ಪಟ್ಟೂರು – ಗೋ ಕಾಯ್ದೆ ಹೆಸರಲ್ಲಿ ಮಹಿಳೆಯ ಮನೆ ಜಪ್ತಿ; ಮುಸ್ಲಿಂ ಒಕ್ಕೂಟ ಖಂಡನೆ ಸಂತ್ರಸ್ತರ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಮುಖಂಡರುಗಳು
ಬೆಳ್ತಂಗಡಿ; ಪಟ್ರಮೆ ಗ್ರಾಮದ ಪಟ್ಟೂರು ಎಂಬಲ್ಲಿ ಗೋ ಕಾಯ್ದೆಯ ಹೆಸರಿನಲ್ಲಿ ಅಮಾಯಕ ಮಹಿಳೆಯರ ಮನೆ ಜಪ್ತಿ ಮಾಡಿದ ಪೊಲೀಸರ ಕ್ರಮವನ್ನು ಖಂಡಿಸಿ ತಾಲೂಕಿನ ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ ಘಟನೆಯನ್ನು ತೀವ್ರವಾಗಿ ಖಂಡಿಸಲಾಯಿತು. ಬಳಿಕ ಸಂತ್ರಸ್ತರ ಮನೆಗೆ ಭೇಟಿನೀಡಿ ಮುಖಂಡರು ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು. ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ ನಝೀರ್ ಬೆಳ್ತಂಗಡಿ ವಹಿಸಿದ್ದರು. ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ತಾಲೂಕಿನಲ್ಲಿ ಮುಸಲ್ಮಾನರನ್ನು ಗುರಿಯಾಗಿಸಲಾಗುತ್ತಿದೆ. ಗೋ ಹತ್ಯೆಯ ಹೆಸರಿನಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರವಾದ...
ಕೊಕ್ಕಡ ನಿಲ್ಲಿಸಿದ್ದ ಬೈಕ್ ಕಳವು; ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳ್ತಂಗಡಿ: ಕೊಕ್ಕಡದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳರು ಅಪಹರಿಸಿದ ಘಟನೆ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಆಲಂಕಾರು ನಿವಾಸಿ ಶಿವಪ್ರಸಾದ್ ಎಂಬವರು ನ 6 ರಂದು ಬೆಳಗ್ಗೆ ತನ್ನ ಬೈಕ್ ಕೆ ಎ 19 EH 7942 ಅನ್ನು ಕೊಕ್ಕಡ ಪೇಟೆಯಲ್ಲಿ ಅಂಗಡಿಯೊಂದರ ಆವರಣದಲ್ಲಿ ನಿಲ್ಲಿಸಿ ಉಜಿರೆಗೆ ತೆರಳಿದ್ದರು. ಸಂಜೆ ಹಿಂತಿರುಗಿ ಬಂದು ನೋಡಿದಾಗ ಬೈಕ್ ನಿಲ್ಲಿಸಿದ್ದ ಸ್ಥಳದಲ್ಲಿ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬಳಿಕ ಬೈಕ್ ಕಳ್ಳತನವಾಗಿರುವ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ...
ಮನೆ ಜಪ್ತಿ ಧರ್ಮಸ್ಥಳ ಪೊಲೀಸರು ಕಾನೂನು ವ್ಯಾಪ್ತಿ ಮೀರಿದ್ದಾರೆ. ಜಪ್ತಿ ಆದೇಶ ರದ್ದು ಮಾಡಿ ಎ.ಸಿ ಆದೇಶ
ಬೆಳ್ತಂಗಡಿ; ದನ ಮಾರಾಟ ಮಾಡಿದ ಕಾರಣಕ್ಕೆ ಪಟ್ರಮೆ ಗ್ರಾಮದ ಪಟ್ಟೂರಿನಲ್ಲಿ ಮನೆ ಜಪ್ತಿ ಮಾಡಿದ ಘಟನೆಯಲ್ಲಿ ಧರ್ಮಸ್ಥಳ ಪೊಲೀಸರು ಕಾನೂನು ವ್ಯಾಪ್ತಿಯನ್ನು ಮೀರಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನಲೆಯಲ್ಲಿ ಸಾರಮ್ಮ ಅವರ ವಾಸದ ಮನೆಯನ್ನು ಕೂಡಲೇ ಬಿಡುಗಡೆ ಗೊಳಿಸುವಂತೆ ಪುತ್ತೂರು ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.ಅಕ್ರಮವಾಗಿ ಕಾರಿನಲ್ಲಿ ದನ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಧರ್ಮಸ್ಥಳ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಇದಾದ ಬಳಿಕ ಮುಂದುವರಿದ ಪೊಲೀಸರು ದನಗಳನ್ನು ವಧೆ ಮಾಡಲು ಉದ್ದೇಶಿಸಿದ್ದ ಆರೋಪಿಗಳ ಮನೆಯನ್ನು ಜಪ್ತಿ ಮಾಡಿದ್ದರು. ಇದಾದ ಬಳಿಕ ಇವರಿಗೆ ಕರುಗಳನ್ನು...
