ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್, ಮಾಜಿ ಅಧ್ಯಕ್ಷ ಕೇಶವ ಗೌಡ ಎಸ್.ಐ.ಟಿ ವಿಚಾರಣೆಗೆ ಹಾಜರು

0

ಬೆಳ್ತಂಗಡಿ; ಮಾಧ್ಯಮಗಳಲ್ಲಿ ನೀಡಿದ ಹೇಳಿಕೆಗಳ ವಿಚಾರವಾಗಿ ಧರ್ಮಸ್ಥಳ ಗ್ರಾಮಪಂಚಾಯತಿನ ಮಾಜಿ ಅಧ್ಯಕ್ಷ ಕೇಶವ ಗೌಡ ಹಾಗೂ ಹಾಲಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಅವರಿಗೆ ಎಸ್.ಐ.ಟಿ ನೋಟೀಸ್ ನೀಡಿ ವಿಚಾರಣೆಗೆ ಕರೆಸಿಕೊಂಡಿದೆ.ಸೆ.19 ರಂದು ಬೆಳಗ್ಗೆ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಹಾಗೂಮಾಜಿ ಅಧ್ಯಕ್ಷ ಕೇಶವ ಗೌಡ ಬೆಳಾಲು ಅವರು ವಿಚಾರಣೆಗೆ ಹಾಜರಾಗಿದ್ದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.ಕೇಶವ ಗೌಡ ಹಾಗೂ ಶ್ರೀನಿವಾಸ ರಾವ್ ಅವರು ಹಲವು ಬಾರಿ ಮಾದ್ಯಮಗಳಿಗೆ ಹೇಳಿಕೆ ನೀಡಿ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅನಾಥ ಶವಗಳು ಸಿಕ್ಕಿದ್ದು ಅದರ ಎಲ್ಲ ದಾಖಲೆಗಳು ಗ್ರಾಮಪಂಚಾಯತಿನಲ್ಲಿದೆ...

ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ  ವಿಚಾರಣೆಗೆ ಹಾಜರಾಗುವಂತೆ ಮನೆಯ ಗೋಡೆಗೆ ನೋಟಿಸ್ ಅಂಟಿಸಿದ ಬೆಳ್ತಂಗಡಿ ಪೊಲೀಸರು

0

ಬೆಳ್ತಂಗಡಿ : ಎಸ್.ಐ.ಟಿ ತಂಡದವರು ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅವರನೆಯಲ್ಲಿ ಶೋಧ ನಡೆಸಿದ ವೇಳೆ ಮನೆಯೊಳಗೆ ಎರಡು ತಲವಾರು ಮತ್ತು ಒಂದು ಬಂದೂಕು ಪತ್ತೆಯಾದ ಬಗ್ಗೆ ಸೆ.16 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಸ್.ಐ.ಟಿ ಅಧಿಕಾರಿಗಳು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಬೆಳ್ತಂಗಡಿ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ನೋಟೀಸ್ ಅಂಟಿಸಿದ್ದಾರೆ.ಬೆಳ್ತಂಗಡಿ ಪೊಲೀಸರು ಸೆ.18 ರಂದು ಉಜಿರೆ ತಿಮರೋಡಿ ಅವರ ಮನೆಗೆ ಮಹಜರು ನಡೆಸಲು ಹೋಗಿದ್ದರು ಆದರೆ ಈ ವೇಳೆ ಮಹೇಶ್ ಶೆಟ್ಟಿ...

ಧರ್ಮಸ್ಥಳ ಪ್ರಕರಣ    ಸೆ. 26ರ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪುರಂದರ ಗೌಡ ಹಾಗೂ ತುಕಾರಾಂ ಗೌಡ ಅವರಿಗೆ ಹೈಕೋರ್ಟ್ ಸೂಚನೆ

0

ಬೆಂಗಳೂರು; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಇರುವ ದಾಖಲೆಯನ್ನು ಸೆಪ್ಟೆಂಬರ್ 26ರ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪುರಂದರ ಗೌಡ ಹಾಗೂ ತುಕಾರಾಂ ಗೌಡ ಅವರಿಗೆ ಹೈಕೋರ್ಟ್ ನಿರ್ದೇಶಿಸಿದೆ. ಧರ್ಮಸ್ಥಳ ಗ್ರಾಮದಲ್ಲಿ ತಾವು ಗುರುತಿಸಿರುವ ಜಾಗಗಳಲ್ಲಿ ಸ್ಥಳ ಪರಿಶೀಲನೆ ಹಾಗೂ ಶವಗಳ ಉತ್ಪನನ ನಡೆಸಲು ಕಾಲಮಿತಿಯೊಳಗೆ ಕ್ರಮ ಕೈಗೊಳ್ಳುವಂತೆ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನಿರ್ದೇಶಿಸುವಂತೆ ಕೋರಿ ಪುರಂದರ ಗೌಡ ಹಾಗೂ ತುಕಾರಾಂ ಗೌಡ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ...

