Home ಸ್ಥಳೀಯ ಸಮಾಚಾರ ಬೆಳ್ತಂಗಡಿ; ‘ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಗೆ ತುಳು ಮತ್ತು ಕನ್ನಡ ರಂಗಭೂಮಿ, ಚಲನಚಿತ್ರ ನಟ...

ಬೆಳ್ತಂಗಡಿ; ‘ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಗೆ ತುಳು ಮತ್ತು ಕನ್ನಡ ರಂಗಭೂಮಿ, ಚಲನಚಿತ್ರ ನಟ ಮತ್ತು ನಿರ್ದೇಶಕ ಚೇತನ್ ರೈ ಮಾಣಿ ಭೇಟಿ

0
2

ಬೆಳ್ತಂಗಡಿ : ಆಗಸ್ಟ್ 24ರಂದು ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಗೆ ತುಳುನಾಡಿನ ಹೆಮ್ಮೆಯ ತುಳು ಮತ್ತು ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ನಟ ಮತ್ತು ನಿರ್ದೇಶಕರಾದ ಚೇತನ್ ರೈ ಮಾಣಿಯವರು ನಮ್ಮ ಸಂಸ್ಥೆಗೆ ಭೇಟಿ ನೀಡಿ ನಮ್ಮನ್ನುದ್ದೇಶಿಸಿ ಹಿತವಚನ ನೀಡಿದರು. ಅವರೊಂದಿಗೆ ಕರಾವಳಿ ಸುದ್ದಿಪತ್ರಿಕೆಯ ಸಂಪಾದಕರಾದ ಶ್ರೀ ರೋಷನ್ ಮಾರ್ಟಿಸ್ ರವರು ಸಂಸ್ಥೆಯ ಬೆಳವಣಿಗೆ ಹಾಗೂ ಸಂಸ್ಥೆಯ ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿಗಳಾದ ರಶ್ಮಿತಾ, ಪೂರ್ಣಿಮಾ, ಲಿಖಿತಾ ರವರು ಪ್ರಾರ್ಥನೆ ಮಾಡಿ ದೇವರ ಅನುಗ್ರಹ ಬೇಡಿದರು. ಸಂಸ್ಥೆಯ ಮಾಲಕರಾದ ಆಲ್ಫೋನ್ಸ್ ಫ್ರಾಂಕೋ ರವರು ಸ್ವಾಗತಿಸಿ, ಅಕೌಂಟೆಂಟ್ ಯಶೋಧ ರವರು ವಂದಿಸಿದರು. ಸಂಸ್ಥೆಯ ವ್ಯವಸ್ಥಾಪಕರಾದ ಲ್ಯಾನ್ಸಿ ಡಿಸೋಜಾ,ಸಿಬ್ಬಂದಿಗಳಾದ ಜೋಶಿಲ್ ಫೆರ್ನಾಂಡಿಸ್, ಅರುಫಾ ಸುಹಾನಾ,ಶಶಿಕಲಾ, ಪವಿತ್ರ, ಮೋಹಿನಿ, ಸ್ಪಂದನ ಹಾಗೂ ಇತರರು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here