ಧರ್ಮಸ್ಥಳ ಕನ್ಯಾಡಿಯಲ್ಲಿ ಕಾರು ಬೈಕ್ ನಡುವೆ ಅಪಘಾತ
ಬೆಳ್ತಂಗಡಿ: ಧರ್ಮಸ್ಥಳ ಕನ್ಯಾಡಿ ಸಮೀಪ ಹೆದ್ದಾರಿಯಲ್ಲಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸಮಾರ ಗಾಯಗೊಂಡ ಘಟನೆ ಅ29 ರಂದು ಸಂಭವಿಸಿದೆ.ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಕಾರು ಹಾಗೂ ಎದುರಿನಿಂದ ಬಂದ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಎರಡೂ ವಾಹನಗಳು ಜಖಂಗೊಂಡಿದೆ. ಬೈಕ್ ಸವಾರ ಗಾಯಗೊಂಡಿದ್ದು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಬೆಳ್ತಂಗಡಿ: ಧರ್ಮಸ್ಥಳ ಕನ್ಯಾಡಿ ಸಮೀಪ ಹೆದ್ದಾರಿಯಲ್ಲಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸಮಾರ ಗಾಯಗೊಂಡ ಘಟನೆ ಅ29 ರಂದು ಸಂಭವಿಸಿದೆ.ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಕಾರು ಹಾಗೂ...
ಎಲ್ ಐ ಸಿ ನಿವೃತ್ತ ಅಭಿವೃದ್ಧಿ ಅಧಿಕಾರಿ ಲಯನ್ ಎಂ. ಜಿ. ಶೆಟ್ಟಿ ನಿಧನ
ಉಜಿರೆ : ಉಜಿರೆ ಅನುಗ್ರಹ ನಿವಾಸಿ ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯ, ವಿಜಯ ಕ್ರಿಕೆಟ್ ಕೋ ಆಪರೇಟಿವ್ ಸೊಸೈಟಿ ಮಾಜಿ ಉಪಾಧ್ಯಕ್ಷ, ಓಡಲ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ ಟ್ರಸ್ಟ್ ಸ್ಥಾಪಕ ಅಧ್ಯಕ್ಷ, ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಮಾಜಿ ಅಧ್ಯಕ್ಷ ಲಯನ್ ಎಂ. ಜಿ. ಶೆಟ್ಟಿ ( ಎಂ.ಗೋಪಾಲಕೃಷ್ಣ ಶೆಟ್ಟಿ) (86 ವ ) ಅ. 29 ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪತ್ನಿ ರುಕ್ಮಿಣಿ ಜಿ. ಶೆಟ್ಟಿ,...
ಬೆಳ್ತಂಗಡಿ; ಸೌಜನ್ಯ ತಾಯಿ ಕುಸುಮಾವತಿ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯ ವಿರುದ್ದ ಪ್ರಕರಣ ದಾಖಲು
ಬೆಳ್ತಂಗಡಿ: ಅನುಮತಿಯಿಲ್ಲದೆ ಪೊಲೀಸರ ಸೂಚನೆಯನ್ನು ನಿರ್ಲಕ್ಷಿಸಿ ಬೆಳ್ತಂಗಡಿ ಮಿನಿವಿಧಾನ ಸೌಧದ ರಸ್ತೆಯಲ್ಲಿ ಹಾಗೂ ಮಿನಿ ವಿಧಾನ ಸೌಧದ ಎದುರು ಅಕ್ರಮ ಕೂಟ ಸೇರಿ ಸಾರ್ವಜನಿಕರಿಗೆ ತೊಂದರೆಯುಂಟುಮಾಡಿದ ಬಗ್ಗೆ ಸೌಜನ್ಯ ತಾಯಿ ಕುಸುಮಾವತಿ ಸೌಜನ್ಯ ಪರ ಹೋರಾಟಗಾರರಾದ ಅನಿಲ್ ಅಂತರ, ಪ್ರಸನ್ನ ರವಿ ಸೇರಿದಂತೆ 20ಮಂದಿ ಹಾಗೂ ಇತರರ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಎ.ಎಸ್.ಐ. ದುರ್ಗಾದಾಸ್ ಅವರ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.ಅ27ರಂದು ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಸೌಜನ್ಯ ಪರ ಹೋರಾಟಗಾರರ ವಿರುದ್ದ ಪೊಲೀಸರು ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ತಹಶಿಲ್ದಾರರ ಮೂಲಕ ಸರಕಾರಕ್ಕೆ...
