ಶಾಸಕ ಹರೀಶ್ ಪೂಂಜ ಅವರಿಂದ ಮಲವಂತಿಗೆಯಲ್ಲಿ 4ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಸೇತುವೆ ಉದ್ಘಾಟನೆ

0

ಬೆಳ್ತಂಗಡಿ;  ರೂ.4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಲವಂತಿಗೆ ಗ್ರಾಮದ ಕೊಲ್ಲಿ-ಕಲ್ಬೆಟ್ಟು-ಬಾಳೆಹಿತ್ತಿಲು ರಸ್ತೆ ಕಾಂಕ್ರಿಟೀಕರಣ ಹಾಗೂ ಕಲ್ಬೆಟ್ಟು ಎಂಬಲ್ಲಿ ಸೇತುವೆ ನಿರ್ಮಾಣ‌ ಕಾಮಗಾರಿಯನ್ನು ಬೆಳ್ತಂಗಡಿ ಶಾಸಕರಾದ  ಹರೀಶ್ ಪೂಂಜರವರು ಲೋಕಾರ್ಪಣೆಗೊಳಿಸಿದರು‌. ಈ ಸಂದರ್ಭದಲ್ಲಿ ಮಲವಂತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಜೈನ್, ಮಿತ್ತಬಾಗಿಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನಯಚಂದ್ರ, ಗ್ರಾಮ ಪಂಚಾಯತ್ ಸದಸ್ಯರುಗಳು, ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷರುಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು

ಲಾಯಿಲ ಅಗಳಿ ಪರಿಸರದಲ್ಲಿ ಚಿರತೆ ಓಡಾಟ

0

ಬೆಳ್ತಂಗಡಿ: ನಡ ಮತ್ತು ಲಾಯಿಲ ಗ್ರಾಮದ ಗಡಿ ಭಾಗವಾದ ಅಗಳಿಯ ಹೇನಡ್ಕ ಪರಿಸರದಲ್ಲಿ ಶನಿವಾರ ರಾತ್ರಿ ಚಿರತೆ ತಿರುಗಾಟ ನಡೆಸಿದೆ.ಒಂದು ದೊಡ್ಡ ಚಿರತೆ ಹಾಗೂ ಮರಿಚಿರತೆ ಸಂಚರಿಸಿರುವ ಹೆಜ್ಜೆಗಳು ರಸ್ತೆಯಲ್ಲಿ ಕಂಡು ಬಂದಿವೆ.ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 150ಮೀ. ದೂರದಲ್ಲಿ ಹಾಗೂ ಸ್ಥಳೀಯ ಮನೆಗಳಿಂದ 50 ಮೀ.ಪ್ರದೇಶದಲ್ಲಿ ಚಿರತೆ ಸಂಚಾರ ನಡೆಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.ಈ ಪರಿಸರದಲ್ಲಿ ಆಗಾಗ ಚಿರತೆಗಳು ತಿರುಗಾಟ ನಡೆಸುವುದು ಮಾಮೂಲಾಗಿದೆ. ಸ್ಥಳೀಯರು ಭಯದಿಂದ ಜೀವನ‌ ನಡೆಸುವಂತಾಗಿದೆ

ಬೆಳ್ತಂಗಡಿ : ತಿಥಿ ಕಾರ್ಯಕ್ರಮಕ್ಕೆ ಬಡಿಸಲು ಆಮೆಗಳ ಬೇಟೆ ಆಮೆಗಳು ಸಮೇತ ನಾಲ್ಕು ಮಂದಿಯ ಬಂಧನ

0

ಬೆಳ್ತಂಗಡಿ; ಅಜ್ಜಿಯ ತಿಥಿ ಕಾರ್ಯಕ್ರಮಕ್ಕೆ ಪದಾರ್ಥ ಮಾಡಿ ಬಡಿಸಲು ಅಜ್ಜಿಗೆ ಇಷ್ಟವಾದ ಆಮೆಯನ್ನು ನದಿಯಲ್ಲಿ ಅಕ್ರಮವಾಗಿ ಬೇಟೆಯಾಡಿ ಮಾಂಸ ಮಾಡಲು ಪ್ರಯತ್ನಿಸುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ನಾಲ್ಕು ಆಮೆ ಸಮೇತ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳ್ತಂಗಡಿ ನಗರದ ಸೋಮವತಿ ನದಿಯಲ್ಲಿ ಅಕ್ರಮವಾಗಿ ನಾಲ್ಕು ಆಮೆಯನ್ನು ಬೇಟೆಯಾಡಿ ನದಿ ಬದಿಯಲ್ಲಿ ಮಾಂಸ ಮಾಡಲು ಪ್ರಯತ್ನಿಸುತ್ತಿರುವಾಗ ಫೆ.14 ರಂದು ಸಂಜೆ 3:30 ರ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಮ್ ನೇತೃತ್ವದ ತಂಡ ದಾಳಿ ಮಾಡಿ ನಾಲ್ಕು ಮಂದಿಯನ್ನು ವಶಕ್ಕೆ...

