ಮನೆಯೊಡತಿಯ ಮೇಲೆಯೆ ದಾಳಿ ನಡೆಸಿದ ಸಾಕು ನಾಯಿ

0

ಕಟ್ಟಿಹಾಕಿದ್ದ ತನ್ನ ಮನೆಯ ಸಾಕು ನಾಯಿಯನ್ನು ಬಿಡಲು ಹೋದ ಸಮಯ ಮಹಿಳೆಯ ಮೇಲೆ ಏಕಾಏಕಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.ಮುಂಡಾಜೆ ಗ್ರಾಮದ ನಿಡಿಗಲ್ ನಿವಾಸಿ ದಿ. ರಾಮದಾಸ್ ಪ್ರಭು ಅವರ ಪತ್ನಿ ಪೂರ್ಣಿಮಾ ಪ್ರಭು (49 ) ಗಾಯಗೊಂಡ ಮಹಿಳೆಯಾಗಿದ್ದಾರೆ.ಕಟ್ಟಿ ಹಾಕಿದ್ದ ಸಾಕು ನಾಯಿಯನ್ನು ಎಂದಿನಂತೆ ಬಿಡಲು ಹೋದ ಸಂದರ್ಭ ಅವರನ್ನು ದೂಡಿ ಹಾಕಿದ ನಾಯಿ ತಲೆ, ಕುತ್ತಿಗೆ,ಕೈ ಸೇರಿದಂತೆ ಸುಮಾರು 20ಕ್ಕಿಂತ ಅಧಿಕ ಕಡೆಗಳಿಗೆ ಕಚ್ಚಿದೆ ಇದರಿಂದ ಮಹಿಳೆಯ ತಲೆ,ಕುತ್ತಿಗೆ ಮೊದಲಾದ ಭಾಗಗಳಿಗೆ ಆಳವಾದ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ...

ಕಣಿಯೂರು ಬಿ ಜೆ ಪಿ ಬೂತ್ ಸಮಿತಿ ಅಧ್ಯಕ್ಷ ಕಾಂಗ್ರೇಸ್ ಸೇರ್ಪಡೆ

0

ಬೆಳ್ತಂಗಡಿ; ಕಲ್ಲೇರಿಯಲ್ಲಿ ನಡೆದ ಕಾಂಗ್ರೇಸ್ ಪಕ್ಷದ ಪ್ರಚಾರ ಸಭೆಯಲ್ಲಿ ಕಣಿಯೂರು ಬೂತ್ ಸಂಖ್ಯೆ 203 ರ ಅಧ್ಯಕ್ಷ ನವೀನ್ ಪೂಜಾರಿ ಮತ್ತು ಪದಾಧಿಕಾರಿಗಳಾದ ಸುದೇಶ್ ಪೂಜಾರಿ, ಮೋಹನ ಗೌಡ, ಸುನಿಲ್ ಪೂಜಾರಿ, ಸನತ್, ನಿತಿನ್, ಪ್ರಕಾಶ್, ಹರ್ಷಿತ್ ಪೂಜಾರಿ, ಪ್ರಶಾಂತ್ ಪೂಜಾರಿ ಮತ್ತು ಸುರೇಶ್ ರವರುಗಳು ಬಿಜೆಪಿ ತೊರೆದು ಕಾಂಗ್ರೇಸ್ ಪಕ್ಷವನ್ನು ಸೇರಿದರು. ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಪಕ್ಷದ ದ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈ, ಕಾಂಗ್ರೇಸ್ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ, ಕೆ...

ಮುಂಡಾಜೆಯಲ್ಲಿ ಗುಡ್ಡಕ್ಕೆ ಬೆಂಕಿ; ನಂದಿಸಿದ ಅಗ್ನಿಶಾಮಕ ದಳ

0

ಮುಂಡಾಜೆ; ಇಲ್ಲಿನ ಕುರುಡ್ಯ ಎಂಬಲ್ಲಿ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.ಬೆಂಕಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಬೆಂಕಿ ನಂದಿಸುವ ಪ್ರಯತ್ನ ಆರಂಭಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿದ್ದುಸ್ಥಳೀಯರ ಹಾಗೂ ಅಗ್ನಿಶಾಮಕ ದಳದ ಸಕಾಲಿಕ ಸ್ಪಂದನೆಯಿಂದ ಹೆಚ್ಚಿನ ಹಾನಿ ಉಂಟಾಗುವುದು ತಪ್ಪಿತು.ಬೆಂಕಿ ಇನ್ನಷ್ಟು ಹರಡುತ್ತಿದ್ದರೆ ಸಮೀಪದ ಮನೆಗಳಿಗೆ ಹಾಗೂ ತೋಟಗಳಿಗೆ ಹೆಚ್ಚಿನ ಹಾನಿ ಉಂಟಾಗುತ್ತಿತ್ತು.