ಮಚ್ಚಿನ ಪಾರ್ಶ್ವನಾಥ ಸ್ವಾಮಿ ಬಸದಿಗೆ ಸರ್ಕಾರದಿಂದ 1 ಕೋಟಿ ಅನುದಾನ ಮಂಜೂರು. ರಕ್ಷಿತ್ ಶಿವರಾಂ ರವರಿಗೆ ಅಭಿನಂದನೆ ಸಲ್ಲಿಕೆ
ಬೆಳ್ತಂಗಡಿ. ತಾಲೂಕಿನ ಮಚ್ಚಿನ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ಬಸದಿಯ ಅಭಿವೃದ್ಧಿಗೆ ಸರಕಾರದಿಂದ ಒಂದು ಕೋಟಿ ಅನುದಾನ ಮಂಜುರಾಗಿದ್ದು. ಅನುದಾನ ಮಂಜುರಾತಿಗೆ ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರಿಗೆ ಬಸದಿಯ ಆಡಳಿತ ಮಂಡಳಿಯವರು ಅಭಿನಂದನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಬಸದಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುರೇಶ್ ಕುಮಾರ್ ಜೈನ್, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಮೋದ್ ಕುಮಾರ್, ಆಡಳಿತ ಸಮಿತಿಯ ಉಪಾಧ್ಯಕ್ಷರಾದ ಬಾಲಚಂದ್ರ ಹೆಗ್ಗಡೆ, ಕೋಶಾಧಿಕಾರಿ ರಾಜವೀರ ಇಂದ್ರ, ಕಾರ್ಯದರ್ಶಿ ಪಾರ್ಶ್ವನಾಥ, ಪ್ರಮುಖರಾದ ಸುಧೀರ್ ಶೆಟ್ಟಿ, ನಾರಾಯಣ ಪೂಜಾರಿ ಮಚ್ಚಿನ, ಆಡಳಿತ...
ಬೆಳ್ತಂಗಡಿ; ಅವಿವಾಹಿತ ಯುವಕ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ; ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳಿಯ ಗ್ರಾಮದ ಜೋಡುತ್ತಾರು ಎಂಬಲ್ಲಿ ನಡೆದಿದೆ.ಮೃತ ಯುವಕ ಅನಿಲ್ ಪ್ರಕಾಶ್ ರೋಡ್ರಿಗಸ್ (32)ಎಂಬಾತನಾಗಿದ್ದಾನೆ ಈತ ಬೆಳ್ತಂಗಡಿಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅ26ರಂದು ರಾತ್ರಿ ಊಟ ಮಾಡಿ ಮಲಗಿದವ 27ರಂದು ಬೆಳಗ್ಗೆ ಬಾಗಿಲು ತೆಗೆಯದಿದ್ದಾಗ ಮನೆಯವರು ಕಿಟಕಿಯ ಮೂಲಕ ನೋಡಿದಾಗ ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತನ ಸಹೋದರ ನೀಡಿರುವ ದೂರಿನಂತೆ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳ್ತಂಗಡಿ : ಗೋಮಾಂಸ ಮಾಡುತ್ತಿದ್ದ ಶೆಡ್ ಮೇಲೆ ಪೊಲೀಸ್ ದಾಳಿ; ದನದ ಮಾಂಸ ಪತ್ತೆ ;ಇಬ್ಬರು ಆರೋಪಿಗಳ ಬಂಧನ
ಬೆಳ್ತಂಗಡಿ : ಅಕ್ರಮವಾಗಿ ದನವನ್ನು ಕಳವು ಮಾಡಿಕೊಂಡು ಬಂದು ಗೋಮಾಂಸ ಮಾಡುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿ. ದನದ ಮಾಂಸ ಮತ್ತು ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಚರ್ಚ್ ಬಳಿಯ ಖಾಸಗಿ ರಬ್ಬರ್ ತೋಟದ ಶೆಡ್ ಒಳಗಡೆ ಅಕ್ರಮವಾಗಿ ಜಾನುವಾರು ಕಡಿದು ಮಾಂಸ ಮಾಡುತ್ತಿದ್ದಾಗ ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಓಮನ ನೇತೃತ್ವದ ತಂಡ ಅ.27 ರಂದು ಮಧ್ಯಾಹ್ನ 2:30 ಕ್ಕೆ ದಾಳಿ ಮಾಡಿದ್ದಾರೆ. ದಾಳಿ ವೇಳೆ...