ದನ ಮಾರಾಟ ಮಾಡಿದ ಮಹಿಳೆ ಮನೆ ಜಪ್ತಿ ಆದೇಶ ರದ್ದು ಬಿ.ಎಂ ಭಟ್
ಬೆಳ್ತಂಗಡಿ; ಕಸಾಯಿಖಾನೆಗೆ ಸಗಾಟ ಮಾಡುವವರಿಗೆ ದನ ಮಾರಾಟ ಮಾಡಿದ ಆರೋಪದ ಮೇಲೆ ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಜೊಹರಾ ಎಂಬವರ ಮನೆಯನ್ನು ಧರ್ಮಸ್ಥಳ ಪೊಲೀಸರು ಜಪ್ತಿ ಮಾಡಿದ್ದು ಈ ಮನೆಯನ್ನು ಬಿಡುಗಡೆ ಮಾಡಿ ಪುತ್ತೂರು ಸಹಾಯಕ ಕಮಿಷನರ್ ಆದೇಶ ನೀಡಿರುವುದಾಗಿಬೆಳ್ತಂಗಡಿ ತಾಲೂಕು ಸಿಪಿಐಎಂ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ ಭಟ್ ಅವರು ಮಾಹಿತಿ ನೀಡಿದ್ದಾರೆ.ಪುತ್ತೂರು ಎಸಿ ನ್ಯಾಯಾಲಯದಲ್ಲಿ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಬಿ.ಎಂ ಭಟ್ ಮನವಿ ಸಲ್ಲಿಸಿದ್ದರು ಪ್ರಕರಣವನ್ನು ಪರಿಶೀಲಿಸಿದ ಪುತ್ತೂರು ಸಹಾಯಕ ಕಮಿಷನರ್ ಅವರು ಪೊಲೀಸರು ಮುಟ್ಟುಗೋಲು ಹಾಕಿದ್ದ ಮನೆಯನ್ನು ಬಿಡುಗಡೆ ಮಾಡಿ...
ಬೆಳ್ತಂಗಡಿ: ದನ ಮಾರಾಟ ಮಾಡಿದ ಮಹಿಳೆ ಮನೆ ಮುಟ್ಟುಗೋಲು ಹಿಂಪಡೆಯಲು ಮನವಿ
ಬೆಳ್ತಂಗಡಿ: ಅಕ್ರಮ ಗೋ ಸಾಗಾಟ ಗಾರರಿಗೆ ದನವನ್ನು ಮಾರಾಟ ಮಾಡಿದ್ದಾರೆ ಎಂದು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ರಮೆ ಗ್ರಾಮದ ಪಟ್ಟೂರು ಎಂಬಲ್ಲಿನ ನಿವಾಸಿ ಜೊಹರಾ ಎಂನವರ ಮನೆಯನ್ನು ಧರ್ಮಸ್ಥಳ ಪೊಲೋಸರು ಮುಟ್ಟುಗೋಲು ಹಾಕಿರುವ ಕ್ರಮ ಕಾನೂನು ಬಾಹಿರ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ದವಾಗಿದೆ ಈ ಕ್ರಮವನ್ನು ಹಿಂಪಡೆದು ಮೂವರು ಮಕ್ಕಳುಒಂದಿಗೆ ಬದುಕುತ್ತಿರುವ ಬಡ ಮಹಿಳೆಯ ಕುಟುಂಬಕ್ಕೆ ಬದುಕುವ ಅವಕಾಶವನ್ನು ನೀಡುವಂತೆ ಸಿಪಿಐಎಂ ಪಕ್ಷದ ಮುಖಂಡ ಬಿ.ಎಂ ಭಟ್ ಅವರು ಬೆಳ್ತಂಗಡಿ ತಹಶೀಲ್ದಾರರಿಗೆ ಮನವಿ ನೀಡಿದ್ದಾರೆ.ನ.4 ರಂದು ಅಕ್ರಮವಾಗಿ ದನಗಳನ್ನು ಕಸಾಯಿಖಾನೆಗೆ...
