ಎಸ್.ಐ.ಟಿ ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿ ಮಂಗಳೂರಿಗೆ ಆಗಮನ ಸಾಕ್ಷಿ ದೂರು ದಾರನ ವಿಚಾರಣೆ ಆರಂಭ

0

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಎಸ್.ಐ.ಟಿ ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿಯವರು ಖುದ್ದು ದೂರುದಾರನ ವಿಚಾರಣೆ ನಡೆಸಲು ಜುಲೈ 27 ರಂದು 12 ಗಂಟೆಗೆ ಮಂಗಳೂರು ಐಬಿಗೆ ಆಗಮಿಸಿದ್ದಾರೆ. ಇದರ ಜೊತೆಗೆ ದೂರುದಾರ ಕೂಡ ತನ್ನ ಇವತ್ತು ಮೂವರು ವಕೀಲರ ಜೊತೆ ಕಾರಿನಲ್ಲಿ ಬಂದು ತನಿಖೆಗೆ ಹಾಜರಾಗಿದ್ದಾನೆ.ಬೆಳಗ್ಗೆ 10.30ರ ಸಮಾರಿಗೆ ಸಾಕ್ಷಿ ದೂರುದಾರ ತನ್ನ ವಕೀಲರೊಂದಿಗೆ ಮಂಗಳೂರಿನ ಎಸ್..ಐ.ಟಿ ಕಚೇರಿಗೆ ಬಂದಿದ್ದಾನೆ 12 ಗಂಟೆಯ ಸುಮಾರಿಗೆ ಪ್ರಣವ್ ಕುಮಾರ್ ಮೊಹಂತಿ ಅವರು ಕಚೇರಿಗೆ ಆಗಮಿಸಿದ್ದು ಆತನಿಂದ...

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಎಸ್.ಐ.ಟಿ ವಿಚಾರಣೆ ಮುಗಿಸಿ ವಾಪಸ್

0

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಜುಲೈ 26 ರಂದು ಮಂಗಳೂರು ಐಬಿ ಯಲ್ಲಿ ಎಸ್.ಐ.ಟಿ ತನಿಖೆಗೆ ದೂರುದಾರ ವ್ಯಕ್ತಿ ಇಬ್ಬರು ವಕೀಲರ ಜೊತೆ ಬೆಳಗ್ಗೆ 11 ಗಂಟೆಗೆ ಹಾಜರಾಗಿದ್ದು ಸಂಜೆ 7:30 ಕ್ಕೆ ವಿಚಾರಣೆ ಮುಗಿಸಿ ವಕೀಲರ ಜೊತೆ ವಾಪಸ್ ತೆರಳಿರುವುದಾಗಿ ತಿಳಿದು ಬಂದಿದೆ. ಸುಮಾರು 8 ಗಂಟೆ 30 ನಿಮಿಷಗಳ ಕಾಲ ಎಸ್.ಐ.ಟಿ ಅಧಿಕಾರಿಗಳೊಂದಿಗೆ ಈತ ಕಳೆದಿದ್ದು ಎಲ್ಲ ವಿಚಾರಗಳಬಗ್ಗೆ ವಿಚಾರಣೆಗೆ ನಡೆಸಿದ್ದಾರೆ. ಇದೀಗ ಈತ ವಕೀಲರುಗಳೊಂದಿಗೆ ಹಿಂತಿರುಗಿದ್ದು ಎಸ್.ಐ.ಟಿ ಅಧಿಕಾರಿಗಳ ಮುಂದಿನ‌ನಡೆ ಏನು...

ನಡಗ್ರಾಮದಲ್ಲಿ ಗಾಳಿ ಮಳೆಗೆ ಹಾನಿಯಾದ ಮನೆಗಳಿಗೆ ರಕ್ಷಿತ್ ಶಿವರಾಂ ಭೇಟಿ

0

ಬೆಳ್ತಂಗಡಿ;  ನಡ ಗ್ರಾಮದ ಲತೀಫ್ ಅವರ ಮನೆಯು ತೀವ್ರ ಸ್ವರೂಪದ ಗಾಳಿ ಮಳೆಗೆ ಸಂಪೂರ್ಣ ಕುಸಿದಿದ್ದು ಬಿದ್ದಿದ್ದು ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರು ಅಝರ್ ನಾವೂರು. ಸ್ಥಳೀಯ ಕಾಂಗ್ರೆಸ್ ಮುಖಂಡ ಝಕೀರ್. ಯುವ ಕಾಂಗ್ರೆಸ್ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಉಪಾಧ್ಯಕ್ಷರು ನವೀನ್ ಗೌಡ ಸವಣಾಲು .ಹಾಗೂ ಸ್ಥಳೀಯರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಕುವೆಟ್ಟು ರಸ್ತೆಗೆ ಬಿದ್ದ ಹೆಮ್ಮರ ಸಂಚಾರ ಅಸ್ತವ್ಯಸ್ತ

