ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಕುಸಿದು ಬಿದ್ದು ಅರಸಿನಮಕ್ಕಿಯ ಬಾಲಕೃಷ್ಣ ಆಚಾರ್ಯ ಸಾವು

0

ಬೆಳ್ತಂಗಡಿ; ನಗರದ ಬಸ್ ನಿಲ್ದಾಣದ ಸಮೀಪದ ವೈನ್ ಶಾಪ್ ಬಳಿ ಸೋಮವಾರ ಸಂಜೆ ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ಉಪ್ಪರಡ್ಕ ನಿವಾಸಿ ಬಾಲಕೃಷ್ಣ ಆಚಾರ್ಯ (69) ಎಂಬವರು ಕುಸಿದು ಕುಳಿತಲ್ಲಿಯೇ ಮೃತಪಟ್ಟ ಘಟನೆ ಸಂಭವಿಸಿದೆ. ಸ್ಥಳೀಯರು ವೈನ್ ಶಾಪ್ ಸಮೀಪ ವೃದ್ಧರೊಬ್ಬರು ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿ ಮಾಹಿತಿ ನೀಡಿದ್ದು ಪರಿಶೀಲನೆ ನಡೆಸಿದಾಗ ಅವರು ಮೃತಪಟ್ಟಿರುವುದು ತಿಳಿದುಬಂದಿದೆ. ಮೃತರ ಶರ್ಟ್‌ನ ಕಿಸೆಯಲ್ಲಿ ಪತ್ತೆಯಾದ ಆಧಾರ್ ಕಾರ್ಡ್ ಆಧರಿಸಿ ಅವರ ಗುರುತನ್ನು ಬಾಲಕೃಷ್ಣ ಆಚಾರ್ಯ ಎಂದು ಪತ್ತೆಹಚ್ಚಲಾಯಿತು. ಬಳಿಕ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಬೆಳ್ತಂಗಡಿ ಸರ್ಕಾರಿ...

ಜು.8ರಿಂದ ಗಡಾಯಿಕಲ್ಲು ಚಾರಣ ನಿಷೇಧ

0

ಬೆಳ್ತಂಗಡಿ : ನಿರಂತರವಾಗಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಡ ಗ್ರಾಮದ ಗಡಾಯಿಕಲ್ಲು ಚಾರಣ ನಡೆಸುವುದು ಅಪಾಯಕಾರಿಯಾಗಿರುವ ಕಾರಣ ಜು. 8 ರಿಂದ ಮುಂದಿನ ಆದೇಶದ ವರೆಗೆ ಗಡಾಯಿಕಲ್ಲು ಚಾರಣಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ಇಲಾಖೆಯ ಅಧಿಕಾರಿಗಳು ಜು.6 ರಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಶಿಲ ಭಾರೀ ಮಳೆಗೆ ರಸ್ತೆಗೆ ಬಿದ್ದ ಮರ “ಶೌರ್ಯ” ತಂಡದಿಂದ ತೆರವು

0

ಕೊಕ್ಕಡ: ಭಾರೀ ಗಾಳಿ-ಮಳೆಯಿಂದ ಶಿಶಿಲ ಅರಸಿನಮಕ್ಕಿ ಭಾಗದಲ್ಲಿ ರಸ್ತೆ ಹಾಗೂ ವಿದ್ಯುತ್ ತಂತಿ ಮೇಲೆ ಮರ ಉರುಳಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಮರ ಬಿದ್ದ ಪರಿಣಾಮ ಕೆಲಕಾಲ ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದರು.ಮಾಹಿತಿ ತಿಳಿಯುತ್ತಿದ್ದಂತೆಯೇ ಶೌರ್ಯ ವಿಪತ್ತು ನಿರ್ವಹಣಾ ಘಟಕ ಶಿಶಿಲ ಅರಸಿನಮಕ್ಕಿ ಸದಸ್ಯರು ಸ್ಥಳಕ್ಕೆ ಧಾವಿಸಿ, ಮರವನ್ನು ಸುರಕ್ಷಿತವಾಗಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಜೊತೆಗೆ ವಿದ್ಯುತ್‌ ತಂತಿಗಳಿಗೆ ಯಾವುದೇ ಹೆಚ್ಚಿನ ಹಾನಿಯಾಗದಂತೆ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಾಚರಣೆಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಕಿರಣ್,...

ಧರ್ಮಸ್ಥಳ; ಹದಗೆಟ್ಟ  ಅಜಿಕುರಿ ರಸ್ತೆ‌, ದುರಸ್ತಿಗೆ ಒತ್ತಾಯಿಸಿ ಜು.7 ಪ್ರತಿಭಟನೆ

0

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ‌ ನೇತ್ರಾವತಿ‌ ಸ್ನಾನಘಟ್ಟದಿಂದ ಅಜಿಕುರಿ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ವಾಹನಗಳ ಹಾಗೂ ಜನರ ಸಂಚಾರ ಅಸಾಧ್ಯವಾಗಿದೆ. ರಸ್ತೆಯಲ್ಲಿ ದೊಡ್ಡ ಹೊಂಡಗಳೇ ಬಿದ್ದಿದ್ದು ಕನಿಷ್ಟ ದುರಸ್ತಿಗೂ ಮುಂದಾಗದ ಹಿನ್ನಲೆಯಲ್ಲಿ ಸ್ಥಳೀಯ ನಿವಾಸಿಗಳು ರಿಕ್ಷಾ ಚಾಲಕರು ಒಟ್ಟಾಗಿ ಜು 7 ಮಂಗಳವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.ನೇತ್ರಾವತಿ ಸ್ನಾನಘಟ್ಟದಿಂದ ಅಜಿಕುರಿ ಮಾರ್ಗವಾಗಿ ದಿಡುಪೆ- ಪೈಚಾರು ರಾಜ್ಯಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಕಳೆದ 5 ವರ್ಷಗಳಿಂದ ಸಂಪೂರ್ಣ ಹದಗೆಟ್ಟ ರೀತಿಯಲ್ಲಿದ್ದು ವರ್ಷದ ಹಿಂದೆಯೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಆಗ...

ನಮ್ಮೂರಿಗೂ ಬಂದ ವಿಶ್ವಕಪ್ ಫುಟ್ಬಾಲ್ ಪ್ರೀತಿ ಧರ್ಮಸ್ಥಳದಲ್ಲಿ ರಾರಾಜಿಸುತ್ತಿದೆ ಮೆಸ್ಸಿ, ರೊನಾಲ್ಡೊ ಫ್ಲೆಕ್ಸ್ ಗಳು

0

ಬೆಳ್ತಂಗಡಿ; ಜಗತ್ತಿನೆಲ್ಲೆಡೆ ಫುಟ್ಬಾಲ್ ಹುಚ್ಚು ಹಿಡಿಸಿತ್ತಿದೆ ನಮ್ಮ ದೇಶ ಈ ವಿಶ್ವಕಪ್ ನಲ್ಲಿ ಆಡುವ ಅವಕಾಶ ಪಡೆದುಕೊಳ್ಳದಿದ್ದರೂ ನಮ್ಮಲ್ಲಿಯೀ ಫುಟ್ಬಾಲ್ ಪ್ರೀತಿಗೇನು ಕಡಿಮೆಯಿಲ್ಲ ಗ್ರಾಮೀಣಪ್ರದೇಶವಾದ ಧರ್ಮಸ್ಥಳ ದಲ್ಲಿಯು ಮೆಸ್ಸಿ ರೊನಾಲ್ಡೊ ಫ್ಲೆಕ್ಸ್ ಗಳು ರಾರಾಜಿಸುತ್ತಿದೆ. ಇವರಿಬ್ಬರಿಗಿಗೂ ಇಲ್ಲಿಯೂ ಅಭಿಮಾನಿಗಳ ಪಡೆಯೇ ಇದೆ.ಮೆಸ್ಸಿ ಅಭಾಮಾನಿಗಳು ರೊನಾಲ್ಡೊ ಅಭಿಮಾನಿಗಳು ಧರ್ಮಸ್ಥಳ ಕಲ್ಲೇರಿಯಲ್ಲಿ ಫ್ಲೆಕ್ಸ್ ಗಳನ್ನು ಸ್ಥಾಪಿಸುವ  ಮೂಲಕ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಈಮೂಲಕ ಭಾರತದಲ್ಲಿ ಕ್ರಿಕೆಟ್ ಗೆ ಮಾತ್ರವಲ್ಲ ಫುಟ್ಬಾಲಿಗೂ ಅಭಿಮಾನಿಗಳಿದ್ದಾರೆ ಎಂಬಯದನ್ನು ತೋರಿಸುತ್ತಿದ್ದಾರೆ.ಧರ್ಮಸ್ಥಳದ ಫುಟ್ಬಾಲ್ ಪ್ರೇಮಿ ಯುವಕರಾದ ಅಭಿದೇವ್ ಅರಿಗ, ಅಖಿಲ್ ಥೋಮಸ್, ಅನ್ವಿತ್...