ಬೆಳ್ತಂಗಡಿ; ಸೌಜನ್ಯ ಪರ ಹೋರಾಟಗಾರರಿಗೆ ಮನವಿ ನೀಡಲು ಅವಕಾಶ ನೀಡದ ಪೊಲೀಸ್ ಇಲಾಖೆಯ ಕ್ರಮ ಖಂಡನೀಯ ಬಿ.ಎಂ ಭಟ್
ಬೆಳ್ತಂಗಡಿ; ಬೆಳ್ತಂಗಡಿಯಲ್ಲಿ ನ್ಯಾಯಕ್ಕಾಗಿ ತಹಶೀಲ್ದಾರರಿಗೆ ಮನವಿ ನೀಡಲು ಅವಕಾಶ ನೀಡದ ಪೋಲೀಸ್ ಇಲಾಖೆಯ ನಡೆ ಅತ್ಯಂತ ಖಂಡನೀಯ ಮತ್ತು ಇದು ಸರಕಾರದ ತಪ್ಪು ನಿರ್ಧಾರ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಅಬಿಪ್ರಾಯಪಡುತ್ತದೆ ಎಂದು ತಾಲೂಕು ಸಮಿತಿ ಕಾರ್ಯದರ್ಶಿ ಬಿ.ಎಂ ಭಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಹೋರಾಟಗಾರರ ಮೇಲಷ್ಟೇ ಕೇಸ್ ಗಳ ಹಾಕೋದನ್ನು ನಿಲ್ಲಿಸಿ ಹೋರಾಟಗಾರರು ಹೇಳಿದ್ದನ್ನು ಸ್ವಲ್ಪ ಪರಿಶಿಲಿಸಲು ಸರಕಾರ ಪೋಲೀಸರಿಗೆ ಸೂಚನೆ ನೀಡಬೇಕಿದೆ. ಹೋರಾಟಗಾರರು ಹೇಳಿದ್ದನ್ನು ಮೊದಲು ತನಿಖೆ ಮಾಡಬೇಕೇ ವಿನಹ ಹೋರಾಟಗಾರರನ್ನಲ್ಲ ಎಂದಿರುವ ಅವರುಪ್ರತಿಭಟನೆ ನಡೆಸುವುವುದು ಪ್ರತಿಯೊಬ್ಬ ಪ್ರಜೆಯ ಸಂವಿಧಾನ...
ಬೆಳ್ತಂಗಡಿ ಹಿಂದೂ ರುದ್ರ ಭೂಮಿ ಲೋಕಾರ್ಪಣೆ, ರಾಜಕೀಯ ಬಿಟ್ಟು ರುದ್ರ ಭೂಮಿ ಅಬಿವೃದ್ದಿಗೆ ಕೈಜೋಡಿಸಿ: ಶಾಸಕ ಹರೀಶ್ ಪೂಂಜಾ
ಬೆಳ್ತಂಗಡಿ: ಮನುಷ್ಯನ ಹುಟ್ಟು ಹೇಗೆ ಪ್ರಮುಖವೋ ಅಷ್ಟೆ ಮಹತ್ವ ಸಾವಿನಲ್ಲೂ ಇದೆ.ಇಂದು ನಿವೇಶನದ ಕೊರತೆಯ ಸಂದರ್ಭದಲ್ಲಿ ಅಂತಿಮ ದಹನಕ್ಕಾಗಿ ಸ್ಮಶಾನದ ಅಗತ್ಯವಿದೆ. ರುದ್ರ ಭೂಮಮಿಯ ಅಭಿವೃದ್ಧಿಗೆ ರಾಜಕೀಯ ಬಿಟ್ಟು ಎಲ್ಲರು ಕೈಜೋಡಿಸಬೇಕು ನದಿಯ ತಟದಲ್ಲಿರುವ ರುದ್ರ ಭೂಮಿಯನ್ನು ಇನ್ನು ಅಬಿವೃದ್ದಿ ಮಾಡಬೇಕಿದ್ದು ಈಗಾಗಲೇ ನಗರೋಥ್ಥಾನದಿಂದ 40 ಲಕ್ಷ ರೂ ಮಂಜೂರು ಮಾಡಿದ್ದು ಶಾಸಕರ ಅನುದಾನದಿಂದ ಮತ್ತೆ 5 ಲಕ್ಷ ಮೀಸಲಿಟ್ಟಿದ್ದು ಮುಂದೆ ಅನುದಾನ ಬಂದರೆ ನದಿಗೆ ಇಳಿಯುವ ಮೆಟ್ಟಿಲು ನಿರ್ಮಾಣಕ್ಕೆ ಅನುದಾನ ನೀಡುತ್ತೇನೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರೂ. ಅವರು ಸೋಮವಾರ...
ಶಾಸಕರು ಎಲ್ಲ 29 ಲಕ್ಷ ಸಾಲ ಮುಗಿಸುವ ಭರವಸೆ ನೀಡಿ ಪಕ್ಷಕ್ಕೆ ಕರೆದಿದ್ದರು ಪಟ್ಟಣ ಪಂಚಾಯತು ವಿರೋಧ ಪಕ್ಷದ ನಾಯಕ ಜಗದೀಶ್ ಡಿ ಹೇಳಿಕೆ
ಬೆಳ್ತಂಗಡಿ: ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ ಅದಿಕಾರವಿದ್ದರು ಕೆಲವೊಂದು ವಿಷಯದಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿದ್ದರು ಸಲಹೆ ಸೂಚನೆಗಳನ್ನು ಕೊಡುತ್ತಾ ಉತ್ತಮ ಆಡಳಿತ ನಡೆಸಲು ನೆರವಾಗುತ್ತಾ ಬಂದಿದ್ದೇನೆ ರಾಜಕೀಯ ಹಾಗೂ ಸಮಾಜ ಸೇವೆಗಾಗಿ ಎಲ್ಲವನ್ನೂ ಕಳೆದುಕೊಂಡಿದ್ದೇನೆ ಆದರ ಈಗ ನನಗೆ ಭ್ರಷ್ಟಾಚಾರದ ಪಟ್ಟ ಕಟ್ಟುವ ಕಾರ್ಯಕ್ಕೆ ಪಟ್ಟಣ ಪಂಚಾಯತು ಅಧ್ಯಕ್ಷರು ಮುಂದಾಗಿದ್ದಾರೆ. "ನನ್ನ ಎಲ್ಲ ಸಾಲಗಳನ್ನೂ ತೀರಿಸುತ್ತೇನೆ ಪಕ್ಷಕ್ಕೆ ಬನ್ನಿ" ಎಂದು ಮನೆ ಏಲಂಗೆ ಬಂದಾಗ ಬೆಳ್ತಂಗಡಿ ಶಾಸಕರು ಹೇಳಿದ್ದರು ಆದರೆ ಪಕ್ಷ ನಿಷ್ಠೆ ಮತ್ತು ಸಿದ್ದಾಂತದ ಮೇಲಿನ ನಿಷ್ಠೆಯಿಂದ ಅದನ್ನು ತಿರಸ್ಕರಿಸಿ ಮುಂದುವರಿದಿದ್ದೇನೆ ಎಂದು...
ಬೆಳ್ತಂಗಡಿ : ನಾಲ್ಕು ಮಂದಿ ಹೋರಾಟ ಗಾರರಿಗೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡಿದ ಎಸ್ಐಟಿ
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ವಿಚಾರಣೆಗೆ ಹಾಜರಾಗಲು ಕಾಲಾವಾಕಾಶ ಕೋರಿದ್ದ ನಾಲ್ಕು ಮಂದಿಗೆ ಎಸ್.ಐ.ಟಿ ಅಧಿಕಾರಿಗಳು ಕಾಲಾವಕಾಶ ನೀಡಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಅ.27 ರಂದು ಐದು ಮಂದಿಗೆ ಎಸ್.ಐ.ಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು ಅದರಂತೆ ಸುಜಾತ ಭಟ್ ಮಾತ್ರ ಅ.27 ರಂದು ವಿಚಾರಣೆಗೆ ಹಾಜರಾಗಿದ್ದರು.ಉಳಿದ ನಾಲ್ಕು ಮಂದಿ ಗಿರೀಶ್ ಮಟ್ಟಣ್ಣವರ್, ಸೌಜನ್ಯ ಮಾವ ವಿಠಲ್ ಗೌಡ, ಜಯಂತ್ ಟಿ, ಮಹೇಶ್ ಶೆಟ್ಟಿ ತಿಮರೋಡಿ ವಿಚಾರಣೆಗೆ ಹಾಜರಾಗಿರಲಿಲ್ಲ. ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಅ.27 ರಂದು ಮಧ್ಯಾಹ್ನ ಬಂದ ನಾಲ್ಕು ಮಂದಿಯ ಪರ...