0

ಬೆಳ್ತಂಗಡಿ: ತಾಲೂಕಿನಾದ್ಯಂತ ಭಾರೀ ಗಾಳಿ ಮಳೆಗೆ ಕುವೆಟ್ಟು ಗ್ರಾಮದ ವರಕಬೆ ಬಳಿ ರಸ್ತೆಗೆ ಬೃಹತ್ ಗಾತ್ರದ ಮರಬಿದ್ದು ರಸ್ತೆ ಸಂಪೂರ್ಣ ಬ್ಲಾಕ್ ಆದ ಘಟನೆ ಇಂದು (ಜು. 26) ನಡೆದಿದೆ. ರಸ್ತೆ ಸಂಪೂರ್ಣ ಬ್ಲಾಕ್ ಆಗಿದ್ದು, ವಾಹನ ಸವರಾರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರು ಸೇರಿ ತೆರವು ಕಾರ್ಯ ನಡೆಯುತ್ತಿದೆ.

ಬೆಳ್ತಂಗಡಿ : ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹುತಾತ್ಮ ವೀರ ಯೋಧ ಏಕನಾಥ್ ಶೆಟ್ಟಿಯವರ ಪುತ್ಥಳಿಗೆ ನುಡಿ ನಮನ

0

ಬೆಳ್ತಂಗಡಿ :ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಬೆಳ್ತಂಗಡಿ ಯುವ ಮೋರ್ಚಾ ವತಿಯಿಂದ ಜುಲೈ 26 ರಂದು ವೀರ ಯೋಧರಿಗೊಂದು ನಮನ ಕಾರ್ಯಕ್ರಮದ ಸಲುವಾಗಿ ಹುತಾತ್ಮ ವೀರ ಯೋಧ ಏಕನಾಥ್ ಶೆಟ್ಟಿಯವರ ಮನೆಯಲ್ಲಿ ಅವರ ಪುತ್ಥಳಿಗೆ ಗೌರವ ನಮನ ಹಾಗೂ ನುಡಿ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಯೋಧ ಏಕನಾಥ್ ಶೆಟ್ಟಿಯವರ ಪತ್ನಿ ಜಯಂತಿ ಶೆಟ್ಟಿ,ಮಗ ಅಕ್ಷಯ್, ಬೆಳ್ತಂಗಡಿ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಮಂಡಲ ಯುವಮೋರ್ಚಾ ಉಪಾಧ್ಯಕ್ಷರಾದ ಗಣೇಶ್....

ತೆಕ್ಕಾರು; ಗಾಳಿ ಮಳೆಗೆ ಹಾನಿ; ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

0

ಬೆಳ್ತಂಗಡಿ; ತಾಲೂಕಿನಲ್ಲಿ ಸುರಿದ ಗಾಳಿ ಮಳೆಗೆ ತೆಕ್ಕಾರು ಗ್ರಾಮದ ಆನಲಿಕೆ ಶ್ರೀಮತಿ ಬೇಬಿ ಪೂಜಾರ್ತಿಯವರ ಮನೆಯು ಸಂಪೂರ್ಣ ಹಾನಿಗೊಳಗಾಗಿದ್ದು ಶಾಸಕ ಹರೀಶ್ ಪೂಂಜ ಅವರಿ ಶನಿವಾರ ಇಲ್ಲಿಗೆ ಭೇಟಿ ನೀಡಿ ವೈಯಕ್ತಿಕ ಸಹಾಯ ನೀಡಿ, ಮೇಲ್ಛಾವಣಿಗೆ ಶೀಟು ಒದಗಿಸುವ ಭರವಸೆ ನೀಡಿದರು.

ಬೆಳ್ತಂಗಡಿ ಕೇಂದ್ರ ಜುಮ್ಮಾ ಮಸೀದಿ ನೂತನ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಅಕ್ಬರ್ ಬೆಳ್ತಂಗಡಿ ಆಯ್ಕೆ.