ಕೊಕ್ಕಡದಲ್ಲಿ ನೀರಿನ ಟ್ಯಾಂಕರ್ ಪಲ್ಟಿಯಾಗಿ ಕಾರ್ಮಿಕ ಸಾವು

0

ಬೆಳ್ತಂಗಡಿ; ಕೊಕ್ಕಡದಲ್ಲಿ ನೀರಿನ ಟ್ಯಾಂಕರ್ ಪಲ್ಟಿಯಾಗಿ ಓರ್ವ ಕಾರ್ಮಿಕ ಟ್ಯಾಂಕರ್ ನ ಅಡಿಗೆ ಸಿಲುಕಿ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.ಮೃತ ಕಾರ್ಮಿಕ ಹಾವೇರಿ ನಿವಾಸಿಯಾಗಿರುವ ಸುರೇಶ್ ಮಲ್ಲಪ್ಪ ಹೊಸಮನಿ ಎಂಬಾತನಾಗಿದ್ದಾನೆ.ಕೊಕ್ಕಡ ಗ್ರಾಮದ ಮೈಪಾಳದಲ್ಲಿ ವೆಂಟೆಡ್ ಡ್ಯಾಮಿನ ಕಾಮಗಾರಿ ನಡೆಯುತ್ತಿದ್ದು ಇಲ್ಲಿ ಕೆಲಸ ಮಾಡುತ್ತಿದ್ದರು. ನೀರಿನ ಟ್ಯಾಂಕರ್ ನಲ್ಲಿ ನೀರು ತುಂಬಿಕೊಂಡು ಬರುತ್ತಿದ್ದ ವೇಳೆ ಚಾಲಕ ಸುರೇಶ ಅಜಾಗರೂಕತೆಯಿಂದ ಟ್ಯಾಂಕರ್ ಚಲಾಯಿಸಿದ್ದು ನಿಯಂತ್ರಣ ಕಳೆದುಕೊಂಡು ಟ್ರಾಕಂರ್ ಮಗುಚಿ ಬಿದ್ದಿದೆ.ಟ್ರಾಕಂರ್ ಅಡಿಯಲ್ಲಿ ಸಿಲುಕಿದ ಸುರೇಶ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ಘಟನೆಯ ಬಗ್ಗೆ ಮಂಜಪ್ಪ ಎಂಬವರು ಧರ್ಮಸ್ಥಳ...

ಉಜಿರೆ ಪೇಟೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳವು

0

ಬೆಳ್ತಂಗಡಿ; ಉಜಿರೆ ಪೇಟೆಯಲ್ಲಿ ನಿಲ್ಲಿಸಿದ್ದ ಬೈಕ್ ಅನ್ನುಕಳ್ಳತನ ಮಾಡಿದ ಘಟನೆ ಸಂಭವಿಸಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.ಉಜಿರೆ ಗ್ರಾಮದ ನಿವಾಸಿ ರಾಜು ಎಂಬವರು ತನ್ನ ಬೈಕ್ ( ಕೆ.ಎ 19 ಹೆಚ್ ಸಿ 0606ನಂಬರ್ ನ ಹೋಂಡಾ ಯೂನಿಕಾರ್ನ್ ) ಅನ್ನು ಉಜಿರೆ ಪೇಟೆಯ ದಿಶಾ ಬೇಕರಿಯ ಮುಂಭಾಗದಲ್ಲಿ ಫೆ. 29ರಂದು ರಾತ್ರಿ ವೇಳೆ ನಿಲ್ಲಿಸಿ ಹೋಗಿದ್ದು ಒಂದು ಗಂಟೆಯ ಬಳಿಕ ಮರಳಿ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಕಳವಾದ ಬೈಕಿನ ಮೌಲ್ಯ ಸುಮಾರು 75,000 ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ಅವರು ಬೆಳ್ತಂಗಡಿ...

