ಉಜಿರೆಯ ಎಸ್. ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆ ಯ ವಿದ್ಯಾರ್ಥಿಗಳಿಗೆ ಅಂತರ್ ಶಾಲಾ ಮಟ್ಟದ ಸ್ಪರ್ಧೆಯಲ್ಲಿ ಹಲವು ಬಹುಮಾನಗಳು
ಬೆಳ್ತಂಗಡಿ; ನಗರದ ಸೈಂಟ್ ಮೇರಿ್ಸ್ ಆಂಗ್ಲಮಾಧ್ಯಮ ಶಾಲೆ ಆಯೋಜಿಸಿದ್ದ ಬೆಳ್ಳಿ ಹಬ್ಬದ ಪ್ರಯುಕ್ತ ನಡೆದ ಅಂತರ ಶಾಲಾ ಮಟ್ಟದ ವಿವಿಧ ಕಾರ್ಯಕ್ರಮಗಳಲ್ಲಿ ಎಸ್‌ಡಿಎಮ್ ಆಂಗ್ಲಮಾಧ್ಯಮ ರಾಜ್ಯ ಪಠ್ಯಕ್ರಮ ಉಜಿರೆ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. 9ನೇ ತರಗತಿಯ ವಿದ್ಯಾರ್ಥಿಗಳಾದ ತನ್ಮಯ ಕೃಷ್ಣ ಮತ್ತು ಸಮರ್ಥ ಭಟ್ ಅವರು ಪ್ರದರ್ಶಿಸಿದ ವಿಜ್ಞಾನ ಮಾದರಿಗೆ ತೃತೀಯ ಬಹುಮಾನ ಲಭಿಸಿದೆ. ಅದೇ ರೀತಿ, ಫ್ಲಾಶ್ ಫನ್ ಕಾರ್ಯಕ್ರಮದಲ್ಲಿ 9ನೇ ತರಗತಿಯ ಅಕ್ಷರ ಹಳೆಮನೆ ಹಾಗೂ 10ನೇ ತರಗತಿಯ ಜ್ಞಾನ್ ಭಾಗವಹಿಸಿ ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಕಿ ಶೋಭಾ...
ಬೆಳ್ತಂಗಡಿ; ಸರಕಾರಿ ಜಾಗದಲ್ಲಿ ಮರ ಕಡಿದು ದಾಸ್ತಾನು ಪ್ರಕರಣದಾಖಲು
ಬೆಳ್ತಂಗಡಿ : ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ದಾಸ್ತಾನು ಮಾಡಿರುವ ಬಗ್ಗೆ ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳಿಗೆ ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಪುನರಡ್ಕ ಎಂಬಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಹಲಸು ಮತ್ತು ಸಾಗುವಾನಿ ಮರಗಳನ್ನು ಕಡಿದು 14 ದಿಮ್ಮಿ ಮತ್ತು ಕಟ್ಟಿಗೆಯನ್ನಾಗಿ ಪರಿವರ್ತಿಸಿ ದಾಸ್ತಾನು ಮಾಡಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಂಚಾರಿ ಅರಣ್ಯ ದಳದ ಅಧಿಕಾರಿಗಳು ನ.21 ರಂದು ದಾಳಿ ಮಾಡಿ ಪತ್ತೆ ಹಚ್ಚಿ ಸೊತ್ತುಗಳನ್ನು...
ಧರ್ಮಸ್ಥಳ ಪ್ರಕರಣ ಚಿನ್ನಯ್ಯನಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಮಂಜೂರು
ಬೆಳ್ತಂಗಡಿ : ಬುರುಡೆ ಷಡ್ಯಂತ್ರ ಪ್ರಕರಣ ಸಂಬಂಧ ಸದ್ಯ ಮೂರು ತಿಂಗಳಿಂದ ಶಿವಮೊಗ್ಗ ಜೈಲಿನಲ್ಲಿರುವ ಆರೋಪಿ ಚಿನ್ನಯ್ಯನ ಜಾಮೀನು ಅರ್ಜಿ ವಿಚಾರಣೆ ನ.24 ರಂದು ನಡೆಸಿ ಮಂಗಳೂರು ಜಿಲ್ಲಾ ಕೋರ್ಟ್ ನಲ್ಲಿ ಜಾಮೀನು ಮಂಜೂರು ಮಾಡಿದೆ.
