Home ಅಪರಾಧ ಲೋಕ ನಾರಾವಿ ವ್ಯಕ್ತಿಯ ಮೇಲೆ ಹಲ್ಲೆ, ಜಾತಿನಿಂದನೆ ಪ್ರಕರಣ‌ದಾಖಲು

ನಾರಾವಿ ವ್ಯಕ್ತಿಯ ಮೇಲೆ ಹಲ್ಲೆ, ಜಾತಿನಿಂದನೆ ಪ್ರಕರಣ‌ದಾಖಲು

0

ಬೆಳ್ತಂಗಡಿ: ನಾರಾವಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ‌ದಾಖಲಿಸಲಾಗಿದೆ.
ನಾರಾವಿ ನಿವಾಸಿಯಾಗಿರುವ ಸುಧೀರ್ ಎಂಬಾತನೇ ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದು ಸ್ಥಳೀಯ ನಿವಾಸಿಗಳಾದ ರಕ್ಷಿತ್ ಹಾಗೂ ಚೇತನ್ ಎಂಬವರು ಹಲ್ಲೆ ನಡೆಸಿ ಜಾತಿನಿಂದನೆ ಮಾಡಿದ ಆರೋಪಿಗಳಾಗುದ್ದಾರೆ.
ಸುಧೀರ್ ಮಧುಸೂದನ್ ಮತ್ತು ಯಶವಂತ್ ಫೆ.5ರಂದು ನಾರಾವಿ ಬೈದರ್ಕಳ ಗರಡಿ ನೇಮೋತ್ಸವಕ್ಕೆ ಹೋಗಿದ್ದು ತಡರಾತ್ರಿ ನಾರಾವಿ ಗ್ರಾಮಪಂಚಾಯತು ಸಭಾಂಗಣದಲ್ಲಿ ಮಲಗಿದ್ದರು. ಬೆಳಗ್ಗಿನ ಜಾವ ಇಲ್ಲಿಗೆ ಬಂದ ರಕ್ಷಿತ್ ಹಾಗೂ ಚೇತನ್ ಏಕಾಏಕಿಯಾಗಿ ಅವಾಚ್ಯವಾಗಿ ಬೈದು ಜಾತಿನಿಂದನೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಕೈಯಿಂದ ನಿರಂತರ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ವೇಣೂರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದ್ದು ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ದ ಕಲಂ352,115(2),351(2)3(5) ಬಿಎನ್ ಎಸ್ ನಂತೆ ಕಲಂ 3(1)3(2)ಎಸ್.ಸಿ ಎಸ್.ಟಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version