ಕೆಎಂಜೆ ವತಿಯಿಂದ “ಭಾರತದ ಬಹುತ್ವ- ಬಂಧುತ್ವದ” ಬಗ್ಗೆ ಕಾರ್ಯಕ್ರಮ: ಮಿಲಾದ್ ಸಂದೇಶ ಸಭೆ
ಮೀಲಾದ್ ಸಂದೇಶ ಸಭೆ ಬೆಳ್ತಂಗಡಿ; ಭಾರತದ ಸ್ವಾತಂತ್ರ್ಯದ ಇತಿಹಾಸವೇ ಬಹುತ್ವ ಮತ್ತು ಬಂಧುತ್ವವಾಗಿದೆ. ಇಲ್ಲಿ ಜಾತಿ ಧರ್ಮದ ವ್ಯತ್ಯಾಸಗಳಿಲ್ಲದೆ ಭಾತರ ಎಂಬ ಧ್ಯೇಯದಿಂದ ಹೋರಾಡಿದ್ದರ ಪರಿಣಾಮ ಈ ಸುಂದರ ದೇಶದ ಆಶಯ ಇಂದಿಗೂ ಭದ್ರವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು. ಗುರುವಾಯನಕೆರೆ ಬಿಬಿಎಸ್ ಸಭಾಂಗಣದಲ್ಲಿ,ಕರ್ನಾಟಕ ಮುಸ್ಲಿಂ ಜಮಾಅತ್ ಗುರುವಾಯನಕೆರೆ ಸರ್ಕಲ್ ಸಮಿತಿ ವತಿಯಿಂದ ಭಾರತದ "ಬಹುತ್ವ- ಬಂಧುತ್ವ" ವಿಚಾರ ವಿಮರ್ಷೆ ಹಾಗೂ ಮಿಲಾದ್ ಸಂದೇಶ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಪ್ರವಾದಿಯವರ ಮೌಲಿದ್ ಪಾರಾಯಣದ ಮೂಲಕ ಕಾರ್ಯಕ್ರಮಕ್ಕೆ ದುಆದ ಮೂಲಕ ಅಬ್ದುಲ್ಲಕುಂಞಿ...
ಬೆಳ್ತಂಗಡಿ : ಲಾಯಿಲ ಸರ್ಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ತೆರವಿಗೆ ತಹಶೀಲ್ದಾರ್ ಆದೇಶ
ಬೆಳ್ತಂಗಡಿ: ಲಾಯಿಲ ಗ್ರಾಮದ ಪಡ್ಲಾಡಿ ನೇತಾಜಿ ಬಡಾವಣೆ ಪಕ್ಕದಲ್ಲಿ ಗ್ರಂಥಾಲಯಕ್ಕೆ ಮೀಸಲಿರಿಸಿದ್ದ ಸರ್ಕಾರಿ ಜಾಗ 116/1 ರಲ್ಲಿ 0.05 ಎಕ್ರರೆಯಲ್ಲಿ ನಿರ್ಮಿಸಲಾಗುತ್ತಿರುವ ಅನಧಿಕೃತ ಕಟ್ಟಡ ತೆರವಿಗೆ ಬೆಳ್ತಂಗಡಿ ತಹಶೀಲ್ದಾರ್ ಆದೇಶಿಸಿದ್ದು,ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಕಟ್ಟಡಕ್ಕೆ ನೋಟೀಸ್ ಅಂಟಿಸಿದ್ದಾರೆ. ಲಾಯಿಲ ಗ್ರಾಮದ ನಿವಾಸಿಗಳಾದ ಸೂರಪ್ಪ ಹಾಗೂ ರಾಜು ಮೇಸ್ತ್ರಿ ಅವರಿಬ್ಬರಿಗೂ ನಿರ್ಮಿಸುತ್ತಿರುವ ಕಟ್ಟಡ ಕಾನೂನು ಬಾಹಿರವಾಗಿದ್ದು ಜಾಗಾತಿಕ್ರಮಣ ತೆರವುಗೊಳಿಸಲು ತಹಶೀಲ್ದಾರ್ ಆದೇಶಿಸಿದ್ದು ಅದಂತೆಇದೀಗ ಅಕ್ರಮ ಕಟ್ಟಡಕ್ಕೆ ನೋಟೀಸ್ ಅಂಟಿಸಲಾಗಿದೆ.ಪಡ್ಲಾಡಿ ಬಳಿ ಸರ್ಕಾರಿ ಜಾಗದಲ್ಲಿ ಯಾವುದೇ ಅನುಮತಿಗಳಿಲ್ಲದೆ ಕಟ್ಟಡ ನಿರ್ಮಿಸುತ್ತಿದ್ದಾರೆ...