ವೇಣೂರು;ದ್ವಿಚಕ್ರ ವಾಹನಕ್ಕೆ ಗೂಡ್ಸ್ ರಿಕ್ಷಾ ಡಿಕ್ಕಿ; ಓರ್ವ ಸಾವು, ಮತ್ತೋರ್ವ ಗಂಭೀರ

0

ಬೆಳ್ತಂಗಡಿ: ದ್ವಿಚಕ್ರ ವಾಹನಕ್ಕೆ ಗೂಡ್ಸ್ ರಿಕ್ಷಾ ಡಿಕ್ಕಿಯೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಯ ಹೆದ್ದಾರಿ ನಿಟ್ಟಡೆ ಬಳಿ ಜು. 5ರ ರಾತ್ರಿ ನಡೆದಿದೆ.ವೇಣೂರು ಗ್ರಾ.ಪಂ. ವ್ಯಾಪ್ತಿಯ ಕರಿಮಣೇಲು ಗ್ರಾಮದ ಗಾಂಧಿನಗರ ತಿಮರಡ್ಡ ಮನೆ ನಿವಾಸಿ ರವೀಂದ್ರ ಮೂಲ್ಯ (೪೭) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಅವರ ಸಹೋದರ ಜಗದೀಶ್ ಮೂಲ್ಯ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾರೆ ಕೆಲಸ ಮಾಡಿಕೊಂಡಿದ್ದ ಸಹೋದರರು ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಗುರುವಾಯನಕೆರೆಯಿಂದ ವೇಣೂರು ಕಡೆಗೆ ಬರುತ್ತಿದ್ದ ವೇಳೆ ವೇಣೂರಿನಿಂದ...

ಬಂಟ್ವಾಳ; ಅಪ್ರಾಪ್ತ ಬಾಲಕಿ ಮೇಲೆ ಮಚ್ಚಿನಿಂದ ಹಲ್ಲೆ ಆರೋಪಿ ಬಂಧನ

0

ಬಂಟ್ವಾಳ; ಕಾಲೇಜಿಗೆ ಹೋಗಲು ಬಸ್ ಕಾಯುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಯುವಕನೋರ್ವ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದ್ದು ಗಾಯಾಳು ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ‌ ಆರೋಪಿ ಜವ್ವಾರ್ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಬೆಳಗ್ಗೆ ಸಮಯ ಸುಮಾರು 08.45 ಗಂಟೆಗೆ ಅಪ್ರಾಪ್ತ ಬಾಲಕಿಯು (17) ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಂಟ್ವಾಳ ಮೊಂತಿಮಾರು ಬಸ್ ನಿಲ್ದಾಣದ ಬಳಿ ಕಾಲೇಜಿಗೆ ತೆರಳುವರೇ ನಿಂತಿದ್ದಾಗ, ಸ್ಥಳಕ್ಕೆ ಬಂದ ಆರೋಪಿ ಬಂಟ್ವಾಳ ಮಂಚಿ ನಿವಾಸಿ ಮೊಹಮ್ಮದ್ […]

