ನೆರಿಯ ಎಸ್ಟೇಟ್ ನಲ್ಲಿ ಕಾಣಿಸಿಕೊಂಡ ಚಿರತೆ ಜನರಲ್ಲಿ ಆತಂಕ
ಬೆಳ್ತಂಗಡಿ: ನೆರಿಯ ಗ್ರಾಮದ ಎಸ್ಟೇಟ್ ನಲ್ಲಿ ಚಿರತೆ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.ಕಾರಿನಲ್ಲಿ ಹೋಗುತ್ತಿದ್ದ ವೇಳೆ ಎಸ್ಟೇಟ್ ಒಳಗೆ ದೊಡ್ಡಗಾತ್ರದ ಚಿರತೆ ಕಾಣಿಸಿದೆ, ಜನರನ್ನು ನೋಡಿ ಚಿರತೆ ಒಳಕಾಡಿನತ್ತ ಓಡಿದೆ.ಕೆಲವು ತಿಂಗಳುಗಳ ಹಿಂದೆ ನೆರಿಯದ ಇದೇ ಪರಿಸರದಲ್ಲಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕರಿಗೆ ಚಿರತೆ ಕಾಣಿಸಿಕೊಂಡಿತ್ತು. ತಾಲೂಕಿನಲ್ಲಿ ನಿರಂತರ ಚರತೆಯ ಹಾವಳಿ;ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಚಿರತೆಹಾವಳಿ ನಿರಂತರವಾಗಿ ಮುಂದುವರಿದಿದೆ. ಕೆಲ ದಿನಗಳ ಹಿಂದೆ ಬೆಳಾಲು ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಚಾರ್ಮಾಡಿ ಘಾಟಿಯಲ್ಲಿ ಚಿರತೆ ಕಾಣಿಸಿಕೊಂಡು ವಾಹನ ಸವಾರರಲ್ಲಿ ಆತಂಕಮೂಡಿಸಿತ್ತು. ಮುಂಡಾಜೆ, ಕಲ್ಮಂಜ ಪರಿಸರದಲ್ಲಿಯೂ ನಿರಂತರ...
ಬೆಳ್ತಂಗಡಿ : ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ವರ್ಗಾವಣೆ ಆರ್ ಎಫ್ ಓ ಆಗಿ ಮಹೇಶ್ ದೇವಾಡಿಗ ಅಧಿಕಾರ ಸ್ವೀಕಾರ
ಬೆಳ್ತಂಗಡಿ : 19 ಮಂದಿ ಅರಣ್ಯಾಧಿಕಾರಿಗಳನ್ನು (RFO) ಸರಕಾರ ವರ್ಗಾವಣೆ ಮಾಡಿ ಆದೇಶ ಮಾಡಿದೆ.ಮಂಗಳೂರು ವಿಭಾಗದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯಾಗಿದ್ದ (RFO) ಟಿ. ಎನ್. ತ್ಯಾಗರಾಜ್ ಅವರನ್ನು ಬೆಂಗಳೂರು ಗ್ರೇಟರ್ ಪ್ರಾಧಿಕಾರ (ಕೇಂದ್ರ ವಲಯ) ಕ್ಕೆ ವರ್ಗಾವಣೆ ಮಾಡಲಾಗಿದ್ದು. ತೆರವಾದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ(RFO) ಜಾಗಕ್ಕೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಭಾಗದ ಕ್ಯಾದಗಿ ವಲಯ ಅರಣ್ಯಾಧಿಕಾರಿ ಮಹೇಶ್ ಎಂ ದೇವಾಡಿಗ ಅವರನ್ನು ನೇಮಕ ಮಾಡಿ ಬೆಂಗಳೂರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೇ.28 ರಂದು ಆದೇಶ ಹೊರಡಿಸಿದ್ದರು. ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯಾಗಿದ್ದ ಟಿ....
