ಶಾಸಕರು ಎಲ್ಲ 29 ಲಕ್ಷ  ಸಾಲ ಮುಗಿಸುವ ಭರವಸೆ ನೀಡಿ ಪಕ್ಷಕ್ಕೆ ಕರೆದಿದ್ದರು ಪಟ್ಟಣ ಪಂಚಾಯತು ವಿರೋಧ ಪಕ್ಷದ ನಾಯಕ ಜಗದೀಶ್ ಡಿ ಹೇಳಿಕೆ 

0

ಬೆಳ್ತಂಗಡಿ: ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ ಅದಿಕಾರವಿದ್ದರು ಕೆಲವೊಂದು ವಿಷಯದಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿದ್ದರು ಸಲಹೆ ಸೂಚನೆಗಳನ್ನು ಕೊಡುತ್ತಾ ಉತ್ತಮ ಆಡಳಿತ ನಡೆಸಲು ನೆರವಾಗುತ್ತಾ ಬಂದಿದ್ದೇನೆ ರಾಜಕೀಯ ಹಾಗೂ ಸಮಾಜ ಸೇವೆಗಾಗಿ ಎಲ್ಲವನ್ನೂ ಕಳೆದುಕೊಂಡಿದ್ದೇನೆ ಆದರ ಈಗ ನನಗೆ ಭ್ರಷ್ಟಾಚಾರದ‌ ಪಟ್ಟ ಕಟ್ಟುವ ಕಾರ್ಯಕ್ಕೆ ಪಟ್ಟಣ ಪಂಚಾಯತು ಅಧ್ಯಕ್ಷರು ಮುಂದಾಗಿದ್ದಾರೆ. "ನನ್ನ ಎಲ್ಲ ಸಾಲಗಳನ್ನೂ ತೀರಿಸುತ್ತೇನೆ ಪಕ್ಷಕ್ಕೆ ಬನ್ನಿ" ಎಂದು ಮನೆ ಏಲಂಗೆ ಬಂದಾಗ ಬೆಳ್ತಂಗಡಿ ಶಾಸಕರು ಹೇಳಿದ್ದರು ಆದರೆ ಪಕ್ಷ ನಿಷ್ಠೆ ಮತ್ತು ಸಿದ್ದಾಂತದ ಮೇಲಿನ ನಿಷ್ಠೆಯಿಂದ ಅದನ್ನು ತಿರಸ್ಕರಿಸಿ ಮುಂದುವರಿದಿದ್ದೇನೆ ಎಂದು...

ಬೆಳ್ತಂಗಡಿ : ನಾಲ್ಕು ಮಂದಿ ಹೋರಾಟ ಗಾರರಿಗೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡಿದ ಎಸ್ಐಟಿ

0

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ವಿಚಾರಣೆಗೆ ಹಾಜರಾಗಲು ಕಾಲಾವಾಕಾಶ ಕೋರಿದ್ದ  ನಾಲ್ಕು ಮಂದಿಗೆ ಎಸ್.ಐ.ಟಿ ಅಧಿಕಾರಿಗಳು ಕಾಲಾವಕಾಶ ನೀಡಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಅ.27 ರಂದು ಐದು ಮಂದಿಗೆ ಎಸ್.ಐ.ಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು ಅದರಂತೆ ಸುಜಾತ ಭಟ್ ಮಾತ್ರ ಅ.27 ರಂದು ವಿಚಾರಣೆಗೆ ಹಾಜರಾಗಿದ್ದರು.ಉಳಿದ ನಾಲ್ಕು ಮಂದಿ ಗಿರೀಶ್ ಮಟ್ಟಣ್ಣವರ್, ಸೌಜನ್ಯ ಮಾವ ವಿಠಲ್ ಗೌಡ, ಜಯಂತ್ ಟಿ, ಮಹೇಶ್ ಶೆಟ್ಟಿ ತಿಮರೋಡಿ ವಿಚಾರಣೆಗೆ ಹಾಜರಾಗಿರಲಿಲ್ಲ. ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಅ.27 ರಂದು ಮಧ್ಯಾಹ್ನ ಬಂದ ನಾಲ್ಕು ಮಂದಿಯ ಪರ...

ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ನಾಲ್ಕು ಮಂದಿ ಎಸ್.ಐ.ಟಿ ವಿಚಾರಣೆಗೆ ವಿನಾಯಿತಿ ಕೇಳಿದ ವಕೀಲರು

0

ಬೆಳ್ತಂಗಡಿ :ಧರ್ಮಸ್ಥಳ ಪ್ರಕರಣ ಸಂಬಂಧ ಎಸ್ಐಟಿ ವಿಚಾರಣೆಗೆ ಇನ್ನೂ ಹಾಜರಾಗದ ಮಹೇಶ್ ಶೆಟ್ಟಿ ಹಾಗೂ ಇತರರು ವಕೀಲರ ಮೂಲಕ ಹಾಜರಾತಿಗೆ ಒಂದು ವಾರ ವಿನಾಯಿತಿ ಕೇಳಿದ್ದಾರೆ‌ ಧರ್ಮಸ್ಥಳ ಪ್ರಕರಣದಲ್ಲಿ ಅ.27 ರಂದು ಮಹೇಶ್ ಶೆಟ್ಟಿ ತಿಮರೋಡಿ ,ಗಿರೀಶ್ ಮಟ್ಟಣ್ಣವರ್, ಜಯಂತ್. ಟಿ, ವಿಠಲ್ ಗೌಡ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್.ಐ.ಟಿ ನೋಟೀಸ್ ನೀಡಿತ್ತು. ಆದರೆ ಇವರು ಅ27 ರಂದು ಮಧ್ಯಾಹ್ನದ ವರೆಗೂ ವಿಚಾರಣೆಗೆ ಹಾಜರಾಗಿಲ್ಲ.ತಿಮರೋಡಿ ಮಹೇಶ್ ಶೆಟ್ಟಿ, ಗಿರೀಶ್ ಮಟ್ಟಣ್ಣವರ್, ಜಯಂತ್. ಟಿ, ಸೌಜನ್ಯ ಮಾವ ವಿಠಲ್ ಗೌಡ ಈ ನಾಲ್ಕು ಮಂದಿಪರವಾಗಿ ಬೆಳ್ತಂಗಡಿ...

ಬೆಳ್ತಂಗಡಿ : ಎಸ್.ಐ.ಟಿ ಕಚೇರಿಗೆ ಸುಜಾತ ಭಟ್ ಗೆ ವಿಚಾರಣೆಗೆ ಹಾಜರು

0

ಬೆಳ್ತಂಗಡಿ : ಬುರುಡೆ ಪ್ರಕರಣ ಸಂಬಂಧ ಎಸ್.ಐ‌.ಟಿ ವಿಚಾರಣೆಗೆ ಬೆಂಗಳೂರಿನಿಂದ ಆಗಮಿಸಿ ಸುಜಾತ ಭಟ್ ಹಾಜರಾಗಿದ್ದಾರೆ. ಧರ್ಮಸ್ಥಳ ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಚಿನ್ನಯ್ಯ, ಜಯಂತ್ ಟಿ, ಗಿರೀಶ್ ಮಟ್ಟಣ್ಣವರ್ ಜೊತೆ ಸುಜಾತ ಭಟ್ ದೆಹಲಿಗೆ ಹೋಗಿದ್ದ ಪ್ರಕರಣ ಮತ್ತು ಚಿನ್ನಯ್ಯನಿಗೆ ಬೆಂಗಳೂರು ಮನೆಯಲ್ಲಿ ಆಶ್ರಯ ನೀಡಿದ್ದ ಹಿನ್ನೆಲೆಯಲ್ಲಿ ವಿಚಾರಣೆಗೆ ಅ.27 ರಂದು ಸೋಮವಾರ ಬೆಳಗ್ಗೆ ಎಸ್.ಐ.ಟಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.