ಮುಂಡಾಜೆ ಗುಡ್ಡಕ್ಕೆ ಬೆಂಕಿ

0

ಬೆಳ್ತಂಗಡಿ:ತಾಲೂಕಿನ ಮುಂಡಾಜೆ-ಕಲ್ಮಂಜ- ಧರ್ಮಸ್ಥಳ ರಸ್ತೆಯ ಮುಂಡಾಜೆ ಗ್ರಾಮದ ಮೈರಣಗುಡ್ಡೆಗೆ ಬೆಂಕಿ ಬಿದ್ದ ಘಟನೆ ಶನಿವಾರ ರಾತ್ರಿ ನಡೆದಿದೆ.ಬೆಂಕಿ ಗುಡ್ಡವನ್ನು ವ್ಯಾಪಿಸಿದ್ದು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದಿಂದ ಬೆಂಕಿ ಹತೋಟಿಯ ಯತ್ನ ಮುಂದುವರಿದಿದೆ. ಬೆಂಕಿ ಆರಿಸುವ ವೇಳೆ ಸ್ಥಳೀಯ ವ್ಯಕ್ತಿಯೊಬ್ಬರು ಸುಮಾರು 20 ಅಡಿಯಿಂದ ಜಾರಿ ಬಿದ್ದ ಘಟನೆಯು ನಡೆದಿದ್ದು, ಅದೃಷ್ಟವಶಾತ್ ಗಾಯಗೊಳ್ಳದೆ ಅಪಾಯದಿಂದ ಪಾರಾಗಿದ್ದಾರೆ.ಗುಡ್ಡವನ್ನು ಸುಟ್ಟ ಬೆಂಕಿ ಸಮೀಪದಲ್ಲಿರುವ ರಬ್ಬರ್ ತೋಟಕ್ಕೂ ವ್ಯಾಪಿಸಿದ್ದು ರಬ್ಬರ್ ಗಿಡಗಳಿಗೂ ಹಾನಿ ಉಂಟಾಗಿದೆ. ಬೆಂಕಿ ಯಾವ ಕಾರಣದಿಂದ ಉಂಟಾಗಿದೆ ಎಂದು ತಿಳಿದು ಬಂದಿಲ್ಲ

ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ: ಪಾದಯಾತ್ರಿಗಳಿಗೆ ಸನ್ಮಾನ; ಶ್ರದ್ಧಾ-ಭಕ್ತಿಯಂದಿಗೆ ನಿಸ್ವಾರ್ಥವಾಗಿ ಪಾದಯಾತ್ರೆ ಮಾಡಿದಾಗ ಹೆಚ್ಚಿನ ಫಲ  ಡಾ. ಹೆಗ್ಗಡೆ

0

ಧರ್ಮಸ್ಥಳ: ಶಿವರಾತ್ರಿ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಶ್ರದ್ಧಾ-ಭಕ್ತಿಯೊಂದಿಗೆ ಪಾದ ಯಾತ್ರೆಯಲ್ಲಿ ಬಂದ ಸಹಸ್ರಾರು ಭಕ್ತರು ತಮ್ಮಲ್ಲಿರುವ ದೋಷಗಳನ್ನೆಲ್ಲ ಇಲ್ಲೆ ತ್ಯಜಿಸಿ, ಉತ್ತಮ ಆಚಾರ-ವಿಚಾರಗಳೊಂದಿಗೆ ಸಭ್ಯ ನಾಗರಿಕರಾಗಿ ಸಂಸ್ಕಾರಯುತ ಸಾರ್ಥಕ ಜೀವನ ನಡೆಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಶನಿವಾರ ಬೆಂಗಳೂರಿನ ಗುರು ಹನುಮಂತಪ್ಪ ಸ್ವಾಮೀಜಿ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಬಂದ ಪಾದಯಾತ್ರಿಗಳನ್ನು ಪ್ರವಚನ ಮಂಟಪದಲ್ಲಿ ಅಭಿನಂದಿಸಿ ಮಾತನಾಡಿದರು.ವಿಷಕಂಠನಾದ ಶ್ರೀ ಮಂಜುನಾಥಸ್ವಾಮಿಗೆ ಎಲ್ಲಾ ದೋಷಗಳನ್ನು ಸ್ವೀಕರಿಸಿ ಲೋಕಕಲ್ಯಾಣ ಮಾಡುವ ಶಕ್ತಿ ಇದೆ. ಆದುದರಿಂದಲೇ ಅಪಘಾತದಲ್ಲಿ ಹಾಗೂ ಅಪಮೃತ್ಯುವಿನಲ್ಲಿ ಸತ್ತವರ ಮೋಕ್ಷಪ್ರಾಪ್ತಿಗಾಗಿ ಭಕ್ತರು ಧರ್ಮಸ್ಥಳಕ್ಕೆ...

