ಬೆಳ್ತಂಗಡಿ; ಪಟ್ಟಣ ಪಂಚಾಯತು ನಾಮನಿರ್ದೇಶಿತ ಸದಸ್ಯ ಅಬ್ದುಲ್ ಬಶೀರ್ ನೇಣುಬಿಗಿದು ಆತ್ಮಹತ್ಯೆ
ಬೆಳ್ತಂಗಡಿ: ರೆಂಕೆದಗುತ್ತು ನಿವಾಸಿ, ಪಟ್ಟಣ ಪಂಚಾಯತ್ ನಾಮನಿರ್ದೇಶನ ಸದಸ್ಯ. ಅಬ್ದುಲ್ ಬಶೀರ್ ರವರು ಅ6ರಂದು ಬೆಳಗ್ಗೆ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಇವರ ಮೃತದೇಹ ಮನೆಯಲ್ಲಿ ಪತ್ತೆಯಾಗಿದೆ.ಮೃತದೇಹವನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಇವರು ಪತ್ನಿ, ಮೂರು ಮಕ್ಕಳನ್ನು ಅಗಲಿದ್ದಾರೆ. ಇವರ ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿದು ಬಂದಿಲ್ಲ.
ಬಾರ್ಯ; ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಿಗೆ ಎಲ್ಲ 12 ಸ್ಥಾನಗಳಲ್ಲಿ ಗೆಲುವು ಮತ್ತೊಮ್ಮೆ ಬಿಜೆಪಿಗೆ ಆಡಳಿತ
ಬಾರ್ಯ : ಬಾರ್ಯ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) 2025-2030 ನೇ ಸಾಲಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ನವೆಂಬರ್ 05 ರಂದು ನಡೆದು ಫಲಿತಾಂಶ ಹೊರಬಂದಿದ್ದು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಎಲ್ಲ 12ಕ್ಷೇತ್ರಗಳಲ್ಲಿಯೂ ಗೆಲುವನ್ನು ಪಡೆದಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ಪ್ರಸನ್ನ ಗೌಡ. ಎನ್, ಪ್ರವೀಣ್ ರೈ. ಪಿ, ಪ್ರಶಾಂತ್. ಪೈ, ಚಂದ್ರಶೇಖರ ಕುಂಡಡ್ಕ, ಹರ್ಷಿತ್ ಪೂಜಾರಿ ಕಲಾಯ, ಮೋಹನ್ ಗೌಡ ಅಜಿರ, ಹಿಂದುಳಿದ ಎ ಕ್ಷೇತ್ರದಿಂದ ಸೇಸಪ್ಪ ಸಾಲಿಯಾನ್, ಹಿಂದುಳಿದ ಬಿ ಕ್ಷೇತ್ರದಿಂದ ರಾಜೇಶ್ ರೈ ಹೆನ್ನಡ್ಕ,...
ಬೆಳ್ತಂಗಡಿ; ನೂತನ ಧರ್ಮಾಧ್ಯಕ್ಷರಿಗೆ ರಕ್ಷಿತ್ ಶಿವರಾಂ ಅವರಿಂದ ಅಭಿನಂದನೆ
ಬೆಳ್ತಂಗಡಿ; ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅಭಿಷಕ್ತರಾದ ಅ.ವಂ ಜೇಮ್ಸ್ ಪಟ್ಟೇರಿಲ್ ಅವರನ್ನು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಬೆಳ್ತಂಗಡಿ ಸೈಂಟ್ ಲಾರೆನ್ಸ್ ಪ್ರಧಾನ ದೇವಾಲಯಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು.ಮಂಗಳೂರಿನ ಮಾಜಿ ಶಾಸಕರಾದ ಜೆ.ಆರ್ ಲೋಬೋ ಅವರು ಹಾಗೂ ಪ್ರವೀಣ್ ಫೆರ್ನಾಂಡಿಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಬಿಷಪ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಶಾಸಕ ಹರೀಶ್ ಪೂಂಜ ಅವರಿಂದ ನೂತನ ಬಿಷಪ್ ಅವರಿಗೆ ಅಭಿನಂದನೆ
ಬೆಳ್ತಂಗಡಿ; ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅಭಿಷಕ್ತರಾದ ಬಿಷಪ್ ಜೇಮ್ಸ್ ಪಟ್ಟೇರಿಲ್ ಅವರನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಭೇಟಿಯಾಗಿ ಅಭಿನಂದನೆಸಲ್ಲಿಸಿದರು. ಈ ಸಂದರ್ಭದಲ್ಲಿ ಪಿ.ಸಿ ಸೆಬಾಸ್ಟಿಯನ್, ಪ್ರಿನ್ಸ್ ಹಾಗೂ ಇತರರು ಇದ್ದರು.