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಭಾರತ್ ಜೋಡೋ ಯುವ ಸಂಘದ ಉಸ್ತುವಾರಿಗಳ ನೇಮಕ
ಬೆಳ್ತಂಗಡಿ:ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯುವಜನಪರ ಯೋಜನೆಯಾದ ಭಾರತ್ ಜೋಡೋ ಯುವ ಸಂಘ (BJYS)ವನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಇನ್ನಷ್ಟು ಸಕ್ರಿಯವಾಗಿ ಸಂಘಟಿಸುವ ಉದ್ದೇಶದಿಂದ ಕ್ಷೇತ್ರದ ಏಳು ಜಿಲ್ಲಾ ಪಂಚಾಯತ್ ವ್ಯಾಪ್ತಿಗಳು ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಕುವೆಟ್ಟು ಜಿಲ್ಲಾ ಪಂಚಾಯತ್‌ಗೆ ಅರವಿಂದ ಜೈನ್, ಕಣಿಯೂರು ಜಿಲ್ಲಾ ಪಂಚಾಯತ್‌ಗೆ ಎನ್.ಹೆಚ್. ಅಬ್ದುಲ್ ರೆಹಮಾನ್, ಅಳದಂಗಡಿ ಜಿಲ್ಲಾ ಪಂಚಾಯತ್‌ಗೆ ಲಿಯೋ ಪೀರೆರಾ, ನಾರಾವಿ ಜಿಲ್ಲಾ ಪಂಚಾಯತ್‌ಗೆ ದೀಪಕ್ ಶೆಟ್ಟಿ, ಲಾಯಿಲ ಜಿಲ್ಲಾ ಪಂಚಾಯತ್‌ಗೆ ಜಗನ್ನಾಥ್ ಪುತ್ರಬೈಲ್, ಉಜಿರೆ...
ಬೆಳಾಲು ಶಾಲಾ ಕಬಡ್ಡಿ ತಂಡ ಬೆಳ್ತಂಗಡಿ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆ
ಬೆಳಾಲು: 01.09.2026 ರಂದು ಉಜಿರೆಯಲ್ಲಿ ನಡೆದ ಕೊಕ್ಕಡ ವಲಯ ಮಟ್ಟದ 17ರ ವಯೋಮಾನದ ಬಾಲಕರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ, ಬೆಳಾಲು ಎಸ್ ಡಿ ಎಂ ಪ್ರೌಢ ಶಾಲಾ ತಂಡವು ಪ್ರಥಮ ಸ್ಥಾನವನ್ನು ಪಡೆದು, ಬೆಳ್ತಂಗಡಿ ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಯಿತು. ವಿಜೇತ ಆಟಗಾರರು ಶಾಲಾ ಅಧ್ಯಾಪಕ ವೃಂದದವರೊಂದಿಗೆ.
ಕೇರಳದಲ್ಲಿ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಎಂಟು ಮಂದಿ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವು
ತ್ರಿಶೂರ್: ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ತಮಿಳುನಾಡಿನ ಎಂಟು ಮಂದಿ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಸಂಭವಿಸಿದೆ. ಶುಕ್ರವಾರ ರಾತ್ರಿ ಸುಮಾರು 11.40ರ ವೇಳೆಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕೈಪಮಂಗಲಂ ಸಮೀಪದ ಪನಂಬಿಕ್ಕುನ್ನು ಎಂಬಲ್ಲಿ ಹೆದ್ದಾರಿ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ನೇರವಾಗಿ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಎಲ್ಲ ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಅಪಘಾತದ ತೀವ್ರತೆಗೆ ಲಾರಿಯೊಳಗೆ ನೇರವಾಗಿ ನುಗ್ಗಿದ್ದು ಕಾರು ಸಂಪೂರ್ಣ ವಾಗಿ ನುಜ್ಜುಗುಜ್ಜಾಗಿದೆ. ಅದರೊಳಗೆ ಸಿಲುಕಿ ಎಲ್ಲ...
