ಬೆಳ್ತಂಗಡಿ; ದಿಡುಪೆಯಲ್ಲಿ ಸ್ಕೂಟರ್ ಸವಾರನ ಮೇಲೆ ಕಾಡಾನೆ ದಾಳಿ
ಬೆಳ್ತಂಗಡಿ: ದಿಡುಪೆಯಲ್ಲಿ ದ್ವಿಚಕ್ರ ವಾಹನದ ಮೇಲೆ ಒಂಟಿ ಸಲಗವೊಂದು ದಾಳಿ ಮಾಡಿರುವ ಘಟನೆ ಮೇ.31 ರಂದು ರಾತ್ರಿ ನಡೆದಿದೆ. ಮಲವಂತಿಗೆ ಗ್ರಾಮದ ದಿಡುಪೆಯ ನೆಕ್ಕಿಲೊಟ್ಟು ನಾರಾಯಣ ಗೌಡ ಎಂಬುವರು ಸ್ಥಳೀಯ ಕಾರ್ಯಕ್ರಮಕ್ಕೆ ಹೋಗಿ ವಾಪಸ್ಸು ತನ್ನ ಮನೆಗೆ ದ್ವಿಚಕ್ರ ವಾಹನದೊಂದಿಗೆ ಹಿಂದಿರುಗುತ್ತಿದ್ದ ವೇಳೆ ರಾತ್ರಿ 8.45ಕ್ಕೆ ನೇಲ್ಯಡ್ಕ ರಸ್ತೆ ಬಳಿ ಒಂಟಿ ಸಲಗವೊಂದು ಎದುರಾಗಿದ್ದು ಕಾಡಾನೆ ಏಕಾಏಕಿ ವಾಹನದ ಮೇಲೆ ಎರಗಿ ಸ್ಕೂಟರ್‌ನ್ನು ಜಖಂಗೊಳಿಸಿದೆ. ಆನೆ ಎದುರಾಗುತ್ತಿದ್ದಂತೆ ಬೈಕ್ ಸವಾರ ಸ್ಥಳದಲ್ಲೇ ವಾಹನ ಬಿಟ್ಟು ಓಡಿ ಹೋಗಿ ಜೀವ ರಕ್ಷಿಸಿಕೊಂಡಿದ್ದಾರೆ. ಮಳೆ ಸುರಿದ ಕಾರಣದಿಂದ...
ಪೂಂಜಾಲಕಟ್ಟೆ ಬಿಯರ್ ಬಾಟ್ಲಿಯಿಂದ ಹೊಡೆದು ಚಿಕ್ಕಪ್ಪನನ್ನೇ ಕೊಲೆಗೈದ ಯುವಕ
ಬೆಳ್ತಂಗಡಿ: ಯುವಕನೋರ್ವ ಚಿಕ್ಕಪ್ಪನನ್ನೇ ಬಿಯರ್ ಬಾಟ್ಲಿಯಿಂದ ಇರಿದು ಕೊಲೆಗೈದ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ಎಂಬಲ್ಲಿ ರವಿವಾರ ರಾತ್ರಿ ಸಂಭವಿಸಿದೆ. ಇಲ್ಲಿನ ನಿವಾಸಿ ಮಧುಸೂಧನ ( 38) ಅವರು ಮೃತಪಟ್ಟವರಾಗಿದ್ದು, ಅವರ ಅಣ್ಣ ಕೇಶವ ಪೂಜಾರಿ ಅವರ ಪುತ್ರ ರಾಹುಲ್ (23) ಕೊಲೆಗೈದ ಆರೋಪಿಯಾಗಿದ್ದಾನೆ. ಘಟನೆಯ ವಿವರ: ಕೇಶವ ಪೂಜಾರಿ ಅವರ ಮನೆಯಲ್ಲಿ ರವಿವಾರ ರಾತ್ರಿ ದೈವಕ್ಕೆ ತಂಬಿಲ ಕಾರ್ಯಕ್ರಮ ನಡೆಯುತ್ತಿತ್ತು. ರಾಹುಲ್ ಮತ್ತಿತರರು ಮನೆಯಿಂದ ಹೊರಗೆ ಕುಡಿದು ಗದ್ದಲ ಮಾಡುತ್ತಿದ್ದರು.ಇದನ್ನು ಆಕ್ಷೇಪಿಸಿದ ಮಧುಸೂದನ್ ಅವರನ್ನು ರಾಹುಲ್ ಕೋಪದಿಂದ ಬಿಯರ್ ಬಾಟಲ್ ನಿಂದ...
ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಧರ್ಮಸ್ಥಳಕ್ಕೆ ಭೇಟಿ; ದೇವರ ದರ್ಶನ
ಧರ್ಮಸ್ಥಳ, ಮೇ 31: ಭಾರತದ ಉಪರಾಷ್ಟ್ರಪತಿಗಳಾದ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಶನಿವಾರ ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದರು. ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯಕ್ಕೆ ಆಗಮಿಸಿದ ಉಪರಾಷ್ಟ್ರಪತಿಗಳು ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಬಳಿಕ ಅವರು ಅನ್ನಪೂರ್ಣ ಛತ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಹಾಗೂ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ ಉಪರಾಷ್ಟ್ರಪತಿಗಳು...
