ಬೆಳ್ತಂಗಡಿ; ಡಿ.ಐ.ಎಫ್.ಐ ಯುವಜನ‌ ಜಾಥಾಕ್ಕೆ ಚಾಲನೆ

0

ಬೆಳ್ತಂಗಡಿ: ಉದ್ಯೋಗ ಸೇಷ್ಟಿಸಿ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿ ಎಂಬ ಎಂಬ ಘೋಷಣೆಯೊಂದಿಗೆ ಡಿ.ವೈ.ಎಫ್ಐ ದ.ಕ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಯುವಜನ ಜಾಥಾಕ್ಕೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಸೆ. 7ರಂದು ಚಾಲನೆ ನೀಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ರಂಗಕರ್ಮಿ ಸಂತೋಷ್ ಶೆಟ್ಟಿ ಹಿರಿಯಡ್ಕ, ಅವರು ನೆರವೇರಿಸಿ ಮಾತನಾಡುತ್ತಾ ನಮ್ಮ ಜಿಲ್ಲೆಗೆ ಬಂದಿರುವ ಕೈಗಾರಿಕೆಗಳಿಂದಾಗಿ ನಮ್ಮ ನೆಲ,ಜಲ, ವಾಯು ಹಾಳಾಗುತ್ತಿದೆ ಆದರೆ‌ ನಮ್ಮ ಯುವಕರಿಗೆ ಉದ್ಯೋಗಾ ವಕಾಶಗಳು ಮರೀಚಿಕೆಯಾಗಿ‌ ಉಳಿದಿದೆ ಎಂಬುದು ದುರಂತ ಅವಕಾಶಗಳ ಕೊರತೆಯಿಂದಾಗಿ ಯುವ ಸಮುದಾಯ ಅಭದ್ರತೆಯಲ್ಲಿ ಬದುಕುವಂತಾಗಿದೆ. ಡಿವೈಎಫ್.ಐ ಹಮ್ಮಿಕೊಂಡಿರುವ...

ಬೆಳ್ತಂಗಡಿ : ಚಾರ್ಮಾಡಿ ಘಾಟ್ ನಲ್ಲಿ ಮೂರು ವಾಹನಗಳ ನಡುವೆ ಅಪಘಾತ

0

ಬೆಳ್ತಂಗಡಿ : ಚಾರ್ಮಾಡಿ ಘಾಟ್ ನಲ್ಲಿ ಮೂರು ವಾಹನಗಳ ನಡುವೆ ಅಪಘಾತ ನಡೆದಿದ್ದು. ಹಲವಾರಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ನ ಎರಡನೇ ತಿರುವಿನಲ್ಲಿ ಸೆ.7 ರಂದು ಬೆಳಗ್ಗೆ 9 ಗಂಟೆಗೆ ಉಜಿರೆಯಿಂದ ಮೂಡಿಗೆರೆ ಕಡೆ ಪ್ರಯಾಣ ಮಾಡುತ್ತಿದ್ದ ಸರಕಾರಿ ಬಸ್ ಗೆ ಮೂಡಿಗೆರೆಯಿಂದ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿ ಡಿಕ್ಕಿ ಹೊಡೆದಿದ್ದು ಬಳಿಕ ಲಾರಿಗೆ ಹಿಂಬದಿಯಲ್ಲಿ ಬರುತ್ತಿದ್ದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಹಲವು ಮಂದಿಗೆ ಸಣ್ಣಪುಟ್ಟ ಗಾಯವಾಗಿದ್ದು. ರಸ್ತೆ ಸಂಚಾರಕ್ಕೆ ಅಡಚಣೆಯಾಗಿದ್ದು ಸಾರ್ವಜನಿಕರು ಸುಗಮ ಸಂಚಾರಕ್ಕೆ...