ಬೆಳ್ತಂಗಡಿ: ತಾಲೂಕಿನ ಮೂವರು ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ಬೆಳ್ತಂಗಡಿ: ಸೆಪ್ಟೆಂಬರ್ 5 ರಂದು ನಡೆಯುವ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ದ.ಕ. ಜಿಲ್ಲಾ ಮಟ್ಟದಲ್ಲಿ ಕೊಡ ಮಾಡುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಮೂರು ಮಂದಿ ಶಿಕ್ಷಕರು ಆಯ್ಕೆಯಾಗಿದ್ದಾರೆ. ಇಳಂತಿಲ ಗ್ರಾಮದ ಅಂಡೆತಡ್ಕ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಪ್ಪ ಪೂಜಾರಿ, ಮುಂಡ್ರುಪ್ಪಾಡಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಚಿತ್ರ ಪ್ರಭಾ, ವೇಣೂರು ಸ.ಪ.ಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹಶಿಕ್ಷಕ ರವೀಂದ್ರ ಕೆ. ಅವರಿಗೆ 2026_27 ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಗೆ...
ನಾವೂರು ಕುತ್ಲೂರು ಪ್ರದೇಶಕ್ಕೆ ವಿದ್ಯುತ್ ಸಂಪರ್ಕಕ್ಕೆ ಅನುಮತಿ; ರಕ್ಷಿತ್ ಶಿವರಾಂ ನೇತೃತದಲ್ಲಿ ಸಮನ್ವಯ ಸಮಿತಿಯ ಪ್ರಯತ್ನದಿಂದ ಸಾಧ್ಯವಾಗಿದೆ; ಶೇಖರ ಲಾಯಿಲ
ಬೆಳ್ತಂಗಡಿ; ತಾಲೂಕಿನ ಕುದುರೇಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ನಾವೂರು ಹಾಗೂ ಕುತ್ಲೂರು ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಒದಗಿಸಲು ಕೇಂದ್ರ ವನ್ಯಜೀವಿ ಮಂಡಳಿಯ ಅನುಮೋದನೆ ಲಭಿಸಿದ್ದು ಇದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರ ನೇತೃತ್ವದಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ಸ್ಥಳೀಯರು ನಿರಂತರವಾಗಿ ನಡೆಸಿದ ಪ್ರಯತ್ನದ ಫಲವಾಗಿ ಸಾಧ್ಯವಾಗಿದೆ ಇದೀಗ ಶಾಸಕ ಹರೀಶ್ ಪೂಂಜ ಅವರು ಪ್ರಚಾರ ಪಡೆಯಲು ಇದನ್ನು ತಾನೇ ಮಾಡಿಸಿದ್ದು ಎಂದು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಇದು ಶಾಸಕರಿಗೆ ಶೋಭೆ ತರುವ ವಿಚಾರವಲ್ಲ ಎಂದು ಆದಿವಾಸಿ ಹಕ್ಕುಗಳ ಸಮನ್ವಯ...
ಬೆಟ್ಟಂಪಾಡಿ ದೇವಸ್ಥಾನದ ಕಾಣಿಕೆ ಡಬ್ಬಿ ಕಳವು: ಕೇರಳದಲ್ಲಿ ಆರೋಪಿ ಬಂಧನ
ಪುತ್ತೂರು: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಗೆ ಇಡಲಾಗಿದ್ದ ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್‌ರಾಜ್ಯ ಕಳ್ಳತನದ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಕೇರಳದ ಬದಿಯಡ್ಕದಲ್ಲಿ ಬಂಧಿಸಿದ್ದಾರೆ.ಪುತ್ತೂರು ಬೆಟ್ಟಂಪಾಡಿ ನಿವಾಸಿ ಹಾಗೂ ದೇವಸ್ಥಾನದ ಆಡಳಿತ ಪದಾಧಿಕಾರಿ ವಿನೋದ್ ಕುಮಾರ್ ಬಿ. (44) ಅವರು ನೀಡಿದ ದೂರಿನಂತೆ, ಆ.25ರಂದು ಬೆಳಿಗ್ಗೆ ದೇವಸ್ಥಾನಕ್ಕೆ ತೆರಳಿದಾಗ ಹೊರಗೆ ಇಡಲಾಗಿದ್ದ ಕಾಣಿಕೆ ಡಬ್ಬಿ ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು. ಬಳಿಕ ದೇವಸ್ಥಾನದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ, ಆ.24ರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಕಾಣಿಕೆ ಡಬ್ಬಿಯನ್ನು ಎತ್ತಿಕೊಂಡು ಹೋಗುತ್ತಿರುವುದು...