ಎಸ್.ಎಸ್.ಎಲ್.ಸಿ ಫಲಿತಾಂಶ; ವಾಣಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರಾಪ್ತಿ ಗೌಡ 625 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ
ಬೆಳ್ತಂಗಡಿ: 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಫಲಿತಾಂಶದಲ್ಲಿ ವಾಣಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರಾಪ್ತಿ ಗೌಡ ಅವರು 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅತ್ಯುತ್ತಮ ಸಾಧನೆ ಮೂಲಕ ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿರುವ ಪ್ರಾಪ್ತಿ ಗೌಡ ಅವರ ಸಾಧನೆಯನ್ನು ವಾಣಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ–2 ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮಾಧುರ್ಯ ಜಿ 625 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ
2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ–2ರಲ್ಲಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳ ಇಲ್ಲಿಯ ವಿದ್ಯಾರ್ಥಿನಿ ಮಾಧುರ್ಯ ಜಿ ಎಸ್ ಎಸ್ ಎಲ್ ಸಿ ಪರೀಕ್ಷೆ 1 ರಲ್ಲಿ 621 ಅಂಕ ಗಳಿಸಿದ್ದು, ಎಸ್ ಎಸ್ ಎಲ್ ಸಿ ಪರೀಕ್ಷೆ 2 ರಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ಶೇ.100 ಫಲಿತಾಂಶದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಅವರ ಈ ಅಪೂರ್ವ ಸಾಧನೆ ಶಾಲೆ, ಪೋಷಕರು ಹಾಗೂ ಜಿಲ್ಲೆಯ ಹೆಮ್ಮೆಗೆ ಕಾರಣವಾಗಿದೆ. ಮಾಧುರ್ಯ ಅವರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ...
ಎಸ್‌ಎಸ್‌ಎಲ್‌ಸಿ ಪರೀಕ್ಷೆ–2: ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನನ್ಯ 625 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ
ಬೆಳ್ತಂಗಡಿ; 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ–2ರ ಫಲಿತಾಂಶದಲ್ಲಿ ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಅನನ್ಯ ಅವರು 625 ಅಂಕಗಳಿಗೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಅಪೂರ್ವ ಸಾಧನೆ ಮೆರೆದಿದ್ದಾರೆ. ಉಜಿರೆಯ ಸೂರ್ಯ ನಿವಾಸಿಗಳಾದ ಹರ್ಷದ್ರ ಕುಮಾರ್ ಹಾಗೂ ಶಾರದಾ ದಂಪತಿಗಳ ಪುತ್ರಿಯಾಗಿರುವ ಅನನ್ಯ, ತಮ್ಮ ನಿರಂತರ ಪರಿಶ್ರಮ, ಶಿಸ್ತುಬದ್ಧ ಅಧ್ಯಯನ, ಪ್ರತಿಭೆ ಹಾಗೂ ಶಿಕ್ಷಕರ ಸಮರ್ಪಕ ಮಾರ್ಗದರ್ಶನದ ಮೂಲಕ ಈ ಅಮೋಘ ಸಾಧನೆಯನ್ನು ದಾಖಲಿಸಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲೆಯ ಸಂಚಾಲಕರು, ಪ್ರಾಂಶುಪಾಲರು, ಶಿಕ್ಷಕ ವೃಂದ, ಆಡಳಿತ...
ಬೆಳ್ತಂಗಡಿ; ಪಿನರಾಯ್ ವಿಜಯನ್ ಮನೆಗೆ ಇಡಿ ದಾಳಿವಿರುದ್ದ ಪ್ರತಿಭಟನೆ
ಬೆಳ್ತಂಗಡಿ; 10 ವರ್ಷ ಕಾಲ ಕೇರಳಂ ರಾಜ್ಯದ ಮುಖ್ಯಮಂತ್ರಿಯಾಗಿ ಗೌರವಯುತವಾಗಿ ಅಧಿಕಾರದಿಂದ ಕೆಳಗಿಳಿದ ಕಾಮ್ರೇಡ್ ಪಿನರಾಯ್ ವಿಜಯನ್ ಅವರ ಮನೆಗೆ ಸರ್ವಾದಿಕಾರಿಯಗಿ, ರಾಜಕೀಯ ಪ್ರೇರಿತವಾಗಿ ಮತ್ತು ಅನಗತ್ಯವಾಗಿ ಅವಮಾನಿಸುವ ಏಕೈಕ ದುರುದ್ದೇಶದಿಂದ ಇಡಿ (ಜಾರಿ ನಿರ್ಧೇಶನಾಲಯ) ಮೂಲಕ ದಾಳಿ ಮಾಡಿಸಿರುದು ಕೇಂದ್ರ ಸರಕಾರದ ರಾಜಕೀಯ ದಿವಾಳಿತನ ಎಂದು ಸಿಪಿಐಎಂ ಭಾವಿಸುತ್ತದೆ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಹಾಗೂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು.ಅವರು ಇಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ...