ಬಿ.ಸಿ ರೋಡ್ ಕೊಲೆ ಪ್ರಕರಣ; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ ಚೇತನ್
ಬೆಳ್ತಂಗಡಿ : ಬಿಸಿರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯ ಅವರನ್ನು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ನಿವಾಸಿ ಚೇತನ್‌ನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಆದರೆ ಈ ವೇಳೆಗೆ ಆತ ಇಲಿಪಾಷಣ ಸೇವಿಸಿದ್ದ ಎನ್ನಲಾಗಿದ್ದು ಆತನನ್ನು ಇದೀಗ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.ಆರೋಪಿಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಇಂದು ಬೆಳಗ್ಗೆ ಆರೋಪಿಯನ್ನು ಪತ್ತೆಹಚ್ಚಿದ್ದರು ಈ ವೇಳೆ ಆತ ವಿಷ ಸೇವಿಸಿದ್ದ ಸ್ಥಿತಿಯಲ್ಲಿದ್ದ ಎನ್ನಲಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಆರೋಗ್ಯಾ ಸ್ಥಿತಿ ಬಗ್ಗೆ ಹೆಚ್ಚಿನ...
ಬಿ.ಸಿ ರೋಡ್ ಕೊಲೆ ಪ್ರಕರಣ ಆರೋಪಿಯ ಫೊಟೋ ತಿರುಚಿ ಭಜರಂಗದಳದ ವಿರುದ್ದ ಅಪಪ್ರಚಾರ ಆರೋಪ ಪ್ರಕರಣ ದಾಖಲು
ಬೆಳ್ತಂಗಡಿ; ಬಂಟ್ವಾಳ ತಾಲೂಕಿನ ಬಿಸಿ.ರೋಡ್ ನಲ್ಲಿ ಯುವತಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಪ್ರಕರಣದ ಆರೋಪಿ ಚೇತನ್ ನ ಫೊಟೋವನ್ನು ಎಡಿಟ್ ಮಾಡಿ ಕೇಸರಿ ಶಾಲು ಹಾಕಿ ಕುಂಕುಮ ಹಾಕಿ ಭಜರಂಗದಳದ ಮುಖಂಡಚೇತನ್ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಕೋಮು ಭಾವನೆಗಳನ್ನು ಕೆರಳಿಸಿ ಸಮಾಜದಲ್ಲಿ ಅಶಾಂತಿ ಹರಡಲು ಪ್ರಯತ್ನಿಸಿದ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ವಾಟ್ಸಾಪ್ ಗ್ರೂಪ್ ಗಳ ಹಾಗೂ ಇತರ ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.ಈ ಬಗ್ಗೆ ವಿಶ್ಚಹಿಂದೂ ಪರಿಷತ್ ಉಪಾಧ್ಯಕ್ಷಕೇಶವವ ಎಂಬವರು ಬಂಟ್ವಾಳ ಪೊಲೀಸರಿಗೆ ದೂರು ನೀಡಿದ್ದು ಅದರಂತೆ...