10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ‌ ಆರೋಪಿಯನ್ನು  ಬಂಧಿಸಿದ ವೇಣೂರು ಪೊಲೀಸರು

0

ಬೆಳ್ತಂಗಡಿ : ಫೋಕ್ಸೋ ಪ್ರಕರಣದಲ್ಲಿ ಸುಮಾರು ಹತ್ತು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಯೋಗೀಶ್ ಪೂಜಾರಿ ಎಂಬಾತನನ್ನು ವೇಣೂರು ಪೊಲೀಸರು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2012 ರಲ್ಲಿ ನಡೆದಿದ್ದ ಫೋಕ್ಸೋ ಪ್ರಕರಣದಲ್ಲಿ ಆರೋಪಿ ಬಂಧನವಾದ ಬಳಿಕ ಬಿಡುಗಡೆಯಾಗಿ ಮಂಗಳೂರು ನ್ಯಾಯಾಲಯಕ್ಕೆ ಹಾಜರಾಗಿ, 2015 ರಿಂದ ಸುಮಾರು 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದ ಕವಲಿಗುಡ್ಡೆ ಮನೆಯ ಯೋಗೀಶ್ ಪೂಜಾರಿ(35) ಎಂಬಾತನನ್ನು ವೇಣೂರು ಪೊಲೀಸರು ಫೆ.13 ರಂದು...

ಬೆಳ್ತಂಗಡಿ ಅಗ್ನಿ ಆಕಸ್ಮಿಕ ಸ್ಥಳಕ್ಕೆ ರಕ್ಷಿತ್ ಶಿವರಾಂ ಭೇಟಿ

0

ಬೆಳ್ತಂಗಡಿ; ನಗರದ‌ ಸಂತೆಕಟ್ಟೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ಕಟ್ಟಡಕ್ಕೆ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಭೇಟಿ ನೀಡಿ ಅಂಗಡಿ ಮಾಲಕರೊಂದಿಗೆ ಮಾತುಕತೆ ನಡೆಸಿ ಸ್ವಾಂತನ ಹೇಳಿದರು.ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಘಟನೆಯಲ್ಲಿ ಗಾಯಗೊಂಡವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.ಇಂದು ಬೆಳಗ್ಗೆ ನಗರದ ಸಂತೆಕಟ್ಟೆಯ ಹೆರಾಜೆ ಕಾಂಪ್ಲೆಕ್ಸ್ ನಲ್ಲಿ ಹೀಲಿಯಂ ಗ್ಯಾಸ್ ಸೋರಿಕೆಯಾಗಿ ಭಾರೀ ಅನಾಹುತ ಸಂಭವಿಸಿತ್ತು.

ಉಜಿರೆ ತನುಷ್ ಶೆಟ್ಟಿ ದೂರು ಜಿತೇಂದ್ರ ಕೊಟ್ಟಾರಿ ವಿರುದ್ದ ಪ್ರಕರಣ‌ದಾಖಲಿಸಲು ನ್ಯಾಯಾಲಯ ಆದೇಶ

0

ಬೆಳ್ತಂಗಡಿ; ಉಜಿರೆಯ ತನುಷ್ ಶೆಟ್ಟಿ ಹಾಗೂ ಇತರರು ನೀಡಿದ ಖಾಸಗಿ ದೂರನ್ನು ಪುರಸ್ಕರಿಸಿ ಮಂಗಳೂರಿನ ಉದ್ಯಮಿ ಜಿತೇಂದ್ರ ಕೊಟ್ಟಾರಿ ಅವರ ವಿರುದ್ದ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ ನೀಡಿದ್ದು ಅದರಂತೆ ಇದೀಗಮಂಗಳೂರು ಪೊಲೀಸರು ಜಿತೇಂದ್ರ ಕೊಟ್ಟಾರಿ ಅವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಘಟನೆಯ ಹಿನ್ನಲೆಮಂಗಳೂರಿನಲ್ಲಿ 2024ರ ಅ 9ರಂದು ಮಂಗಳೂರಿನಲ್ಲಿ ವಾಹನ ಚಾಲನೆಯ ವೇಳೆ ಓವರ್ ಟೇಕ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ  ಉದ್ಯಮಿ ಜಿತೇಂದ್ರಕೊಟ್ಟಾರಿ ಹಾಗೂ ತನುಷ್ ನಡುವೆ ವಾಗ್ವಾದ ನಡೆದಿದ್ದು ಈ ವೇಳೆ ಜಿತೇಂದ್ರ ಕೊಟ್ಟಾರಿ ಪಿಸ್ತೂಲು ತೆಗೆದು ಕೊಲೆ ಬೆದರಿಕೆ ಹಾಕಿದರು...

