ಬೆಳ್ತಂಗಡಿ : ಶಾಲಾ ಮಕ್ಕಳನ್ನು ಪಿಕಪ್ & ಟಿಪ್ಪರ್ ನಲ್ಲಿ ಕರೆದೊಯ್ದ ಪ್ರಕರಣ ಪ್ರಬಾರ ಮುಖ್ಯೋಪಾಧ್ಯಾಯ ಕಿರಣ್ ಅಮಾನತು 

0

ಬೆಳ್ತಂಗಡಿ : ಕಾನೂನು ಬಾಹಿರವಾಗಿ ಸರಕು ಸಾಗಣೆ ಎರಡು ವಾಹನದಲ್ಲಿ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಬಳೆಂಜ ಶಾಲೆಯ ಪ್ರಬಾರ ಮುಖ್ಯೋಪಾಧ್ಯಾಯ ಕಿರಣ್ ಎಂಬವರನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿದೆ. ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಪ್ರಬಾರ ಮುಖ್ಯೋಪಾಧ್ಯಾಯ ಕಿರಣ್ ನೇತೃತ್ವದಲ್ಲಿ ಫೆ.9ರಂದು KA-21-A-8776 ಪಿಕಪ್ ಮತ್ತು KA-70-2596 ಟಿಪ್ಪರ್ ವಾಹನಗಳಿಗೆ ಮೂರು ಸಾವಿರ ಬಾಡಿಗೆ ನೀಡಿ ಅಧ್ಯಯನ ಪ್ರವಾಸದ ಹೆಸರಿನಲ್ಲಿ...

ಸ್ವಂತ ನಿಧಿ ಕ್ರಿಯಾ  ಯೋಜನೆ ಪ್ರಕರಣದಲ್ಲಿ ಕುವೆಟ್ಟು ಗ್ರಾ.ಪಂ ನಿರ್ಣಯಗಳಿಗೆ ಮಧ್ಯಂತರ ತಡೆ – ಕರ್ನಾಟಕ ಹೈಕೋರ್ಟ್

0

ಬೆಂಗಳೂರು: ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಏಕಸದಸ್ಯ ಪೀಠದಲ್ಲಿ ಮಾನ್ಯ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಮುಂದಿರುವ ಅರ್ಜಿಯಲ್ಲಿ, ಕುವೆಟ್ಟು ಗ್ರಾಮ ಪಂಚಾಯತ್‌ ಹೊರಡಿಸಿದ್ದ 15.11.2025 ಹಾಗೂ 10.12.2025ರ ನಿರ್ಣಯಗಳ ಅನುಷ್ಠಾನಕ್ಕೆ ತಾತ್ಕಾಲಿಕ ಮಧ್ಯಂತರ ತಡೆ ಆದೇಶ ನೀಡಲಾಗಿದೆ. 2025–26 ಸಾಲಿನ ಸ್ವಂತ ನಿಧಿ ಕ್ರಿಯಾ ಶೀಲ ಯೋಜನೆಯ ಅನುಷ್ಠಾನದಲ್ಲಿ ವಾರ್ಡ್ ನಂ.1 ಅನ್ನು ಹೊರತುಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ, ವಾರ್ಡ್ ನಂ.1 ರ ಪಂಚಾಯತ್ ಸದಸ್ಯರಾದ ಮುಸ್ತಫಾ ಗುರುವರಾಯಕರೆ, ಸಮೀರ್ ಸುನ್ನತ್ಕೆರೆ ಹಾಗೂ ಮೈಮೂನಾ ಅವರು ರಿಟ್ ಅರ್ಜಿ ಸಲ್ಲಿಸಿದ್ದರು. 27 ಜನವರಿ 2026 ರಂದು ನ್ಯಾಯಾಲಯವು...

