Home ಸ್ಥಳೀಯ ಸಮಾಚಾರ “ಕನಸುಗಳನ್ನು ಕಂಡರೆ ಮಾತ್ರ ಉದ್ಯಮಿಗಳಾಗಿ ಬೆಳೆಯಲು ಸಾದ್ಯ” ಮೋಹನ್‌ ಕುಮಾರ್‌

“ಕನಸುಗಳನ್ನು ಕಂಡರೆ ಮಾತ್ರ ಉದ್ಯಮಿಗಳಾಗಿ ಬೆಳೆಯಲು ಸಾದ್ಯ” ಮೋಹನ್‌ ಕುಮಾರ್‌

0

ಉಜಿರೆ: ಉದ್ಯಮಿಗಳು ಕನಸುಗಳನ್ನು ಕಾಣಬೇಕು, ಆ ಕನಸುಗಳನ್ನು ನನಸಾಗಿಸುವ ಪ್ರಯತ್ನ ಮಾಡಬೇಕು. ಈ ಕನಸುಗಳು ನನಸಾಗಿಸಲು ಸಮಯ ಬೇಕು, ಅವಸರ ಮಾಡಬಾರದು, ತಾಳ್ಮೆ ಇರಬೇಕು, ನೀವು ಕಂಡ ಕನಸುಗಳು ನಿಮ್ಮನ್ನು ಬೆಳಸಲು ಸಹಕಾರಿಯಾಗುತ್ತದೆ.
ಎಂದು “ಬದುಕು ಕಟ್ಟೋಣ ಬನ್ನಿ” ಇದರ ಸಂಚಾಲಕರು ಮತ್ತು ಉದ್ಯಮಿಗಳು ಆದ ಮೋಹನ್‌ ಕುಮಾರ್‌ ಹೇಳಿದರು ಅವರು ರುಡ್‌ಸೆಟ್‌ ಸಂಸ್ಥೆಯಲ್ಲಿ ನಡೆದ ಮೊಬೈಲ್‌ ರಿಪೇರಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಭಾಗವಹಿಸಿ ಶಿಭಿರಾರ್ಥೀಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.


ನಿಮ್ಮ ಬದುಕಿನಲ್ಲಿ ಕಷ್ಟಗಳು ಬಂದಾಗ ಅದನ್ನು ಸಾವಾಲಾಗಿ ಸ್ವೀಕರಿಸಬೇಕು. ದುಂದು ವೆಚ್ಚಗಳಿಂದ ಮತ್ತು ದುಶ್ಚಟಗಳಿಂದ ದೂರ ಇರಬೇಕು. ನಿಮಗೆ ನೀವು ಮಾಡುವ ಸಾಧನೆಗಳೆ ಮುಖ್ಯವಾಗಿರಬೇಕು. ರುಡ್‌ಸೆಟ್‌ ಸಂಸ್ಥೆಯಿಂದ ಅನೇಕ ನಿರುದ್ಯೋಗಿಗಳು ಸ್ವ ಉದ್ಯೋಗವನ್ನು ಮಾಡಿ ಉದ್ಯಮಿಗಳಾಗಿರುವುದು ತುಂಬಾ ಸಂತೋಷ ಕೊಟ್ಟಿದೆ ಎದರು. ಈ ಕಾರ್ಯಕ್ರಮದಲ್ಲಿ ರುಡ್‌ಸೆಟ್‌ ಸಂಸ್ಥೆಯ ನಿರ್ದೇಶಕರಾದ ಎಮ್‌. ಸುರೇಶ್‌ ,ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು
ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್‌ರವರು ಕಾರ್ಯಕ್ರಮ ನಿರೂಪಿಸಿ, ಅತಿಥಿಗಳನ್ನು ಸ್ವಾಗತಿಸಿ, ತರಬೇತಿಯ ಹಿನ್ನೋಟವನ್ನು ನೀಡಿದರು. ಕಛೇರಿ ಸಹಾಯಕರಾದ ರಶ್ಮಿರವರು ವಂದಿಸಿದರು. 30 ದಿನಗಳ ಈ ತರಬೇತಿ ಕಾರ್ಯಕ್ರಮದಲ್ಲಿ 27 ಯುವಕರು ಭಾಗವಹಿಸಿದರು. ಕೆಲವು ಶಿಭಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version