ಬಿ.ಸಿ ರೋಡ್ ಯುವತಿಯ ಕೊಲೆ ಪ್ರಕರಣ ಆರೋಪಿ ಬಂಧನ
ಬೆಳ್ತಂಗಡಿ : ಬಿಸಿರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯ ಅವರನ್ನು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ನಿವಾಸಿ ಚೇತನ್‌ನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.ಆರೋಪಿಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಇಂದು ಬೆಳಗ್ಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ಮಾಡಿದ ಬಳಿಕ ಈ ಉಪಯೋಗಿಸದ ಆಯುಧವನ್ನು ಅಲ್ಲಿಯೇ ಎಸೆದು ಪರಾರಿಯಾಗಿದ್ದ
ಯುವತಿ ಹತ್ಯೆ ಶಾಸಕ ಹರೀಶ್ ಪೂಂಜ ಖಂಡನೆ
ಬೆಳ್ತಂಗಡಿ, ಜು.16: ಬಂಟ್ವಾಳ ಕಕ್ಯೆಪದವಿನ ಅಮಾಯಕ ಯುವತಿಯ ಹತ್ಯೆಯನ್ಬು ಶಾಸಕ ಹರೀಶ್ ಪೂಂಜ ಖಂಡಿಸಿದ್ದಾರೆ. ಇಂತಹ ಘಟನೆಯು ಸಮಾಜದಲ್ಲಿ ಮತ್ತೆ ಮರುಕಳಿಸಬಾರದು. ಅರೋಪಿ ಯಾರೇ ಆಗಲಿ ತಕ್ಷಣ ಬಂದಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪೋಲಿಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಇಂತಹ ಪ್ರಕರಣದಲ್ಲಿ ಪೋಲಿಸ್ ಇಲಾಖೆ ಯಾವುದೇ ಒತ್ತಡಕ್ಕೆ ಒಳಗಾಗದೆ ಅರೋಪಿಯ ಮೇಲೆ ಕಠಿಣ ಕ್ರಮಕೈಗೊಳ್ಳ ಬೇಕು ಯುವತಿಯ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿ ಭಗವಂತ ನೀಡಲಿ. ಕುಟುಂಬದ ದುಖದೊಂದಿಗೆ ನಾನು ಇದ್ದೇನೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ
ಬಿಸಿ ರೋಡಿನಲ್ಲಿ ಯುವತಿಯ ಬರ್ಬರ ಹತ್ಯೆ ಖಂಡನೀಯ; ರಕ್ಷಿತ್ ಶಿವರಾಂ
ಬೆಳ್ತಂಗಡಿ: ಬಿ.ಸಿ ರೋಡಿನಲ್ಲಿ ನಡೆದ ಯುವತಿಯ ಬರ್ಬರ ಹತ್ಯೆ ಅತ್ಯಂತ ಅಮಾನವೀಯ ಹಾಗೂ ಖಂಡನೀಯ ಘಟನೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಹೇಯ ಕೃತ್ಯಗಳು ಸಮಾಜದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತವೆ. ಮಹಿಳೆಯರ ಸುರಕ್ಷತೆಯ ಕುರಿತು ಸಾರ್ವಜನಿಕರಲ್ಲಿ ಆತಂಕ ಮೂಡಿಸುವ ಇಂತಹ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ತಪ್ಪಿತಸ್ಥರನ್ನು ಕಾನೂನಿನ ಮುಂದೆ ತಂದು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಪ್ರಕರಣದ ಕುರಿತು ಪೊಲೀಸರು ತ್ವರಿತ ಹಾಗೂ ನಿಷ್ಪಕ್ಷಪಾತ...
ಬಂಟ್ವಾಳ : ಬಸ್ ನಿಲ್ದಾಣದಲ್ಲಿ ಯುವತಿಯ ಕೊಲೆ ಆರೋಪಿ ಬೆಳ್ತಂಗಡಿಯ ಚೇತನ್ ಗೌಡ ನಿಗಾಗಿ ಹುಡುಕಾಟ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ. ಸಿ. ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳ ಮೇಲೆ ಯುವಕನೋರ್ವ ಕತ್ತಿಯಿಂದ ಭೀಕರವಾಗಿ ದಾಳಿ ನಡೆಸಿ ಹತ್ಯೆ ಮಾಡಿ ಪರಾರಿಯಾಗಿರುವ ಆಘಾತಕಾರಿ ಘಟನೆ ಜು.16 ರಂದು ಸಂಜೆ ಸಂಭವಿಸಿದೆ. ಈ ಬಗ್ಗೆ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕೊಲೆ ಮಾಡಿದ ಯುವಕನ ಮಾಹಿತಿಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.ಪೊಲೀಸ್ ಮಾಹಿತಿ ಪ್ರಕಾರ ಕೊಲೆ ಮಾಡಿದ ಯುವಕ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಪುರುಷೋತ್ತಮ ಗೌಡ ಮಗ ಚೇತನ್ ಗೌಡ ಎಂಬುವುದಾಗಿ ಮಾಹಿತಿ ಲಭ್ಯವಾಗಿದೆ....