ಬೆಳ್ತಂಗಡಿ : ಬಳೆಂಜ ಹರೀಶ್ ರೈ ತೋಟದಲ್ಲಿ ಅಪರೂಪದ ಚಿಪ್ಪು ಹಂದಿ; ಅರಣ್ಯ ಇಲಾಖೆಯ ಸಹಕಾರದಿಂದ ಸುರಕ್ಷಿತವಾಗಿ ಅರಣ್ಯಕ್ಕೆ ಸ್ಥಳಾಂತರ
ಬೆಳ್ತಂಗಡಿ : ತೋಟಕ್ಕೆ ಬಂದಿದ್ದ ಅಪರೂಪದ ಚಿಪ್ಪುಹಂದಿ( Indian pangolik) ಯನ್ನು ನಾಯಿಗಳ ದಾಳಿಯಿಂದ ರಕ್ಷಿಸಿ ಸ್ಥಳೀಯರ ಸಹಕಾರದೊಂದಿಗೆ ವೇಣೂರು ಅರಣ್ಯ ಇಲಾಖೆಯಬಾಧಿಕಾರಿಗಳು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ತಾರಿದೊಟ್ಟು ನಿವಾಸಿ ಹರೀಶ್ ರೈ ಮನೆಯ ತೋಟಕ್ಕೆ ನ. 7 ರಂದು ಬಂದಿದ್ದ ಅಪರೂಪದ ಚಿಪ್ಪುಹಂದಿ (Indian pangolin) ತಿರುಗಾಡುತ್ತಿರುವುದನ್ನು ನೋಡಿದ್ದು ನಾಯಿಗಳು ಅದರ ಮೇಲೆ ದಾಳಿ ನಡೆಸಲು ಮುಂದಾದದಾಗ ಅದನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ ಬಗ್ಗೆ ಸಾರ್ವಜನಿಕರು ವೇಣೂರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು....
ಮೆಸ್ಕಾಂ ಬೆಳ್ತಂಗಡಿ ಡಿವಿಜನ್ ರಚನೆ; ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್
ಬೆಳ್ತಂಗಡಿ: ತಾಲೂಕಿನಲ್ಲಿ ಬೆಳ್ತಂಗಡಿ ಹಾಗೂ ಉಜಿರೆ ಎರಡು ಸಬ್ ಡಿವಿಜನ್ ಗಳಿದ್ದು ಇಲ್ಲಿ ಸಾಕಷ್ಟು ಗ್ರಾಹಕರು ಇದ್ದಾರೆ. ಈಗ ಇದು ಬಂಟ್ವಾಳ ವಿಭಾಗದ ವ್ಯಾಪ್ತಿಗೆ ಬರುತ್ತಿದೆ. ಈ ಹಿನ್ನಲೆಯಲ್ಲಿ ಎರಡು ಸಬ್ ಡಿವಿಜನ್ ಗಳನ್ನು ಸೇರಿಸಿ ಬೆಳ್ತಂಗಡಿ ಡಿವಿಜನ್ ಅನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಇದೂ ಬೇಗ ಮಂಜೂರಾಗಲಿದೆ ಇದರಿಂದ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಲಿದೆ ಎಂದು ಮಂಗಳೂರು ಮೆಸ್ಕಾಂ ಅದ್ಯಕ್ಷ ಕೆ ಹರೀಶ್ ಕುಮಾರ್ ಹೇಳಿದರು. ಅವರು ಗುರುವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಮಂಗಳೂರು ಮೆಸ್ಕಾಂ ರಾಜ್ಯದಲ್ಲಿ ಉತ್ತಮ...