ಮಹೇಶ್ ಶೆಟ್ಟಿ ಮನೆಯಲ್ಲಿ ಬಂದೂಕು ಪತ್ತೆಯಾದ ಪ್ರಕರಣಕ್ಕೆ ನೀಡಿದ್ದ ತಡೆಯಾಜ್ಞೆ ಮುಂದುವರಿಸಿದ ಹೈ ಕೋರ್ಟ್
ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ಎಸ್.ಐ.ಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಅಕ್ರಮ ಬಂದೂಕು ಪ್ರಕರಣದಲ್ಲಿ ಹೈಕೋರ್ಟ್ ನಲ್ಲಿ ನ.24 ರಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ಎರಡು ವಾರಗಳ ಕಾಲ ತಡೆಯಾಜ್ಞೆಯನ್ನು ಮುಂದುವರಿಸಿದ್ದು ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ. ಧರ್ಮಸ್ಥಳ ಪ್ರಕರಣದ ಸಂಬಂಧ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ಎಸ್.ಐ.ಟಿ ಅಧಿಕಾರಿಗಳು ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಅಗಸ್ಟ್ 26 ರಂದು ಶೋಧ ನಡೆಸಿದಾಗ ಎರಡು ತಲವಾರು ಮತ್ತು ಒಂದು ಬಂದೂಕು ಸೇರಿ ಒಟ್ಟು 44 ವಸ್ತುಗಳನ್ನು ವಶಪಡಿಸಿಕೊಂಡಿದ್ದರು....
ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾದ ಸುಲ್ಕೇರಿಯ ಶಶಿಕಾಂತ್
ಬೆಳ್ತಂಗಡಿ; ರಾಜ್ಯ ಮಟ್ಟದ 17 ವರ್ಷ ವಯೋಮಾನ ವಿಭಾಗದ ಸಬ್ ಜ್ಯೂನಿಯರ್ ಕಬಡ್ಡಿ ಪಂದ್ಯಾವಳಿಯಲ್ಲಿ ವಿಶೇಷ ಸಾಧನೆ ಮಾಡಿರುವ ಶಶಿಕಾಂತ್ ಸುಲ್ಕೇರಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈಗಾಗಲೇ ತಾಲೂಕು , ಜಿಲ್ಲೆ ಸೇರಿದಂತೆ ಮೈಸೂರು ವಿಭಾಗ , ರಾಜ್ಯ ಮಟ್ಟದ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಉತ್ತಮ ಸಾಧನೆ ಮಾಡಿದ ಈತ ಈಗ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಶ್ರೀರಾಮ ಪ್ರೌಢಶಾಲೆ ಸುಲ್ಕೇರಿ ಇಲ್ಲಿ 10 ನೇ ತರಗತಿ ವಿಧ್ಯಾರ್ಥಿ. ಸುಲ್ಕೇರಿ ಗ್ರಾಮದ...
