ಧರ್ಮಸ್ಥಳದಲ್ಲಿ ಸೋಮವಾರ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಸರಿಯಾದ ರೀತಿಯ ಸರ್ವೆ ಕರ‍್ಯ ನಡೆಯದ ಕಾರಣ ಹಲವು ಗೊಂದಲಗಳಿವೆ ಸರ್ವೆಯಲ್ಲಿ ಅರಣ್ಯದಲ್ಲಿ ಜನವಸತಿ ಪ್ರದೇಶಗಳು ಹಳ್ಳಿಗಳು ಇರುವುದು ಕಂಡುಬಂದರೆ ಸರ್ವೋಚ್ಚನ್ಯಾಯಾಲಯದ ಗಮನಕ್ಕೆ ತಂದು ಅರಣ್ಯ ಇಲಾಖೆಗೆ ರ‍್ಯಾಯಭೂಮಿ ಒದಗಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪರಯತ್ನಿಸಲಾಗುವುದು ಎಂದು ಅವರುತಿಳಿಸಿದರು.
ಮಲೆನಾಡು ಸೇರಿದಂತೆ ಎಲ್ಲೆಡೆ ಕಾಡಾನೆದಾಳಿ ಅತ್ಯಂತ ಹೆಚ್ಚಾಗುತ್ತಿದ್ದು ಈಬಗ್ಗೆಯೂ ರಾಜ್ಯಸರಕಾರಅರಣ್ಯ ಇಲಾಖೆ ಹೆಚ್ಚಿನ ಜವಾಬ್ದಾರಿಯಿಚಿದ ಕರ‍್ಯ ನಿರ್ವಹಿಸುತ್ತಿದೆ. ಮಾನ ಪ್ರಾಣಿಗಳ ಸಂಘರ್ಷ ತಪ್ಪಿಸಬೇಕು ಎಂದು ಕಾಡಾನೆಗಳು ಕೃಷಿ ಬೂಮಿಗೆ ಬಾರದಂತೆ ತಡೆಡಯುವ ಪ್ರಯತ್ನಗಳು ನಡೆಸಲಾಗುತ್ತಿದೆ. ಅದಕ್ಕಾಗಿ ಅರಣ್ಯ ಗಡಿಗೆ ಸೋಲಾರ್ ಪೆನ್ಸಿಂಗ್, ರೈಲ್ವೆ ಹಳಿಗಳ ಬೇಲಿ ಅಳವಡಿಕೆ ಸ್ಭೆರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪುಂಡಾನೆಗಳನ್ನು ಹಿಡಿದು ಅರಣ್ಯಕ್ಕೆ ಕಳುಹಿಸುವ ಕರ‍್ಯಾಚರಣೆಗಳನ್ನು ನಡೆಸಲಾಗುತ್ತಿದೆಆನೆ ಕಾರಿಡಾರ್ ಅನ್ನು ಸಚಿರಕ್ಷಿಸುವ ಕರ‍್ಯಕ್ಕೂ ಅರಣ್ಯ ಇಲಾಖೆ ಮಹತ್ವ ನೀಡುತ್ತಿದೆ. ಆನೆ ದಾಲಿಯಿಚಿದ ಮೃತಪಟ್ಟವರಿಗೆ ಕೂಡಲೇ ಪರಿಹಾರ ನೀಡಲಾಗುತ್ತಿದೆ. ಕರಷಿ ಹಾನಿ ಸಂಭವಿಸಿದರೆ ಅವರಿಗೂ ಪರಿಹಾರ ನೀಡಲಾಗುವುದು ಈಗಾಲೆ 30 ಕೋಟಿಗೂ ಅಧಿಕ ಪರಿಹಾರ ನೀಡಲಾಗಿದೆ ಎಂದು ಅವರು ತಿಳಿಸಿದರು. ಕಾಡ್ಗಿಚ್ಚುನ ಸಮಸ್ಯೆಯನ್ನು ಎದುರಿಸುವ ನಿಟ್ಟಿನಲ್ಲಿ ಈಗಾಗಲೆ ಇಲಾಖೆಯ ಮಟ್ಟದಲ್ಲಿ ಹಲವು ಸಭೆಗಳು ನಡೆದಿದೆ. ಇಲಾಖೆಯಲ್ಲಿನ ಸಿಬಂಧಿಕೊರತೆಯನ್ನು ನೀಗಿಸುವ ನಿಟ್ಟಿಸಲು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತಿದೆ ಕಾಡ್ಗಿಚ್ಚು ತಡೆಯಲು ಗಸ್ತನ್ನು ಹೆಚ್ಚುಮಾಡಲಾಗಿದೆ. ಜನಜಾಗೃತಿ ಮುಡಿಸು ಕರ‍್ಯವನ್ನು ಮಾಡಲಾಗುತ್ತಿದೆ. ಕಾಡ್ಗಿಚ್ಚನ್ನು ತಡೆಯಲು ಜನರ ಸಹಕಾರವೂ ಅಗತ್ಯವಾಗಿದೆ ಎಂದು ಸಚಿವರು ತಿಳಿಸಿದರು.
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದಲ್ಲಿನ ಜಾಗದ ವಿವಾದಿತ ಜಮೀನಿಗೆ ಸಂಬಮಧಿಸಿದಂತೆ ಅರಣ್ಯ ಹಾಗೂ ಕಂದಾಯ ಇಲಾಖೆಯ ಜಂಟಿ ಸರ್ವೆಕರ‍್ಯ ಬಹುತೇಕ ಪೂರ್ಣಗೊಂಡಿದೆ, ಈ ಸರ್ವೆಯ ವರದಿ ಕೈ ಸೇರಿದ ಬಳಿಕ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.