ವೇಣೂರು ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಂಪನ್ನ

0

ಬೆಳ್ತಂಗಡಿ: ವೇಣೂರಿನಲ್ಲಿ ಕಳೆದ ಒಂಬತ್ತು ದಿನಗಳಿಂದ ನಡೆದ ಭಗವಾನ್ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕ ಕಾರ್ಯಕ್ರಮಗಳು ಶುಕ್ರವಾರ ರಾತ್ರಿ ಸಂಪನ್ನಗೊಂಡಿತ್ತು.ಒಂಬತ್ತು ದಿನಗಳ ಕಾಲ ಸಂಭ್ರಮ ಸಡಗರದಿಂದ ನಡೆದ ಮಹಾ ಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಸಹಸ್ರಾರು ಮಂದಿ ಭಕ್ತರು ಭಾಗಿಗಳಾದರು. ನಾಡಿಲ್ಲಡೆಯಿಂದ ಆಗಮಿಸಿದ ಭಕ್ತರು ಮಹಾಮಸ್ತಕಾಭಿಷೇಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು. ಮಹಾಮಸ್ತಕಾಭಿಷೇಕದ ಕೊನೆಯ ದಿನವಾದ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ರಾಜ್ಯ ಸರಕರಾದ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಮಾತನಾಡಿ ಜೈನರು ಅಲ್ಪಸಂಖ್ಯಾತರಾದರೂ ಜೈನರ ಜೀವನ ಶೈಲಿ, ದಿಗಂಬರ ಮುನಿಗಳ ಆಚಾರ-ವಿಚಾರ, ಆಹಾರ-ವಿಹಾರ ಮತ್ತು...

ಎಸ್. ಡಿ.ಎಂ ಕಾಲೇಜಿನಲ್ಲಿ “ಮಾಧ್ಯಮೋತ್ಸವ” ರಾಷ್ಟ್ರೀಯ ವಿಚಾರ ಸಂಕಿರಣ

0

ಬೆಳ್ತಂಗಡಿ:ಸತ್ಯದ ಬಿಂಬಿಸುವಿಕೆಯ ಬದ್ಧತೆ, ಕೇಳಿದ್ದನ್ನು ದೃಢೀಕರಿಸಿಕೊಳ್ಳುವ ಪ್ರಜ್ಞೆಯು ಪತ್ರಕರ್ತರು ನಿಷ್ಠುರ, ನಿಷ್ಪಕ್ಷಪಾತ ದೃಷ್ಟಿಕೋನ ಹೊಂದಲು ಸಹಾಯಕವಾಗುತ್ತದೆ ಎಂದು ಸುವರ್ಣ ನ್ಯೂಸ್ ವಾಹಿನಿಯ ಸಂಪಾದಕ ಅಜಿತ್ ಹನಮಕ್ಕನವರ್ ಅಭಿಪ್ರಾಯಪಟ್ಟರು.ಅವರು ಉಜಿರೆಯ ಎಸ್.ಡಿ.ಎಂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಬಿ.ವೊಕ್ ಡಿಜಿಟಲ್ ಮೀಡಿಯಾ-ಫಿಲ್ಮ್ ಮೇಕಿಂಗ್ ವಿಭಾಗಗಳ ಸಹಭಾಗಿತ್ವದಲ್ಲಿ 'ಮಾಧ್ಯಮ, ಸಂಸ್ಕೃತಿ, ಮತ್ತು ತಂತ್ರಜ್ಞಾನ: ಸಾಮಾಜಿಕ-ರಾಜಕೀಯ ಸಂರಚನಾತ್ಮಕ ನೋಟ' ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಮಾಧ್ಯಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಸಂಚಲನ ಮೂಡಿಸುವ ಸಾಮಾಜಿಕ ಬದಲಾವಣೆ ನೆಲೆಗೊಳಿಸುವ ಉದ್ದೇಶದೊಂದಿಗೆ ಇರುವ ವ್ಯಕ್ತಿತ್ವದವರಿಗೆ ಸುದ್ದಿ ಮಾಧ್ಯಮ ಜಗತ್ತು...