ದ್ವೇಷ ಭಾಷಣ ಕಲ್ಲಡ್ಕ ಪ್ರಭಾಕರ ಭಟ್ ಗೆ ಬಜಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದ ಪೊಲೀಸರು

0

ಪುತ್ತೂರು: ಪುತ್ತೂರು ಗ್ತಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ‌ ಸಂಬಂಧಿಸಿತೆ‌ ವಿಚಾರಣೆಗೆ ಹಾಜರಾಗಲು ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಅ30ರಂದು ಕಲಂ 35(3) ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಂತೆ ವಿಚಾರಣೆಗೆ‌ ಹಾಜರಾಗಲು ನೋಟೀಸ್ ಜಾರಿ ಮಾಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದಾರೆ.ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಪ್ರಭಾಕರ ಭಟ್ ವಿರುದ್ದ ಈಶ್ವರಿ ಪದ್ಮುಂಜ ಅವರು ನೀಡಿದ ದೂರಿನಂತೆ ಪ್ರಕರಣ‌ ದಾಖಲಿಸಲಾಗಿತ್ತು.

ಅಸೌಖ್ಯದಿಂದ ಬಳಲುತ್ತಿದ್ದ ಯುವತಿ ಮೃತ್ಯು

0

ಬೆಳ್ತಂಗಡಿ:ಕಳೆದ ಕೆಲವು ಸಮಯದಿಂದ ಅಸೌಖ್ಯದಿಂದ ಬಳಲುತ್ತಿದ್ದಉಜಿರೆ ಗ್ರಾಮದ ಗುರಿಪಳ್ಳ ದೊಂಪದಪಲಿಕೆ ನಿವಾಸಿ ಗಣೇಶ ಶೆಟ್ಟಿ ಎಂಬವರ ಪುತ್ರಿ ಶ್ರದ್ಧಾ (23) ಅ.26ರಂದು ಸ್ವಗೃಹದಲ್ಲಿ ಮೃತಪಟ್ಟರು.ತಾಲೂಕಿನ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದ ಅವರಿಗೆ ತಂದೆ,ತಾಯಿ ಹಾಗೂ ಸಹೋದರಿ ಇದ್ದಾರೆ.

ಚಾರ್ಮಾಡಿ ಘಾಟಿ ತಿರುವಿನಲ್ಲಿ ಸಿಲುಕಿದ ಟ್ಯಾಂಕರ್: ಎರಡು ಗಂಟಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್

0

ಬೆಳ್ತಂಗಡಿ; ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಟ್ಯಾಂಕರ್ ಸಿಲುಕಿಕೊಂಡು ಟ್ರಾಫಿಕ್ ಜಾಮ್ ಉಂಟಾದ ಘಟನೆ ಅ26 ಭಾನುವಾರ ಬೆಳಿಗ್ಗೆ ನಡೆದಿದೆ.ಚಾರ್ಮಾಡಿ ಘಾಟಿ ಹತ್ತನೇ ತಿರುವಿನಲ್ಲಿ ಚಾರ್ಮಾಡಿ ಕಡೆ ಸಂಚರಿಸುತ್ತಿದ್ದ ಬೃಹತ್ ಗಾತ್ರದ ಎಂಟು ಚಕ್ರಗಳ ಟ್ಯಾಂಕರ್ ಚಲಿಸಲಾಗದೆ ಸಿಲುಕಿಕೊಂಡಿತ್ತು. ಇದರಿಂದ ಇತರ ವಾಹನಗಳು ಚಲಿಸಲು ಜಾಗವಿಲ್ಲದೆ ಸುಮಾರು ಎರಡು ತಾಸು ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.ಬಳಿಕ ಇತರ ವಾಹನಗಳ ಚಾಲಕರ ಸಹಕಾರದಲ್ಲಿ ಟ್ರಕ್ ನ್ನು ಮುಂದೆ ಚಲಿಸಲು ಅವಕಾಶ ಮಾಡಿಕೊಟ್ಟ ಬಳಿಕ ಘಾಟಿಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳು ಸಂಚಾರ ನಡೆಸಿದವು.ಆದರೂ ಟ್ರಕ್ ಘಾಟಿ...