ಪ್ರಧ್ಯಾಪಕ ಮಹಮ್ಮದ್ ಇಕ್ಬಾಲ್ ಅವರಿಗೆ ಡಾಕ್ಟರೇಟ್
ಬೆಳ್ತಂಗಡಿ; ಉಜಿರೆ ಗ್ರಾಮದ ಮಾಚಾರು ನಿವಾಸಿ, ಪ್ರಸ್ತುತ ಡಾ. ಪಿ. ದಯಾನಂದ ಪೈ ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇಲ್ಲಿ ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಮಹಮ್ಮದ್ ಇಕ್ಬಾಲ್ ಇವರಿಗೆತಮಿಳುನಾಡಿನ ಪೆರಿಯಾರ್ ವಿಶ್ವವಿದ್ಯಾಲಯ ಸೇಲಂ ಇಲ್ಲಿಂದ ಡಾಕ್ಟರೇಟ್ ಪದವಿ ಲಭಿಸಿದೆ. ಮಾಚಾರು ಬಂಡಸಾಲೆ ನಿವಾಸಿ ದಿ. ಅಬ್ದುಲ್ ರಝಾಕ್ ಮತ್ತು ನಫೀಸ ದಂಪತಿಯ ಪುತ್ರರಾಗಿರುವ ಅವರು ಡಾ. ಜೆ ವೆಂಕಟಾಚಲಂಅವರ ಮಾರ್ಗದರ್ಶನದಲ್ಲಿ"ಎಫೆಕ್ಟ್ ಆಫ್ ಜೆಪಿಎಂಆರ್ ಇಂಟರ್ವೆನ್ಷನ್ ಇನ್ ರೆಡ್ಯೂಸಿಂಗ್ ದ ಟೆಸ್ಟ್ ಆಂಗ್ಸೈಟಿ ಅಮಂಗ್ ಕಾಲೇಜ್ ಸ್ಟೂಡೆಂಟ್ಸ್"ಎಂಬ...
ಧರ್ಮಸ್ಥಳ; ಮುಂಡ್ರುಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಚಿತ್ರ ಪ್ರಭಾ ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ಬೆಳ್ತಂಗಡಿ; ಮಂಗಳೂರು : ಶಿಕ್ಷಕರ ದಿನಾಚರಣೆಯ ಹಿನ್ನಲೆಯಲ್ಲಿ ಕೊಡಮಾಡುವ ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಪಟ್ಟಿಯನ್ನು ದ.ಕ.ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಿಸಿದ್ದು ಧರ್ಮಸ್ಥಳ ಗ್ರಾಮದ ಮುಂಡ್ರುಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಚಿತ್ರಪ್ರಭಾ ಅವರಿಗೆ ಉತ್ತಮಶಿಕ್ಷಕ ಪ್ರಶಸ್ತಿ ಲಭಿಸಿದೆ.ಕಳೆದ ಹತ್ತು ವರ್ಷಗಳಿಂದ ಗ್ರಾಮೀಣ ಪ್ರದೇಶವಾದ ಮುಂಡ್ರುಪ್ಪಾಡಿ ಕಿರಿಯ ಪ್ರಾಧಮಿಕ ಶಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ಗುರುತಿಸಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿದೆ. ಕಿರಿಯ ಪ್ರಾಥಮಿಕ ಶಾಲಾ ವಿಭಾಗ, ಹಿರಿಯ ಪ್ರಾಥಮಿಕ ಶಾಲಾ ವಿಭಾಗ ಹಾಗೂ...















