ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ವತಿಯಿಂದ ಎಸ್.ಎಸ್.ಎಲ್.ಸಿ ಉತ್ತಮ ಅಂಕ ಪಡೆದ ಬೆಳ್ತಂಗಡಿ ವಿದ್ಯಾರ್ಥಿ ಸಿಮ್ರಾ ಪರ್ವೀನ್ ಳಿಗೆ ಸನ್ಮಾನ

0

ಬೆಳ್ತಂಗಡಿ; 2024-25ನೇ ಸಾಲಿನ ಕರ್ನಾಟಕ ರಾಜ್ಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 613 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಬೆಳ್ತಂಗಡಿ ಸಂಜಯ ನಗರ ನಿವಾಸಿ ಅಡ್ವೋಕೇಟ್ ಶೌಕತ್ ಆಲಿ ಹಾಗೂ ಸಫೀಯಾ ದಂಪತಿಗಳ ಮಗಳಾದ "ಸಿಮ್ರಾ ಪರ್ವೀನ್" ಅವರಿಗೆ ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಬೆಳ್ತಂಗಡಿ ಸಮಿತಿ ವತಿಯಿಂದ ಮನೆಗೆ ತೆರಳಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ಸಮಿತಿ ಅಧ್ಯಕ್ಷರಾದ ಶಮಾ ಆಲಿ ಉಜಿರೆ, ಕಾರ್ಯದರ್ಶಿ ನಸೀಮಾ ಬೆಳ್ತಂಗಡಿ, ಕೋಶಾಧಿಕಾರಿ ಹಸೀನಾ ಅಕ್ಬರ್, ಸಮಿತಿ ಸದಸ್ಯರಾದ ಅಡ್ವೋಕೇಟ್ ಅಸ್ಮಾ ಬೆಳ್ತಂಗಡಿ, ಝೈನಬಾ...

ಉಜಿರೆಯಲ್ಲಿ ವಸಂತ ಬಂಗೇರರಿಗೆ ನುಡಿನಮನ. ನಾರಾಯಣ ಗುರುಗಳ ಚಿಂತನೆಯನ್ನು ಅನುಷ್ಠಾನಗೊಳಿಸಿದ ಕೀರ್ತಿ ಬಂಗೇರರಿಗೆ ಸಲ್ಲುತ್ತದೆ.- ರಕ್ಷಿತ್ ಶಿವರಾಮ್.

0

ಉಜಿರೆ: ಇಲ್ಲಿನ ಬಿಲ್ಲವ ಸಂಘ ಹಾಗೂ ಯುವ ವಾಹಿನಿ ಸಂಘಟನೆಯ ನೇತೃತ್ವದಲ್ಲಿ,ಮಾಜಿ ಶಾಸಕರಾದ ಕೆ.ವಸಂತ ಬಂಗೇರರ ನುಡಿ ನಮನ ಕಾರ್ಯಕ್ರಮ ನಡೆಯಿತು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೆ.ಪಿ.ಸಿ.ಸಿ.ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮಾತನಾಡಿ,'ನಾರಾಯಣ ಗುರುಗಳ ಚಿಂತನೆಯನ್ನು ತಮ್ಮ ಕಾರ್ಯ ಚಟುವಟಿಕೆಗಳ ಮೂಲಕ ಅನುಷ್ಠಾನ ಗೊಳಿಸಿದ ಕೀರ್ತಿ ಬಂಗೇರರಿಗೆ ಸಲ್ಲುತ್ತದೆ.ಬಂಗೇರರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಕೊನೆಯುಸಿರು ಇರುವರೆಗೂ ಪ್ರಯತ್ನಿಸುತ್ತಿದ್ದರು. ವಿದ್ಯಾ ಸಂಸ್ಥೆಯನ್ನು ಕಟ್ಟಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುವ ಮೂಲಕ ಬಡ ಮಕ್ಕಳ ಕನಸಿಗೆ ಬಲ ತುಂಬಿದರು. ಕನ್ಯಾಡಿಯ ರಾಮ ಮಂದಿರ...