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ಸುಜಾತ ಭಟ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್.ಐ.ಟಿ ಯಿಂದ ನೋಟಿಸ್ ಜಾರಿ

0

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ಸಂಬಂಧ ಎಸ್.ಐ‌.ಟಿ ವಿಚಾರಣೆಗೆ ಸೋಮವಾರ ಹಾಜರಾಗುವಂತೆ ಸುಜಾತ ಭಟ್ ಗೆ ನೋಟಿಸ್ ಜಾರಿ ಮಾಡಲಾಗಿರುವುದಾಗಿ ತಿಳಿದು ಬಂದಿದೆ.ಧರ್ಮಸ್ಥಳ ಪ್ರಕರಣದಲ್ಲಿ ಆರಂಭದಲ್ಲಿ ಆರೋಪಿ ಚಿನ್ನಯ್ಯನೊಂದಿಗೆ ಜಯಂತ್ ಟಿ ಮತ್ತು ಗಿರೀಶ್ ಮಟ್ಟಣ್ಣವರ್ ಜೊತೆ ಸುಜಾತ ಭಟ್ ದೆಹಲಿಗೆ ಹೋಗಿದ್ದ ಪ್ರಕರಣ ಮತ್ತು ಚಿನ್ನಯ್ಯನಿಗೆ ಬೆಂಗಳೂರು ಮನೆಯಲ್ಲಿ ಆಶ್ರಯ ನೀಡಿದ್ದ ಹಿನ್ನೆಲೆಯಲ್ಲಿ ವಿಚಾರಣೆಗೆ ಅ.27 ರಂದು ಸೋಮವಾರ ವಿಚಾರಣೆಗೆ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಹಾಜರಾಗುವಂತೆ ಸುಜಾತ ಭಟ್ ಗೆ ಎಸ್‌.ಐ.ಟಿ ಕಚೇರಿಯಿಂದ ಅ.25 ರಂದು ನೋಟಿಸ್ ಜಾರಿ ಮಾಡಲಾಗಿದೆ.ಇದೇ ದಿನ...

ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ‌ದಾಖಲು

0

ಪುತ್ತೂರು: ಸಾರ್ವಜನಿಕ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.20ರಂದು ಪುತ್ತೂರಿನ ಉಪ್ಪಳಿಗೆಯಲ್ಲಿ ನಡೆದ 'ದೀಪೋತ್ಸವ' ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮಾಡಿದ ಭಾಷಣ ಧಾರ್ಮಿಕ ದ್ವೇಷ ಪ್ರಚೋದಿಸುವ, ಮಹಿಳೆಯರ ಘನತೆಗೆ ಧಕ್ಕೆ ಉಂಟು ಮಾಡುವ ಹಾಗೂ ಸಾರ್ವಜನಿಕ ಶಾಂತಿಗೆ ಅಪಾಯ ಉಂಟು ಮಾಡುವಂತಿತ್ತು ಎಂದು ಆರೋಪಿಸಿ ಮಹಿಳಾ ಪರ ಹೋರಾಟಗಾರ್ತಿ ಈಶ್ವರಿ ಪದ್ಮುಂಜ ಪುತ್ತೂರು ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದರು. ಈ ಸಂಬಂಧ ಕಲ್ಲಡ್ಕ...

ಮಹೇಶ್ ಶೆಟ್ಟಿ ತಿಮರೋಡಿ ಪರ ಪ್ರತಿಭಟನೆಗೆ ಅನುಮತಿ ನಿರಾಕರಣೆ, ಸೂಚನೆ‌ ಉಲ್ಲಂಘಿಸಿದರೆ ಕಾನೂನು ಕ್ರಮ ಎಸ್.ಪಿ ಹೇಳಿಕೆ

0

ಬೆಳ್ತಂಗಡಿ; ಮಹೇಶ್ ಶೆಟ್ಟಿ ತಿಮರೋಡಿ ಪರವಾಗಿ ಅ27ರಂದು ಪ್ರತಿಭಟನೆ ನಡೆಸಲು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಅನಿಲ್ ಕುಮಾರ್ ಅಂತರ ಅವರು ಅನುಮತಿ ಕೋರಿದ್ದು ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣದಿಂದಾಗಿ ಅನುಮತಿ ನಿರಾಕರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.ಸೂಚನೆಯನ್ನು ಉಲ್ಲಂಘಿಸಿದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.