ಬಂಟ್ವಾಳ; ಬಿ.ಸಿ ರೋಡ್ ಬಸ್ ನಿಲ್ದಾಣದಲ್ಲಿ ಕತ್ತಿಯಿಂದ ಕಡಿದು ಯುವತಿಯ ಕೊಲೆ; ಆರೋಪಿ ಪರಾರಿ
ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ. ಸಿ. ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳ ಮೇಲೆ ಯುವಕನೋರ್ವ ಕತ್ತಿಯಿಂದ ಭೀಕರವಾಗಿ ದಾಳಿ ನಡೆಸಿ ಹತ್ಯೆ ಮಾಡಿ ಪರಾರಿಯಾಗಿರುವ ಆಘಾತಕಾರಿ ಘಟನೆ ಸಂಭವಿಸಿದೆ. ಕಕ್ಕೆಪದವು ನಿವಾಸಿ ಲಾವಣ್ಯ(25) ಮೃತ ಯುವತಿಯಾಗಿದ್ದಾಳೆಬಿ. ಸಿ. ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಕ್ಕೆಪದವು ಮಾರ್ಗವಾಗಿ ಸಂಚರಿಸುವ ಸರ್ಕಾರಿ ಬಸ್ಸಿನೊಳಗೆ ಯುವತಿ ಕುಳಿತಿದ್ದಳು. ಈ ವೇಳೆ ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಯುವಕ, ಬಸ್ಸಿನೊಳಗೆ ನುಗ್ಗಿ ಯುವತಿಯನ್ನು ಬಲವಂತವಾಗಿ ಕೆಳಗಿಳಿಸಿದ್ದಾನೆ. ಬಳಿಕ ಸಾರ್ವಜನಿಕರ ಸಮ್ಮುಖದಲ್ಲೇ ಕತ್ತಿಯಿಂದ ಆಕೆಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿ,...
ಬೆಳ್ತಂಗಡಿ; ಖೋಟಾ ನೋಟು ತಯಾರಿ ಕೇಂದ್ರದ ಮೇಲೆ ದಾಳಿ ಸ್ಥಳೀಯರು ಇಬ್ಬರು ಸೇರಿ 7 ಮಂದಿ ಬಂಧನ
ಬೆಳ್ತಂಗಡಿ: ತಾಲೂಕಿನ ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿರುವ ಮಹಮ್ಮದ್ ಇದ್ರೀಸ್ ಎಂಬವರ ನೂತನ ಕಟ್ಟಡದಲ್ಲಿ ನಡೆಯುತ್ತಿದ್ದ ನಕಲಿ ಖೋಟಾನೋಟು ಪ್ರಿಂಟ್ ಮಾಡಿ ಮಾರಾಟ ಮಾಡಲು ತಯಾರು ನಡೆಸುತ್ತಿದ್ದ ಕಟ್ಟಡವೊಂದಕ್ಕೆ ಜು.15 ರಂದು ರಾತ್ರಿ ಸುಮಾರು ಮಧ್ಯರಾತ್ರಿ 1 ಗಂಟೆಗೆ ಉಪ್ಪಿನಂಗಡಿ ಪೊಲೀಸರ ನೇತೃತ್ವದ ತಂಡ ದಾಳಿ ನಡೆಸಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಟ್ಟಡದೊಳಗೆ 500 ಮುಖಬೆಲೆಯ ನೋಟು -1 ಮತ್ತು A-4 ಸೈಜ್ ಹಾಳೆಯಲ್ಲಿ ಪ್ರಿಂಟ್ ಮಾಡಲಾದ 500 ರೂ ಮುಖ ಬೆಲೆಯ ನೋಟುಗಳಂತೆ ಕಾಣುವ A-4 ಸೈಜ್ ಹಾಳೆಗಳು-21, 1) BENQ...