ಬೆಳ್ತಂಗಡಿ; ವಿದ್ಯುತ್ ಗುತ್ತಿಗೆದಾರ ಬೆನೆಡಿಕ್ಟ್ ವೇಗಸ್ ನಿಧನ
ಬೆಳ್ತಂಗಡಿ: ಲಾಯಿಲ ಗ್ರಾಮದ ಅಲ್ಲಾಟ ನಿವಾಸಿ ವಿದ್ಯುತ್ ಗುತ್ತಿಗೆದಾರ ಬೆನೆಡಿಕ್ಟ್ ವೇಗಸ್ (64ವರ್ಷ) ಅಲ್ಪಕಾಲದ ಅಸೌಖ್ಯದಿಂದ ನ. 23ರಂದು ನಿಧನರಾಗಿದ್ದಾರೆಇವರು ಪ್ರಗತಿಪರ ಕೃಷಿಕರಾಗಿದ್ದು, ಪಟ್ಟಣ ಪಂಚಾಯತ್ ನಲ್ಲಿ ಹಲವಾರು ವರ್ಷಗಳಿಂದ ವಿದ್ಯುತ್ ಗುತ್ತಿಗೆದಾರರಾಗಿ, ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಬೆಳ್ತಂಗಡಿ ಸಂತ ತೆರೇಸಾ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲೀನಾ ವೇಗಸ್, ಪುತ್ರರಾದ ರೋಹಿತ್ ವೇಗಸ್, ರಾಯ್ಸನ್ ವೇಗಸ್, ಸೊಸೆ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಮಿತ್ತಬಾಗಿಲು ಕಿಲ್ಲೂರಿನಲ್ಲಿ ರಿಕ್ಷಾ ತಂಗುದಾಣ ಕಾಮಗಾರಿಗೆ ಶಾಸಕ ಹರೀಶ್ ಪೂಂಜ ಅವರಿಂದ ಶಿಲಾನ್ಯಾಸ
ಬೆಳ್ತಂಗಡಿ; ರೂ.5.00 ಲಕ್ಷ ವೆಚ್ಚದಲ್ಲಿ ಮಿತ್ತಬಾಗಿಲು ಗ್ರಾಮದ ಕಿಲ್ಲೂರು ಎಂಬಲ್ಲಿ ನಿರ್ಮಾಣಗೊಳ್ಳಲಿರುವ ರಿಕ್ಷಾ ತಂಗುದಾಣ ಕಾಮಗಾರಿಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಲಾಯಿಲ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅರವಿಂದ ಲಾಯಿಲ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಮಂಡಲ ಕಾರ್ಯದರ್ಶಿ ಪ್ರಭಾಕರ್ ಆಚಾರ್ಯ, ಮಿತ್ತಬಾಗಿಲು ಪಂಚಾಯತ್ ಅಧ್ಯಕ್ಷ ವಿನಯಚಂದ್ರ, ಶಕ್ತಿಕೇಂದ್ರ ಪ್ರಮುಖ್ ಸಚಿನ್ ಗೌಡ ,ಮಲವಂತಿಗೆ ಶಕ್ತಿ ಕೇಂದ್ರ ಪ್ರಮುಖ್ ಮಧುಸೂಧನ್, ಪಂಚಾಯತ್ ಸದಸ್ಯರು,ಜನಪ್ರತಿನಿದಿಗಳು, ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.
ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಬೆಳ್ತಂಗಡಿ: ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದ ಸಮೀಪ ನದಿಯಲ್ಲಿ ಸುಮಾರು 55 ರಿಂದ 60 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವು ಕೊಳೆತ ಸ್ಥಿತಿಯಲ್ಲಿ ನ.23 ರಂದು ಪತ್ತೆಯಾಗಿದೆ. ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಇದ್ದು ಗುರುತಿ ಸಿಗದಂತಾಗಿದೆ. ಮೈಮೇಲೆ ನಸು ಹಸಿರು ಬಣ್ಣದ ಉದ್ದ ತೋಳಿನ ಶರ್ಟ್, ಅರ್ದ ತೋಳಿನ ಬಿಳಿ ಬಣ್ಣದ ಬನಿಯನ್, ಕಾಫಿ ಬಣ್ಣದ ಒಳಚಡ್ಡಿ, ನಸು ಹಸಿರು ಬಣ್ಣದ ಪಟ್ಟಿ ಇರುವ ಬಿಳಿ ಪಂಚೆ,ಕೆಂಪು ಉಡಿದಾರ ಧರಿಸಿಕೊಂಡಿರುವುದು ಕಂಡು ಬಂದಿದೆ. ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ನದಿಯಿಂದ...
