MLA Harish Poonja’s reaction to the Jerosa School case
ಬೆಳ್ತಂಗಡಿ; ಮಂಗಳೂರಿನಲ್ಲಿ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಶಾಸಕರುಗಳಾದ ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿ ಅವರ ಮೇಲೆ ಪ್ರಕರಣ ದಾಖಲಿಸಿರುವ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಫೇಸ್ ಬುಕ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ
“ಹಿಂದೂ ಸಮಾಜಕ್ಕೆ ಆದ ಅನ್ಯಾಯವನ್ನು ಸರಿಪಡಿಸಿ ಎಂದರೆ ಅದು ಹೇಗೆ ಪ್ರಚೋದನೆ?
ಮಕ್ಕಳ ಮನಸ್ಸಿನಲ್ಲಿ ಪ್ರಭು ಶ್ರೀರಾಮಚಂದ್ರರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿದನ್ನು ಪ್ರಶ್ನೆ ಮಾಡಿದರೆ ಅದು ಹೇಗೆ ಪ್ರಚೋದನೆ?
ತುಳುನಾಡಿನ ಸಂಪ್ರದಾಯಗಳ ಬಗ್ಗೆ ಕೀಳಾಗಿ ಮಾತನಾಡಿದ್ದನ್ನು ಪ್ರಶ್ನೆ ಮಾಡಿದರೆ ಅದು ಹೇಗೆ ಪ್ರಚೋದನೆ?
ಹಿಂದೂ ಆಚರಣೆಗಳ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಪ್ರಶ್ನೆ ಮಾಡಿದರೆ ಅದು ಹೇಗೆ ಪ್ರಚೋದನೆ?
ನಿಮ್ಮ ತಪ್ಪನ್ನು ಪ್ರಶ್ನೆ ಮಾಡುವುದು ಪ್ರಚೋದನೆ ಎಂದಾದರೆ ಇನ್ನೂ ಬಹಳ ಪ್ರಚೋದನೆಗೆ ಒಳಗಾಗಲು ತಯಾರಾಗಿರಿ.
ಹಿಂದೂ ಸಂಸ್ಕಾರವನ್ನು ಅವಹೇಳನ ಮಾಡಿದವರನ್ನು ಪ್ರಶ್ನಿಸಿದ ನನ್ನ ಶಾಸಕ ಮಿತ್ರರಾದ ಶ್ರೀ ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ ಸೇರಿದಂತೆ ಎಲ್ಲಾ ಹಿಂದೂ ಕಾರ್ಯಕರ್ತರ ಜೊತೆ ಸಮಾಜವಾಗಿ, ಐಕ್ಯತೆಯಿಂದ ಅವರ ಜೊತೆ ನಿಲ್ಲೋಣ.”
ಎಂದು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ನಲ್ಲಿ ಬರೆದಿದ್ದಾರೆ.