ಬೆಳ್ತಂಗಡಿ : ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸಿಕ್ಕ ಒಂದು ಅಸ್ಥಿಪಂಜರದ ಗುರುತು ಪತ್ತೆ ಹಚ್ಚಿದ ಎಸ್.ಐ.ಟಿ

0

ಬೆಳ್ತಂಗಡಿ : ಬೆಳ್ತಂಗಡಿ : ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸಿಕ್ಕ ಒಂದು ಅಸ್ಥಿಪಂಜರದ ಗುರುತು ಪತ್ತೆ ಹಚ್ಚಿದ ಎಸ್.ಐ.ಟಿ ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಏಳು ಅಸ್ಥಿಪಂಜರ ಪತ್ತೆಯಾದ ಪ್ರಕರಣದಲ್ಲಿ ಒಂದು ಅಸ್ಥಿಪಂಜರದ ಗುರುತನ್ನು ಐಡಿ ಕಾರ್ಡ್ ಮೂಲಕ ಪತ್ತೆ ಹಚ್ಚಿದ ಎಸ್.ಐ.ಟಿ ಅಧಿಕಾರಿಗಳು. ಕೊಡುಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಟೊ.ಶೆಟ್ಟಿಗೇರಿ ಗ್ರಾಮದ ಯು.ಬಿ.ಅಯ್ಯಪ್ಪ (70) ಎಂಬವರ ಅಸ್ಥಿಪಂಜರ ಎಂದು ಎಸ್.ಐ.ಟಿ ದೃಢ ಪಡಿಸಿದೆ. ಅಸ್ಥಿಪಂಜರದ ಜೊತೆ ಇದ್ದ ಐಡಿ ಕಾರ್ಡ್ಪತ್ತೆ ಹಚ್ಚಲಾಗಿದೆ.ಐ ಡಿ ಕಾರ್ಡ್ ಸಮೀಪ ಪತ್ತೆಯಾದ ಮೃತದೇಹ ಅವರದ್ದೇ ಆಗಿರಬಹುದು...

ಬಂಗ್ಲೆ ಗುಡ್ಡದಿಂದ ಇನ್ನೆರಡು ತಲೆ ಬುರುಡೆ ಪತ್ತೆ

0

ಬೆಳ್ತಂಗಡಿ; ಬಂಗ್ಲೆಗುಡ್ಡ ಕಾಡಿನಲ್ಲಿ ಮುಂದುವರಿದ ಎಸ್ ಐ ಟಿ ಶೋಧದ ವೇಳೆ ಮತ್ತೆ ಎರಡು ತಲೆ ಬುರುಡೆಗಳು ಪತ್ತೆಯಾಗಿರುವುದಾಗಿ ಎಸ್.ಐ‌.ಟಿ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.ಬಂಗ್ಲೆ ಗುಡ್ಡದಲ್ಲಿ ಬುಧವಾರವೂ ಹಲವು ತಲೆ ಬುರುಡೆಗಳು ಪತ್ತೆಯಾಗಿದ್ದವು. ಬುಧವಾರ ಗುರುತಿಸಿದ ಜಾಗದಲ್ಲಿ ಇಂದು ಪರಿಶೀಲನೆ ನಡೆಸಲಾಗಿದ್ದು ಅಲ್ಲಿ ಇನ್ನೆರಡು ಬುರುಡೆಗಳು ಹಾಗೂ ಅವಶೇಷಗಳು ಪತ್ತೆಯಾಗಿದ್ದು ಇಂದು ಅದನ್ನು ಸಂಗ್ರಹಿಸುವ ಕಾರ್ಯ ಮಾಡಿದ್ದಾರೆ. ಗುಡ್ಡದಮೇಲೆ ಚದುರಿಕೊಂಡ ರೀತಿಯಲ್ಲಿ ಎಲಿಬುಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದ್ದು ಅಲ್ಲಿ ಲಭಿಸಿದ ಎಲ್ಲ ವಸ್ತುಗಳನ್ನು ಸಂಗ್ರಹಿಸುವ ಕಾರ್ಯವನ್ನು ಎಸ್.ಐ.ಟಿ ತಂಡ ಮಾಡಿದೆಇದೀಗ ಒಟ್ಟು ಗುರುತಿಸಿದ ಸ್ಥಳಗಳಿಂದ...