ಬೆಳ್ತಂಗಡಿ : ವೃತ್ತ ನಿರೀಕ್ಷಕರಾಗಿ ರವಿ.ಬಿ.ಎಸ್ ನೇಮಕ
ಬೆಳ್ತಂಗಡಿ : ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ನಿವೃತ್ತಿ ಬಳಿಕ ಖಾಲಿ ಇದ್ದ ಬೆಳ್ತಂಗಡಿ ವೃತ್ತ ನಿರೀಕ್ಷಕ ಸ್ಥಾನಕ್ಕೆ ಉಪ್ಪಿನಂಗಡಿ ವೃತ್ತ ನಿರೀಕ್ಚಕ ಪೊಲೀಸ್ ಠಾಣೆಯಿಂದ ಬಂಟ್ವಾಳ ಗ್ರಾಮಾಂತರ ಠಾಣೆಗೆ ವರ್ಗಾವಣೆ ಆದೇಶವಾಗಿದ್ದ ಇನ್ಸ್‌ಪೆಕ್ಟರ್ ರವಿ.ಬಿ.ಎಸ್ ಅವರನ್ನು ನೇಮಕ ಮಾಡಿ ನ.21 ರಂದು ಆದೇಶ ಮಾಡಲಾಗಿದೆ. ಇನ್ಸ್‌ಪೆಕ್ಟರ್ ರವಿ.ಬಿ.ಎಸ್ ಈ ಹಿಂದೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.ಬಳಿಕ ಚಿಕ್ಕಮಗಳೂರು, ಕಾರ್ಕಳ, ಸುಳ್ಯ,ಸಂಪ್ಯ,ಪುತ್ತೂರು ಗ್ರಾಮಾಂತರ ಕಡೆ ಕರ್ತವ್ಯ ನಿರ್ವಹಿಸಿ ಇನ್ಸ್‌ಪೆಕ್ಟರ್ ಆಗಿ ಭಡ್ತಿ ಹೊಂದಿ ಶೃಂಗೇರಿ,ಉಪ್ಪಿನಂಗಡಿ ವೃತ್ತ ಪೊಲೀಸ್ ಠಾಣೆಯಲ್ಲಿ...
614ಕೋಟಿಯ ಉಜಿರೆ-ಪೆರಿಯಶಾಂತಿ ರಸ್ತೆ ಕಾಮಗಾರಿಗೆ ಚಾಲನೆ
ಬೆಳ್ತಂಗಡಿ; ಉಜಿರೆ- ಧರ್ಮಸ್ಥಳ- ಪೆರಿಯಶಾಂತಿ ರಸ್ತೆಯ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮ ಶನಿವಾರ ಧರ್ಮಸ್ಥಳದಲ್ಲಿ ನಡೆಯಿತು.ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಡಿ ವೀರೇಂದ್ರಹೆಗ್ಗಡೆಯವರು ಶಿಲಾನ್ಯಾಸ ನೆರವೇರಿಸಿದರು. ಸಂಸದ ಬ್ರಿಜೇಶ್ ಚೌಟ ಶಾಸಕ ಹರೀಶ್ ಪೂಂಜ ಉಪಸ್ಥಿತರಿದ್ದು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತು ಅಧ್ಯಕ್ಷೆ ವಿಮಲ, ಕುಶಾಲಪ್ಪ ಗೌಡ, ಶಿವಪ್ರಸಾದ್ ಅಜಿಲ ಧರ್ಮಸ್ಥಳ, ಮುಗೆರೋಡಿ ಕಂಪೆನಿಯ ಸುಧಾಕರ ಶೆಟ್ಟಿ, ಪ್ರೀತಂ ಧರ್ಮಸ್ಥಳ ವಿವಿಧ ಗ್ರಾ.ಪಂ ಅಧ್ಯಕ್ಷರುಗಳು ಸದಸ್ಯರುಗಳು, ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರುಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಸ್ವಾಗತಿಸಿದರು. 614ಕೋಟಿಯ ಕಾಮಗಾರಿಉಜಿರೆ-...