ಬೆಳ್ತಂಗಡಿ : ಹಳೆದ್ವೇಷದ ಹಿನ್ನಲೆ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ಪ್ರಕರಣ ದಾಖಲು
ಬೆಳ್ತಂಗಡಿ : ಹಳೆ ದ್ವೇಷದ ವಿಚಾರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಮಿನಿ ವಿಧಾನಸೌಧದ ರಸ್ತೆಯ ಬಳಿ ನ.3 ರಂದು ಸಂಜೆ 4:30 ರ ಸುಮಾರಿಗೆ ಧರ್ಮಸ್ಥಳ ಗ್ರಾಮದ ಇಬ್ರಾಹಿಂ(32) ಎಂಬವರಿಗೆ ಉಜಿರೆ ಟಿ.ಬಿ ಕ್ರಾಸ್ ನಿವಾಸಿ ಅಫ್ರೀದ್ @ ಅಪ್ಪಿ ಎಂಬಾತ ಆಟೋ ರಿಕ್ಷಾದಲ್ಲಿ ಬಂದು ಯಾವುದೋ ಅಯುಧದಿಂದ ಬಲಕಣ್ಣಿಗೆ ಮತ್ತು ಎಡಕಣ್ಣಿಗೆ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದಾಗ ಸಾರ್ವಜನಿಕರು ಸೇರುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಗಾಯಗೊಂಡ ಇಬ್ರಾಹಿಂ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ...
ನೂತನ ಧರ್ಮಾಧ್ಯಕ್ಷರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಅಭಿನಂದನೆ
ಬೆಳ್ತಂಗಡಿ; ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅಭಿಷಕ್ತರಾದ ಅ ವಂ ಜೇಮ್ಸ್ ಪಟ್ಟೇರಿಲ್ ಅವರನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪರವಾಗಿ ಅಭಿನಂದಿಸಲಾಯಿತು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿನ್ಸಂಟ್ ಪಯಸ್, ಧರ್ಮಸ್ಥಳ ಡಿ.ಎಂ.ಸಿ ವಿಭಾಗದ ಟಿ.ವಿ ದೇವಸ್ಯ ಹಾಗು ಉಜಿರೆ ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಅವರು ಶಾಲು ಹೊದಿಸಿ ಫಲಪುಷ್ಪನೀಡಿ ಸನ್ಮಾನಿಸಿದರು.ಎಸ್.ಡಿ.ಎಂ ಆಸ್ಪತ್ರೆ ಉಜಿರೆ ಇದರ ವತಿಯಿಂದ ಮ್ಯಾನೇಜಿಂಗ್ ಡೈರೆಕ್ಟರ್ ಜನಾರ್ಧನ್ ಹಾಗೂ ಇತರರು ನೂತನ ಬಿಷಪ್ ಅವರನ್ನು ಸನ್ಮಾನಿಸಿದರು.
ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷ ರಾದಾ ಅ ವಂ ಜೇಮ್ಸ್ ಪಟ್ಟೇರಿಲ್ ಅವರ ಪಟ್ಟಾಭಿಷೇಕ
ಬೆಳ್ತಂಗಡಿ ಧರ್ಮಪ್ರಾಂತ್ಯದ ಧ್ವಿತೀಯ ಧರ್ಮಾಧ್ಯಕ್ಷರಾಗಿ ಅತೀ ವಂದನೀಯ ಜೇಮ್ಸ್ ಪಟ್ಟೇರಿಲ್ ರವರು ಇಂದು ಪಟ್ಟಾಭಿಶಕ್ತರಾಗಿದ್ದಾರೆ. ಸೀರೋ ಮಲಬಾರ್ ಕಥೋಲಿಕ ಧರ್ಮಸಭೆಯ ಮಹಾ ಧರ್ಮಾಧ್ಯಕ್ಷರಾದ ಅತೀ ವಂದನೀಯ ರಾಫೇಲ್ ತಟ್ಟಿಲ್ ರವರು ಮುಖ್ಯ ಅರ್ಚಕರಾಗಿ, ಆರ್ಚ್ ಬಿಷಪ್ ಅತೀ ವಂದನೀಯ ಜೋಸೆಫ್ ಪಾಮ್ಪ್ಲಾನಿ ತಲಶೇರಿ ಮೆಟ್ರೋ ಪೊಲಿಟನ್ ಧರ್ಮಪ್ರಾಂತ್ಯ ರವರ ಹಾಗು ಭಾರತದ ವಿವಿಧ ಕಡೆಗಳಿಂದ ಆಗಮಿಸಿದ ನಲವತ್ತ ನಾಲ್ಕು ಧರ್ಮಾಧ್ಯಕ್ಷರ ಪುಣ್ಯಸಾನಿಧ್ಯದಲ್ಲಿ ಪಟ್ಟಾಭಿಷೇಕವು ನೆರವೇರಿತು. ಭಾರತದ ವಿವಿಧ ಕಡೆಗಳಿಂದ ನಾನೂರಕ್ಕೂ ಮಿಕ್ಕಿ ಧರ್ಮಗುರುಗಳು, ಧರ್ಮ ಭಗಿನಿಯರು ಮತ್ತು ನಾಲ್ಕು ಸಾವಿರಕ್ಕೂ ಮೀರಿದ ಕ್ರೈಸ್ತಬಾಂದವರು...