ಬೆಳ್ತಂಗಡಿ : ಉಜಿರೆ ಜನ ಔಷಧಿ ಕೇಂದ್ರದ ಬೀಗ ಒಡೆದು ನಗದು ಹಣ ಕಳ್ಳತನ
ಬೆಳ್ತಂಗಡಿ : ಉಜಿರೆ ಗ್ರಾಮದ ಬೆಳಾಲು ಕ್ರಾಸ್ ಬಳಿಯಿರುವ ಸುಪ್ರೀಮ್ ಲಾಡ್ಜ್ ಕೆಳಭಾಗದಲ್ಲಿರುವ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಕ್ಕೆ ಒಂಬಟ್ಟಿ ಕಳ್ಳನೊಬ್ಬ ಮೇ.29 ರಾತ್ರಿ 12:40 ರಿಂದ ಮೇ.30 ರ ಬೆಳಗ್ಗೆ 8 ಗಂಟೆ ನಡುವೆ ಶಟರ್ ಬೀಗ ಮುರಿದು ಒಳನುಗ್ಗಿ ಕ್ಯಾಶ್ ಡ್ರಾವರ್ ನಲ್ಲಿದ್ದ 3 ದಿನದ ವ್ಯವಹಾರದ 98,460 ರೂಪಾಯಿ ಹಣವನ್ನು ಕಳ್ಳತನ ಮಾಡಲಾಗಿದೆ. ಬೆಳ್ತಂಗಡಿ ಪೊಲೀಸರು, ಮಂಗಳೂರಿನಿಂದ ಶ್ವಾನ ದಳ, ಬೆರಳಚ್ಚು ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಜಿರೆ ಪ್ರಧಾನ ಮಂತ್ರಿ ಭಾರತೀಯ ಜನ...
ಬೆಳ್ತಂಗಡಿ : ಕಾರಿನಲ್ಲಿ ನಿಷೇಧಿತ MDMA ಮಾದಕವಸ್ತು ಸಾಗಾಟ ವೇಣೂರು ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ
ಬೆಳ್ತಂಗಡಿ : ಗುರುವಾಯನಕೆರೆಯಿಂದ ಮೂಡಬಿದಿರೆ ಕಡೆಗೆ ಕಾರಿನಲ್ಲಿ ಮಾರಾಟ ಮಾಡಲು ನಿಷೇಧಿತ ಮಾದಕವಸ್ತು MDMA ಸಾಗಾಟ ಮಾಡಲು ಯತ್ನಿಸುತ್ತಿದ್ದಾಗ ವೇಣೂರು ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಮಾದಕವಸ್ತು ಸಮೇತ ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ತಾಲೂಕಿನ ಪುತ್ತಿಗೆ ಗ್ರಾಮದ ಹಂಡೇಲು ನಿವಾಸಿ ಹೆಚ್.ಹುಸೇನ್ ಮಗ ತನ್ವೀರ್(27) ಮತ್ತು ಮಂಗಳೂರು ತಾಲೂಕಿನ ಮೂಡಬಿದಿರೆಯ ಕಲ್ಲಬೆಟ್ಟು ನಿವಾಸಿ ಅಬ್ದುಲ್ ಖಾದರ್ ಮಗ ಮಹಮ್ಮದ್ ಸಲ್ವಾನ್(22) ಎಂಬವರೇ ಬಂಧತ ಆರೋಪಿಗಳಾಗಿದ್ದಾರೆ. ನಿಷೇಧಿತ MDMA ಮಾದಕವಸ್ತು ಸಾಗಾಟ ಮಾಡುತ್ತಿರುವ ಬಗ್ಗೆ ವೇಣೂರು ಪೊಲೀಸ್...
ಬೆಳ್ತಂಗಡಿ : ತಹಶೀಲ್ದಾರ್ ಪೃಥ್ವಿ ಸಾನಿಕಂ ವರ್ಗಾವಣೆ
ಬೆಳ್ತಂಗಡಿ : ಸರಕಾರದ ಕಂದಾಯ ಇಲಾಖೆ ಒಟ್ಟು 27 ಮಂದಿ ತಹಶೀಲ್ದಾರ್ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಇದರಲ್ಲಿ ಕಳೆದ 2023 ನವಂಬರ್ 18 ರಿಂದ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಅಗಿದ್ದ ಪೃಥ್ವಿ ಸಾನಿಕಂ ಅವರನ್ನು ಮಂಗಳೂರು ನಗರದ ಮುಲ್ಕಿ ತಾಲೂಕಿಗೆ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಿ ಮೇ.27 ರಂದು ಆದೇಶ ಮಾಡಿದೆ. ಬೆಳ್ತಂಗಡಿ ತಹಶೀಲ್ದಾರ್ ಆಗಿ ಎರಡು ಬಾರಿ ಪೃಥ್ವಿ ಸಾನಿಕಂ ಕರ್ತವ್ಯ ನಿರ್ವಹಿಸಿದ್ದಾರೆ. ಕಳೆದ 18-11-2023 ರಿಂದ 27-05-2026 ವರೆಗೆ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಬೆಳ್ತಂಗಡಿ ತಾಲೂಕಿನ ಜನರಿಗೆ...















