ಬೆಳ್ತಂಗಡಿ: ಬೆಂಕಿ ಆಕಸ್ಮಿಕ ಸಂಭವಿಸಿದ ಸ್ವಸ್ತಿಕ್ ಗ್ಯಾರೇಜ್ ಗೆ ರಕ್ಷಿತ್ ಶಿವರಾಂ ಭೇಟಿ

0

ಬೆಳ್ತಂಗಡಿ: ನಗರದ ಹಳೆಕೋಟೆಯಲ್ಲಿ ಭಾನುವಾರ ರಾತ್ರಿ ಬೆಂಕಿ ಆಕಸ್ಮಿಕದಲ್ಲಿ ಭಾರೀ ನಷ್ಟ ಸಂಭವಿಸಿದ ಸ್ವಸ್ತಿಕ್ ಆಟೋ ಗ್ಯಾರೇಜ್ ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸೋಮವಾರ ಭೇಟಿ ನೀಡಿದರು. ಗ್ಯಾರೇಜ್ ಮಾಲಕರೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡು ಸಾಂತ್ವನ. ಹೇಳಿದರು.

ಬಿಜೆಪಿಗರ ಅಕ್ರಮ , ಅನಧಿಕೃತ ದಂಧೆಗಳಿಗೆ ಕಡಿವಾಣ ಬೀಳುವ ಭಯದಿಂದ ಬೆಳ್ತಂಗಡಿ ಪೋಲಿಸ್ ಉಪ ವಿಭಾಗವನ್ನು  ಶಾಸಕ ಹರೀಶ್ ಪೂಂಜಾ ವಿರೋಧಿಸುತ್ತಿದ್ದಾರೆ. ರಕ್ಷಿತ್ ಶಿವರಾಂ

0

ಬೆಳ್ತಂಗಡಿ.ಪೋಲಿಸ್ ಇಲಾಖೆಯಲ್ಲಿ ಜನಸಾಮಾನ್ಯರಿಗೆ ತ್ವರಿತವಾಗಿ ನ್ಯಾಯ ಸಿಗುವಂತಾಗಲು ಮತ್ತು ಪೋಲಿಸ್ ಇಲಾಖೆಯ ವಿಸ್ತರಣೆಯ ಭಾಗವಾಗಿ ರಾಜ್ಯ ಸರ್ಕಾರ ಬೆಳ್ತಂಗಡಿ ಪೋಲಿಸ್ ಉಪ ವಿಭಾಗ ಮಂಜೂರುಗೊಳಿಸಿದ್ದು , ಅದನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸಲು ಬಿಡುವುದಿಲ್ಲ. ಬಿಜೆಪಿಗರ ಅಕ್ರಮ , ಅನಧಿಕೃತ ದಂಧೆಗಳಿಗೆ ಕಡಿವಾಣ ಬೀಳುವ ಭಯದಿಂದ ಬೆಳ್ತಂಗಡಿ ಪೋಲಿಸ್ ಉಪ ವಿಭಾಗವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮತ್ತು ಬಿಜೆಪಿಗರು ವಿರೋಧಿಸುತ್ತಿದ್ದಾರೆ ಎಂದು ಕೆ.ಪಿಸಿಸಿ‌ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆರೋಪಿಸಿದ್ದಾರೆ. ಪೋಲಿಸ್ ಇಲಾಖೆಯ ಬಲವರ್ಧನೆ ಮತ್ತು ವಿಸ್ತರಣೆಯ ಭಾಗವಾಗಿ ರಾಜ್ಯ ಸರ್ಕಾರ ಬೆಳ್ತಂಗಡಿ ಪೋಲಿಸ್...