ಬೆಳ್ತಂಗಡಿ : ಧರ್ಮಸ್ಥಳ ಬುರುಡೆ ಪ್ರಕರಣ  ಚಿನ್ನಯ್ಯ ಬೆಳ್ತಂಗಡಿ ಕೋರ್ಟ್ ಗೆ ಹಾಜರು

0

ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಚಿನ್ನಯ್ಯ ಸದ್ಯ ಶಿವಮೊಗ್ಗ ಜೈಲಿನಲ್ಲಿ ಸೆ.6 ರಿಂದ ನ್ಯಾಯಾಂಗ ಬಂಧನಲ್ಲಿದ್ದು.  ಆತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆತರಲಾಗಿದೆ.  ಚಿನ್ನಯ್ಯನ  ಹೇಳಿಕೆಯನ್ನು ಬೆಳ್ತಂಗಡಿ ಕೋರ್ಟ್ ನಲ್ಲಿ ಇಂದು ಮತ್ತೆ‌ ದಾಖಲಿಸಲಾಗುತ್ತದೆ. ಬೆಳ್ತಂಗಡಿ ನ್ಯಾಯಾಲಯದ ಆದೇಶದಂತೆ ಸೆ.18 ರಂದು ಶಿವಮೊಗ್ಗ ಜೈಲಿನಿಂದ ಆರೋಪಿ ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಪೊಲೀಸರು ಮಧ್ಯಾಹ್ನ 2:15 ಕ್ಕೆ ಗಂಟೆಗೆ ಕರೆದುಕೊಂಡು ಬಂದಿದ್ದು 3 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಈಗಾಗಲೆ ಸಾಕ್ಷಿ ದೂರುದಾರನಾಗಿ ಬಂದ ಚಿನ್ನಯ್ಯ ನ್ಯಾಯಾಧೀಶರ ಮುಂದೆ ಎರಡು ಹೇಳಿಕೆಗಳನ್ನು ದಾಖಲಿಸಿದ್ದು ಆತ ಇಂದು ಮತ್ತೊಂದು...

ಬೆಳ್ತಂಗಡಿ : ಬಂಗ್ಲೆಗುಡ್ಡೆಯಲ್ಲಿ ಎಸ್.ಐ.ಟಿ ತಂಡದಿಂದ ಎರಡನೇ ದಿನದ ಕಾರ್ಯಾಚರಣೆ ಆರಂಭ

0

ಬೆಳ್ತಂಗಡಿ : ಅಸ್ಥಿಪಂಜರ ಶೋಧಕ್ಕಾಗಿ ಎರಡನೇ ದಿನದ ಕಾರ್ಯಾಚರಣೆಗೆ ಬಂಗ್ಲೆಗುಡ್ಡೆಯಲ್ಲಿ ಎಸ್.ಐ.ಟಿ ಅಧಿಕಾರಿಗಳು ಇಳಿದಿದ್ದಾರೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆ ಪ್ರದೇಶಕ್ಕೆ ಎಸ್.ಐ.ಟಿ ಅಧಿಕಾರಿಗಳು ಸೆ‌.18 ರಂದು 12:30 ಕ್ಕೆ ವೈದ್ಯರ ತಂಡ, ಎಫ್.ಎಸ್‌.ಎಲ್ ತಂಡದ ಸೋಕೊ ಸಿಬ್ಬಂದಿ,, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧಿಕಾರಿಗಳು, ಕಾರ್ಮಿಕರು ಕಾರ್ಯಾಚರಣೆ ನಡೆಸುತ್ತಿದ್ದಾರೆ.ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ ಒಂದಿಷ್ಟು ಅವಶೇಷಗಳು ಪತ್ತೆಯಾಗಿತ್ತು. ಅದೇರೀತಿ ಕೆಲವು ಸ್ಥಳಗಳನ್ನು ಗುರುತಿಸಲಾಗಿತ್ತು ಗುರುತಿಸಿದ ಸ್ಥಲದಲ್ಲಿ ಅವಶೇಷಗಳಿವೆ ಎನ್ನಲಾಗಿದ್ದು ಇದನ್ನು ಸಂಗ್ರಹಿಸುವ ಕಾರ್ಯ ನಡೆಸಲಿದೆ ಅದೇರೀತಿ ಇನ್ನು ಅರಣ್ಯದ ಇತರ ಭಾಗಗಳಲ್ಲಿ ಹೊಸದಾಗಿ...

ಬಂಗ್ಲೆ ಗುಡ್ಡದಲ್ಲಿ ಪತ್ತೆಯಾಗಿರುವುದು ಪುರುಷರ ತಲೆಬುರುಡೆ?