ಮೊಸಳೆ ದಾಳಿಯಿಂದ ಬಚಾವಾದ ಕಾರ್ಮಿಕ
ಬೆಳ್ತಂಗಡಿ:ಮೊಸಳೆ ದಾಳಿಯಿಂದ ಕಾರ್ಮಿಕರೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಮಂಗಳವಾರ ನಡೆದಿದೆ.ಕಲ್ಮಂಜ ಗ್ರಾಮದ ಹುಣಿಪಾಜೆ ಸಮೀಪದ ನಿವಾಸಿ ಉಮೇಶ ಎಂಬವರು ಮುಂಡಾಜೆ ಗ್ರಾಮದ ಕಾಯರ್ತೋಡಿ ಸಮೀಪ ನೇತ್ರಾವತಿ ನದಿ ದಾಟಿ ನದಿಯ ಇನ್ನೊಂದು ಭಾಗದಲ್ಲಿರುವ ಪರಿಸರಕ್ಕೆ ಕೆಲಸಕ್ಕೆ ಬರುವ ವೇಳೆ ನದಿಯನ್ನು ದಾಟಲು ನೀರಿಗೆ ಇಳಿಯುತ್ತಿದ್ದಂತೆ ನದಿ ದಡದಲ್ಲಿದ್ದ ಮೊಸಳೆ ನೀರಿಗೆ ಹಾರಿದೆ. ನದಿ ದಡದ ಪೊದೆಗಳ ಮಧ್ಯೆ ಮೊಸಳೆ ಇದ್ದದ್ದು ಇವರ ಗಮನಕ್ಕೆ ಬಂದಿರಲಿಲ್ಲ.ಇವರ ತೀರಾ ಸಮೀಪ ಮೊಸಳೆ ಹಾರಿದ್ದು, ಇದನ್ನು ಕಂಡ ಅವರು ತಕ್ಷಣ ನದಿಯಿಂದ ಮೇಲ್ಭಾಗಕ್ಕೆ ಹೋಗಿ ಮೊಸಳೆ...
ಧರ್ಮಸ್ಥಳ ಲಕ್ಷ ದೀಪೋತ್ಸವ;13ನೇ ವರ್ಷದ ಪಾದಯಾತ್ರೆ ಪೂರ್ವಭಾವಿ ಸಭೆ, ಕರಪತ್ರ ಬಿಡುಗಡೆ
ಉಜಿರೆ : ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಾಮಕೃಷ್ಣ ಸಭಾ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ 13ನೇ ವರ್ಷದ ಪಾದಯಾತ್ರೆಯ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ, ನಮ್ಮ ಸಾತ್ವಿಕ ಶಕ್ತಿಯನ್ನು ತೋರಿಸುವ ಸಲುವಾಗಿ ದಿವಂಗತ ಡಾಕ್ಟರ್ ಬಿ. ಯಶೋವರ್ಮ ಹಾಗು ದಿವಂಗತ ವಿಜಯ ರಾಘವ ಪಡುವಟ್ನಾಯರ ಮಾರ್ಗದರ್ಶನದಲ್ಲಿ ಕೇವಲ 500 ಜನರಿಂದ ಆರಂಭವಾದ ಈ ಪಾದಯಾತ್ರೆ ಇಂದು ಬೃಹತ್ ಹೆಮ್ಮರವಾಗಿ ಬೆಳೆದಿದೆ. ಹಿರಿಯರು ಮತ್ತು...
ವ್ಯಾಟಿಕನ್‌ನ ಭಾರತ ಮತ್ತು ನೇಪಾಳದ ಡೆಪ್ಯುಟಿ ರಾಯಭಾರಿ ಫಾ.ಆ್ಯಂಡ್ರಿಯಾ ಫಾನ್ರಿಯಾ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ
ಬೆಳ್ತಂಗಡಿ; ವ್ಯಾಟಿಕನ್‌ನ ಭಾರತ ಮತ್ತು ನೇಪಾಳದ ಡೆಪ್ಯುಟಿ ರಾಯಭಾರಿ ಫಾ.ಆ್ಯಂಡ್ರಿಯಾ ಫಾನ್ರಿಯಾ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು. ಕ್ಷೇತ್ರದ ಇತಿಹಾಸದ ಬಗ್ಗೆ ಮಾಹಿತಿ ಪಡೆದ ಅವರು ಹರ್ಷ ವ್ಯಕ್ತಪಡಿಸಿದರು. ಬೆಳ್ತಂಗಡಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಅವರು ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡಿದರು. ಬೆಳ್ತಂಗಡಿ ಧರ್ಮ ಪ್ರಾಂತ್ಯದ ಪ್ರಧಾನ ಧರ್ಮಗುರುಗಳಾದ ಅ ವಂ ಫಾ ಜೋಸೆಫ್ ವಲಿಯಪರಂಬಿಲ್, ಹಾಗೂ ಬಿಜು ಎಂ. ಜೋಸೆಫ್ ಮಂಗಳೂರು, ಮನೋಜ್ ಜತೆಗಿದ್ದರು. ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್...















