ವೇಣೂರು; ಅನಾರೋಗ್ಯ ಪೀಡಿತ ವ್ಯಕ್ತಿಯೋರ್ವ ಮನೆಯ ಕಾಂಪೌಂಡ್ ಸಮೀಪದ ಚರಂಡಿಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.
ಮೃತ ವ್ಯಕ್ತಿ ಪಿಲ್ಯ ಗ್ರಾಮದ ನಿವಾಸಿ ನಾರಾಯಣ ಪೂಜಾರಿ (58)ಎಂಬವರಾಗಿದ್ದಾರೆಇವರು ವರ್ಷದ ಹಿಂದೆ ಆಕಸ್ಮಿಕವಾಗಿ ಬಿದ್ದು ಗಾಯಗೊಂಡು ಎದ್ದು ನಡೆಯಲಾರದ ಸ್ಥಿತಿಯಲ್ಲಿದ್ದರು. ತೆವಳುತ್ತಾ ಮನೆಯಿಂದ ಹೊರಗೆ ಹೋಗುತ್ತಿದ್ದರು ಎನ್ನಲಾಗಿದೆ. ರಾತ್ರಿಯ ವೇಳೆ ಮನೆಯಿಂದ ಹೇಗೋ ಹೊರಗೆ ಹೋದ ಅವರು ಚರಂಡಿಗೆ ಬಿದ್ದು ಮೇಲೇಳಲಾರದೆ ಮೃತಪಟ್ಟಿರುವುದಾಗಿ ದೂರು ನೀಡಲಾಗಿದ್ದು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