ಧರ್ಮಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವು, ಪ್ರಕರಣ‌ ದಾಖಲು

0

ಬೆಳ್ತಂಗಡಿ; ಧರ್ಮಸ್ಥಳದಲ್ಲಿ ಬೈಕ್ ನಿಲ್ಲಿಸಿ ದೇವರ ದರ್ಶನ ಪಡೆದು ಹಿಂತಿರುಗುವ ವೇಳೆಗೆ ಕಳ್ಳರು ಬೈಕ್ ಅನ್ನು ಕಳ್ಳತನ ಮಾಡಿದ ಘಟನೆ‌ಸಂಭವಿಸಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ. ಬೈಂದೂರು ನಿವಾಸಿ ಮುತ್ತಯ್ಯ ಆಚಾರಿ ಎಂಬವರು ಈಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇವರು ಮೇ 24ರಂದು ತನ್ನ ಮೋಟಾರ್ ಸೈಕಲ್ k.A 20EJ 3502 ರಲ್ಲಿ ಮಗ ದಿನೇಶ ನೊಂದಿಗೆ ಧರ್ಮಸ್ಥಳಕ್ಕೆ ಬಂದಿದ್ದಾರೆ. ಇವರೊಂದಿಗೆ ಇನ್ನೂ ಹಲವರು ಬೈಕ್ ಗಳಲ್ಲಿಯೇ ಬಂದಿದ್ದುಎಲ್ಲರೂ ಬೈಕ್ ಗಳನ್ನು ನಿಲ್ಲಿಸಿ ದೇವರ ದರ್ಶನಕ್ಕೆ ತೆರಳಿದ್ದು ಹಂತಿರುಗಿ...

ಕೊಯ್ಯೂರು ಸೇತುವೆ ತಡೆಗೋಡೆಗೆ ಬಸ್ ಡಿಕ್ಕಿ ; ಪ್ರಯಾಣಿಕರು ಅಪಾಯದಿಂದ ಪಾರು

0

ಬೆಳ್ತಂಗಡಿ : ಕೊಯ್ಯರು ಸಮೀಪದ ಕಾಂತಾಜೆ ಎಂಬಲ್ಲಿ ತಿರುವಿನ ಸೇತುವೆ ತಡೆ ಗೋಡೆಗೆ ಸರಕಾರಿ ಬಸ್ ಡಿಕ್ಕಿಯಾದ ಘಟನೆ ಮೇ.26 ಬೆಳಿಗ್ಗೆ ನಡೆಯಿತು. ಪ್ರಯಾಣಿಕರು ಅದೃಷ್ಟ ವಶಾತ್ ಅಪಾಯದಿಂದ ಪಾರಾಗಿದ್ದಾರೆ ಬಂದಾರುನಿಂದ ಹೊರಟು ಕೊಯ್ಯರು ಮಾರ್ಗವಾಗಿ ಬೆಳ್ತಂಗಡಿಗೆ ಹೋಗುವ ಸರಕಾರಿ ಬಸ್ಸು ನಲ್ಲಿ ಸುಮಾರು 25 ಕ್ಕೂ ಹೆಚ್ಚು ಜನರು ಪ್ರಯಾಣಿಕರಿದ್ದರು. ಚಾಲಕ ಅತೀ ವೇಗವಾಗಿ ಬಸ್ ಚಲಾಯಿಸುವ ವೇಳೆಗೆ ಕೊಯ್ಯರು ಸಮೀಪದ ಕಾಂತಾಜೆ ಕಡಿದಾದ ತಿರುವಿನಲ್ಲಿ ನಿಯಂತ್ರಣ ತಪ್ಪಿ ದೊಡ್ಡ ತೋಡಿನ ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿದೆ. ತಡೆಗೋಡೆ ಮುರಿದರೂ ಬಸ್ ಅಲ್ಲಿಯೇ ನಿಂತಿದೆ....