ಹೊಸಂಗಡಿ; ವೃದ್ಧನ ಮೃತದೇಹ ಬಾವಿಯಲ್ಲಿ ಪತ್ತೆ
ಬೆಳ್ತಂಗಡಿ: ವೃದ್ಧನ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಹೊಸಂಗಡಿ ಗ್ರಾಮದ ಬಿದಿರುಕಾಡು ಎಂಬಲ್ಲಿ ಸಂಭವಿಸಿದ್ದು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಕಲಿಸಲಾಗಿದೆ.ಸ್ಥಳೀಯ ನಿವಾಸಿ ಮಾಧವ (71) ಎಂಬವರೇ ಮೃತ ವ್ಯಕ್ತಿಯಾಗಿದ್ದಾರೆ.ಅ.ನಾರೋಗ್ಯದಿಂದ ಬಳಲುತ್ತಿದ್ದ ಇವರು ನ 4ರಂದು ರಾತ್ರಿ ಊಟ ಮಾಡಿ ಮಲಗಿದವರು ಬೆಳಗ್ಗೆ ನಾಪತ್ತೆಯಾಗಿದ್ದರು. ಹುಡುಕಾಟ ನಡೆಸಿದಾಗ ಅವರ ಮೃತದೇಹ ಮನೆಯ ಮುಂದಿನ. ಬಾವಿಯ ನೀರಿನಲ್ಲಿ ಪತ್ತೆಯಾಗಿದೆ. ಇವರು ರಾತ್ರಿ ಎದ್ದು ಹೊರಗೆ ಬಂದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದರೆ ಅಥವಾ ಬಾವಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರಬಹುದು ಎಂದು ಅನುಮಾನಿಸಲಾಗಿದೆ. ಸ್ಥಳಕ್ಕೆ ವೇಣೂರು ಪೊಲೀಸರು...
ಉಪ್ಪಿನಂಗಡಿ; ವಿಧ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ ಗಿರಿ ಇಬ್ಬರ ಬಂಧನ
ಉಪ್ಪಿನಂಗಡಿ: ಅನಾರೋಗ್ಯದಿಂದ ಬಳಲುತ್ತಿದ್ದ ಸಹಪಾರಿಯ ಆರೋಗ್ಯ ವಿಚಾರಿಸಲು ಆತನ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ ಗಿರಿ ಮೆರೆದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಸ್ತಾಫ ಪೆರಿಯಡ್ಕ ಹಾಗೂ ಮುಸ್ತಾಫ ಬಂಧಿತ ಆರೋಪಿಗಳು ಪ್ರಕರಣದ ವಿವರ ದಿನಾಂಕ 06-11-2025 ರಂದು ಕಾಲೇಜೊಂದರ 09 ವಿದ್ಯಾರ್ಥಿ/ವಿಧ್ಯಾರ್ಥಿನಿಯರು ಇತ್ತೀಚೆಗೆ ಅನಾರೋಗ್ಯದಿಂದ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ತಮ್ಮ ಸಹಪಾಠಿಯ ಆರೋಗ್ಯ ವಿಚಾರಿಸಲು ಅಂತಾ ಬೆಳಗ್ಗೆ ಕಾಲೇಜಿನಿಂದ ಹೊರಟು ಪೆರಿಯಡ್ಕ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಬೈಕ್ ನಲ್ಲಿ ಬಂದ ಆರೋಪಿಗಳಾದ ಮುಸ್ತಾಫ ಪೆರಿಯಡ್ಕ ಹಾಗೂ ಮುಸ್ತಾಫ ಅವರು ವಿದ್ಯಾರ್ಥಿಗಳ ಹೆಸರು,...
ಧರ್ಮಸ್ಥಳ ಪ್ರಕರಣ ತಾಂತ್ರಿಕ ಕಾರಣದಿಂದ ಎಸ್.ಐ.ಟಿ ವರದಿ ತಡವಾಗಿದೆ; ಗೃಹಸಚಿವ ಪರಮೇಶ್ವರ್
ಬೆಂಗಳೂರು : ತಾಂತ್ರಿಕ ಕಾರಣಗಳಿಂದ ಧರ್ಮಸ್ಥಳ ಪ್ರಕರಣದ ಎಸ್‌ಐಟಿ ತನಿಖಾ ವರದಿ ವಿಳಂಬವಾಗಿದೆ. ಇದೇ ಕಾರಣದಿಂದಾಗಿ ವರದಿ ಪಡೆಯುವುದನ್ನು ಕೆಲ ದಿನಗಳ ಕಾಲ ಮುಂದೂಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮಹಿಳಾ ಆಯೋಗವು ತನಿಖೆ ಮಾಡಿ ಎಂದು ಕೋರಿದೆ ಈ ಸಂಬಂಧ ಸಮಗ್ರ ತನಿಖೆಯಾದರೆ ಎಲ್ಲ ಮಾಹಿತಿ ಗೊತ್ತಾಗುತ್ತದೆ. ಅದಕ್ಕಾಗಿ ಸಮಯ ಹಿಡಿಯಲಿದ್ದು, ವರದಿಯನ್ನು ಎಲ್ಲ ಆಯಾಮಗಳನ್ನು ನೋಡಿಯೇ ಕೊಡಬೇಕು. ಜತೆಗೆ, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ ಎಂದು ತಿಳಿಸಿದರು.















