Home ರಾಜಕೀಯ ಸಮಾಚಾರ ಶಾಸಕ ರೇವಣ್ಣರನ್ನು ಬಂಧಿಸಿದ ಎಸ್.ಐ.ಟಿ

ಶಾಸಕ ರೇವಣ್ಣರನ್ನು ಬಂಧಿಸಿದ ಎಸ್.ಐ.ಟಿ

0

ಬೆಂಗಳೂರು: ನಿರೀಕ್ಷಣಾ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದ ಬೆನ್ನಲ್ಲೇ ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಜೆಡಿಎಸ್‌ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಪದ್ಮನಾಭನಗರದಲ್ಲಿರುವ ಮನೆಯಲ್ಲಿ ಎಚ್‌.ಡಿ.ರೇವಣ್ಣ ವಾಸ್ತವ್ಯ ಹೂಡಿದ್ದರು. ಜಾಮೀನು ನಿರಾಕರಣೆ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳ ತಂಡ, ದೇವೇಗೌಡ ಅವರ ಮನಗೆ ಹೋಗಿತ್ತು.

ಮನೆ ಹೊರಗೆ ಹಾಗೂ ಒಳಗೆ ಹಲವು ನಿಮಿಷ ಶೋಧ ನಡೆಸಿತ್ತು. ಅಂತಿಮವಾಗಿ ಎಚ್.ಡಿ.ರೇವಣ್ಣ ಮನೆಯಲ್ಲಿರುವುದು ಖಾತ್ರಿಯಾಯಿತು. ನಂತರ, ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅವರನ್ನು ಸಿಐಡಿ ಕಚೇರಿಗೆ ಕರೆತರುತ್ತಿದ್ದಾರೆ.

ರೇವಣ್ಣ ಆಪ್ತನ ಮನೆಯಲ್ಲಿ ಅಪಹರಣ ವಾಗಿದ್ದ ಮಹಿಳೆ ಪತ್ತೆ

ಹೊಳೆನರಸೀಪುರದ ಜೆಡಿಎಸ್‌ ಶಾಸಕ
ಎಚ್.ಡಿ. ರೇವಣ್ಣ ಮನೆಯಲ್ಲಿ ಕೆಲಸಕ್ಕಿದ್ದ ಕೆ.ಆ‌ರ್. ನಗರದ ಮಹಿಳೆಯ ಅಪಹರಣ ಪ್ರಕರಣ ತಿರುವು ಪಡೆದುಕೊಂಡಿದ್ದು, ಹುಣಸೂರು ತಾಲ್ಲೂಕಿನ ಕಾಳೇನಹಳ್ಳಿ ಬಳಿಯಿರುವ ರೇವಣ್ಣ ಆಪ್ತ ಸಹಾಯಕರೊಬ್ಬರ ತೋಟದ ಮನೆಯಲ್ಲಿ ಆಕೆ ಶನಿವಾರ ಪತ್ತೆಯಾಗಿದ್ದಾರೆ.
‘ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಾಯಿಯನ್ನು ಏ.29 ರಂದು ಎಚ್.ಡಿ.ರೇವಣ್ಣ ಅವರ ಸೂಚನೆಯಂತೆ ಸತೀಶ್ ಬಾಬು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಆಕೆಯ ಜೀವಕ್ಕೆ ಅಪಾಯವಿದೆ’ ಎಂದು ಮಹಿಳೆಯ ಮಗ ಕೆ.ಆರ್ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಎಸ್‌ಐಟಿ ತಂಡ ರೇವಣ್ಣ ಅವರ ಆಪ್ತಸಹಾಯಕ ರಾಜಶೇಖ‌ರ್ ತೋಟದ ಮನೆಯಲ್ಲಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ.

ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬು ಅವರನ್ನು ಮೇ 2 ರಂದು ಪೊಲೀಸರು ಬಂಧಿಸಿದ್ದರು. ಮೇ 3 ರಂದು ಕೆ.ಆರ್.ನಗರ ಜೆ.ಎಂಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version