ಧರ್ಮಸ್ಥಳದಲ್ಲಿ ವಿದ್ಯುತ್ ಆಘಾತಕ್ಕೆ ಕಾರ್ಮಿಕ ಬಲಿ

0

ಧರ್ಮಸ್ಥಳ; ವಿದ್ಯುತ್ ಶಾಕ್ ಹೊಡೆದು ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ಧರ್ಮಸ್ಥಳದಲ್ಲಿ ಫೆ.29ರಂದು ನಡೆದಿದೆ.ಮೃತ ವ್ಯಕ್ತಿ ರಾಯಚೂರು ನಿವಾಸಿಯಾಗಿರುವ ಸಲೀಂ (36) ಎಂಬವರಾಗಿದ್ದಾರೆ.ಧರ್ಮಸ್ಥಳದಲ್ಲಿ ಕಟ್ಟಡವೊಂದರ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದ ವೇಳೆ ಕಾಂಕ್ರೀಟ್ ವೈಬ್ರೇಟರ್ ಮೆಷಿನ್ ನ ವಯರ್ ನಿಂದ ವಿದ್ಯುತ್ ಪ್ರವಹಿಸಿ ಸಲೀಂ‌ ಗಂಭೀರವಾಗಿ ಗಾಯಗೊಂಡಿದ್ದ ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ

ಕಾಶಿಬೆಟ್ಟುವಿನಲ್ಲಿ ಕಾರು ಪಲ್ಟಿ ಮೂವರಿಗೆ ಗಾಯ

0

ಬೆಳ್ತಂಗಡಿ; ಕಾಶಿಬೆಟ್ಟುವಿನಲ್ಲಿ ಕಾರು ಪಲ್ಟಿಯಾಗಿ ಮೂವರು ಗಾಯಗೊಂಡ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.ಚಿಕ್ಕಮಗಳೂರಿನಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಕಾರು ಕಾಶಿಬೆಟ್ಟು ಶನೀಶ್ವರ ದೇವಸ್ಥಾನದ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದಿದೆ.ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ.ಒಬ್ಬನ ತಲೆಗೆ ಗಂಬೀರ ಗಾಯವಾಗಿರುವುದಾಗಿ ತಿಳಿದು ಬಂದಿದೆ ಉಳಿದವರಿಬ್ಬರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ಗಾಯಾಳುಗಳನ್ನು ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ

ಮುಂಡಾಜೆ ಹಾಗೂ ಚಾರ್ಮಾಡಿಯಲ್ಲಿ ಮುಂದುವರಿದ ಕಾಡಾನೆ ಓಡಾಟ; ಜನರಲ್ಲಿ ಆತಂಕ

0

ಬೆಳ್ತಂಗಡಿ; ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆಯ ಕಾಪಿನ ಬಾಗಿಲು ಎಂಬಲ್ಲಿ ಬುಧವಾರ ರಾತ್ರಿ ಕಾಡಾನೆ ಸಂಚಾರ ನಡೆಸಿ ಲತಾ ಜಿ.ಭಿಡೆಯವರ ಮನೆಂಗಳಲ್ಲಿದ್ದ ಬಾಳೆ ಗಿಡಗಳನ್ನು ನಾಶಪಡಿಸಿದೆ.ಮಧ್ಯರಾತ್ರಿ 12:30ರ ತನಕ ಮನೆಯವರು ಎಚ್ಚರವಿದ್ದು,ಆ ಬಳಿಕ ಕಾಡಾನೆ ಸಂಚರಿಸಿದೆ. ಇವರ ಮನೆ ರಾಷ್ಟ್ರೀಯ ಹೆದ್ದಾರಿಯಿಂದ 50 ಮೀಟರ್ ದೂರದಲ್ಲಿದ್ದು ಈ ಪರಿಸರದಲ್ಲಿ ಅಭಿವೃದ್ಧಿ ಕಾಮಗಾರಿಯು ನಡೆಯುತ್ತಿದೆ‌ ಕಾಮಗಾರಿ ನಡೆಯುತ್ತಿರುವ ಸ್ಥಳದ ಮೂಲಕವೇ ಹೆದ್ದಾರಿಯಿಂದ ಆನೆ ಮನೆಯಂಗಳಕ್ಕೆ ಬಂದಿದೆ.ಹೆದ್ದಾರಿಯ ಚರಂಡಿ,ತಡೆಗೋಡೆ ಕೆಲಸಗಳು ನಡೆಯುತ್ತಿದ್ದು ಅಲ್ಲಿ ಯಾವುದೇ ರೀತಿ ಹಾನಿ ಉಂಟು ಮಾಡದೆ ಕಾಡಾನೆ ಮುಂದೆ ಸಾಗಿದೆ. ಚಾರ್ಮಾಡಿಯಲ್ಲಿಯೂ...