ಬಯಲಾದ ಬುರುಡೆ ರಹಸ್ಯ ಸೌಜನ್ಯ ಮಾವ ವಿಠಲ್ ಗೌಡನೊಂದಿಗೆ ನೇತ್ರಾವತಿ ಸ್ನಾನಘಟ್ಟದಲ್ಲಿ ಸ್ಥಳ ಮಹಜರು

0

ಬೆಳ್ತಂಗಡಿ : ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಇದೀಗ ಸ್ಪೋಟಕ ತಿರುವು ಪಡೆದುಕೊಂಡಿದೆ‌ ಕೊನೆಗೂ ತಲೆಬುರುಡೆ ಎಲ್ಲಿಂದ‌ ತರಲಾಗಿದೆ ಎಂಬುದು ಬಹಿರಂಗಗೊಂಡಿದ್ದು ನೇತ್ರಾವತಿ ಸ್ನಾನಘಟ್ಟದ ಸಮೀಪದ ಅರಣ್ಯದಲ್ಲಿ ಸೌಜನ್ಯ ಮಾವ ವಿಠಲ ಗೌಡ ಹಾಗೂ ಜಯಂತ್‌ ಅವರೊಂದಿಗೆ ಬಂದ‌ ಎಸ್.ಐ.ಟಿ ತಂಡಬ ತಲೆಬುರುಡೆಯ ಸ್ಥಳಮಹಜರು ನಡೆಸಿದ್ದಾರೆ.ಇಡೀ ಪ್ರಕರಣದಲ್ಲಿ ಈ ಬುರುಡೆಯ ಸುತ್ತ ಹಲವು ಕತೆಗಳನ್ನಿ ಹೆಣೆಯಲಾಗಿತ್ತು. ಆದರೆ ಅದೆಲ್ಲದಕ್ಕೂ ಇದೀಗ ಕೊನೆಯಾಗಿದ್ದು ತಲೆಬುರುಡೆಯನ್ನು ಇದೇ ಸ್ಥಳದಿಂದ ತೆಗೆದಿರುವುದು ತನಿಖೆಯಿಂದ‌ ಬಹಿರಂಗ ಗೊಂಡಿದೆಈ ಪ್ರಕರಣದಲ್ಲಿ ಬುರುಡೆಯನ್ನು ಮೊದಲು‌ ನೋಡಿರುವ ವಿಠಲ ಗೌಡ ಹಾಗೂ...

ಬುರುಡೆ ಪ್ರಕರಣ ಚಿನ್ನಯ್ಯ ನ್ಯಾಯಾಲಯಕ್ಕೆ ಹಾಜರು 14 ದಿನಗಳ ನ್ಯಾಯಾಂಗ ಬಂಧನ

0

ಬೆಳ್ತಂಗಡಿ; ಧರ್ಮಸ್ಥಳ ದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿ ಬಂದಿದ್ದ ಸಾಕ್ಷಿ ದೂರುದಾರ‌ ಚಿನ್ನಯ್ಯ ನ ಎಸ್.ಐ‌.ಟಿ ಕಸ್ಟಡಿ ಅವಧಿ ಮುಗಿದಿದ್ದು ಶನಿವಾರ ಆತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಸಾಕ್ಷಿ ದೂರುದಾರನಾಗಿ ಬಂದ ಚಿನ್ನಯ್ಯನನ್ನುಆ23 ರಂದು ಎಸ್.ಐ.ಟಿ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿತ್ತು ಆಭದಲ್ಲಿ ಸೆ.3ರ ವರೆಗೆ ವಶಕ್ಕೆ ಪಡೆದಿದ್ದರು, ಸೆ.3ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ ವೇಳೆ ಸೆ‌6 ರ ವರೆಗೆ ಆತನನ್ನು ಎಸ್.ಐ‌.ಟಿ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ನೀಡಿತ್ತು....

ಬೆಳಾಲು ಸೇವಾ ಸಹಕಾರಿ‌ ಬ್ಯಾಂಕಿನ ಅವ್ಯವಹಾರ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

0

ಬೆಳ್ತಂಗಡಿ; ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.ಬಂಧಿತ ಆರೋಪಿ ಬ್ಯಾಂಕಿನ ಮಾಜಿ ಸಿಬ್ಬಂದಿ ಸದಾಶಿವ ಯಾನೆ ಸುಜಿತ್ ಎಂಬಾತನಾಗಿದ್ದಾನೆ. ಮಂಗಳೂರಿನ ಪಡೀಲ್ ನಲ್ಲಿ ತಲೆ ಮರೆಸಿಕೊಂಡಿದ್ದ ಈತನನ್ನು ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆತಗ ಗಾಣಿಗೇರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಸೆ.5ರಂದು ವಶಕ್ಕೆ ಪಡೆದಿದ್ದರು. ಆರೋಪಿಯನ್ನು ಸೆ.6 ರಂದು ಅಪರಾಹ್ನ ನ್ಯಾಯಾಲಯಕ್ಕೆ ಹಾಜರು...