0

ಬೆಳ್ತಂಗಡಿ : ಬೆಳ್ತಂಗಡಿ ಕೇಂದ್ರ ಖಿಲರ್ ಜುಮ್ಮಾ ಮಸೀದಿ ಇದರ ವಾರ್ಷಿಕ ಮಹಾಸಭೆಯು ಶುಕ್ರವಾರ ಜುಮ್ಮಾ ನಮಾಝಿನ ಬಳಿಕ ಖಿಲರ್ ಜುಮ್ಮಾ ಮಸೀದಿಯ ಮದರಸ ಹಾಲ್ ನಲ್ಲಿ ಜಮಾ'ಅತ್ ಖತೀಬರಾದ ಹನೀಫ್ ಫೈಝಿಯವರು ದುವಾ ಮೂಲಕ ನಡೆಯಿತು. ಪ್ರಧಾನ ಕಾರ್ಯದರ್ಶಿ ರಝಾಕ್ ಕೊಡಿಸಭೆಯವರು ಕಳೆದ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಅಧ್ಯಕ್ಷರಾದ ಬಿ ಎ ನಝೀರ್ ರವರು ಕಳೆದ ಸಾಲಿನ ಅವಧಿಯಲ್ಲಿ ನಡೆದ ಮಸೀದಿಯ ಅಭಿವೃದ್ಧಿ ಕಾರ್ಯವನ್ನು ವಿವರಿಸಿದರು. ಮಹಮ್ಮದ್ ಬಿ ಎಚ್ ಗೌರವ ಅಧ್ಯಕ್ಷತೆಯಲ್ಲಿ ಹಳೆಯ ಸಮಿತಿಯನ್ನು ಬರ್ಕಾಸುಗೊಳಿಸಿ ನೂತನ ಸಮಿತಿಯನ್ನು...

ಭಾರೀ ಮಳೆ ಬೆಳ್ತಂಗಡಿ ತಾಲೂಕಿನಲ್ಲಿ ಶಾಲೆಗಳಿಗೆ ಜು26ಶನಿವಾರ ರಜೆ

0

ಬೆಳ್ತಂಗಡಿ: ತಾಲೂಕಿನಲ್ಲಿ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ಮಾಹಿತಿಯಂತೆ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಂಭವ ಇರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ತಾಲೂಕಿನ ಎಲ್ಲಾ ಅಂಗನವಾಡಿ ಮತ್ತು ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು (26) ರಜೆ ಘೋಷಿಸಿ, ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ ಆದೇಶ ಹೊರಡಿಸಿದ್ದಾರೆ

ರೆಖ್ಯ ಕಾಡು ಹಂದಿ ದಾಳಿಯಿಂದ ಗಾಯಗೊಂಡ ವ್ಯಕ್ತಿ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

0

ಬೆಳ್ತಂಗಡಿ; ಕಾಡು ಹಂದಿದಾಳಿಯಿಂದ ಗಾಯಗೊಂಡಿರುವರೆಖ್ಯಾ ಗ್ರಾಮದ ಬಾಲಕೃಷ್ಣ ಗೌಡ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ವೈಯುಕ್ತಿಕ ಧನ ಸಹಾಯ ನೀಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಸಂದರ್ಭದಲ್ಲಿ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಡಾಜೆ ಸಮೀಪ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನದ ಮೇಲೆ ಬಿದ್ದ ಹೆಮ್ಮರ; ಹಲವು ವಿದ್ಯುತ್ ಕಂಬಗಳು ಧರೆಗೆ; ಸಂಚಾರ ಸಂಪೂರ್ಣ ಸ್ಥಗಿತ

0

ಬೆಳ್ತಂಗಡಿ; ಉಜಿರೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿಬ ಮುಂಡಾಜೆ ಗ್ರಾಮದ ಕಾಪು ಎಂಬಲ್ಲಿ ಭಾರೀ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದು ಐದಕ್ಕೂ ಹೆಚ್ಚು ವಿದ್ಯುತ್ ಕಂಬಗಳು ರಸ್ತೆಗೆ ಮುರಿದುಬಿದ್ದಿವೆ. ಮರವು ಚಲಿಸುತ್ತಿದ್ದ ಜೀಪಿನ ಮೇಲೆ ಬಿದ್ದಿದ್ದು, ಓರ್ವ ಗಾಯಗೊಂಡಿರುವುದಾಗಿ ತಿಳಿದು ಬಂದಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಸ್ತುತ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.ಘಟನೆಯಲ್ಲಿ ವಾಹನಗಳ ಮೇಲೆ ಮರ ಹಾಗೂ ವಿದ್ಯುತ್ ಕಂಬಗಳು ಬಿದ್ದಿರುವುದಾಗಿ ತಿಳಿದು ಬಂದಿದ್ದು ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