ಬೆಳ್ತಂಗಡಿ : ಶಾಲಾ ಮಕ್ಕಳನ್ನು ಪಿಕಪ್ & ಟಿಪ್ಪರ್ ನಲ್ಲಿ ಅಧ್ಯಯನಕ್ಕೆ ಕರೆದೊಯ್ದ ಮುಖ್ಯೋಪಾಧ್ಯಾಯ

0

ಬೆಳ್ತಂಗಡಿ : ರಸ್ತೆ ಸುರಕ್ಷತಾ ಕ್ರಮಗಳನ್ನು ಮರೆತು ಕಾನೂನು ಬಾಹಿರವಾಗಿ ಸರಕು ಸಾಗಣೆಯಂತೆ ಶಾಲಾ ಮಕ್ಕಳನ್ನು ಜೇನು ಕೃಷಿ ಅಧ್ಯಯನ ಮಾಡಲು ತೆರೆದ ಪಿಕಪ್ ಮತ್ತು ಟಿಪ್ಪರ್ ನಲ್ಲಿ ಕರೆದುಕೊಂಡು ಹೋದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಳೆಂಜದ ಪ್ರಬಾರ ಮುಖ್ಯೋಪಾಧ್ಯಾಯ ಕಿರಣ್ ಎಂಬವರ ನೇತೃತ್ವದಲ್ಲಿ ಫೆ.10 ರಂದು ಬೆಳಗ್ಗೆ ಶಾಲಾ ಮಕ್ಕಳನ್ನು KA-21-A-8776 ನಂಬರಿನ ಪಿಕಪ್ ಮತ್ತು KA-70-2596 ನಂಬರಿನ...

ಬೆಳ್ತಂಗಡಿ : ಇನ್ಸ್‌ಪೆಕ್ಟರ್ ಬಿ.ಜಿ.ಸುಬ್ಬಾಪುರ ಮಠ ವರ್ಗಾವಣೆ

0

ಬೆಳ್ತಂಗಡಿ: ರಾಜ್ಯದ 129 ಪೋಲೀಸ್ ಇನ್ಸ್ಪೆಕ್ಟರ್ ಗಳ ಫೆ.11 ರಂದು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಹಲವಾರು ಗಂಭೀರ ಪ್ರಕರಣಗಳನ್ನು ಭೇದಿಸಿ ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ಉತ್ತಮ ಸೇವೆ ಸಲ್ಲಿಸಿರುವ ಇನ್ಸ್ಪೆಕ್ಟರ್ ಬಿ.ಜಿ ಸುಬ್ಬಾಪುರ ಮಠ ಗದಗ ಜಿಲ್ಲೆಯ ಮುಳಗುಂದ ಪೋಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಬೆಳ್ತಂಗಡಿ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಹುದ್ದೆಗೆ ಯಾರನ್ನು ನಿಯುಕ್ತಿಗೊಳಿಸದೇ ಇದ್ದು ಮುಂದಿನ ಪ್ರಕ್ರಿಯೆಯಲ್ಲಿ ಇನ್ಸ್ಪೆಕ್ಟರ್ ನೇಮಕವಾಗಲಿದೆ.

ತೆಕ್ಕಾರು ಪಿಕಪ್ ಪಲ್ಟಿ ಚಾಲಕ ಸ್ಥಳದಲ್ಲಿಯೇ ಸಾವು

0

ಬೆಳ್ತಂಗಡಿ; ತೆಕ್ಕಾರು ಗ್ರಾಮದ ಕನರಾಜೆ ಎಂಬಲ್ಲಿ ಪಿಕಪ್ ವಾಹನವೊಂದು ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಫೆ. 11ರಂದು ನಡೆದಿದೆ.ಮೃತ ವ್ಯಕ್ತಿ ಅಳಕೆ ನಿವಾಸಿ ಪುಟ್ಟ (31) ಎಂಬವರಾಗಿದ್ದಾರೆ.ಪಿಕಪ್ ವಾಹನದಲ್ಲಿ ಸೆಂಟ್ರಿಂಗ್ ಕೆಲಸದ ಸಾಮಾಗ್ರಿಗಳನ್ನು ಸಾಗಿಸುವ ವೇಳೆ ವಾಹನ ಪಲ್ಟಿಯಾಗಿದೆ. ಮೇಲ್ಬಾಗದ ರಸ್ತೆಯಿಂದ ವಾಹನ ಕೆಳಭಾಗದ ರಸ್ತೆಗೆ ಪಲ್ಟಿಯಾಗಿದೆ. ಚಾಲಕ ವಾಹನದ ಅಡಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಪಿಕಪ್ ವಾಹನದಲ್ಲಿದ್ದ ಇತರರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಧರ್ಮಸ್ಥಳ ಪಾದಯಾತ್ರಿಗಳ ಸೇವೆಗಾಗಿ ಉಚಿತ ವೈದ್ಯಕೀಯ ಶಿಬಿರಗಳ ಉದ್ಘಾಟನೆ

0

ಬೆಳ್ತಂಗಡಿ;  ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರಿಗಳಿಗಾಗಿ ಬರುವ ಭಕ್ತರಿಗೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ಬಹಳ ಮುಖ್ಯವಾಗಿ ಪಾದಯಾತ್ರಿಗಳ ಆರೋಗ್ಯ ರಕ್ಷಣೆಗಾಗಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಆರೋಗ್ಯ ಸೇವೆ ನೀಡುತ್ತಿರುವುದು ಅತ್ಯುತ್ತಮ ಸೇವೆಯಾಗಿದೆ ಎಂದು ಚಾರ್ಮಾಡಿ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೆಸರರಾದ ಯಶೋಧರ ಅವರು ಹೇಳಿದರು.ಪಾದಯಾತ್ರಿಗಳಿಗೆ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಚಾರ್ಮಾಡಿಯಲ್ಲಿ ಫೆ.11 ರಂದು ತೆರೆಯಲಾದ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ಪಾದಯಾತ್ರಿಗಳಿಗೆ ಶುಭ ಹಾರೈಸಿದರು.ಮಹಾಶಿವರಾತ್ರಿ...

ತೋಟತ್ತಾಡಿಯಲ್ಲಿ ಗೇರು ತೋಟದಲ್ಲಿ ಬೆಂಕಿ ಆಕಸ್ಮಿಕ

0

ಬೆಳ್ತಂಗಡಿ;  ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿಯಲ್ಲಿ ಗೇರು ತೋಟಕ್ಕೆ ಬೆಂಕಿ ಬಿದ್ದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.ಇಲ್ಲಿನ ಮೂರ್ಜೆ ಎಂಬಲ್ಲಿರುವ ಅಬ್ಬಾಸ್ ಎಂಬವರ ಗೇರು ತೋಟದ ಸಮೀಪ ಹಾದುಹೋಗಿರುವ ವಿದ್ಯುತ್ ಲೈನ್ ನಿಂದ ಬೆಂಕಿಯ ಕಿಡಿಗಳು ಸಿಡಿದು ಬೆಂಕಿಯು ತೋಟವನ್ನು ಆವರಿಸಿ 25 ಕ್ಕಿಂತ ಅಧಿಕ ಗೇರು ಮರಗಳು ಸುಟ್ಟುಹೋಗಿವೆ.ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ತಂಡಬೆಳಾಲು ಎ ವಿಭಾಗದ ಸದಸ್ಯರಾದ ನಾಗೇಶ್ ನೆರಿಯ, ಸ್ನೇಕ್ ಅನಿಲ್ ಕಕ್ಕಿಂಜೆ, ಸ್ಥಳೀಯರಾದ ಶಾಜಿ ಮೋಹನ್,ನಿತಿನ್ ಹಾಗೂ ಮೆಸ್ಕಾಂ ಸಿಬ್ಬಂದಿ ತಕ್ಷಣ ಸ್ಥಳಕ್ಕಾಗಮಿಸಿ ಹೆಚ್ಚಿನ ಪ್ರದೇಶಕ್ಕೆ...

ಎಂ.ಡಿ.ಎಂ.ಎ ಮಾರಾಟಕಗಕೆ ಯತ್ನ ಕೊಕ್ಕಡ ನಿವಾಸಿ ಯಾಹ್ಯಾ ಬಂಧನ

0

ಬೆಳ್ತಂಗಡಿ; ಉಪ್ಪನಂಗಡಿಯ ಪಂಜಳದಲ್ಲಿ ಎಂ.ಡಿ.ಎಂ.ಎ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಕೊಕ್ಕಡ ನಿನಾಸಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.ಉಪ್ಪಿನಂಗಡಿ ಗ್ರಾಮದ ಪಂಜಳಲ್ಲಿ ಹಗಲು ರೌಂಡ್ಸ್ ವೇಳೆ ಅನುಮಾನಾಸ್ಪದವಾಗಿ ನಿಂತಿದ್ದ ಯಹ್ಯಾ ಕೊಕ್ಕಡ (48) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ವಿಚಾರಣೆ ವೇಳೆ ಆತನು ಮಾರಾಟ ಉದ್ದೇಶದಿಂದ ಎಂ.ಡಿ.ಎಂ.ಎ. ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.ಪಂಚರ ಸಮ್ಮುಖದಲ್ಲಿ ನಡೆಸಿದ ಮಹಜರಿನಲ್ಲಿ ಆತನಿಂದ ಒಟ್ಟು 2.16 ಗ್ರಾಂ ಎಂ.ಡಿ.ಎಂ.ಎ. (ಅಂದಾಜು ಮೌಲ್ಯ ರೂ. 3,000/-), ಒಂದು ಐಫೋನ್ (ರೂ. 45,000/-), ಒಂದು ಸ್ಯಾಮ್ಸಂಗ್ ಕೀ-ಪ್ಯಾಡ್ ಮೊಬೈಲ್ (ರೂ. 1,000/-) ಸೇರಿದಂತೆ ಒಟ್ಟು...

ಶಾಸಕ ಹರೀಶ್ ಪೂಂಜ ಅವರಿಂದ ನಾಲ್ಕು ಸೇತುವೆಗಳ ಕಾಮಗಾರಿಗೆ  ಶಿಲಾನ್ಯಾಸ

0

ಬೆಳ್ತಂಗಡಿ: ಧರ್ಮಸ್ಥಳ-ಕಲ್ಮಂಜ- ಮುಂಡಾಜೆ ರಸ್ತೆಯ ರಸ್ತೆಯ ಮೂರು ಕಡೆಗಳಲ್ಲಿ ಹಾಗೂ ನಿಡಿಗಲ್-ಗುರಿಪಳ್ಳ- ಇಂದಬೆಟ್ಟು ರಸ್ತೆಯ ಒಂದು ಕಡೆ ಒಟ್ಟು ನಾಲ್ಕು ಸೇತುವೆ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು.ಬಳಿಕ ಮಾತನಾಡಿದ ಅವರು ಯಾವುದೇ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುವ ವೇಳೆ ಸ್ಥಳೀಯರ ಸಹಕಾರ ಅತ್ಯಗತ್ಯವಾಗಿದೆ. ಸೇತುವೆಗಳು ನಿರ್ಮಾಣವಾಗುವ ಸ್ಥಳಗಳಲ್ಲಿ ರಸ್ತೆಯನ್ನು ನೇರವಾಗಿ ನಿರ್ಮಿಸುವ ಕುರಿತು ಯೋಜನೆ ರೂಪಿಸಲಾಗಿದೆ. ಮಳೆಗಾಲ ಆರಂಭದೊಳಗೆ ಸೇತುವೆಗಳನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಈ ಸೇತುವೆಗಳ ನಿರ್ಮಾಣದಿಂದ ಒಂದು ಗ್ರಾಮದಿಂದ ಇನ್ನೊಂದು ಗ್ರಾಮದ ಸಂಪರ್ಕಕ್ಕೆ ಅನುಕೂಲವಾಗಲಿದೆ...

ಬೆಳ್ತಂಗಡಿ ಚಿರತೆ ಹಾವಳಿ ಕ್ರಮಕ್ಕೆ ಒತ್ತಾಯಿಸಿ ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ದಿಂದ ಮನವಿ

0

ಬೆಳ್ತಂಗಡಿ: ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟ(ರಿ) ಬೆಳ್ತಂಗಡಿ ನೇತೃತ್ವದಲ್ಲಿ ದಿನಾಂಕ 10.02.2026 ರಂದು ತಾಲೂಕಿನಾದ್ಯಂತ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಶಾಲಾ ಮಕ್ಕಳಿಗೆ ಮತ್ತು ಜನಸಾಮಾನ್ಯರಿಗೆ ದಿನ ನಿತ್ಯ ಶಾಲೆಗೆ ಹಾಗೂ ಕೆಲಸ ಕಾರ್ಯಗಳಿಗೆ ಹೋಗಲು ಕಷ್ಟವಾಗುತ್ತಿದ್ದದನ್ನು ಗಮನಿಸಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ  ಮಾನ್ಯ ಅರಣ್ಯ ಸಚಿವರು, ಅರಣ್ಯಾಧಿಕಾರಿ ಮಂಗಳೂರು ಹಾಗೂ ಅರಣ್ಯಾಧಿಕಾರಿ ಬೆಳ್ತಂಗಡಿ ಇವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಜೋನ್ ಹಾಗೂ ಒಕ್ಕೂಟದ ಪ್ರತಿನಿಧಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.