ಬೆಳ್ತಂಗಡಿ : ನಂದಿಬೆಟ್ಟದಲ್ಲಿ ಮನೆಯ ಕೆರೆಗೆ ಜಾರಿ ಬಿದ್ದು ನವ ವಿವಾಹಿತ ಸಾವು

0

ಬೆಳ್ತಂಗಡಿ : ಕಳೆದ ಆರು ತಿಂಗಳ ಹಿಂದೆ ಮದುವೆಯಾಗಿದ್ದ ನವ ವಿವಾಹಿತ ಮನೆಯ ಕೆರೆಗೆ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಮೇ.25 ರಂದು ರಾತ್ರಿ ಬೆಳ್ತಂಗಡಿಯ ನಂದಿಬೆಟ್ಟದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಂದಿಬೆಟ್ಟದ ಹೊಸಹೊಕ್ಲು ನಿವಾಸಿ ಸದಾಶಿವ ಶೆಟ್ಟಿಯ ಒಬ್ಬನೇ ಮಗನಾಗಿರುವ ಕಳೆದ ಆರು ತಿಂಗಳ ಹಿಂದೆ ಮದುವೆಯಾಗಿದ್ದ ಕೃಷಿ ಕೆಲಸ ಮಾಡಿಕೊಂಡಿರುವ ಶೈಲೇಶ್ ಶೆಟ್ಟಿ(38) ಎಂಬವರು ತನ್ನ ಮನೆಯ ಕೆರೆಗೆ ಮೇ.25 ರಂದು ರಾತ್ರಿ ಸುಮಾರು 8:30 ಕ್ಕೆ ಜಾರಿ ಬಿದ್ದು ಕೆಸರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ...

ಬಂಗೇರರಲ್ಲಿ ಹೊರಗೆ ಕಠೋರವಾದ ಹೊದಿಕೆ ಇತ್ತು. ಒಳಗೆ ಮೃದು ಮನಸ್ಸಿನ ವ್ಯಕ್ತಿಯಾಗಿದ್ದರು; ರಮೇಶ್ ಕುಮಾರ್

0

ಬೆಳ್ತಂಗಡಿ : ‘ವಸಂತ ಬಂಗೇರರಲ್ಲಿ ಹೊರಗೆ ಕಠೋರವಾದ ಹೊದಿಕೆ ಇತ್ತು. ಆದರೆ ಅವರು ಬಹಳ ಮೃದು ಮನಸ್ಸಿನ ವ್ಯಕ್ತಿಯಾಗಿದ್ದರು. ಅವರ ಮರಣದ ಬಳಿಕವೂ ಅವರಿಗೆ ಇಷ್ಟೊಂದು ಗೌರವ, ಪ್ರೀತಿ ಸಿಗುತ್ತಿದೆಯೆಂದರೆ ಅವರು ಈ ಭಾಗದ ದೇವರಾಜ ಅರಸು ಆಗಿದ್ದಾರೆ’ ಎಂದು ವಿಧಾನ ಸಭೆಯ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿದರು. ಅವರು ಶನಿವಾರ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಈಚೆಗೆ ನಿಧನರಾದ ಮಾಜಿ ಶಾಸಕ ಕೆ ವಸಂತ ಬಂಗೇರರಿಗೆ ಸಾವಿರದ ನುಡಿನಮನಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ‘ವಸಂತ...

ಜೈನ ಬಸದಿಗಳ ಅಭಿವೃದ್ಧಿಗೆ ಇರುವ ಸಮಸ್ಯೆಗಳನ್ನು ಬಗೆ ಹರಿಸಲು ಮುಖ್ಯಮಂತ್ರಿ ಯವರಿಗೆ ಮನವಿ

0

ಬೆಳ್ತಂಗಡಿ; ಕರ್ನಾಟಕ ಸರಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಗೌರವಾನ್ವಿತ ಸಿದ್ದರಾಮಯ್ಯನವರನ್ನು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭೇಟಿ ಮಾಡಿ ಜೈನ ಬಸದಿಗಳ ಅಭಿವೃದ್ಧಿಗಳ ಬಗ್ಗೆ ಇರುವ ಸಮಸ್ಯೆಗಳನ್ನು ಗಮನಕ್ಕೆ ತರಲಾಯಿತು.ಈ ಸಂದರ್ಭದಲ್ಲಿ ನಾಭಿರಾಜ್ ಜೈನ್. ಬೆಂಗಳೂರು. ಡಾ. ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ. ಸುದರ್ಶನ್ ಜೈನ್ ಬಂಟ್ವಾಳ. ವಿಜಯಕುಮಾರ್ ಕಾರ್ಯತ್ತಡ್ಕ. ಧನ ಕೀರ್ತಿ ಶೆಟ್ಟಿ, ಧರ್ಮಸ್ಥಳ , ಶಶಿಕಿರಣ್ ಜೈನ್ ಬೆಳ್ತಂಗಡಿ, ಪಣಿರಾಜ್ ಜೈನ್ ಕೊಕ್ಕಡ, ಪ್ರಜ್ವಲ್ ಜೈನ್ ಅಳದoಗಡಿ ಮುಂತಾದವರಿದ್ದರು.