0

ಬೆಳ್ತಂಗಡಿ : ಎಸ್‌.ಐ.ಟಿ ಕಾರ್ಯಾಚರಣೆಯಲ್ಲಿ ಬುಧವಾರ ಪತ್ತೆಯಾದ ಐದು ಮಾನವನ ಅಸ್ಥಿಪಂಜರಗಳಿಗೆ ಸಂಬಂಧಿಸಿದಂತೆ ಕೆಲವೊಂದು ಪ್ರಾಥಮಿಕ ಮಾಹಿತಿಗಳು ಹೊರಬಂದಿದ್ದು ಮಹಜರು ಮಾಡಲಾಗಿರುವ ಐದು ಅವಶೇಷಗಳು ಪುರುಷರದ್ದಾಗಿದೆ ಎಂದು ಎಸ್.ಐ.ಟಿ ಮೂಲಗಳಿಂದ‌ ಮಾಹಿತಿ ಲಭ್ಯವಾಗುತ್ತಿದೆ.ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸೆ.17 ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಐದು ಮಾನವನ ತಲೆಬುರುಡೆ ಸಮೇತ ಅವಶೇಷಗಳು ಪತ್ತೆಯಾಗಿದೆ. ತಲೆಬುರುಡೆ ಮತ್ತು ಅವಶೇಷಗಳನ್ನು ತಜ್ಞ ವೈದ್ಯರ ತಂಡ ಮಹಜರು ವೇಳೆ ಮೇಲ್ನೋಟಕ್ಕೆ ಐದು ಕೂಡ ಪುರುಷನ ತಲೆಬರುಡೆ ಮತ್ತು ಅವಶೇಷಗಳು ಎಂದು ವೈದ್ಯರು ಅಭಿಪ್ರಾಯ ಪಟ್ಟಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ...

ಬೆಳ್ತಂಗಡಿ; ನಿಯಂತ್ರಣ ತಪ್ಪಿ ಅಣಿಯೂರು ಹೊಳೆಗೆ ಬಿದ್ದ ಸ್ಕೂಟರ್

0

ಬೆಳ್ತಂಗಡಿ: ನಿಯಂತ್ರಣ ತಪ್ಪಿ ಅಣಿಯೂರು ಹೊಳೆಗೆ ಸ್ಕೂಟರ್ ಬಿದ್ದ ಘಟನೆ ಸೆ. 18ರಂದು ನಡೆದಿದೆ. ಸ್ಕೂಟರ್ ಸವಾರ ಶಿವಾನಂದ ಎಂಬವರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.ಸ್ಕೂಟರ್ ನಿಯಂತ್ರಣ ಕಳೆದುಕೊಂಡು ನದಿಗೆ ಉರುಳಿಬಿದ್ದಿದೆಸೇತುವೆಯ ತಡೆ ಗೋಡೆಯಲ್ಲಿ ಕೈ ಹಿಡಿದ ಪರಿಣಾಮವಾಗಿ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸ್ಥಳೀಯಯುವಕರ ಸಹಾಯದಿಂದ ಸ್ಕೂಟರನ್ನು ನದಿಯಿಂದ ಮೇಲೆತ್ತಲಾಯಿತು.

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಜಯನಂದ ಪೂಜಾರಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ನವೀನ್ ಕುಮಾರ್ ಆಯ್ಕೆ

0

ಬೆಳ್ತಂಗಡಿ. ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಜಯಾನಂದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ನವೀನ್ ಕುಮಾರ್ ಪ್ರಧಾನ ಅರ್ಚಕ ನಾರಾಯಣರಾವ್ ಸದಸ್ಯರಾಗಿ , ರಾಜು ಸಾಲಿಯಾನ್, ಶ್ರೀಮತಿ ರೇಖಾ ದೇವಾಡಿಗ, ರತ್ನಾಕರ ಕೋಟ್ಯಾನ್, ಗಿರಿಯಪ್ಪ ನಾಯ್ಕ ಶ್ರೀಮತಿ ಕೇಶವತಿ ,ಪುಷ್ಪರಾಜ್ ನೇಮಕವಾಗಿದ್ದಾರೆ, ನೇಮಕಾತಿ ಪ್ರಕ್ರಿಯೆಯನ್ನು ದೇವಸ್ಥಾನದ ಆಡಳಿತ ಅಧಿಕಾರಿ ಸುಲ್ಕೇರಿ ಗ್ರಾಮ ಪಂಚಾಯತ್ ಕಾರ್ಯದರ್ಶಿ, ಕೊರಗಪ್ಪ ನಾಯ್ಕ ನಡೆಸಿಕೊಟ್ಟರು.