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಹಾಗೂ ಅಕ್ರಮ ಶಸ್ತ್ರಾಸ್ತ್ರ ಪ್ರಕರಣ; ಇಂದು ಹೈಕೋರ್ಟ್ ನಲ್ಲಿ ವಿಚಾರಣೆ

0

ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಅವರು ಸಲ್ಲಿಸಿರುವ ಎರಡು ಮಹತ್ವದ ಅರ್ಜಿಗಳು ರಾಜ್ಯ ಉಚ್ಚನ್ಯಾಯಾಲಯ ದಲ್ಲಿ ಸೋಮವಾರ ವಿಚಾರಣೆಗೆ ಬರಲಿದ್ದು ನ್ಯಾಯಾಲಯದ ತೀರ್ಪು ಮಹೇಶ್ ಶೆಟ್ಟಿ ತಿಮರೋಡಿ ಅವರ ಪಾಲಿಗೆ ಅತ್ಯಂತ ಮಹತ್ವದ್ದಾಗಲಿದೆ.ಮಹೇಶ್ ಶೆಟ್ಟಿ ಅವರನ್ನು ಗಡಿಪಾರು ಮಾಡಿ ಪುತ್ತೂತು ಸಹಾಯಕ ಕಮಿಷನರ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ನೀಡಿರುವ ಅರ್ಜಿ ಮತ್ತು ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ರದ್ದು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನ17ರಂದು ನಡೆಯಲಿದೆ.ರೌಡಿಶೀಟರ್ ಆಗಿರುವ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಒಂದು ವರ್ಷಗಳ ಕಾಲ...

ಬೆಳ್ತಂಗಡಿ ವಕೀಲರ ಸಂಘದ ಚುನಾವಣೆ; ಅಧ್ಯಕ್ಷರಾಗಿ ಅಲೋಶಿಯಸ್ ಲೋಬೋ ಆಯ್ಕೆ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಚುನಾವಣೆಯು ನ.15ರಂದು ಬೆಳ್ತಂಗಡಿ ವಕೀಲರ ಭವನದಲ್ಲಿ ನಡೆದಿದ್ದು ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಅಲೋಶಿಯಸ್ ಲೋಬೋ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಸ್ಪರ್ಧಿಗಳ ಅಂತಿಮ ಫಲಿತಾಂಶ ಈರೀತಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಅಲೋಶಿಯಸ್ ಎಸ್. ಲೋಬೊ ಮತ್ತು ಕೇಶವ ಪಿ. ನಾಮಪತ್ರ ಸಲ್ಲಿಸಿದ್ದು ಇವರೀರ್ವರಲ್ಲಿ ಅಲೋಶಿಯಸ್ ಎಸ್. ಲೋಬೊ 72 ಮತಗಳನ್ನು ಪಡೆದು ಗೆಲುವನ್ನು ಸಾಧಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕೇಶವ ಪಿ ಕೇವಲ 48 ಮತಗಳನ್ನು ಪಡೆದು 24 ಮತಗಳ ಅಂತರದಲ್ಲಿ ಸೋಲನ್ನು ಕಂಡಿದ್ದಾರೆ.ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹರಿಪ್ರಕಾಶ್ ಪಿ.ಎನ್ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದ...