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಿ.ಎಂ ಡಿ.ಸಿ ಎಂ ಭೇಟಿ

0

ಬೆಳ್ತಂಗಡಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಿದರು.ಸಚಿವರುಗಳಾದ ಮಹಾದೇವಪ್ರಸಾದ್, ಬೈರತಿ ಸುರೇಶ್, ಶಾಸಕ ಅಶೋಕ ರೈ ಹರೀಶ್ ಕು‌ಮಾರ್, ಮಾಜಿಶಾಸಕರುಗಳಾದ ರಮಾನಾಥ ರೈ, ಶಕುಂತಲಾ ಶೆಟ್ಟಿ, ಅಭಯಚಂದ್ರ ಜೈನ್, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪಕ್ಷದ ಮುಳಂಡರುಗಳು ಇದ್ದರು.

ರಸ್ತೆ ಅಪಘಾತ ತೋಟತ್ತಾಡಿಯ ಯುವಕ ಸಾವು

0

ಬೆಳ್ತಂಗಡಿ:ಮಂಗಳೂರಿನಲ್ಲಿ ನಡೆದ ದ್ವಿಚಕ್ರ ವಾಹನ ಅಪಘಾತ ಒಂದರಲ್ಲಿ ಗಾಯಗೊಂಡಿದ್ದ ತೋಟತ್ತಾಡಿಯ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.ಮಂಗಳೂರಿನ ಕಾಲೇಜೊಂದರ ಹಾಸ್ಟೆಲ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಶಾಲಪ್ಪ ಗೌಡ ಯಾನೆ ಪ್ರಶಾಂತ(35) ಮೃತಪಟ್ಟ ಯುವಕ.ಇವರು ಸಂಚರಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಮಂಗಳವಾರ ಇನ್ನೋವಾ ಕಾರು ಬಡಿದು ತಲೆ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರ ಗಾಯಗಳುಂಟಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಅವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟರು.ತೋಟತ್ತಾಡಿ ಗ್ರಾಮದ ಅಗರಿ ಕೃಷ್ಣಪ್ಪ ಗೌಡರ ಪುತ್ರರಾಗಿರುವ ಇವರು ಅವಿವಾಹಿತರಾಗಿದ್ದು, ಅವರಿಗೆ ತಂದೆ,ತಾಯಿ, ಸಹೋದರ,ಸಹೋದರಿ ಇದ್ದಾರೆೆ

ವಸಂತ ಬಂಗೇರರಿಗೆ ನುಡಿನಮನ ಕಾರ್ಯಕ್ರಮ ಸಿ.ಎಂ, ಡಿ.ಸಿ.ಎಂ ಸೇರಿದಂತೆ ಹಲವರು ಗಣ್ಯರು ಭಾಗಿ

0

ಬೆಳ್ತಂಗಡಿ; ಶನಿವಾರ ಬೆಳ್ತಂಗಡಿ ಯಲ್ಲಿ ನಡೆಯಲಿರುವ ಮಾಜಿ ಶಾಸಕ ದಿವಂಗತ ಕೆ. ವಸಂತ ಬಂಗೇರ ರವರ ನುಡಿ ನಮನ ಕಾರ್ಯಕ್ರಮ ದಲ್ಲಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಸೇತಿದಂತೆ ಹಲವರು ಸಚಿವರುಗಳು ಭಾಗಿಯಾಗಲಿದ್ದಾರೆ.ಎಂದು ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದ್ದಾರೆ.ನಗರದ ಕಿನ್ಯಮ್ಮ ಯಾನೆ ಗುಣವತಿಯಮ್ಮ ಸಭಾಂಗಣದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ‌ ನೇತೃತ್ವದಲ್ಲಿ ನುಡಿನಮನ‌ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, ವಿಧಾನಸಭಾ ಸ್ಪೀಕರ್ ಯು. ಟಿ ಖಾದರ್ , ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ , ಸಮಾಜ ಕಲ್ಯಾಣ ಸಚಿವರಾದ ಮಹಾದೇವಪ್ಪ...