ವಿಶ್ವಕಪ್ ನಿಂದ ಹೊರಬಿದ್ದ ಬ್ರೆಜಿಲ್  ನಾರ್ವೆ ಹಾಗೂ ಇಂಗ್ಲೆಂಡ್ ಮುಂದಿನ ಹಂತಕ್ಕೆ

0

ನ್ಯೂಜೆರ್ಸಿ: 2026ರ ಫಿಫಾ ವಿಶ್ವಕಪ್‌ನ ಪ್ರಿ-ಕ್ವಾರ್ಟ‌್ರಫೈನಲ್ಪಂದ್ಯದಲ್ಲಿ ನಾರ್ವೆ ವಿರುದ್ಧ ಬ್ರೆಜಿಲ್ ತಂಡ ಆಘಾತಕಾರಿ ಸೋಲು ಅನುಭವಿಸಿದೆ. ಈ ಬೆನ್ನಲ್ಲೇ ಬ್ರೆಜಿಲ್‌ನ ಸ್ಟಾರ್ ಆಟಗಾರ ನೇಮಾರ್ ಜೂನಿಯ‌ರ್ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ನಾರ್ವೆ ತಂಡ 2-1 ಗೋಲುಗಳ ಅಂತರದಿಂದ ಬ್ರೆಜಿಲ್‌ಗೆ ಮಣ್ಣು ಮುಕ್ಕಿಸಿತು. ಪಂದ್ಯದ ಕೊನೆಯ ಕ್ಷಣದಲ್ಲಿ ಬ್ರೆಜಿಲ್ ಪರ ನೇಮಾರ್ ಪೆನಾಲ್ಟಿ ಮೂಲಕ ಏಕೈಕ ಗೋಲು ಗಳಿಸಿದರಾದರೂ ತಂಡವನ್ನು ಸೋಲಿನಿಂದ ರಕ್ಷಿಸಲು ಸಾಧ್ಯವಾಗಲಿಲ್ಲ. ನಾರ್ವೆಯ ಯುವ ಆಟಗಾರ ಹಾಲೆಂಡ್ ಅವರ ಅವಳಿ ಗೋಲುಗಳು ಬ್ರೆಜಿಲ್...

ಪುತ್ತೂರಿನ ಜಿಮ್ ಟ್ರೈನರ್ ಮಡಂತ್ಯಾರು ಮೂಲದ ಸಚಿನ್‌ರೈ ಕುಸಿದು ಬಿದ್ದು ಸಾವು

0

ಪುತ್ತೂರು: ಜಿಮ್ ಟ್ರೈನರ್ ಆಗಿ ಗುರುತಿಸಿಕೊಂಡಿದ್ದ ಸಚಿನ್ ರೈ ಇಂದು ಮುಂಜಾನೆ ಆಕಸ್ಮಿಕವಾಗಿ ಕುಸಿದು ಬಿದ್ದು ನಿಧನರಾಗಿದ್ದಾರೆ. ಮಡಂತ್ಯಾರು ನಿವಾಸಿಯಾಗಿದ್ದ ಇವರು ಪ್ರಸ್ತುತ ಪುತ್ತೂರಿನ ಕಲ್ಲಿಮಾರ್‌ನಲ್ಲಿ ವಾಸವಿದ್ದರು. ಇಂದು ಮುಂಜಾನೆ ಸಚಿನ್ ರೈ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಳ್ತಂಗಡಿ: ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿ ಬಂಧನ

0

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 2018ರಲ್ಲಿ ದಾಖಲಾಗಿದ್ದ (ಕ್ರೈಂ ನಂ. 164/2018) ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳೂರು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಎಸ್‌.ಸಿ. ನಂ. 68/2022 ಪ್ರಕರಣದ ವಿಚಾರಣೆಗೆ ಸುಮಾರು ನಾಲ್ಕು ತಿಂಗಳಿನಿಂದ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಕೆಂಪಕೋಡಿ ನಿವಾಸಿ ಕುಂಯಾ ಅವರ ಪುತ್ರ ಆನಂದ (40) ಎಂದು ಗುರುತಿಸಲಾಗಿದೆ. ಈ ಪ್ರಕರಣವು ಐಪಿಸಿ ಕಲಂ 341, 324, 504, 506, 307 ಹಾಗೂ 34ರ...