ಬೆಳ್ತಂಗಡಿ; ನಗರದ ಹಳೆಕೋಟೆಯ ಸ್ವಸ್ತಿಕ್ ಗ್ಯಾರೇಜ್ ನಲ್ಲಿ ಬೆಂಕಿ ಆಕಸ್ಮಿಕ; ಲಕ್ಷಾಂತರ ನಷ್ಟ

0

ಬೆಳ್ತಂಗಡಿ; ನಗರದ ಹಳೆಕೋಟೆ ಬಳಿ ಕಾರ್ಯನಿರ್ವಹಿಸುತ್ತಿರುವ ಸ್ವಸ್ತಿಕ್ ಅಟೋ ಗ್ಯಾರೇಜ್ ನಲ್ಲಿ ಭಾನುವಾರ ರಾತ್ರಿಯ ವೇಳೆ ಬೆಂಕಿ ಆಕಸ್ಮಿಕ ಸಂಭವಿಸಿದ್ದು ಲಕ್ಷಾಂತರ ನಷ್ಟವುಂಟಾಗಿದೆ.ಗ್ಯಾರೇಜ್ ನ ಒಳಗೆ ಕಾಣಿಸಿಕೊಂಡ ಬೆಂಕಿ ವೇಗವಾಗಿ ವ್ಯಾಪಿಸಿದ್ದು ಗ್ಯಾರೇಜ್ ನಲ್ಲಿ ಇದ್ದ ಸಮಾಗ್ರಿಗಳು ಹಾಗೂ ವಾಹನಗಳಿಗೆ ಹೊತ್ತಿಕೊಂಡಿದ್ದು ವ್ಯಾಪಕ ನಷ್ಟಕ್ಕೆ ಕಾರಣವಾಗಿದೆ. ರಾಘವೇಂದ್ರ ಪೂಜಾರಿ ಎಂಬವರಿಗೆ ಸೇರಿದ ಗ್ಯಾರೇಜ್ ಇದಾಗಿದ್ದು ಗ್ಯಾರೇಜ್ ನಲ್ಲಿ ನಿಲ್ಲಿಸಿದ್ದ ವಾಹನವೊಂದರ ಬ್ಯಾಟರಿ ದೋಷದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅನುಮಾನಿಸಲಾಗಿದೆ.ಈ ಬಗ್ಗೆ ಇನ್ನೂ ಸರಿಯಾದ ಮಾಹಿತಿಗಳು ಲಭ್ಯವಾಗಿಲ್ಲ. ಅಗ್ನಿ ಶಾಮಕ ದಳದವರು ಪೊಲೀಸರು ಸ್ಥಳಕ್ಕೆ...

ಬೆಳ್ತಂಗಡಿ : ಕುತ್ರೋಟ್ಟು ನಿಯಂತ್ರಣ ತಪ್ಪಿ ಆಟೋ ಪಲ್ಟಿ; ಓರ್ವ ಬಾಲಕ ಸಾವು ; ಹಲವಾರು ಮಂದಿಗೆ ಗಾಯ

0

ಬೆಳ್ತಂಗಡಿ : ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿ ಓರ್ವ ಬಾಲಕ ಸಾವನ್ನಪ್ಪಿದ್ದು. ನಾವೂರಿನ ಶಶಿ ಎಂಬವರ ಆಟೋದಲ್ಲಿದ್ದ ಐದು ಮಂದಿಗೆ ಗಾಯವಾದ ಘಟನೆ ನ.16 ರಂದು ರಾತ್ರಿ ಬೆಳ್ತಂಗಡಿ ತಾಲೂಕಿನ ನಡ  ಗ್ರಾಮದ ಕುತ್ರೋಟ್ಟು - ಟಿ.ಬಿ.ಕ್ರಾಸ್ ರಸ್ತೆಯ ಹೊಕ್ಕಿಲ ಎಂಬಲ್ಲಿ ನಡೆದಿದೆ. ಆಟೋದಲ್ಲಿದ್ದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುಂಡಡ್ಕ ನಿವಾಸಿ ಗಣೇಶ್ ಪುತ್ರ ತನ್ವಿತ್(12) ಮೃತಪಟ್ಟ ಬಾಲಕನಾಗಿದ್ದಾನೆ. ಆಟೋ ಪಲ್ಟಿಯಾದ ರಭಸಕ್ಕೆ ಗಾಯಗೊಂಡಿದ್ದ ತನ್ವಿತ್ ನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆಟೋದಲ್ಲಿದ್ದ ಐದು ಮಂದಿಗೆ ಗಾಯವಾಗಿದ್ದು ಅವರನ್ನು...