ಬುರುಡೆ ಪ್ರಕರಣ ಚಿನ್ನಯ್ಯ ಇಂದು ನ್ಯಾಯಾಲಯಕ್ಕೆ ಹಾಜರು

0

ಬೆಳ್ತಂಗಡಿ; ಧರ್ಮಸ್ಥಳ ದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿ ಬಂದಿದ್ದ ಸಾಕ್ಷಿ ದೂರುದಾರ‌ ಚಿನ್ನಯ್ಯ ನ ಎಸ್.ಐ‌.ಟಿ ಕಸ್ಟಡಿ ಅವಧಿ ಮುಗಿದಿದ್ದು ಶನಿವಾರ ಆತನನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆಆ23 ರಂದು ಚಿನ್ನಯ್ಯ ನನ್ನು ಎಸ್.ಐ.ಟಿ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿಸೆ.3ರ ವರೆಗೆ ವಶಕ್ಕೆ ಪಡೆದಿದ್ದರು, ಸೆ.3ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ ವೇಳೆ ಸೆ‌6 ರ ವರೆಗೆ ಆತನನ್ನು ಎಸ್.ಐ‌.ಟಿ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ನೀಡಿತ್ತು. ಶನಿವಾರ ಚಿನ್ನಯ್ಯನನ್ನು ಮತ್ತೆ ನ್ಯಾಯಾಲಯಕ್ಕೆ‌ಹಾಜರು ಪಡಿಸಲಾಗುತ್ತಿದೆ. ಬುರುಡೆ ಪ್ರಕರರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ...

ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಎಸ್.ಐ.ಟಿ ಮುಂದೆ ವಿಚಾರಣೆಗೆ ಹಾಜರಾದ ಸೌಜನ್ಯ ಮಾವ ವಿಠಲ ಗೌಡ

0

ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಎಸ್.ಐ.ಟಿ ನೀಡಿದ ನೋಟಿಸ್ ನಂತೆ ಬೆಳ್ತಂಗಡಿ ಎಸ್.ಐ.ಟಿ ಠಾಣೆಗೆ ವಿಚಾರಣೆಗಾಗಿ ಸೌಜನ್ಯ ಮಾವ ವಿಠಲ ಗೌಡ ಸೆ.5 ರಂದು ಸಂಜೆ ಹಾಜರಾಗಿದ್ದಾರೆ. ಜಯಂತ್. ಟಿ ಮತ್ತು ಗಿರೀಶ್ ಮಟ್ಟಣ್ಣವರ್ ಜೊತೆ ನಿಕಟ ಸಂಪರ್ಕದಲ್ಲಿದ್ದ ವಿಠಲ ಗೌಡ ಅವರಿಗಿದ್ದು ಈ ಕಾರಣಕ್ಕಾಗಿ ವಿಚಾರಣೆಗೆ ಕರೆಸಿರುವುದಾಗಿ ತಿಳಿದು ಬಂದಿದೆ.ತಡ ರಾತ್ರಿಯ ವರೆಗೂ ಎಸ್.ಐ‌.ಟಿ ಕಚೇರಿಯಲ್ಲಿ ಎಲ್ಲರ ವಿಚಾರಣೆ ನಡೆದಿತ್ತು. ವಿಚಾರಣೆ ಬಳಿಕ ಹಿಂತಿರುಗಿದ್ದಾರೆ

ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಸೌಜನ್ಯ ತಾಯಿ ಕುಸುಮಾವತಿ ಅವರಿಂದ ದೂರು; ಪ್ರಕರಣ ದಾಖಲು

0

ಬೆಳ್ತಂಗಡಿ: ತನ್ನ ವಿರುದ್ದ ಹಾಗೂ ಸೌಜನ್ಯ ಪರ ಹೋರಟಗಾರರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾದ ಬರಹಗಳನ್ನು ಮಾನಹಾನಿಕರವಾದ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುವ ಬಗ್ಗೆ ಸೌಜನ್ಯ ತಾಯಿ ಕುಸುಮಾವತಿ ಅವರು ಸಾಮಾಜಿಕ ಜಾಲತಾಣದ 13 ಖಾತೆಗಳ ವಿರುದ್ದ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಕುಸುಮಾವತಿ ಅವರು ಸಾಮಾಜಿಕ ಜಾಲತಾಣದಲ್ಲಿನ 13 ಪೇಜ್ ಗಳ ವಿರುದ್ದ ದೂರು ನೀಡಿದ್ದಾರೆ. ಅದರಂತೆ ಶುಭಾ ರೈ , ಯಶವಂತ ಗಟ್ಟಿ ಕೊಕ್ಕಡ, ದೀಪಕ್ ಶೆಟ್ಟಿ ಬೆಂಗಳೂರು, ಸರಸ್ವತಿ ಅಮಿತ್ ಬಜಪೆ, ಅಮಿತ್...

ಬೆಳ್ತಂಗಡಿ : ಅಕ್ರಮ ಕಸಾಯಿಖಾನೆ ಅಡ್ಡೆ ಮೇಲೆ ಬೆಳ್ತಂಗಡಿ ಪೊಲೀಸರಿಂದ ದಾಳಿದನಗಳ ತಲೆ ಸಹಿತ ಪರಿಕರಗಳು ವಶಕ್ಕೆ; ಆರೋಪಿಗಳು ಪರಾರಿ

0

ಬೆಳ್ತಂಗಡಿ : ಅಕ್ರಮವಾಗಿ ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಗುರುವಾಯನಕೆರೆ ಪಿಲಿಚಂಡಿಕಲ್ಲಿನ ದಾಳಿ ಅಕ್ರಮ ಕಸಾಯಿಖಾನೆಗ ದಾಳಿ ಮಾಡಿ ಸ್ಥಳದಿಂದ ಮಾಂಸಕ್ಕಾಗಿ ಕಡಿದ ದನಗಳ ತಲೆಗಳು ಹಾಗು ಇತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದ್ದು ಆರೋಪಿಗಳು ಪರಾರಿಯಾಗಿದ್ದಾರೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ಮಹಮ್ಮದ್ ರಫೀಕ್ ಯಾನೆ ಅಪ್ಪಿ ಎಂಬಾತನ ಮನೆಯಲ್ಲಿ ಅಕ್ರಮವಾಗಿ ದನಗಳನ್ನು ವಧೆ ಮಾಡುತ್ತಿರುವ ಮಾಹಿತಿ ಮೇರೆಗೆ ಸೆ.4 ರಂದು...

ಸಿಯೋನ್ ಆಶ್ರಮ: ಓಣಂ ಹಬ್ಬ ಆಚರಣೆ

0

ಬೆಳ್ತಂಗಡಿ; ಸಿಯೋನ್ ಆಶ್ರಮ ಗಂಡಿಬಾಗಿಲು ಇಲ್ಲಿ ದಿನಾಂಕ:05.09.2025ರಂದು ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಾಂಪ್ರದಾಯಿಕವಾಗಿ ಪೂಕಳಂ ಹಾಕಲಾಯಿತು. ಸಂಸ್ಥೆಯ ಟ್ರಸ್ಟೀ ಸದಸ್ಯರಾದ ಮೇರಿ ಯು.ಪಿ.ಯವರು ಪುಣಾಣಿಗಳೊಂದಿಗೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮ್ಯಾನೇಜಿಂಗ್ ಟ್ರಸ್ಟೀಯವರಾದ ಡಾ.ಯು.ಸಿ. ಪೌಲೋಸ್ ರವರು ಓಣಂ ಹಬ್ಬದ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು. ಈ ಹಬ್ಬಕ್ಕೆ ಸಿಯೋನ್ ಸಂಸ್ಥೆಯ ಆಡಳಿತ ವರ್ಗದವರು, ಕುಟುಂಬಸ್ಥರು, ಹಿತೈಷಿಗಳು, ಸಿಬ್ಬಂದಿವರ್ಗದವರು ಆಶ್ರಮನಿವಾಸಿಗಳು ಉಪಸ್ಥಿತರಿದ್ದರು. ಸಾಂತ್ವನಂ ಕುವೈಟ್ ಇವರ ವತಿಯಿಂದ ಓಣಂ ಊಟದ ವ್ಯವಸ್ಥೆ ಮಾಡಲಾಗಿತ್ತು.