ದ.ಕ ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಸದಸ್ಯರಾಗಿ ಜೈ ಕನ್ನಡಮ್ಮ ಸಂಪಾದಕ ದೇವಿಪ್ರಸಾದ್ ನೇಮಕ
ಬೆಳ್ತಂಗಡಿ: ದ.ಕ ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಅಧಿಕಾರೇತರ ಸದಸ್ಯರಾಗಿ ಜೈ ಕನ್ನಡಮ್ಮ ಪತ್ರಿಕೆಯ ಸಂಪಾದಕರಾದ ದೇವಿಪ್ರಸಾದ್ ನೇಮಕಗೊಂಡಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮಗಳನ್ನು ಸ್ಥಳೀಯ ಹಂತದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರದ ಆದೇಶದನುಸಾರ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ದೇವಿಪ್ರಸಾದ್ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ಲ ನೇಮಕಗೊಳಿಸಿದ್ದಾರೆ.
ಬೆಳ್ತಂಗಡಿ : ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪತ್ತೆ ಪ್ರಕರಣ; ಇಂದು ವಿಚಾರಣೆಗೆ ಹಾಜರಾಗುತ್ತಾರಾ ಮಹೇಶ್ ಶೆಟ್ಟಿ ತಿಮರೋಡಿ?
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯನ ಬಂಧನದ ಬಳಿಕ ಎಸ್.ಐ.ಟಿ ಅಧಿಕಾರಿಗಳು ನ್ಯಾಯಾಲಯದಿಂದ ವಾರಂಟ್ ಪಡೆದು ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ಆಗಸ್ಟ್ 26 ರಂದು ಶೋಧ ಕಾರ್ಯ ನಡೆಸಿದಾಗ ಎರಡು ತಲವಾರು ಮತ್ತು ಒಂದು ಬಂದೂಕು ಪತ್ತೆಯಾದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸೆ.16 ರಂದು ಪ್ರಕರಣ ದಾಖಲಾಗಿದ್ದು. ಈ ಪ್ರಕರಣದ ಬಗ್ಗೆ ತನಿಖೆಗೆ ಸೆ21ರಂದು ಹಾಜರಾಗುವಂತೆ ಮಹೇಶ್ ಶೆಟ್ಟಿ ಅವರಿಗೆ ನೊಟೀಸ್ ನೀಡಲಾಗಿತ್ತು. ಇಂದು ಅವರು ವಿಚಾರಣೆಗೆ ಹಾಜರಾಗುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ. ಬೆಳ್ತಂಗಡಿ...
ಬೆಳ್ತಂಗಡಿ; ಅಕ್ರಮ ಮರಳು ದಾಸ್ತಾನು ಪತ್ತೆ ಪ್ರಕರಣ ದಾಖಲು
ಬೆಳ್ತಂಗಡಿ; ಕಾನೂನು ಬಾಹಿರವಾಗಿ ತೆಂಕ ಕಾರಂದೂರು ಗ್ರಾಮದಲ್ಲಿ ಮರಳನ್ನು ತೆಗೆದು ಸರಕಾರಿ ಜಾಗದಲ್ಲಿ ದಾಸ್ತಾನು ಇರಿಸಿದ್ದ ಪ್ರಕರಣವೊಂದನ್ನು ವೇಣೂರು ಪೊಲೀಸರು ಪತ್ತೆಹಚ್ಚಿ ಮರಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪೊಲೀಸರು ಸೆ.20 ರಂದು ರೌಂಡ್ ನಲ್ಲಿದ್ದವೇಳೆ ತೆಂಕ ಕಾರಂದೂರು ಗ್ರಾಮದ ಅಂಗನವಾಡಿ ಕಟ್ಟೆಯ ಬಳಿ ಸರಕಾರಿ ಜಾಗದಲ್ಲಿ ಸುಮಾರು ಒಂದುವರೆ ಯೂನಿಟ್ ನಷ್ಟು ಮರಳನ್ನು ಶೇಖರಿಸಿಟ್ಟಿರುವುದು ಕಂಡು ಬಂದಿದೆ. ಪರಿಶೀಲನೆ ನಡೆಸಿದಾಗ ಇದು ಅಕ್ರಮವಾಗಿ ಶೇಖರಿಸಿರುವ ಮರಳು ಆಗಿದೆ ಎಂಬುದು ತಿಳಿದು ಬಂದಿದ್ದು ಈ ಹಿನ್ನಲೆಯಲ್ಲಿ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಕ್ಕಲಿಗರ ಸಂಘದ ಯುವ ವೇದಿಕೆಯಿಂದ ಶಿಕ್ಷಕರಿಗೆ ಸನ್ಮಾನ
ಬೆಳ್ತಂಗಡಿ; ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ(ರಿ ) ಬೆಳ್ತಂಗಡಿ ಇದರ ಯುವ ವೇದಿಕೆ ಹಾಗೂ ಮಹಿಳಾ ವೇದಿಕೆ, ಸ್ಪಂದನಾ ಸೇವಾ ಸಂಘ ಬೆಳ್ತಂಗಡಿ ಮತ್ತು ಪ್ರಗತಿ ಸ್ವ -ಸಹಾಯ ಸಂಘ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸಮುದಾಯ ಭವನ ಹಳೇಕೋಟೆ ಬೆಳ್ತಂಗಡಿಯಲ್ಲಿ ಬೆಳ್ತಂಗಡಿ ವಾಣಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಿಗೆ ಹಾಗೂ 2025-26 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಯುವ ವೇದಿಕೆ ಅಧ್ಯಕ್ಷ...
ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ರಾಜ್ಯ ಸರಕಾರದಿಂದ 50ಲಕ್ಷ ಅನುದಾನ ಮಂಜೂರು
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಕಟ್ಟಡದ ಅಭಿವೃದ್ಧಿಗೆ ರಾಜ್ಯ ಸರಕಾರದ ಆರೋಗ್ಯ ಇಲಾಖೆಯಿಂದ ರೂ.50ಲಕ್ಷ ವಿಶೇಷ ಅನುದಾನವನ್ನು ಮಂಜೂರುಗೊಳಿಸಿದೆ.ತಾಲೂಕು ಆಸ್ಪತ್ರೆ ಕಟ್ಟಡ ಮತ್ತು ವಸತಿಗೃಹಗಳ ದುರಸ್ತಿ ಕಾರ್ಯಕ್ಕಾಗಿ ರೂ 50 ಲಕ್ಷ ಅನುದಾನವನ್ನು ಮಂಜೂರು ಮಾಡಲಾಗಿದೆ.
ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕಳ್ಳತನ ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ
ಬೆಳ್ತಂಗಡಿ; ಕೊಯ್ಯೂರಿನಲ್ಲಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರ ಎಳೆದು ತುಂಡರಿಸಿ ಕಳ್ಳತನ ಮಾಡಿದ ಪ್ರಕರಣದ ಆರೋಪಿ ಉಮೇಶ್ ಗೌಡ ಅಪರಾಧಿಯೆಂದು ತೀರ್ಪು ನೀಡಿದ್ದು ಬೆಳ್ತಂಗಡಿ ನ್ಯಾಯಾಲಯವು ಮೂರು ವರ್ಷ ಕಠಿಣ ಸಜೆ ಹಾಗೂ ದಂಡ ವಿಧಿಸಿದೆ.2024 ಡಿಸೆಂಬರ್ 9ರಂದು ಕೊಯ್ಯೂರು ಗ್ರಾಮದ ಪಾಂಬೇಲು ಎಂಬಲ್ಲಿ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಆರೋಪಿ ಉಮೇಶ್ ಗೌಡ ಚಿನ್ನದ ಸರವನ್ನು ಎಳೆದು ತುಂಡರಿಸಿ ಸರದೊಂದಿಗೆ ತಪ್ಪಿಸಿಕೊಂಡಿದ್ದ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿತ್ತು.ಆರೋಪಿಯನ್ನು ಅದೇ ದಿನ ಬಂಧಿಸಲಾಗಿತ್ತು. ತನಿಖಾಧಿಕಾರಿಯಾದ ಬೆಳ್ತಂಗಡಿ ಠಾಣೆಯ ಪೊಲೀಸ್...
ಬಂಟ್ವಾಳ ಎನ್.ಸಿ ರೋಡ್ ನಲ್ಲಿ ಅಪಘಾತ ಬೆಳ್ತಂಗಡಿಯ ಯುವಕ ಮೃತ್ಯು
ಬೆಳ್ತಂಗಡಿ; ಬಂಟ್ವಾಳ ತಾಲೂಕಿನ ಎನ್.ಸಿ ರೋಡ್ ಸಮೀಪ ಸ್ಕೂಟರ್ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೆ.19ರಂದು ಸಂಜೆ ನಡೆದಿದೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ಬಜಿರೆ ಗ್ರಾಮದ ಕಟ್ಟೆ ಮನೆ ರಾಜೇಶ್ (36) ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ ಸಿ ಬಸ್ಸಿಗೆ ವಗ್ಗ ಕಡೆಯಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ಗಾಯಾಳು ವನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಆವೇಳೆಗೆ ಅವರು ಮೃತಪಟ್ಟಿದ್ದರು ಎಂದು...