ರಸ್ತೆ ದಾಟುತ್ತಿದ್ದ ಕಾಡಾನೆಗೆ ಕಾರು ಡಿಕ್ಕಿ ಕಾರಿನ ಮೇಲೆ ಬಿದ್ದ ಆನೆ ಪ್ರಯಾಣಿಕರು ಅಪಾಯದಿಂದ ಪಾರು

0

ಚಿಕ್ಕಮಗಳೂರು: ಎನ್.ಆರ್.ಪುರ-ಬಾಳೆಹೊನ್ನೂರು ರಾಜ್ಯ ಹೆದ್ದಾರಿಯ 9ನೇ ಮೈಲಿಕಲ್ಲು ಬಳಿ ಶನಿವಾರ ರಾತ್ರಿ ರಸ್ತೆ ದಾಟುತ್ತಿದ್ದ ಕಾಡಾನೆಗೆ ಕಾರು ಢಿಕ್ಕಿ ಹೊಡೆದ ಘಟನೆ ನಡೆದಿದೆ. ಬುರುಗಮನೆ ಗ್ರಾಮದ ಸಮೀಪದ 9ನೇ ಮೈಲಿ ಅರಣ್ಯ ಪ್ರದೇಶ (ಚಿಕ್ಕ ಅಗ್ರಹಾರ ಅರಣ್ಯ ವ್ಯಾಪ್ತಿ)ದಲ್ಲಿ ಎರಡು ಕಾಡಾನೆಗಳು ರಸ್ತೆ ದಾಟುತ್ತಿದ್ದ ವೇಳೆ ಘಟನೆ ನಡೆದಿದೆ. ಢಿಕ್ಕಿಯ ರಭಸಕ್ಕೆ ಕಾಡಾನೆ ನೇರವಾಗಿ ಕಾರಿನ ಮೇಲೆಯೇ ಬಿದಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ವಾಹನದ ಮೇಲೆ ಬಿದ್ದ ಕಾಡಾನೆ ಯಾವುದೇ ದಾಳಿ ಮಾಡದೆ ಎದ್ದು ಅರಣ್ಯದೊಳಕ್ಕೆ ಹಿಂತಿರುಗಿದೆ. ಕಾರಿನಲ್ಲಿದ್ದವರು ಅಪಾಯದಿಂದ‌ಪಾರಾಗಿದ್ದಾರೆ ಘಟನೆಯ ಕುರಿತು...

ಉಜಿರೆಯಲ್ಲಿ ನರ್ಸಿಂಗ್ ಕಾಲೇಜು ಕೃಷಿ ಕಾಲೇಜು ಸ್ಥಾಪನೆ ಡಿ.ವೀರೇಂದ್ರ ಹೆಗ್ಗಡೆಯವರಿಂದ ಘೋಷಣೆ

0

ಉಜಿರೆ: ಧರ್ಮಸ್ಥಳದ ವತಿಯಿಂದ ಉಜಿರೆಯಲ್ಲಿ ಈ ವರ್ಷ ನರ್ಸಿಂಗ್ ಕಾಲೇಜು ಪ್ರಾರಂಭಿಸಲಾಗುವುದು. ನೂರು ಎಕರೆ ಪ್ರದೇಶದಲ್ಲಿ ಕೃಷಿ ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು. ಕೃಷಿ ಕಾಲೇಜಿಗಾಗಿ ನೂರು ಎಕರೆ ಪ್ರದೇಶ ದೊರಕಿದಲ್ಲಿ ತಕ್ಷಣ ಕಾಲೇಜು ಸ್ಫಾಪನೆಯ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಹೆಗ್ಗಡೆಯವರು ಹೇಳಿದರು.ಲಕ್ಷದೀಪೋತ್ಸವ ಪ್ರಾರಂಭದ ದಿನವಾದ ಶನಿವಾರ ಉಜಿರೆಯಿಂದ ಧರ್ಮಸ್ಥಳಕ್ಕೆ ಬಂದ ಸಾವಿರಾರು ಪಾದಯಾತ್ರಿಗಳನ್ನು ಅಮೃತವರ್ಷಿಣಿ ಸಭಾ ಭವನದಲ್ಲಿ ಉದ್ದೇಶಿಸಿ ಅವರು ಮಾತನಾಡಿದರು.ತನ್ನ ಬಗ್ಗೆ ಹಾಗೂ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಭಕ್ತರು, ಅಭಿಮಾನಿಗಳು ಹಾಗೂ...

ಎಸ್ಐಟಿ ಅಧಿಕಾರಿಗಳ ವಿರುದ್ಧ ಬೆಳ್ತಂಗಡಿ ಠಾಣೆಗೆ ಜಯಂತ್ ಟಿ ದೂರು

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತಿಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳ ವಿರುದ್ಧವೇ ಬೆಳ್ತಂಗಡಿ ಠಾಣೆಗೆ ಜಯಂತ್ ಟಿ ಅವರು ದೂರು ನೀಡಿದ್ದಾರೆ.ಸೌಜನ್ಯ ಪರ ಹೋರಾಟಗಾರ ಟಿ ಜಯಂತ್ ಅವರು ಎಸ್ಐಟಿ ಅಧಿಕಾರಿಗಳ ವಿರುದ್ಧ ಇದೀಗ ದೂರು ದಾಖಲಿಸಿದ್ದಾರೆ ಎಸ್‌ಐಟಿ ಅಧಿಕಾರಿಗಳಾದ ಜಿತೇಂದ್ರ ದಯಾಮ, ಎಸ್.ಪಿ. ಸೈಮನ್, ಡಿವೈಎಸ್ಪಿ ಆರ್ ಜಿ. ಮಂಜುನಾಥ, ಇನ್ಸೆಕ್ಟ‌ರ್ ಮಂಜುನಾಥ ಗೌಡ, ಸಬ್ ಇನ್‌ಸ್ಪೆಕ್ಟ‌ರ್ ಗುಣಪಾಲ್ವಿರುದ್ಧ ದೂರು ನೀಡಿದ್ಧಾರೆ. ವಿಚಾರಣೆ ಸಂದರ್ಭದಲ್ಲಿ ದೈಹಿಕ ಹಲ್ಲೆ, ಪ್ರಾಣ ಬೆದರಿಕೆ, ಅಪರಾಧಿಕ ಪಿತೂರಿ, ಸುಳ್ಳು ಸಾಕ್ಷಿ ಹೇಳುವಂತೆ ಒತ್ತಾಯ...

ಬಿ.ಸಿ ರೋಡ್ ಭೀಕರ ಅಪಘಾತ ಮೂವರು ಮೃತ್ಯು

0

ಬೆಳ್ತಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಬಿ.ಸಿ ರೋಡ್ ನಾರಾಯಣ ಗುರು ವೃತ್ತಕ್ಕೆ ಇನ್ನೋವಾ ಕಾರು ಡಿಕ್ಕಿಹೊಡೆದು ಮೂವರು ಮೃತಪಟ್ಟು ಹಲವರು ಗಾಯಗೊಂಡ ಘಟನೆ ನ15ರಂದು ಬೆಳಗ್ಗಿನ ಜಾವ ನಡೆದಿದೆ. ಬೆಂಗಳೂರು ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ KA 02 AE 6146 ನೊಂದಣಿ ಸಂಖ್ಯೆಯ ಇನ್ನೋವಾ ಕಾರು, ಚಾಲಕನ ನಿಯಂತ್ರಣ ತಪ್ಪಿ ಬಂಟ್ವಾಳ ಬಿ.ಸಿ. ರೋಡ್ ಬಳಿ, ನಾರಾಯಣ ಗುರು ವೃತ್ತಕ್ಕೆ ಡಿಕ್ಕಿಯಾಗಿರುತ್ತದೆ. ಅಪಘಾತದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 09 ಜನರ ಪೈಕಿ, ಬೆಂಗಳೂರು ನಿವಾಸಿಗಳಾದ ರವಿ (64), ನಂಜಮ್ಮ (75), ರಮ್ಯಾ.(23)...