ಧರ್ಮಸ್ಥಳ: ಕುಳಿತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮೇ.04ರಂದು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪ ಸಂಭವಿಸಿದೆ.
ಸುಮಾರು 42 ವರ್ಷದ ವ್ಯಕ್ತಿ ಮಧ್ಯಾಹ್ನ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸಮೀಪ, ನೀರಿನ ಬಾಟಲ್ ಹಿಡಿದು ಕುಳಿತ್ತಿದ್ದು, ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ನಿವಾಸಿ ಮಹಾರುದ್ರ ಸ್ವಾಮಿ ಎಂದು ಗುರುತಿಸಲಾಗಿದೆ.ಈತಹೃದಯಾಘಾತದಿಂದ
ಮೃತಪಟ್ಟಿರಬಹುದು ಎಂದು ಅನುಮಾನಿಸಲಾಗಿದೆ. ಮದ್ಯಾಹ್ನದ ವೇಳೆ ಅತಿಯಾದ ಬಿಸಲಿನ ತಾಪವಿದ್ದು ಇದರಿಂದಾಗಿ ಬಸವಳಿದು ಬಿದ್ದು ಸಾವನ್ನು ಅಪ್ಪಿರವಹುದೇ ಎಂಬ ಅನುಮಾನವೂ ಇದೆ.
ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ಬಳಿಕ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.