ಬೆಳ್ತಂಗಡಿ : KAF ಕ್ರಿಯೇಟಿವ್ ಶಾಪ್ ನಲ್ಲಿ ಗ್ಯಾಸ್ ಸೋರಿಕೆ ಸ್ಪೋಟ; ಬೆಂಕಿಗೆ ವ್ಯಾಪಕ ನಾಶ

0

ಬೆಳ್ತಂಗಡಿ : ಹೀಲಿಯಂ ಗ್ಯಾಸ್ ಸೋರಿಕೆಯಿಂದ ಉಂಟಾದ ಬೆಂಕಿಯಿಂದ ಅಂಗಡಿ ಸುಟ್ಟು ಭಸ್ಮವಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿರುವ ಹೇರಾಜೆ ಕಾಂಪ್ಲೆಕ್ಸ್ ನಲ್ಲಿ ಮೊದಲ ಮಹಡಿಯ ಮೊಹಮ್ಮದ್ ಸಮೀಲ್ ಎಂಬವರ ಮಾಲೀಕತ್ವದ KAF ಕ್ರಿಯೇಟಿವ್ ಅರ್ಟ್ & ಕ್ರಾಫ್ಟ್ ಸ್ಟೋರ್ ನಲ್ಲಿ ಇಬ್ಬರು ಕೆಲಸದವರು ಫೆ.14 ರಂದು ಬೆಳಗ್ಗೆ 7:30 ಕ್ಕೆ ಕಾರ್ಯಕ್ರಮವೊಂದಕ್ಕೆ ಬಲೂನ್ ಗಳಿಗೆ ಗ್ಯಾಸ್ ತುಂಬಿಸುವಾಗ ಹೀಲಿಯಂ ಗ್ಯಾಸ್ ಸೋರಿಕೆಯಾಗಿ ಬೆಂಕಿ ಉಂಟಾಗಿ ಸಂಪೂರ್ಣ ಸುಟ್ಟು ಹೋಗಿದೆ. ಘಟನೆ ವೇಳೆ ಅಂಗಡಿಯೊಳಗೆ ಇಬ್ಬರು ಕೆಲಸದವರು ಇದ್ದು ತಕ್ಷಣ ಹೊರಗಡೆ ಓಡಿ...

ಕನ್ಯಾಡಿ ಬೆಂಕಿ ಆಕಸ್ಮಿಕದಲ್ಲಿ ಗಾಯಗೊಂಡಿದ್ದ ಮಹಿಳೆ ಮೃತ್ಯು

0

ಬೆಳ್ತಂಗಡಿ; ಬಚ್ವಲು ಮನೆಯಲ್ಲಿ ಒಲೆಗೆ ಬೆಂಕಿ ಹಚ್ಚುವ ವೇಳೆ ಬಟ್ಟೆಗೆ ಬೆಂಕಿತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಸಂಭವಿಸಿದೆ.ಮೃತ ಮಹಿಳೆ ನಡ ಕನ್ಯಾಡಿ ನಿವಾಸಿ ಮಂಜಪ್ಪ ನಾಯ್ಕ ಎಂಬವರ ಪತ್ನಿ ಮೀನಾಕ್ಷಿ (63) ಎಂಬವರಾಗಿದ್ದಾರೆ.ಇವರು ಫೆ. 7ರಂದು ಮನೆಯ ಬಚ್ಚಲು ಕೋಣೆಯಲ್ಲಿ ನೀರು ಬಿಸಿ ಮಾಡಲು ಬೆಂಕಿ ಹಚ್ಚುವ ವೇಳೆ ಆಕಸ್ಮಿಕವಾಗಿ ಬಟ್ಟೆಗೆ ಬೆಂಕಿ ತಗುಲಿದೆ ಇವರು ಗಂಭೀರವಾಗಿ ಗಾಯಗೊಂಡಿದ್ದು ಕೂಡಲೇ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ...