ಚಿಬಿದ್ರೆ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ

0

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದ ಘಟನೆ ಭಾನುವಾರ ಬೆಳಗ್ಗೆ ಚಿಬಿದ್ರೆ ಬಳಿ ನಡೆದಿದೆ. ಕೊಟ್ಟಿಗೆಹಾರ ಕಡೆಯಿಂದ ಉಜಿರೆ ಕಡೆಗೆ ಸಂಚರಿಸುತ್ತಿದ್ದ ಕಾರು ಚಿಬಿದ್ರೆ ಸಮೀಪಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು, ಕಾರಿನಲ್ಲಿದ್ದವರು ಯಾವುದೇ ಗಂಭೀರ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.ಅಪಘಾತದ ಪರಿಣಾಮ ವಿದ್ಯುತ್ ಕಂಬ ಹಾನಿಗೊಂಡಿದ್ದರಿಂದ ಚಿಬಿದ್ರೆ ಸೇರಿದಂತೆ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ವಿದ್ಯುತ್...

ಬೆಸ್ಟ್ ಎಂ.ಎಲ್. ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜಾ ರವರಿಗೆ ಬೆಳ್ತಂಗಡಿ ತಾಲೂಕಿನ ಒಕ್ಕಲಿಗ ಸಮುದಾಯದಿಂದ ಗೌರವಾಭಿನಂದನೆ

0

ಬೆಳ್ತಂಗಡಿ; ತಾಲೂಕಿನ ಒಕ್ಕಲಿಗ ಸಮಾಜದ ಬಂಧುಗಳು ಬೆಸ್ಟ್ ಎಂ.ಎಲ್. ಎ ಪ್ರಶಸ್ತಿ ಪಡೆದ ಬೆಳ್ತಂಗಡಿಯ ಜನಪ್ರಿಯ ಶಾಸಕರಾದ ಹರೀಶ್ ಪೂಂಜಾ ರವರಿಗೆ ಶಾಸಕರ ಗೃಹ ಮಿಥಿಲಾ ಕ್ಕೆ ತೆರಳಿ ಗೌರವಾರ್ಪಣೆ ಸಲ್ಲಿಸಿದರು.ಕಳೆದ 8 ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನವನ್ನು ತಂದು ಸರ್ವರನ್ನು ಒಂದೇ ಭಾವದಿಂದ ನೋಡಿಕೊಂಡು ಪಶ್ಚಿಮ ಮಲೆನಾಡಿನ ಅತಿ ದೊಡ್ಡ ತಾಲೂಕನ್ನು ಮಾದರಿ ಕ್ಷೇತ್ರವಾಗಿ ರೂಪಿಸುವಲ್ಲಿ ಶ್ರಮಿಕನಾಗಿ ಕೆಲಸ ಮಾಡುತ್ತಿದ್ದು, ಎಲ್ಲಾ ಸಮುದಾಯದ ಜೊತೆಗೆ ತಾಲೂಕಿನ ಒಕ್ಕಲಿಗ ಸಮಾಜದ ಹಾಗೂ ಸಮುದಾಯದ ಬಂಧುಗಳ ಅಭಿವೃದ್ಧಿಗೆ ಏಕ ಮನಸ್ಸಿನಿಂದ...

ಬೆಳ್ತಂಗಡಿ : ಗೇರುಕಟ್ಟೆ ಸುಮಂತ್ ಅನುಮಾನಸ್ಪದ ಸಾವು ಪ್ರಕರಣ; ಸಹೋದರನ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಮುಕ್ತಾಯ

0

ಬೆಳ್ತಂಗಡಿ : ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಸುಬ್ರಮಣ್ಯ ನಾಯಕ್ ಮತ್ತು ರತ್ನಾವತಿ ದಂಪತಿಗಳ ಪುತ್ರ ಶಾಲಾ ವಿದ್ಯಾರ್ಥಿ ಸುಮಂತ್ (14) ಎಂಬಾತ 14-01-2026 ರಂದು ಬೆಳಗ್ಗಿನ ಜಾವ ಕಳಿಯ ಗ್ರಾಮದ ಮನೆಯ ಹತ್ತಿರದ ಮನೆಯ ತೋಟದ ಕೆರೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚುವ ನಿಟ್ಟಿನಲ್ಲಿ ಬೆಳ್ತಂಗಡಿ ನ್ಯಾಯಾಲಯದ ಪೂರ್ವಾನುಮತಿ ಪಡೆದು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಪ್ರಕ್ರಿಯೆ ನಡೆಸಿ ಮುಕ್ತಾಯ ಮಾಡಲಾಗಿದೆ. ಬೆಂಗಳೂರಿನ ಮಾಡಿವಾಳ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಮೃತ ಸುಮಂತ್ ಸಹೋದರ ಸುದರ್ಶನ್ ಅವರನ್ನು...

ಬೆಳ್ತಂಗಡಿ : 13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ದರೋಡೆ ಪ್ರಕರಣದ   ಆರೋಪಿ ಬಂಧನ

0

ಬೆಳ್ತಂಗಡಿ: ಸುಮಾರು 13 ವರ್ಷಗಳಿಂದ ಮಂಗಳೂರು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ದರೋಡೆ ಪ್ರಕರಣದ ವಾರೆಂಟ್ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗಟ್ಟಿದ್ದಾರೆ. ಪ್ರಕರಣ: ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 05-02-2012 ರಂದು ವೇಣೂರು ಮಹಾಮಸ್ತಾಭಿಷೇಕ ಕಾರ್ಯಕ್ರಮವನ್ನು ನೋಡಲು ವೇಣೂರು ಗ್ರಾಮದ ಮೂಡುಕೋಡಿ ನಿವಾಸಿ ಶಶಿಕಲಾ ಅವರು ಬಂದಾಗ ರಾತ್ರಿ ಸುಮಾರು 10 ಗಂಟೆಗೆ ಹೊಳೆಯ ಬದಿ ತಲುಪಿದಾಗ ಎರಡು ಗಂಡಸರು ಮತ್ತು ಆರು ಮಂದಿ ಹೆಂಗಸರ ಗುಂಪು ಅಡ್ಡಗಟ್ಟಿ 10 ಸಾವಿರವಿದ್ದ ಹಣದ ಬ್ಯಾಗ್ ಮತ್ತು 2 ಸಾವಿರದ...

ಬೆಳ್ತಂಗಡಿ; ತಾಲೂಕಿನಲ್ಲಿ ಮುಂದುವರಿದ ಕಾಡಾನೆ ದಾಳಿ ಆತಂಕದಲ್ಲಿ ಕೃಷಿಕರು

0

ಬೆಳ್ತಂಗಡಿ; ತಾಲೂಕಿನ ನಿಡ್ಲೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು ಕೃಷಿಕರು ಆತಂಕದಲ್ಲಿದ್ದಾರೆ.ಇಲ್ಲಿನ ನೆಡಿಲು ಎಂಬಲ್ಲಿಯ ನಾರಾಯಣಗೌಡ ರವರ ತೋಟಕ್ಕೆ ನಿಡ್ಲೆ ಮೀಸಲು ಅರಣ್ಯದಿಂದ ಕಾಡಾನೆಗಳು ಬಂದಿದೆ. ತೋಟಕ್ಕೆ ನುಗ್ಗಿ ಬಾಳೆ ತೆಂಗಿನ ಮರಗಳನ್ನು ತಿಂದು ತುಳಿದು ನಾಶಪಡಿಸಿದೆ.ತೋಟದಿಂದ ಕಾಡಾನೆ ನಿಡ್ಲೆ ಮೀಸಲು ಅರಣ್ಯಕ್ಕೆ ಹೋಗಿರುವುದಾಗಿ ಅನುಮಾನಿಸಲಾಗಿದೆ. ಕಳೆದ ಒಂದು ವಾರದಿಂದ ಇದೇ ಪರಿಸರದಲ್ಲಿ ಕಾಡಾನೆಗಳು ಓಡಾಟ ನಡೆಸುತ್ತಿದ್ದು ಪ್ರತಿದಿನ ಒಂದಲ್ಲ ಒಂದು ತೋಟಕ್ಕೆ ನುಗ್ಗುತ್ತಿದೆ. ಆನೆದಾಳಿಯ ಬಗ್ಗೆ ಮಾಹಿತಿ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಂದಾರಿನಲ್ಲಿ ಕಾಡಾನೆ...

ಬೆಳ್ತಂಗಡಿ; ಗುರುನಾರಾಯಣ ಸ್ವಾಮಿ ಸೇವಾ ಸಂಘ ದಿಂದ ಗುರುಜಯಂತಿ

0

ಬೆಳ್ತಂಗಡಿ : ನಾರಾಯಣ ಗುರುಗಳ ಸಂದೇಶಗಳು ಎಂದಿಗೂ ಪ್ರಸ್ತುತವಾಗಿದ್ದು ಅದರ ಆಧಾರದ ಮೇಲೆ ನಾವು ಬೆಳೆಯಬೇಕಾಗಿದೆ.  ಬೆಳ್ತಂಗಡಿ - ಬಂಟ್ವಾಳ ಮಧ್ಯೆ ಸುಮಾರು 7 ಎಕ್ರೆ ಪ್ರದೇಶದಲ್ಲಿ ಶಿವಗಿರಿ ಶಾಖಾ ಮಠ ಸ್ಥಾಪನೆಯಾಗಲಿದೆ' ಎಂದು ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಅಧ್ಯಕ್ಷ ರಕ್ಷಿತ್ ಶಿವರಾಮ್ ಹೇಳಿದರು. ಅವರು ಶುಕ್ರವಾರ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ ಹಾಗೂ ಬಿಲ್ಲವ ಮಹಿಳಾ ವೇದಿಕೆ, ಬೆಳ್ತಂಗಡಿ ಇವುಗಳ ಸಂಯುಕ್ತ...

ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ

0

ಬೆಳ್ತಂಗಡಿ; ಧರ್ಮಸ್ಥಳ ಉಜಿರೆ ಹೆದ್ದಾರಿಯಲ್ಲಿ ಮಣ್ಣ ಸಂಕದ ಸಮೀಪ ಕೆ.ಎಸ್ ಆರ್ ಟಿ ಸಿ ಬಸ್ ಹಾಗೂ ಕಾರಿನ ನಡುವೆ ಶುಕ್ರವಾರ ಮಧ್ಯಾಹ್ನ ಭೀಕರ‌ ಅಪಘಾತ ಸಂಭವಿಸಿದ್ದು ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಪಘಾತದ ವೇಳೆ ಕಾರಿನ ಹಿಂದಿನಿಂದ ಬರುತ್ತಿದ್ದ ಓಮ್ನಿ ಕಾರು ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ಈಡಾದ ಕಾರಿನ‌ಹಿಂಬದಿಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಧರ್ಮಸ್ಥಳದ ನಿವಾಸಿ ಅನಂತರಾಮ್ (54) ಗಾಯಗೊಂಡಿರುವುದಾಗಿ ತಿಳಿದು ಬಂದಿದ್ದು ಗಾಯಾಳುವನ್ನು ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆ ಗೆ...

ಪುಂಜಾಲಕಟ್ಟೆ: ಟೆಂಪೊ ಡಿಕ್ಕಿ: ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತ್ಯು

0

ಬೆಳ್ತಂಗಡಿ: ಟೆಂಪೊ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಕುಕ್ಕಳ ನಿವಾಸಿ ಸುನಿಲ್ (25) ಚಿಕಿತ್ಸೆ ಫಲಕಾರಿಯಾಗಿದೆ ಆ.27ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆ.20 ರಂದು ರಾತ್ರಿ ಪುಂಜಾಲಕಟ್ಟೆ ಹೆದ್ದಾರಿಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಟೆಂಪೊ ಡಿಕ್ಕಿ ಹೊಡೆದಿದ್ದು ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಯ ಭಾಗಕ್ಕೆ ಹಾಗೂ ಎದೆಗೆ ತೀವ್ರ ಏಟಾಗಿದ್ದ ಪರಿಣಾಮ 8 ದಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ತಾಯಿ, ಓರ್ವ ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಜಮೀನಿಗೆ ಹೋಗಲು ದಾರಿಯ ಹಕ್ಕಿಗಾಗಿ ತಾಲೂಕು ಕಚೇರಿ ಎದುರು ಧರಣಿ

0

ಬೆಳ್ತಂಗಡಿ: ಜಾಗಕ್ಕೆ ಹೋಗಲು ದಾರಿ ಹಕ್ಕಿಗಾಗಿ ಆಗ್ರಹಿಸಿ ನಿಡ್ಲೆ ಗ್ರಾಮದಹರಿಪ್ರಸಾದ್ ಇರ್ವತ್ರಾಯ ಅವರು ಆ.27ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು. ನಿಡ್ಲೆ ಗ್ರಾಮದಲ್ಲಿ 3 ಎಕರೆ ಜಮೀನಿದ್ದು, 1993 ರಿಂದ ಈ ಜಮೀನಿಗೆ ದಾರಿಯ ಹಕ್ಕು ಊರ್ಜಿತವಾಗಿದೆ ಹೀಗುರುವಾಗಲೇ ಅಕ್ರಮ-ಸಕ್ರಮದಲ್ಲಿ ಜಮೀನು ಮಂಜೂರು ಮಾಡುವಾಗ ಊರ್ಜಿತದಲ್ಲಿದ್ದ ದಾರಿಯನ್ನು ತೋರಿಸದೆ ಭೂ ಮಂಜೂರಾತಿ ಮಾಡಿದ್ದು 1993ರಿಂದಲೂ ಇದ್ದ ರಸ್ತೆಯನ್ನು 2021ರಲ್ಲಿ ಭೂಪರಿವರ್ತನೆ ಮಾಡುವಾಗ ತಹಶೀಲ್ದಾರರು ರದ್ದು ಮಾಡಿದ್ದಾರೆ ಎಂದು ಅವರು ಆರೋಪಿಸಿದರು.ಕಳೆದ ಒಂದು ವರ್ಷದಿಂದ ಜಮೀಮಿಗೆ ಹೋಗುವ ರಸ್ತೆಗಾಗಿ ಕಚೇರಿಗೆ...

ಬೆಳ್ತಂಗಡಿ; ಶಿರ್ಲಾಲು ಗ್ರಾ.ಪಂ ವ್ಯಾಪ್ತಿಯಲ್ಲಿ ಪಡಿತರ ವಿತರಣೆಯಲ್ಲಿ ಅವ್ಯವಸ್ತೆ ಫಲಾನುಭವಿಗಳಿಂದ ಪ್ರತಿಭಟನೆಯ ಎಚ್ಚರಿಕೆ

0

ಬೆಳ್ತಂಗಡಿ;  ಶಿರ್ಲಾಲು ಗ್ರಾಮ ಪಂಚಾಯತ್ ನ ಸುಳ್ಕೇರಿಮೊಗ್ರು ಸಹಕಾರಿ ವ್ಯವಸಾಯಿಕ ಬ್ಯಾಂಕ್ ನಿಯಮಿತ ಶಿರ್ಲಾಲು ಇಲ್ಲಿ ಕಳೆದ ಕೆಲವು ದಿನಗಳಿಂದ ಪಡಿತರ ಸಾಮಾಗ್ರಿಗಳನ್ನು ಪಡೆಯಲು ನೂರಾರು ಜನ ಹತ್ತು ಹದಿನೈದು ದಿನಗಳಿಂದ ಮೂರು ನಾಲ್ಕು ಕಿಲೋಮೀಟರ್ ದೂರದಿಂದ ಬಂದು ಸರ್ವರ್ ಸಮಸ್ಯೆ ಎಂದು ಕಾದು ಕುಳಿತು ಹಿಂತಿರುಗುತ್ತಿದ್ದಾರೆ ಇಲ್ಲಿ ಆಹಾರ ವಿತರಕರು ಸರಕಾರದ ಸಮಯ ಪಾಲನೆಯ ನಿಯಮ ಪಾಲಿಸುವುದಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಸರಕಾರದ ಸಮಯ ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ ಹತ್ತು ಗಂಟೆಯ ತನಕ ಪಡಿತರ ವಿತರಣೆಯ ಮಾಡ ಬೇಕು ಎಂದು...