 25 ಕ್ಕೂ ಹೆಚ್ಚು ಜನರು ಪ್ರಯಾಣಿಕರಿದ್ದರು. ಚಾಲಕ ಅತೀ ವೇಗವಾಗಿ ಬಸ್ ಚಲಾಯಿಸುವ ವೇಳೆಗೆ ಕೊಯ್ಯರು ಸಮೀಪದ ಕಾಂತಾಜೆ ಕಡಿದಾದ ತಿರುವಿನಲ್ಲಿ ನಿಯಂತ್ರಣ ತಪ್ಪಿ ದೊಡ್ಡ ತೋಡಿನ ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿದೆ. ತಡೆಗೋಡೆ ಮುರಿದರೂ ಬಸ್ ಅಲ್ಲಿಯೇ ನಿಂತಿದೆ. ಅಂದಾಜು 20 ಅಡಿ ಕೆಳಗೆ ಪ್ರತಾಪಕ್ಕೆ ಬೀಳುವುದು ಕೂದಲೆಳೆ ಅಂತರದಲ್ಲಿ ತಪ್ಪಿತು. ಇದರಿಂದಾಗಿ ದೊಡ್ಡ ಅಪಾಯ ತಪ್ಪಿದಂತಾಗಿದೆ. ಜೀವ ಹಾರಿ ಹೋದಂತೆ ಆಗಿದೆ ಎಂದು ಪ್ರಯಾಣಿಕರು ನಿಟ್ಟುಸಿರು ಬಿಟ್ಟು ಚಾಲಕನ ದುರ್ವರ್ತ ನೆಗೆ ಹಿಡಿಶಾಪ ಹಾಕುತ್ತಿದ್ದರು. ಪ್ರಯಾಣಿಕರು ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ.