ಮಲವಂತಿಗೆ ಬಡ ಕೃಷಿಕನನ್ನು ಒಕ್ಕಲೆಬ್ಬಿಸಿ ಬೀದಿಗೆ ತಳ್ಳಿದ ಅರಣ್ಯ ಇಲಾಖೆ

0

ಬೆಳ್ತಂಗಡಿ; ಕುದುರೇಮುಖ ರಾಷ್ಟ್ರೀಯ ಉದ್ಯಾನವನದಿಂ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಅರಣ್ಯ ಇಲಾಖೆ ಮುಂದಾಗಿದ್ದು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕುದುರೇಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಅರಸಿನಮಕ್ಕಿ ಎಂಬಲ್ಲಿನ ನಿವಾಸಿ ಪಿ.ಟಿ ಜೋಸೆಫ್ ಎಂಬವರನ್ನು ಅ31ರಂದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಒಕ್ಕೆಲಬ್ಬಿಸಿದ್ದು ಅವರ ಕೃಷಿಯನ್ನು ಸಂಪೂರ್ಣ ವಾಗಿ ನಾಶ ಪಡಿಸಿ ಇಲ್ಲಿ ಅರಣ್ಯ ಗಿಡಗಳನ್ನು ನೆಟ್ಟಿದ್ದಾರೆ.ಕಳೆದ ಐದು ದಶಕದಿಂದಲೂ ಇಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ನೀಡಲಾಗಿದ್ದ ಹಕ್ಕು ಪತ್ರವನ್ನು ರದ್ದುಪಡಿಸಿದ ಅರಣ್ಯ ಇಲಾಖೆ ಇದೀಗ ಯಾವುದೇ ಕನಿಷ್ಟ ಪರಿಹಾರನ್ನೂ ನೀಡಿದೆ ಏಕಾಏಕಿ ಒಕ್ಕಲೆಬ್ಬಿಸಿ ಅವರ ಮನೆ...

ದೀಪಕ್ ಜಿ ಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

0

ಬೆಳ್ತಂಗಡಿ: ಎಳೆಯ ವಯಸ್ಸಿನಲ್ಲಿಯೇ ರಾಜಕೇಸರಿ ಸಂಘಟನೆಯ ಮೂಲಕ ಸಮಾಜ ಸೇವೆ ಮಾಡುತ್ತಾ ಬಂದಿರುವ ಬೆಳ್ತಂಗಡಿ ನಗರ ರೆಂಕೆದಗುತ್ತು ದೀಪಕ್ ಜೀ ಯವರಿಗೆ 2025-26 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಕುಡಿಯುವ ನೀರಿನ ಬಾಟಲ್ ಮಾರಿ ನೊಂದ ಕುಟುಂಬಗಳಿಗೆ ನೆರವು, ರಕ್ತದಾನ ಶಿಬಿರ, ವೈದ್ಯಕೀಯ ಶಿಬಿರ, ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ಬ್ಯಾಗ್, ಪೆನ್ನು ,ಪೆನ್ಸಿಲ್ ವಿತರಣೆ, ಶಾಲಾ ಶೌಚಾಲಯ ಸ್ವಚ್ಚತೆ, ಗಿಡ ನೆಡುವ ಕಾರ್ಯಕ್ರಮ, ಉಚಿತ ಸಾಮೂಹಿಕ ವಿವಾಹ, ಸರಕಾರಿ ಅಸ್ಪತ್ರೆಗಳ ಆವರಣ ಸ್ವಚ್ಚತೆ, ಬಡ...

ಧರ್ಮಸ್ಥಳ; ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರಸಿಕೊಂಡಿದ್ದ ವ್ಯಕ್ತಿ ಬಂಧನ

0

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ‌ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಕಮಲಾಕ್ಷ ಮಂಜೇಶ್ವರ ಎಂಬಾತನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. 2014ರಲ್ಲಿ ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆಈತ ಕಳೆದ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನನ್ನು ಅ30ರಂದು ಕಾಸರಗೋಡು ವಿದ್ಯಾನಗರ ಎಂಬಲ್ಲಿ ಬಂಧಿಸಿದ್ದಾರೆ.

ಕೆರೆಕಟ್ಟೆಯಲ್ಲಿ ಕಾಡಾನೆದಾಳಿಗೆ ಇಬ್ಬರು ಬಲಿ

0

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಸಿಲುಕಿ ಇಬ್ಬರು ಮೃತಪಟ್ಟಿರುವ ಘಟನೆ ಶೃಂಗೇರಿ ತಾಲೂಕಿನ ಕೆರೆಟ್ಟೆ ಗ್ರಾ.ಪಂ. ಮೂಡುಬ ಗ್ರಾಮದ ಎಲ್ಸಾರ್ ಬಳಿ ಶುಕ್ರವಾರ(ಅ31)ಬೆಳಗಿನ ಜಾವ 7 ಗಂಟೆ ಸುಮಾರಿಗೆ ನಡೆದಿದೆ. ಹರೀಶ್ ಶೆಟ್ಟಿ ಮತ್ತು ಉಮೇಶ್ ಗೌಡ ಆನೆ ತುಳಿತಕ್ಕೆ ಸಿಲುಕಿ ಮೃತಪಟ್ಟವರು. ಶುಕ್ರವಾರ ಬೆಳಗ್ಗೆ ಕಾಡಿಗೆ ಸೊಪ್ಪು ತರಲು ತೆರಳಿದ್ದ ವೇಳೆ ಕಾಡಾನೆ ಇವರಿಬ್ಬರ ಮೇಲೆ ದಾಳಿ ನಡೆಸಿದೆ ಇಬ್ಬರೂ‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹರೀಶ್ ಶೆಟ್ಟಿ ಅವರಿಗೆ ಪತ್ನಿ ಇಬ್ಬರು ಪುತ್ರಿಯರು ಇದ್ದಾರೆ. ಹಾಗೇ ಉಮೇಶ್ ಗೌಡ ಅವರಿಗೆ ಪತ್ನಿ ಮತ್ತು...

ಮೊಗ್ರು ಮುಗೆರಡ್ಕ‌ ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ

0

ಬೆಳ್ತಂಗಡಿ :(ಅ.31) ಮೊಗ್ರು ಗ್ರಾಮದ ಮುಗೇರಡ್ಕ ನೇತ್ರಾವದಿಗೆ ಸೇತುವೆ ಕಾಮಗಾರಿ ಭರದಿಂದ ಸಾಗುತಿದ್ದು ಇದರ ಪಕ್ಕದ ಮರಳಿನ ದಿಬ್ಬದಲ್ಲಿ ವಿಶ್ರಾಂತಿ ಪಡೆದ ರೀತಿಯಲ್ಲಿ ಅಕ್ಟೋಬರ್ 30 ರಂದು ಸಂಜೆ ಮೊಸಳೆ ಕಂಡು ಬಂದಿರುವ ಬಗ್ಗೆ ವರದಿಯಾಗಿದೆ. ಸೇತುವೆ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರು ಮೊಸಳೆಯನ್ನು ನೋಡಿ ನಾಗರಿಕರಿಗೆ ಮಾಹಿತಿ ನೀಡಿದ್ದು. ಈ ಪರಿಸರದಲ್ಲಿ ನದಿಗಿಳಿಯುವವರು ಎಚ್ಚರ ವಹಿಸಬೇಕಾಗಿದೆ.ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿರುತ್ತಾರೆ.

ಧರ್ಮಸ್ಥಳ ಪ್ರಕರಣ ಮಹೇಶ್ ಶೆಟ್ಟಿ ಸೇರಿ ನಾಲ್ವರ ವಿರುದ್ದ ಎಫ್.ಐ.ಆರ್ ಗೆ ಹೈಕೋರ್ಟ್ ಮಧ್ಯಂತರ ತಡೆ

0

ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣಕ್ಕೆ‌ ಸಂಬಂಧಿಸಿದಂತೆಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್.ಟಿ, ವಿಠಲ ಗೌಡ ಅವರ ವಿರುದ್ದ ಬಲವಂತದ ಕ್ರಮ ಬೇಡ ಎಂದು ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿದ್ದು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೂ ಮುಂದಿನ ವಿಚಾರಣೆಯ ವರೆಗೆ ತಾತ್ಕಲಿಕ ತಡೆಯಜ್ಞೆ ನೀಡಿದೆ.ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರು ತಮಗೆ ಎಸ್.ಐ.ಟಿ ನೀಡಿರುವ ನೋಟೀಸ್ ಅನ್ನು ರದ್ದು ಪಡಿಸಬೇಕು, ಪ್ರಕರಣ ರದ್ದು ಪಡಿಸಬೇಕು ಎಂದು ಸಲ್ಲಿಸಿದ್ದ ಮನವಿಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಗುರುವಾರ ವಿಚಾರಣೆ ನಡೆದು ಎರಡೂ...

ಬೆಳ್ತಂಗಡಿ : ಮತ್ತೆ ವಿಚಾರಣೆಗೆ ಹಾಜರಾಗಲು ನಾಲ್ಕು ಮಂದಿಗೆ ಎಸ್.ಐ.ಟಿ ನೋಟಿಸ್ ಜಾರಿ

0

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ನೋಟೀಸ್ ಗೆ ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಮಹೇಶ್ ಶೆಟ್ಟಿ ತಮಿರೋಡಿ ಸೇರಿದಂತೆ ನಾಲ್ವರಿಗೂ ವಿಚಾತಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ನಾಲ್ಕು ಮಂದಿಯ ಮನೆಗೆ ಹೋಗಿ ನೋಟೀಸ್ ಜಾರಿ ಮಾಡಿದೆ. ಮಹೇಶ್ ಶೆಟ್ಟಿ ತಿಮರೋಡಿ ,ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಗೆ ನವೆಂಬರ್ 3 ರಂದು ಬೆಳ್ತಂಗಡಿ ಎಸ್ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗಲು ಅ.30 ರಂದು ಮನೆಗೆ ಹೋಗಿ ನೋಟಿಸ್ ಅಂಟಿಸಿದ್ದಾರೆ. ಇನ್ನೂ ಸೌಜನ್ಯ ಮಾವ ವಿಠಲ್ ಗೌಡ ಅವರಿಗೆ ಅ.31 ರಂದು ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಹಾಜರಾಗಲು...

ಧರ್ಮಸ್ಥಳ ಪ್ರಕರಣ ಎಸ್.ಐ.ಟಿ ನೋಟೀಸ್ ಹಾಗೂ ಪ್ರಕರಣ‌ರದ್ದು ಮಾಡುವಂತೆ ಮಹೇಶ್ ಶೆಟ್ಟಿ ತಿಮರೋಡಿ ತಂಡದಿಂದ ಹೈಕೋರ್ಟ್ ನಲ್ಲಿ ಅರ್ಜಿ

0

ಬೆಳ್ತಂಗಡಿ; ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರು ತಮ್ಮ ವಿರುದ್ದ ದಾಖಲಾಗಿರುವ ಪ್ರಕರಣ‌ರದ್ದು ಪಡಿಸುವಂತೆ, ಹಾಗೂ ಎಸ್.ಐ.ಟಿ ನೀಡಿರುವ ಸಮನ್ಸ್ ಅನ್ನು ರದ್ದುಪಡಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಅ27ರಂದು ಅರ್ಜಿ ಸಲ್ಲಿಸಿದ್ದು ನ್ಯಾಯಾಲಯದಲ್ಲಿ ಅ 30ರಂದು ಅರ್ಜಿ ವಿಚಾರಣೆ ನಡೆಯಲಿದೆ. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ವಿಠಲ್ ಗೌಡ ಈ ನಾಲ್ಕು ಜನರು ಹೈಕೋರ್ಟ್ ನಲ್ಲಿ ಎಸ್.ಐ.ಟಿ ತಮಗೆ 39/25 ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎನ್.ಎಸ್ 35(3) ಅಡಿಯಲ್ಲಿ...

ಧರ್ಮಸ್ಥಳ ಕನ್ಯಾಡಿಯಲ್ಲಿ ಭೀಕರ ರಸ್ತೆ ಅಪಘಾತ ಬೈಕ್ ಸವಾರ ಸಾವು

0

ಬೆಳ್ತಂಗಡಿ: ಉಜಿರೆ-ಧರ್ಮಸ್ಥಳ ರಸ್ತೆಯ ಕನ್ಯಾಡಿ ಸೇವಾ ಧಾಮದ ಸಮೀಪದ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಲು ಮತ್ತು ತಲೆಗೆ ಗಂಭೀರ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಅಸ್ಪತ್ರೆಯಲ್ಲಿ ಸಾವನ್ನಪ್ಪಿದ ದುರ್ಘಟನೆ ಅ.29ರಂದು ನಡೆದಿದೆ.ನಾವೂರು ಗ್ರಾಮದ ಹೊಡಿಕ್ಕಾರು ಗಂಗಯ್ಯ ಮತ್ತು ಕುಸುಮಾವತಿ ದಂಪತಿಯ ಏಕೈಕ ಪುತ್ರ, ಬೈಕ್ ಸವಾರ ಚಂದ್ರಹಾಸ (೨೮) ದುರ್ಘಟನೆಯಲ್ಲಿ ಸಾವನ್ನಪ್ಪಿದವರು.ಚಂದ್ರಹಾಸ ಅವರು ಸತೀಶ್ ಎಂಬವರ ಜತೆ ಸೇರಿ ಟೈಲ್ಸ್ ಹಾಕುವ ಕೆಲಸವನ್ನು ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು. ಅ.29ರಂದು ಬೆಳಿಗ್ಗೆ ಧರ್ಮಸ್ಥಳ ಕಡೆ ಕೆಲಸಕ್ಕಾಗಿ...

ಬೆಳ್ತಂಗಡಿ; ವಿಷಪೂರಿತ ಆಹಾರ ಸೇವಿಸಿದ್ದ ಮಹಿಳೆ ಸಾವು

0

ಬೆಳ್ತಂಗಡಿ; ನೆರಿಯ ಗ್ರಾಮದ ಕಾಟಾಜೆ ಮನೆ ನಿವಾಸಿ ಗಿರಿಜಾ (೬೩) ಎಂಬವರು ಯಾವುದೋ ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥರಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟ ಘಟನೆ ಅ.೨೮ರಂದು ನಡೆದಿದೆ.ಅ.22 ರಂದು ಬೆಳಗ್ಗಿನ ಜಾವ   ಗಿರಿಜಾ ಅವರು ತನ್ನ ಮನೆಯಲ್ಲಿ ವಿಷ ಪೂರಿತ ಆಹಾರ ಸೇವಿಸಿದ ಪರಿಣಾಮ ಅಸ್ವಸ್ಥರಾಗಿದ್ದು, ಅವರನ್ನು ಮನೆಯವರು ಕೂಡಲೇ ಚಿಕಿತ್ಸೆಗಾಗಿ ಬೇರೆ-ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಬಳಿಕ ಮಂಗಳೂರು ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಮೃತರ ಪುತ್ರಿ ಕಮಲಾ ನೀಡಿದ ದೂರಿನಂತೆ ಧರ್ಮಸ್ಥಳ...