Home ರಾಷ್ಟ್ರ/ರಾಜ್ಯ ಮತದಾನಕ್ಕೆ ಸಿದ್ದತೆಗಳು ಪೂರ್ಣ; ಮತಗಟ್ಟೆ ತಲುಪಿದ ಮತಯಂತ್ರಗಳು

ಮತದಾನಕ್ಕೆ ಸಿದ್ದತೆಗಳು ಪೂರ್ಣ; ಮತಗಟ್ಟೆ ತಲುಪಿದ ಮತಯಂತ್ರಗಳು

125
0

ಬೆಳ್ತಂಗಡಿ; ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ 241 ಮತಗಟ್ಟೆಗಳ ಚುನಾವಣೆಯ ಮಸ್ಟರಿಂಗ್ ಕಾರ್ಯ ಉಜಿರೆಯ ಎಸ್ ಡಿಎಂ ಪದವಿ ಪೂರ್ವ ಕಾಲೇಜಿನಲ್ಲಿ ನಡೆದು ತಲೂಕಿನ ಎಲ್ಲ ಮತಗಟ್ಟೆಗಳಿಗೆ ಅಧಿಕಾರಿಗಳು ಮತಯಂತ್ರಗಳೊಂದಿಗೆ ತೆರಳಿದ್ದಾರೆ.
ಬೆಳ್ತಂಗಡಿ ತಾಲೂಕಿಗೆ ಓರ್ವ ಡಿವೈಎಸ್ ಪಿ, ನಾಲ್ವರು ಇನ್ಸ್ ಪೆಕ್ಟರ್ ಗಳು, 15 ಸಬ್ ಇನ್ಸ್ ಪೆಕ್ಟರ್ ಗಳು, ಒಂದು ಅರಸೇನಾಪಡೆ,ಒಂದು ಕೆಎಸ್ ಆರ್ ಪಿ ತುಕಡಿ, ಗೃಹ ರಕ್ಷಕ ದಳ ಸೇರಿದಂತೆ 400 ಪೊಲೀಸರು ಹಾಗೂ 1,156 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಒಂದು ಮತಗಟ್ಟೆಗೆ 7 ಮಂದಿ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು 1,200ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗೆ ಓರ್ವ ಹೆಚ್ಚುವರಿ ಸಿಬ್ಬಂದಿಯನ್ನು ನೀಡಲಾಗಿದೆ.

25ನಕ್ಸಲ್ ಪೀಡಿತ ಮತಗಟ್ಟೆಗಳು;


ತಾಲೂಕಿನಲ್ಲಿ 25 ಮತಗಟ್ಟೆಗಳನ್ನು ನಕ್ಸಲ್ ಪೀಡಿತ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ವಿಶೇಷ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ಪೊಲೀಸ್ ಸಿಬ್ಬಂದಿ ಯೊಂದಿಗೆ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್, ರಾಜ್ಯ ಮೀಸಲು ಪಡೆಯ ಶಸ್ತ್ರ ಸಜ್ಜಿತ ಸಿಬ್ಬಂದಿಗಳು, ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ಭದ್ರತೆ ಒದಗಿಸಲಿದ್ದಾರೆ.ಅದೇರೀತಿ ತಾಲೂಕಿನಲ್ಲಿ 12ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು ಈ ಮತಗಟ್ಟೆಗಳಿಗೆ ವಿಶೇಷ. ಭದ್ರತಾ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ;


ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ಉಜಿರೆ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದರು. ಇಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದ ಅವರು ಸಿಬ್ಬಂದಿಗಳ ಕೊಠಡಿಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಬಾಂಜಾರು ಮಲೆ, ಎಳನೀರು ಸೇರಿದಂತೆ ತಾಲೂಕಿನ ದುರ್ಗಮ ಮತಗಟ್ಟೆ,ಸೂಕ್ಷ್ಮ ಮತಗಟ್ಟೆ, ನಕ್ಸಲ್ ಭಾದಿತ ಪ್ರದೇಶಗಳ ಕಡೆ ಚುನಾವಣಾ ಕರ್ತವ್ಯಕ್ಕೆ ನೇಮಿಸಲ್ಪಟ್ಟ ಸಿಬ್ಬಂದಿಗಳಿಗೆ ಯಾವುದೇ ರೀತಿಯ ಆತಂಕ ಬೇಡ ಎಲ್ಲಾ ಪೂರ್ವ ತಯಾರಿಗಳು ಸುಸೂತ್ರವಾಗಿರುವ ಕುರಿತು ಧೈರ್ಯ ತುಂಬಿದರು.
ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅವರು
“ತಾಲೂಕಿನಲ್ಲಿ ಚುನಾವಣೆಯ ಪೂರ್ವ ತಯಾರಿ ಉತ್ತಮವಾಗಿ ನಡೆದಿದೆ ಸಿಬ್ಬಂದಿಗಳಿಗೆ ಅಗತ್ಯ ಸವಲತ್ತು ನೀಡಲಾಗಿದೆ.ತೀರ ಹಿಂದುಳಿದ ಭಾಗಗಳಿಗೆ ಓರ್ವ ಹೆಚ್ಚಿನ ಅಧಿಕಾರಿ, ಹೆಚ್ಚುವರಿ ಮತಯಂತ್ರ ನೀಡಲಾಗಿದೆ. ತಾಲೂಕಿನಲ್ಲಿ ಚುನಾವಣೆ ಕರ್ತವ್ಯ ನಿರ್ವಹಿಸುವವರಲ್ಲಿ ಮಹಿಳೆಯರೇ ಅಧಿಕವಾಗಿ ಅವರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಮತಗಟ್ಟೆಗಳಲ್ಲಿ ವಿದ್ಯುತ್ ವ್ಯವಸ್ಥೆ ಉಂಟಾಗದಂತೆ ಮೆಸ್ಕಾಂ ಇಲಾಖೆಗೆ ಹೆಚ್ಚುವರಿ ತಂಡಗಳನ್ನು ರಚಿಸುವಂತೆ ಸೂಚಿಸಲಾಗಿದೆ. ಮತಯಂತ್ರಗಳಲ್ಲಿ ದೋಷ ಕಂಡು ಬಂದರೆ ಅಂತಹ ಕಡೆಗೆ ಬದಲಿ ಮತಯಂತ್ರಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬ ಮತದಾರನು ತಪ್ಪದೇ ಚುನಾವಣೆ ಮಾಡಬೇಕು”ಎಂದರು.
ತಹಸೀಲ್ದಾರ್ ಪೃಥ್ವಿ ಸಾನಿಕಂ, ಉಪಚುನಾವಣಾ ಅಧಿಕಾರಿ ಕೆಂಪೇಗೌಡ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here