ಪ್ಲಾಸ್ಟಿಕ್ ಅತ್ಯಂAತ ಅಪಾಯಕಾರಿ ತ್ಯಾಜ್ಯವಾಗಿದ್ದು ಅದರಿಂದ ಪರಿಸರವನ್ನು ರಕ್ಷಿಸುವ ಅಗತ್ಯವಿದೆ ಅದಕ್ಕಾಗಿ ರಾಜ್ಯದಲ್ಲಿ ಧರ್ಮಸ್ಥಳ ಐದು ನಗರಗಳನ್ನು ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ನಗರಗಳೆಂದು ರಾಜ್ಯ ಸರಕಾರ ಗುರುತಿಸಿದೆ ಈ ನಗರಗಳನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಸರಕಾರ ಸ್ಥಳೀಯಾಡಳಿತಗಳು ಹಾಗೂ ಜನರು ಒಟ್ಟಾಗಿ ಪ್ರಯತ್ನಿಸಬೇಕಾದ ಅಗತ್ಯವಿದೆ ಎಂದು ರಾಜ್ಯ ಸರಕಾರದ ಅರಣ್ಯ ಹಾಗೂ ಪರಿಸರ ಸಚಿವರಾದ ಈ ಶ್ವರ ಖಂಡ್ರೆ ಅವರು ಹೇಳಿದರು.
ಅವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸೋಮವಾರ ಧರ್ಮಸ್ಥಳವನ್ನು ಏಕಬಳಕೆಯ ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೀಷಿಸಿ ಮಾತನಾಡಿದರು.
ಪರಿಸರದಲ್ಲಿ ಆಗುತ್ತಿರುವ ಅನಾಹುತಗಳನ್ನು ನೋಡಿ ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಇರುವ ಒಂದೇ ಬೂಮಿಯನ್ನು ರಕ್ಷಿಸುವ ಕರ‍್ಯವನ್ನು ಮಾಡಬೇಕಾಗಿದೆ. ಲಕ್ಷಾಂತರ ಭಕ್ತರು ಬರುವ ಶ್ರೀ ಕ್ಷೇತ್ರ ಧರ್ಮಸ್ಥಳವ್ನು ಅತ್ಯಂತ ಪವಿತ್ರನಗರವಾಗಿ ಉಳಿಸಬೇಕು ಎಂಬ ಗುರಿಯೊಂದಿಗೆ ಧರ್ಮಸ್ಥಳವನ್ನು ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ನಗರವೆಂದು ಘೋಷಿಸಲಗಿದೆ. ಸರಕಾರಗಳು ಕಾನೂನುಗಳನ್ನು ಮಾಡಬಹುದು ಆದರೆ ಜನರು ಜಾಗರತರಾಗದ ಹೊರತು ಇದು ಅನುಷ್ಠಾನವಾಗಲು ಸಾಧ್ಯವಿಲ್ಲ, ತ್ಯಜ್ಯ ಮುಕ್ತವಾದ ಕ್ಷೇತ್ರವನ್ನು ರೂಪಿಸಲು ಭಕ್ತರು ಕೈಜೋಡಿಸುವಂತೆ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಸ್ಥಳದ ಧಮಾಧಿಕಾರಿ ಡಾ,ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಸ್ವಚ್ಚವಗಿರಿಸಲು ಕ್ಷೇತ್ರದವತಿಯಿಚಿದ ಸ್ಥಳೀಯ ಗ್ರಾಮ ಪಂಚಾಯತಿನ ವತಿಯಿಂದ ನಿರಂತರ ಪ್ರಯತ್ನಗಳು ನಡೆಯುತ್ತಿದೆ, ಇದರಿಂದಾಗಿಯೇ ಕ್ಷೇತ್ರಕ್ಕೆ ಅತ್ಯಂತ ಸ್ವಚ್ಚ ದಾರ್ಮಿಕ ನಗರ ಎಂಬ ಪ್ರಶಸ್ತಿಯೂ ಲಭಿಸಿದೆ. ಇದೀಗ ಪ್ಲಾಸ್ಟಿಕ್ ಮುಕ್ತ ನಗರವೆಂದು ರಾಜ್ಯ ಸರಕರ ಘೋಷಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಕ್ಚೇತ್ರದಲ್ಲಿನ ತ್ಯಾಜ್ಯಗಳನ್ನು ಮರುಬಳಕೆ ಮಾಡುವ ದೃಷ್ಟಿಯಿಂದ ವಿಶೇಷ ಯಂತ್ರಗಳನ್ನು ತರಿಸಲಾಗುತ್ತಿದ್ದು ಪ್ಲಾಸ್ಟಿಕ್ ಸ್ಭೆರಿದಂತೆ ಎಲ್ಲ ತ್ಯಾಜ್ಯಗಳನ್ನು ಇಲ್ಲಿ ಯಾವುದಾದರೂ ರೂಪದಲ್ಲಿ ಮರುಬಳಕೆ ಮಾಡಲಾಗುವುದು ಎಂದರು.
ಧರ್ಮಸ್ಥಳ ಗ್ರಾಮ ಪಂಚಾಯತಿನ ಉಪಾಧ್ಯಕ್ಷ ಶ್ರೀನಿವಾಸರಾವ್ ಮಾತನಾಡಿ ಏಕಬಳಕೆಯ ಪ್ಲಾಸ್ಟಿಕ್ ಮುಕ್ತವಾಗಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಪಂಚಾಯತಿನಿAದ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಗ್ರಾಮಪಂಚಾಯತು ಅಧ್ಯಕ್ಷೆ ವಿಮಲ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಜಿಲ್ಲಾ ಪಂಚಾಯತು ಉಪ ಕರ‍್ಯದರ್ಶಿ ಡಾ,ರಘು ಹಾಗೂ ಇತರರು ಉಪಸ್ಥಿತರಿದ್ದರು. ದೇವಿಪ್ರಸಾದ್ ಕರ‍್ಯಕ್ರಮ ನಿರೂಪಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಸಚಿವರನ್ನು ಕ್ಷೇತ್ರದ ಪರವಾಗಿ ಸ್ವಾಗತಿಸಲಾಯಿತು. ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪ್ರಜೆ ಸಲ್ಲಿಸಿದ ಸಚಿವರು ಧಮಸ್ಥಳದ ಧರ್ಮಾಧಿಕಾರಿ ಡಾ,ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.