ಗೂಡಂಗಡಿ ಮಾಲಕನಿಂದ ಬಾಲಕನಿ ಲೈಂಗಿಕ ಕಿರುಕುಳ ಆರೋಪಿಯ ಬಂಧನ
ಬೆಳ್ತಂಗಡಿ: ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಗೂಡಂಗಡಿಯ ಮಾಲಕನೊಬ್ಬ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಸಿದ್ದಾರೆ. ಪುತ್ತುಮೋನು(55) ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ ಈತ ಬಾಲಕನ ಮೇಲೆ ದೌರ್ಜನ್ಯವೆಸಗಿದ್ದ ಎನ್ನಲಾಗಿದ್ದು ದೌರ್ಜನ್ಯ ಕ್ಕೆ ಈಡಾದ ಬಾಲಕನ ಮನೆಯವರು ದೂರು ನೀಡಿದ್ದು ಧರ್ಮಸ್ಥಳ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಸೆ.19ರಂದು ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯದ ವೀಡಿಯೋವನ್ನು ಚಿತ್ರೀಕರಿಸಿದ ವ್ಯಕ್ತಿಯೊಬ್ಬ ಅದನ್ನು ಸಾಮಾಜಿಕ ಜಲಾತಾಣದಲ್ಲಿ ಹಾಕಿದ್ದಾನೆ ಎನ್ನಲಾಗಿದ್ದು ಈ ಬಗ್ಗೆ ಆತನ ವಿರುದ್ದವೂ ಕಾನೂನು ಕ್ರಮ...
ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ (ಸಅ) ಅವಹೇಳನ ಪ್ಪೋಸ್ಟ್ ಪ್ರಕರಣ; ಸನಾತನಿ ಸಿಂಹ, ಚೇತನ್ ಹೊದ್ದೆಟ್ಟಿ ವಿರುದ್ಧ ಅಕ್ಬರ್ ಬೆಳ್ತಂಗಡಿಯಿಂದ ದೂರು ದಾಖಲು
ಬೆಳ್ತಂಗಡಿ: ಯುಟ್ಯೂಬ್ ಚಾನೆಲ್ ಒಂದರ ನ್ಯೂಸ್ ಲಿಂಕ್ ನಲ್ಲಿ "ಬೆಳ್ತಂಗಡಿ |ಬಂಗ್ಲೆಗುಡ್ಡ ಕಾಡಿನಲ್ಲಿ ಮುಂದುವರಿದ ಎಸ್ ಐ ಟಿ ಶೋಧ ಮತ್ತೆರಡು ತಲೆ ಬುರುಡೆ ಪತ್ತೆ" ಎಂಬ ಟೈಟಲ್ ನೊಂದಿಗೆ ಬಂದ ವರದಿಯ ಕಮೆಂಟ್ ಬಾಕ್ಸ್ ನಲ್ಲಿ "ಸನಾತನಿ ಸಿಂಹ" ಎಂಬ ಖಾತೆಯಿಂದ 'ಒಂದು ಪೈಗಂಬರದು ಇನ್ನೊಂದು ಆಯೇಷಾ ದು' ಎಂದು ರಿಪ್ಲಯ್ ಮಾಡಿದ್ದು ಹಾಗೂ ಅದೇ ಕಮೆಂಟ್ ಬಾಕ್ಸ್ ನಲ್ಲಿ Chetan Hoddetty ಎಂಬಾತ 'ಒಂದು ಪೈಗಂಬರ್ ಇನ್ನೊಂದು ಆಯೇಷಾದು ಇರಬಹುದು' ಎಂದು ಕಮೆಂಟ್ ಹಾಕಿ ಧಾರ್ಮಿಕ ನಿಂದನೆ, ಅಶಾಂತಿ ಸೃಷ್ಟಿ,...
ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್, ಮಾಜಿ ಅಧ್ಯಕ್ಷ ಕೇಶವ ಗೌಡ ಎಸ್.ಐ.ಟಿ ವಿಚಾರಣೆಗೆ ಹಾಜರು
ಬೆಳ್ತಂಗಡಿ; ಮಾಧ್ಯಮಗಳಲ್ಲಿ ನೀಡಿದ ಹೇಳಿಕೆಗಳ ವಿಚಾರವಾಗಿ ಧರ್ಮಸ್ಥಳ ಗ್ರಾಮಪಂಚಾಯತಿನ ಮಾಜಿ ಅಧ್ಯಕ್ಷ ಕೇಶವ ಗೌಡ ಹಾಗೂ ಹಾಲಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಅವರಿಗೆ ಎಸ್.ಐ.ಟಿ ನೋಟೀಸ್ ನೀಡಿ ವಿಚಾರಣೆಗೆ ಕರೆಸಿಕೊಂಡಿದೆ.ಸೆ.19 ರಂದು ಬೆಳಗ್ಗೆ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಹಾಗೂಮಾಜಿ ಅಧ್ಯಕ್ಷ ಕೇಶವ ಗೌಡ ಬೆಳಾಲು ಅವರು ವಿಚಾರಣೆಗೆ ಹಾಜರಾಗಿದ್ದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.ಕೇಶವ ಗೌಡ ಹಾಗೂ ಶ್ರೀನಿವಾಸ ರಾವ್ ಅವರು ಹಲವು ಬಾರಿ ಮಾದ್ಯಮಗಳಿಗೆ ಹೇಳಿಕೆ ನೀಡಿ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅನಾಥ ಶವಗಳು ಸಿಕ್ಕಿದ್ದು ಅದರ ಎಲ್ಲ ದಾಖಲೆಗಳು ಗ್ರಾಮಪಂಚಾಯತಿನಲ್ಲಿದೆ...















